Homeಮುಖಪುಟಎಲೆಕ್ಟ್ರಾನಿಕ್‌ ಸಾಧನಗಳ ವಶಕ್ಕೆ ಕರಡು ಮಾರ್ಗಸೂಚಿ ಕೋರ್ಟ್‌ಗೆ ಸಲ್ಲಿಕೆ

ಎಲೆಕ್ಟ್ರಾನಿಕ್‌ ಸಾಧನಗಳ ವಶಕ್ಕೆ ಕರಡು ಮಾರ್ಗಸೂಚಿ ಕೋರ್ಟ್‌ಗೆ ಸಲ್ಲಿಕೆ

- Advertisement -
- Advertisement -

ವ್ಯಕ್ತಿಗಳು, ಪತ್ರಕರ್ತರು ಅಥವಾ ಸಂಸ್ಥೆಗಳಿಂದ ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಡಿಸಿಕೊಳ್ಳಲು ಸುಪ್ರಿಂಕೋರ್ಟ್‌ಗೆ ಸಲ್ಲಿಸಿದ ಕರಡು ಮಾರ್ಗಸೂಚಿಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅದನ್ನು ನೀಡುವಂತೆ ಸುಪ್ರೀಂಕೋರ್ಟ್‌ ಹೇಳಿದೆ.

ಈ ಬಗ್ಗೆ ತಜ್ಞರಾದ ರಾಮ್ ರಾಮಸ್ವಾಮಿ, ಮಾಧವ ಪ್ರಸಾದ್, ಸುಜಾತಾ ಪಟೇಲ್, ದೀಪಕ್ ಮಲ್ಘನ್ ಮತ್ತು ಮುಕುಲ್ ಕೇಶವನ್ ಅವರು 2021ರಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಡಿಸಿಕೊಳ್ಳುವ ಬಗ್ಗೆ ಕರಡು ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠ ಈ ಮಾರ್ಗಸೂಚಿಗಳನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಪ್ರಸಾರ ಮಾಡುವಂತೆ ಹಿರಿಯ ವಕೀಲ ನಿತ್ಯಾ ರಾಮಕೃಷ್ಣನ್ ಅವರಿಗೆ ಸೂಚಿಸಿದೆ.

ನ.7ರಂದು, ಫೌಂಡೇಶನ್ ಫಾರ್ ಮೀಡಿಯಾ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.

ಪತ್ರಕರ್ತರ ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಸರ್ವ ರೀತಿಯ ಅಧಿಕಾರವನ್ನು ತನಿಖಾ ಸಂಸ್ಥೆಗಳಿಗೆ ನೀಡಿರುವುದನ್ನು ಒಪ್ಪಿಕೊಳ್ಳುವುದು ನನಗೆ ತುಂಬಾ ಕಷ್ಟಕರವಾಗಿದೆ. ಇದು ತುಂಬಾ ಅಪಾಯಕಾರಿ ಎಂದು ನಾನು ಭಾವಿಸುತ್ತೇನೆ ಎಂದು ನ್ಯಾಯಮೂರ್ತಿ ಕೌಲ್ ಹೇಳಿದ್ದರು.

ಯುಕೆ ಮತ್ತು ಯುಎಸ್‌ನಂತಹ ದೇಶಗಳಲ್ಲಿ, ಎಲೆಕ್ಟ್ರಾನಿಕ್ ಸಾಧನಗಳ  ಹುಡುಕಾಟ ಮತ್ತು ವಶಕ್ಕೆ ಕಟ್ಟುನಿಟ್ಟಾದ ಷರತ್ತುಗಳಿವೆ. ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಕೊಳ್ಳುವ ಬಗ್ಗೆ ಹೆಚ್ಚುವರಿ ಪ್ರೋಟೋಕಾಲ್‌ಗಳು ಜಾರಿಯಲ್ಲಿವೆ. US ನಲ್ಲಿ ಗೌಪ್ಯತಾ ಸಂರಕ್ಷಣಾ ಕಾಯಿದೆಯಡಿ,  ಪತ್ರಕರ್ತರು, ಕಲಾವಿದರು, ಶಿಕ್ಷಣ ತಜ್ಞರು, ವೈಜ್ಞಾನಿಕ ಸಂಶೋಧಕರಿಂದ ಡಿಜಿಟಲ್‌ ಸಾಧನಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ನಿಬಂಧನೆಗಳಿವೆ.

