ಕೊಚ್ಚಿ: ಫೆಬ್ರವರಿ 7ರಂದು ಕೊಚ್ಚಿಯಲ್ಲಿ ಸಹಾಯಕ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿರುವ 33 ವರ್ಷದ ಟ್ರಾನ್ಸ್‌ಜೆಂಡರ್ ಮಹಿಳೆ ಏಂಜೆಲ್ ಶಿವಾನಿ ಎಂಬುವರು ಪಳರಿವತ್ತಂ ಮೆಟ್ರೋ ನಿಲ್ದಾಣದ ಹೊರಗೆ ಕಾಯುತ್ತಿದ್ದರು. ಅವರನ್ನು ನೋಡಿದಾಗ ಪಲ್ಲೂರುತಿಯ ವ್ಯಕ್ತಿಯೊಬ್ಬ ಯಾವುದೇ ಪ್ರಚೋದನೆಯಿಲ್ಲದೆ ಕಬ್ಬಿಣದ ರಾಡ್‌ನಿಂದ ಅವರನ್ನು ಹೊಡೆದನು. ಇದರಿಂದಾಗಿ ಏಂಜೆಲ್ ಮೈಮೂಳೆ ಮುರಿತಕ್ಕೊಳಗಾದರು.
ಕೇರಳದಾದ್ಯಂತ ಟ್ರಾನ್ಸ್‌ಜೆಂಡರ್ ಸಮುದಾಯದ ವಿರುದ್ಧ ಇತ್ತೀಚೆಗೆ ಹೆಚ್ಚುತ್ತಿರುವ ದಾಳಿಗಳನ್ನು ಪರಿಗಣಿಸಿ, ರಾಜ್ಯದ ಪ್ರತಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಟ್ರಾನ್ಸ್‌ಜೆಂಡರ್ ರಕ್ಷಣಾ ಘಟಕ(ಟಿಪಿಸಿ) ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿದೆ. ಕಳೆದ ವಾರ ಈ ಆದೇಶ ಹೊರಡಿಸಲಾಗಿದೆ.
2021ರಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (MoHA) ದೇಶದ ಎಲ್ಲಾ ಜಿಲ್ಲೆಗಳಲ್ಲಿ ಅಂತಹ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು.
ಈ ಹಿಂದೆ ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವಿಭಾಗ (WCWS) ಘಟಕಗಳು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಸಲ್ಲಿಸಿದ ದೂರುಗಳನ್ನು ನಿರ್ವಹಿಸುತ್ತಿತ್ತು. ಆದಾಗ್ಯೂ ಈಗ ರಾಜ್ಯದ ಎಲ್ಲಾ 20 ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ಟಿಪಿಸಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಎಲ್ಲಾ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಟಿಪಿಸಿಗಳು ಈ ಘಟಕಗಳ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ. ವರ್ಷದ ಅಂತ್ಯದ ವೇಳೆಗೆ ಅವು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ”ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಿಪಿಸಿಗಳು ಟ್ರಾನ್ಸ್ಜೆಂಡರ್ ಜನರ ಮೇಲಿನ ದೌರ್ಜನ್ಯದ ದೂರುಗಳನ್ನು ನಿಭಾಯಿಸುತ್ತವೆ. ಅದೇ ರೀತಿ ಸಮುದಾಯದ ಸದಸ್ಯರನ್ನು ಅಪರಾಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಟಿಪಿಸಿಗಳು ಟ್ರಾನ್ಸ್ಜೆಂಡರ್ ಜನರನ್ನು ಸಮಾಜದ ಮುಂಚೂಣಿಗೆ ತರಲು ಕೌನ್ಸೆಲಿಂಗ್ ಅವಧಿಗಳನ್ನು ಸಹ ಏರ್ಪಡಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಘಟಕಗಳ ಜೊತೆ ಕೌನ್ಸೆಲಿಂಗ್ ಘಟಕಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಮಹಿಳಾ ಘಟಕಗಳನ್ನು ಪ್ರಸ್ತುತ ಮಹಿಳಾ ವೃತ್ತ ನಿರೀಕ್ಷಕರು ನೇತೃತ್ವ ವಹಿಸುತ್ತಾರೆ. ಅವರು ಟಿಪಿಸಿಗಳ ಮುಖ್ಯಸ್ಥರಾಗಿರುತ್ತಾರೆ. ಸರ್ಕಾರದ ಆದೇಶದ ಪ್ರಕಾರ, ಟಿಪಿಸಿಗಳಿಗೆ ಸಂಬಂಧಿಸಿದ ಅಧಿಕಾರಿಗಳು ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸ್ಥಳೀಯ ಪೊಲೀಸರು ಬಂಧಿಸಿದ ವ್ಯಕ್ತಿಗಳ ದಾಖಲೆಗಳನ್ನು ಪಡೆಯಬಹುದು ಮತ್ತು ಸಂದರ್ಶನ ಮಾಡಬಹುದು ”ಎಂದು ಅಧಿಕಾರಿ ಹೇಳಿದರು.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಮೊದಲ ಟ್ರಾನ್ಸ್ಜೆಂಡರ್ ಸದಸ್ಯೆ ಅರುಣಿಮಾ, ಟ್ರಾನ್ಸ್ಜೆಂಡರ್ ಘಟಕಗಳನ್ನು ಪ್ರಾರಂಭಿಸುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಸಮುದಾಯದ ರಕ್ಷಣೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಇದು ಸಾಕಾಗುವುದಿಲ್ಲ ಎಂದು ತಿಳಿಸಿದರು.
