Homeಮುಖಪುಟಕೊರೋನ ಭೀತಿ: "ರಾಜ್ಯ ವಿಪತ್ತು" ಸ್ಥಿತಿಯನ್ನು ವಾಪಾಸು ಪಡೆದ ಕೇರಳ

ಕೊರೋನ ಭೀತಿ: “ರಾಜ್ಯ ವಿಪತ್ತು” ಸ್ಥಿತಿಯನ್ನು ವಾಪಾಸು ಪಡೆದ ಕೇರಳ

- Advertisement -
- Advertisement -

ಕೊರೊನಾವೈರಸ್ ಕಾರಣದಿಂದಾಗಿ ಕೇರಳವೂ ಘೋಷಿಸಿದ್ದ “ರಾಜ್ಯ ವಿಪತ್ತು” ಸ್ಥಿತಿಯನ್ನು ವಾಪಾಸು ಪಡೆಯಲಾಗಿದೆ ಎಂದು ಕೇರಳ ರಾಜ್ಯ ಸರ್ಕಾರದ ಆರೋಗ್ಯ ಮಂತ್ರಿ ಕೆ.ಕೆ.ಶೈಲಜಾ ಅವರು ಹೇಳಿದರು. ಆದರೆ ವೈರಸ್ ಬಗ್ಗೆ ಎಚ್ಚರಿಕೆಯನ್ನು ಮುಂದುವರಿಸಬೇಕಾಗಿದೆ ಎಂದರು.

ಚೀನಾದ ವುಹಾನ್‌ನಿಂದ ಬಂದ ಎಲ್ಲಾ 645 ಭಾರತೀಯರನ್ನು ಕರೋನವೈರಸ್‌ ಬಗ್ಗೆ ಪರೀಕ್ಷೆ ಮಾಡಲಾಗಿದೆ, ಆದರೆ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಜನವರಿ 15 ರಂದು ಅಥವಾ ನಂತರ ಚೀನಾಕ್ಕೆ ಬಂದಿರುವ ವಿದೇಶಿಯರಿಗೆ ಇಂಡೋ-ನೇಪಾಳ, ಇಂಡೋ-ಭೂತಾನ್, ಇಂಡೋ-ಬಾಂಗ್ಲಾದೇಶ ಅಥವಾ ಇಂಡೋ-ಮ್ಯಾನ್ಮಾರ್ ಭೂ ಗಡಿಗಳು ಸೇರಿದಂತೆ ಯಾವುದೇ ವಾಯು, ಭೂಮಿ ಅಥವಾ ಬಂದರಿನಿಂದ ಭಾರತಕ್ಕೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದ ಸರ್ಕಾರವು ರಾಜ್ಯದಲ್ಲಿ ಮೂರನೇ ವ್ಯಕ್ತಿಗೆ ವೈರಸ್‌ ತಗುಲಿರುವುದು ದೃಡಪಟ್ಟ ನಂತರ ಕರೋನವೈರಸ್ ಅನ್ನು ‘ರಾಜ್ಯ ವಿಪತ್ತು’ ಎಂದು ಘೋಷಿಸಿತ್ತು.

ಚೀನಾದಲ್ಲಿ ಕೊರೊನಾವೈರಸ್ ನಿಂದಾಗಿರುವ ಸಾವಿನ ಸಂಖ್ಯೆ 636 ಕ್ಕೆ ಏರಿದೆ. ಗುರುವಾರ 73 ಸಾವುಗಳಾಗಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಅಲ್ಲದೇ ದೃಡೀಕರಿಸಿದ ಪ್ರಕರಣಗಳು 30,000 ದಾಟಿದೆ ಎಂದು AFP ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...