ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ವಹಿಸಿರುವ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದ ತನ್ನ ನಿಲುವನ್ನು ಕೇರಳದ ಆಡಳಿತರೂಢ ಎಲ್‌ಡಿಎಫ್ ಮೈತ್ರಿ ಸರ್ಕಾರದ ಪ್ರಮುಖ ಪಕ್ಷವಾದ ಸಿಪಿಐ ಪುನರುಚ್ಚರಿಸಿದೆ. ಎಡಿಜಿಪಿ ಅಜಿತ್ ಅವರು ಆರೆಸ್ಸೆಸ್ ಜೊತೆಗೆ ಸಭೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ನಂತರ ಕೇರಳ ರಾಜಕೀಯದಲ್ಲಿ ಬಿರುಗಾಳಿ ಬೀಸಿದೆ. ಕೇರಳ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿರುವ ಅಧಿಕಾರಿ ಎಲ್‌ಡಿಎಫ್ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯುತ ಎಡಿಜಿಪಿಯಾಗಿ ಸೇವೆ ಸಲ್ಲಿಸಲು ಅನರ್ಹರು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಶನಿವಾರ ಕೊಟ್ಟಾಯಂನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಿಪಿಐ(ಎಂ) ನೇತೃತ್ವದ ಕೇರಳದ ಎಲ್‌ಡಿಎಫ್ ಸರ್ಕಾರದಲ್ಲಿ ಸಿಪಿಐ ಪ್ರಮುಖ ಪಕ್ಷವಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | ದುಡಿದ ಹಣ ನೀಡುವುದಾಗಿ ಕಚೇರಿಗೆ ಕರೆದು ದಲಿತ ಕಾರ್ಮಿಕರಿಗೆ ಥಳಿಸಿ, ಕೊಲೆ ಬೆದರಿಕೆ
“ಎಡಿಜಿಪಿ ಅವರು ಆರ್‌ಎಸ್‌ಎಸ್ ನಾಯಕರನ್ನು ಒಂದಲ್ಲ, ಎರಡು ಬಾರಿ ಭೇಟಿ ಮಾಡಿದ್ದಾರೆ. ಈ ಸಭೆಗಳ ಉದ್ದೇಶವು ಅಸ್ಪಷ್ಟವಾಗಿದ್ದು, ನಿರ್ಲಕ್ಷಿಸಲಾಗುವುದಿಲ್ಲ. ಹೀಗಾಗಿ ಎಡಿಜಿಪಿಯನ್ನು ಬದಲಾಯಿಸಬೇಕು ಎಂಬ ಸಿಪಿಐ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಬಿನೊಯ್ ಹೇಳಿದ್ದಾರೆ.
ಮಲಪ್ಪುರಂನಲ್ಲಿ ಡಿವೈಎಫ್‌ಐ ಕಾರ್ಯಕರ್ತರು ನಡೆಸಿದ ಮೆರವಣಿಗೆಯಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ವೈಷಮ್ಯ ಹೊಂದಿರುವ ನಿಲಂಬೂರು ಶಾಸಕ ಪಿ ವಿ ಅನ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಗಿದ್ದ ಘೋಷಣೆಗಳನ್ನು ಅವರು ಖಂಡಿಸಿದ್ದಾರೆ.
“ಎಡಪಂಥೀಯರನ್ನು ವಿರೋಧಿಸುವವರ ಕೈಕಾಲುಗಳನ್ನು ಕತ್ತರಿಸುವುದು ಕಮ್ಯುನಿಸ್ಟ್ ತತ್ವಗಳಿಗೆ ಪೂರಕವಾಗಿಲ್ಲ. ವಿರೋಧವನ್ನು ವಿಚಾರಗಳಿಂದ ಎದುರಿಸಬೇಕು, ದೈಹಿಕ ಹಾನಿಯಿಂದಲ್ಲ. ಸಿಪಿಐ ಸಿದ್ದಾಂದ ಶಕ್ತಿಯನ್ನು ದೃಢವಾಗಿ ನಂಬುತ್ತದೆ” ಎಂದು ಬಿನೋಯ್ ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ದಲಿತ ಸಮುದಾಯಗಳ ಒಡಕಿನಲ್ಲೂ ಒಗ್ಗಟ್ಟಿದೆ: ಅಗ್ರಹಾರ ಕೃಷ್ಣಮೂರ್ತಿ