ನಮ್ಮ ಸಮಸ್ಯೆಗಳನ್ನು ನಿಭಾಯಿಸುವ ಟಿಪಿಸಿಗಳನ್ನು ಸ್ಥಾಪಿಸುವುದು ಖಂಡಿತವಾಗಿಯೂ ಒಳ್ಳೆಯದು. ಆದಾಗ್ಯೂ ಈ ಉಪಕ್ರಮದ ಬಗ್ಗೆ ನಮಗೆ ಹಲವಾರು ಆತಂಕಗಳಿವೆ. ಟಿಪಿಸಿಗಳನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ನಿರ್ವಹಿಸುತ್ತಾರೆ. ಇದು ಟ್ರಾನ್ಸ್ಜೆಂಡರ್ ಆಗಿರುವಂತಹ ಜನರ ಪ್ರಾತಿನಿಧ್ಯವಿಲ್ಲ ಎಂದು ಅರುಣಿಮಾ ಆರೋಪಿಸಿದರು.
ಕೇರಳ ಪೊಲೀಸರು ತಮ್ಮ ನಿರ್ದಿಷ್ಟ ಸಮಸ್ಯೆಗಳನ್ನು ನಿಭಾಯಿಸಲು ಸಮುದಾಯದ ಸದಸ್ಯರನ್ನು ಪೊಲೀಸ್ ಪಡೆಗೆ ನೇಮಿಸಿಕೊಳ್ಳಬೇಕು. ಎಲ್ಲಾ ಜಿಲ್ಲೆಗಳಲ್ಲಿ ಟ್ರಾನ್ಸ್ಜೆಂಡರ್‌ಗಳಿಗಾಗಿ ಮೀಸಲಾದ ಪೊಲೀಸ್ ಠಾಣೆ ಇರಬೇಕು ಎಂದು ಅರುಣಿಮಾ ತಿಳಿಸಿದರು.
ನಮ್ಮ ಸಮುದಾಯದ ಜನರು ಕಳಪೆ ಸಂಬಳದಿಂದಾಗಿ ಕೊಚ್ಚಿ ಮೆಟ್ರೋಗೆ ರಾಜೀನಾಮೆ ನೀಡಿದ್ದಾರೆ ಎಂದು ಅರುಣಿಮಾ ಹೇಳಿದರು,
ನಮ್ಮ ಸಮಸ್ಯೆಗಳನ್ನು ನಾವು ಮಾತ್ರ ಅರ್ಥಮಾಡಿಕೊಳ್ಳಬಲ್ಲೆವು. ಇತರೆ ರಾಜ್ಯಗಳು ಟ್ರಾನ್ಸ್ಜೆಂಡರ್ ವ್ಯಕ್ತಿಗಳನ್ನು ಪೊಲೀಸ್ ಪಡೆಗೆ ನೇಮಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ನಾವು ಹಲವಾರು ವರ್ಷಗಳ ಹಿಂದೆ ಸರ್ಕಾರಕ್ಕೆ ವಿನಂತಿಸಿದ್ದೇವೆ. ಆದಾಗ್ಯೂ ಈ ಕುರಿತು ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಪಶ್ಚಿಮ ಬಂಗಾಳ | SFI ಮುಷ್ಕರದ ವೇಳೆ ಎಡಪಂಥೀಯ ಮತ್ತು TMCP ಕಾರ್ಯಕರ್ತರ ನಡುವೆ ಘರ್ಷಣೆ