ಎಲೆಕ್ಟ್ರಾನಿಕ್ ಸಾಧನದಿಂದ ನಿಖರವಾಗಿ ಏನನ್ನು ಹುಡುಕಲಾಗುತ್ತದೆ ಮತ್ತು ಏಕೆ ಎಂಬುವುದನ್ನು ಬರವಣಿಗೆಯಲ್ಲಿ ನೀಡಬೇಕು. ವಶಪಡಿಸಿಕೊಳ್ಳಲು ನ್ಯಾಯಾಂಗ ವಾರಂಟ್‌ ಜಾರಿ ಮಾಡಬೇಕು ಮತ್ತು ತುರ್ತು ವಶಪಡಿಸಿಕೊಳ್ಳಲು ಅದನ್ನು ಆಧಾರವಾಗಿ ತೋರಿಸಬೇಕು. ವಶಪಡಿಸುವ ಮೊದಲು ಈ ಲಿಖಿತ ದಾಖಲೆಯನ್ನು ಸಾಧನದ ಮಾಲೀಕರಿಗೆ ನೀಡಲಾಗುತ್ತದೆ.

ಪೊಲೀಸರು ತಮ್ಮ ಸಾಧನಗಳನ್ನು ಒಪ್ಪಿಸಲು ಯಾರಿಗೂ ಸಮನ್ಸ್‌ ನೀಡುವಂತಿಲ್ಲ. ವಶಪಡಿಸಿಕೊಂಡ ಸಾಧನವನ್ನು ಮಾಲೀಕರ ಸಮ್ಮುಖದಲ್ಲಿ ಸ್ವತಂತ್ರ ಪ್ರಾಧಿಕಾರವು ಮೊದಲು ಪರಿಶೀಲಿಸುತ್ತದೆ. ಬಳಿಕ ಪರಿಶೀಲಿಸಿ ತಕ್ಷಣವೇ ಸಾಧನಗಳನ್ನು ಹಿಂತಿರುಗಿಸಲಾಗುತ್ತದೆ. ತನಿಖೆಗೆ ನೇರವಾಗಿ ಸಂಬಂಧಿಸಿದ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಬೇಕು. ಅದರಲ್ಲಿ ಮೂರು ಪ್ರತಿಗಳನ್ನು ಮಾಡಬೇಕು. ಒಂದನ್ನು ಮಾಲೀಕರಿಗೆ, ಒಂದನ್ನು ಸ್ವತಂತ್ರ ಪ್ರಾಧಿಕಾರಕ್ಕೆ ಮತ್ತು ಮೂರನೆಯದನ್ನು ತನಿಖಾ ಸಂಸ್ಥೆ ತೆಗೆದುಕೊಳ್ಳಬೇಕು.

ಅಪರೂಪದ ಸಂದರ್ಭದಲ್ಲಿ ತನಿಖಾಧಿಖಾರಿಗಳು ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು. ಸಾಧನದ ವಾಪಸಾತಿಯು ವಶಪಡಿಸಿಕೊಂಡ 30 ದಿನಗಳಲ್ಲಿ ಇರಬೇಕು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಉಲ್ಲೇಖಿಸಿದೆ.

ಈ ಮಾರ್ಗಸೂಚಿಗಳನ್ನು ಅರ್ಜಿದಾರರು ಮಧ್ಯಂತರ ಕ್ರಮವಾಗಿ ಪ್ರಸ್ತಾಪಿಸಿದ್ದಾರೆ. ನ್ಯಾಯಾಲಯದ ನಿರ್ದೇಶನಗಳಿಂದ ಅಥವಾ ಶಾಸನದ ಮೂಲಕ  ಅದನ್ನು ಬದಲಾಯಿಸಬಹುದಾಗಿದೆ.

ಇದನ್ನು ಓದಿ: ಮಾದ್ಯಮ ಪ್ರತಿನಿಧಿಗಳಿಂದ ಎಲೆಕ್ಟ್ರಾನಿಕ್ ಸಾಧನಗಳ ಜಪ್ತಿ: ಮಾರ್ಗಸೂಚಿ ರಚಿಸಲು ಸುಪ್ರೀಂಕೋರ್ಟ್ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...