ಕೊರೊನಾ ವಿರುದ್ಧ ರಾಜ್ಯದ ಹೋರಾಟವನ್ನು ಮುನ್ನಡೆಸಿದ್ದಕ್ಕಾಗಿ ವಿಶ್ವದಾದ್ಯಂತ ಶ್ಲಾಘಿಸಲ್ಪಟ್ಟ ಕೇರಳದ ಆರೋಗ್ಯ ಸಚಿವೆ ಕೆ. ಕೆ. ಶೈಲಾಜಾ ಈಗ ಬ್ರಿಟಿಷ್ ನಿಯತಕಾಲಿಕೆ ಪ್ರಾಸ್ಪೆಕ್ಟ್ ಗುರುತಿಸಿರುವ ವಿಶ್ವದ 50 ಉನ್ನತ ಚಿಂತಕರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ.
ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್, ಫ್ರೆಂಚ್ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಎಸ್ತರ್ ಡುಫ್ಲೋ, ಆಫ್ರಿಕನ್ ಅಮೆರಿಕನ್ ಕಾದಂಬರಿಕಾರ್ತಿ ಮೂರು ಬಾರಿ ಹ್ಯೂಗೋ ಪ್ರಶಸ್ತಿ ವಿಜೇತೆ ಎನ್. ಕೆ. ಜೆಮಿಸಿನ್, ಐರಿಶ್ ನಟಿ ಸ್ಯಾಲಿ ರೂನಿ ಮತ್ತು ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಸೇರಿದ್ದಾರೆ.
ಕಳೆದ ನಾಲ್ಕು ದಶಕಗಳಲ್ಲಿ ಹೆಚ್ಚಿನ ಭಾಗ ಭಾರತದಲ್ಲೇ ಇರುವ ಸ್ಕಾಟಿಷ್ ಇತಿಹಾಸಕಾರ ಡಾಲ್ರಿಂಪಲ್ ಅವರನ್ನು ಬಿಟ್ಟರೆ, ಈ ಪಟ್ಟಿಯಲ್ಲಿ ಇಪ್ಪತ್ಮೂರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಶೈಲಾಜಾ ಅದರಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ.
ಓದಿ: ನೆರೆಯ ಕೇರಳ ಮಾದರಿ ಅನುಸರಿಸಲು ಸರ್ಕಾರ ಸಿದ್ದವಿಲ್ಲವೇಕೆ? : ಕುಮಾರಸ್ವಾಮಿ ಪ್ರಶ್ನೆ
ನಿಯತಕಾಲಿಕವು ತನ್ನ ಮುಂದಿನ ಸಂಚಿಕೆಯಲ್ಲಿ (ಸೆಪ್ಟೆಂಬರ್ 1) ವರ್ಷದ ಉನ್ನತ ಚಿಂತಕ ಮತ್ತು ಟಾಪ್ -10 ಚಿಂತಕರನ್ನು ಹೆಸರಿಸಲಿದೆ. ಆಯ್ಕೆಯು ಓದುಗರ ಮತಗಳು ಮತ್ತು ಸಂಪಾದಕೀಯ ಸಮಿತಿಯ ಆಲೋಚನೆಗಳನ್ನು ಆಧರಿಸಿರುತ್ತದೆ.
ಕೊರೊನಾ ಸಾಂಕ್ರಮಿಕದ ಏರುಗತಿಯನ್ನು ತಡೆದುದ್ದಕ್ಕಾಗಿ ಹಾಗೂ ದಕ್ಷಿಣ ಭಾರತದ ರಾಜ್ಯದಲ್ಲಿ ಕಡಿಮೆ ಸಾವಿನ ಪ್ರಮಾಣ ಗಳಿಸಿದ ಕೀರ್ತಿಗೆ ಶೈಲಾಜಾ ಪಾತ್ರರಾಗಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಕೊರೊನಾ ಸೋಂಕು ಚೀನಾದಲ್ಲಿ ವರದಿಯಾಗುತ್ತಿದ್ದಂತೆ ಕೇರಳವು ಯಾವುದೇ ಸಮಯ ವ್ಯರ್ಥ ಮಾಡಿರಲಿಲ್ಲ. ಮುಂಬರುವ ಸವಾಲುಗಳನ್ನು ಎದುರಿಸಲು ತಜ್ಞರ ಸಲಹೆ ಪಡೆದು ಅದಕ್ಕೆ ಬೇಕಾದ ಮುನ್ನೆಚ್ಚರಿಕೆಗಳನ್ನು ರಾಜ್ಯವು ತೆಗೆದುಕೊಂಡಿತು. ಅದರಂತೆ ಮೊದಲ ಕೊರೊನಾ ಪ್ರಕರಣವು ಜನವರಿ 27 ರಂದು ಕೇರಳದಲ್ಲಿ ವರದಿಯಾದಾಗಲೇ ವೈರಸ್ ಎದುರಿಸಲು ರಾಜ್ಯವು ಸಿದ್ಧವಾಗಿತ್ತು.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರೋಟೋಕಾಲ್ ಅನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರಿಂದ ಪರೀಕ್ಷೆ, ಜಾಡು, ಪ್ರತ್ಯೇಕಿಸುವಿಕೆ ಮತ್ತು ಬೆಂಬಲ ಮತ್ತು ಬ್ರೇಕ್ ದಿ ಚೈನ್ ಅಭಿಯಾನಗಳು ರಾಜ್ಯದಾದ್ಯಂತ ನಡೆದಿತ್ತು.
ಕೇರಳದಲ್ಲಿ 2018 ರ ನಿಫಾ ವೈರಸ್ ಅನ್ನು ನಿಭಾಯಿಸಿದರಿಂದ ಗಳಿಸಿದ ಅನುಭವದಿಂದ ಅವರಿಗೆ ಬಹಳ ಸಹಾಯವಾಯಿತು.
ಪ್ರಸ್ತುತ ಕೊರೊನಾ ವೈರಸ್‌ನಿಂದಾಗಿ ಉಂಟಾದ ಸಾವಿನ ಪ್ರಮಾಣವು ಕೇರಳದಲ್ಲಿ ಶೇಕಡಾ 0.3 ರಷ್ಟಿದ್ದರೆ, ಭಾರತದ ಉಳಿದ ಭಾಗಗಳಲ್ಲಿ ಇದು ಶೇಕಡಾ 2.25 ಕ್ಕಿಂತ ಹೆಚ್ಚಿದೆ.
ಓದಿ: ಕೊರೊನಾ ವಿರುದ್ದದ ಹೋರಾಟ: ಕೇರಳದ ಆರೋಗ್ಯ ಮಂತ್ರಿಗೆ ವಿಶ್ವಸಂಸ್ಥೆಯಿಂದ ಗೌರವ


