ಮಹಿಳಾ ಪತ್ರಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಕೇರಳದ ಖ್ಯಾತ ಚಲನಚಿತ್ರ ನಟ ಹಾಗೂ ಬಿಜೆಪಿ ನಾಯಕ ಸುರೇಶ್ ಗೋಪಿಗೆ ಕೋಝಿಕ್ಕೋಡ್‌ನ ನಡಕ್ಕಾವು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸುರೇಶ್ ಗೋಪಿ ಅವರಿಗೆ ನೊಟೀಸ್ ನೀಡಲಾಗಿದೆ.
ಏನಿದು ಪ್ರಕರಣ?
ಅ.27ರಂದು ಬಿಜೆಪಿ ನಾಯಕ ಸುರೇಶ್ ಗೋಪಿ ಮಹಿಳಾ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಆಕೆಯ ಭುಜವನ್ನು ಪದೇ ಪದೇ ಸ್ಪರ್ಷಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ಸುರೇಶ್ ಗೋಪಿ 2019ರಲ್ಲಿ ಬಿಜೆಪಿಯಿಂದ ತ್ರಿಶೂರ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಬಿಜೆಪಿಯು ಮತ್ತೊಮ್ಮೆ ತ್ರಿಶೂರ್‌ನಿಂದ ಅವರನ್ನು ಕಣಕ್ಕಿಳಿಸುತ್ತದೆ ಎಂದು ಹೇಳಲಾಗುತ್ತಿತ್ತು. ಮಹಿಳಾ ಪತ್ರಕರ್ತೆ, ಕೇರಳದಲ್ಲಿ ಇಷ್ಟು ವರ್ಷಗಳಿಂದ ಒಂದೇ ಒಂದು ಲೋಕಸಭಾ ಸ್ಥಾನವನ್ನು ಬಿಜೆಪಿ ಪಡೆಯಲು ವೈಫಲ್ಯವಾಗಿದೆ ಎಂದು ಉಲ್ಲೇಖಿಸಿ ಪ್ರಶ್ನೆಯನ್ನು ಕೇಳಿದ್ದರು. ಈ ವೇಳೆ ಸುರೇಶ್ ಗೋಪಿ ಆಕೆಯ ಭುಜದ ಮೇಲೆ ಕೈಯಿಟ್ಟು, ನಾನು ಆಗುತ್ತಾ ನೋಡುತ್ತೇನೆ ಮಗಳೇ, ಎಲ್ಲರೂ ಕಾದು ನೋಡುವ, ಮನುಷ್ಯನಿಂದ ಅಸಾಧ್ಯವಾದುದು ಯಾವುದೂ ಇಲ್ವಲ್ಲ ಎಂದು ಹೇಳಿದ್ದರು. ಪತ್ರಕರ್ತೆ ಈ ವೇಳೆ ಹಿಂದೆ ಸರಿಯುತ್ತಾಳೆ ಮತ್ತು ಅವಳು ತನ್ನ ಪ್ರಶ್ನೆಯನ್ನು ಪುನರಾವರ್ತಿಸಿದಳು, ಈ ವೇಳೆ ಸುರೇಶ್ ಗೋಪಿ ಮತ್ತೆ ಅವರ ಭುಜದ ಮೇಲೆ ಕೈಯಿಡುತ್ತಾರೆ. ಆಗ ಪತ್ರಕರ್ತೆ ಕೈಯಿಯನ್ನು ಕೆಳಗೆ ಹಾಕಿದ್ದಾರೆ.
ಘಟನೆಯ ನಂತರ ಸುರೇಶ್ ಗೋಪಿ ಅವರ ಅನುಚಿತ ವರ್ತನೆಯ ವಿರುದ್ಧ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ ಮತ್ತು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವೂ ಸುರೇಶ್ ಗೋಪಿ ಅವರ ವರ್ತನೆಯನ್ನು ಖಂಡಿಸಿ ಕ್ಷಮೆಯಾಚಿಸುವಂತೆ ಕೇಳಿದೆ. ಸುರೇಶ್ ಗೋಪಿ ಬಳಿಕ ಮಹಿಳಾ ಪತ್ರಕರ್ತೆಯ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಪತ್ರಕರ್ತೆಯನ್ನು ಮಗಳಂತೆ ನಡೆಸಿಕೊಂಡಿದ್ದು, ತಂದೆಯಂತೆ ಆಕೆಯಲ್ಲಿ ಕ್ಷಮೆ ಯಾಚಿಸುವುದಾಗಿ ಹೇಳಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಮೀಡಿಯಾ ಒನ್ ಚಾನೆಲ್‌ನ ಮಹಿಳಾ ಪತ್ರಕರ್ತೆ ಶಿದಾ ಜಗತ್ ನೀಡಿದ ದೂರಿನ ಮೇರೆಗೆ ನಡಕ್ಕಾವು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಐಪಿಸಿ ಸೆಕ್ಷನ್ 354 (ಎ-1, 4) ಅಡಿಯಲ್ಲಿ ಮಹಿಳೆಯನ್ನು ದೈಹಿಕವಾಗಿ ಸಂಪರ್ಕಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿತ್ತು. ದೂರುದಾರರ ಹೇಳಿಕೆಯನ್ನು ಕೂಡ ಪೊಲೀಸರು ದಾಖಲಿಸಿಕೊಂಡಿದ್ದರು.
A video of Bharatiya Janata Party (#BJP) leader and actor #SureshGopi interacting with reporters in #Kerala has sparked controversy due to his inappropriate response to a female journalist.
In the video, the former #RajyaSabha member places his hand on the woman journalist’s… pic.twitter.com/PJlsLrJXCJ
— Hate Detector 🔍 (@HateDetectors) October 28, 2023
ಇದನ್ನು ಓದಿ: ವಿಶ್ವಸಂಸ್ಥೆಯ ಕಚೇರಿಗಳಲ್ಲಿ ಧ್ವಜ ಅರ್ಧಕ್ಕೆ ಇಳಿಸಿ ಮೌನಾಚರಣೆ


