Homeಮುಖಪುಟಮಹಾರಾಷ್ಟ್ರ : ಪ್ರಮುಖ ನಾಯಕ ಅನಂತ್ ಸೇರಿದಂತೆ 10 ಮಂದಿ ಮಾವೋವಾದಿಗಳು ಶರಣಾಗತಿ

ಮಹಾರಾಷ್ಟ್ರ : ಪ್ರಮುಖ ನಾಯಕ ಅನಂತ್ ಸೇರಿದಂತೆ 10 ಮಂದಿ ಮಾವೋವಾದಿಗಳು ಶರಣಾಗತಿ

- Advertisement -
- Advertisement -

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಶುಕ್ರವಾರ (ನ.28) ಪ್ರಮುಖ ಮಾವೋವಾದಿ ನಾಯಕ ವಿಕಾಸ್ ನಾಗಪುರೆ ಅಲಿಯಾಸ್ ನವಜ್ಯೋತ್ ಅಲಿಯಾಸ್ ಅನಂತ್ ಮತ್ತು ಇತರ 10 ಮಂದಿ ಪೊಲೀಸರ ಮುಂದೆ ಶರಣಾಗಿದ್ದಾರೆ.

ಅನಂತ್ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ದ ಮಹಾರಾಷ್ಟ್ರ-ಮಧ್ಯಪ್ರದೇಶ-ಛತ್ತೀಸ್‌ಗಢ ವಿಶೇಷ ವಲಯ ಸಮಿತಿಯ ವಕ್ತಾರರಾಗಿದ್ದರು. ಕೆಲವು ದಿನಗಳ ಹಿಂದೆ, ಅವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ದಂಗೆ ವಿರೋಧಿ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಪತ್ರಿಕಾ ಪ್ರಕಟಣೆ ನೀಡಿದ್ದರು. ಜನವರಿ 1ರಂದು ಮಾವೋವಾದಿಗಳು ಶರಣಾಗುವ ಗಡುವನ್ನು ನಿಗದಿಪಡಿಸಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಅನಂತ್ ಶರಣಾಗತಿಗೆ ಹಲವು ಅಂಶಗಳು ಕಾರಣವಾಗಿವೆ ಎಂದು ಕ್ಯಾಂಪ್ ನಾಗ್ಪುರದ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಗಡ್ಚಿರೋಲಿ ರೇಂಜ್) ಅಂಕಿತ್ ಗೋಯಲ್ ಪತ್ರಿಕೆಗೆ ತಿಳಿಸಿದ್ದಾರೆ.

“ನಾವು ಅವರನ್ನು ಮನವೊಲಿಸಲು ಪ್ರಯತ್ನಿಸಿದೆವು, ಮತ್ತು ಕಾರ್ಯಾಚರಣೆಗಳು ಸಹ ನಡೆಯುತ್ತಿದ್ದವು. ಬಹುಶಃ ಶರಣಾಗಲು ಇದು ಸರಿಯಾದ ಸಮಯ ಎಂದು ಅವರು ಭಾವಿಸಿರಬಹುದು” ಎಂದು ಗೋಯಲ್ ಹೇಳಿದ್ದಾರೆ.

ಮಹಾರಾಷ್ಟ್ರ-ಮಧ್ಯಪ್ರದೇಶ-ಛತ್ತೀಸ್‌ಗಢ ವಲಯದ ಪ್ರಮುಖ ಮಾವೋವಾದಿ ನಾಯಕರಲ್ಲಿ ಅನಂತ್ ಒಬ್ಬರಾಗಿದ್ದರು. ಸಿಪಿಐ (ಮಾವೋವಾದಿ) ಶ್ರೇಣಿಯಲ್ಲಿ ಅವರಿಗಿಂತ ಒಬ್ಬ ಕೇಂದ್ರ ಸಮಿತಿ ಸದಸ್ಯ ರಾಮಧೇರ್ ಮಾತ್ರ ಮೇಲಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

“ರಾಮ್‌ಧೇರ್‌ನ ಗುಂಪು ಇನ್ನೂ ಈ ಪ್ರದೇಶದ ಉತ್ತರ ಭಾಗದಲ್ಲಿದೆ, ಆದರೆ, ಅವರೂ ಶೀಘ್ರದಲ್ಲೇ ಶರಣಾಗುತ್ತಾರೆ ಎಂಬುವುದು ನಮಗೆ ಖಚಿತವಾಗಿದೆ” ಎಂದು ಗೋಯಲ್ ಹೇಳಿದ್ದಾರೆ.

ವಿಭಾಗೀಯ ಸಮಿತಿಯ ಕಮಾಂಡರ್ ನಾಗಸು ಗೋಳು ವಡ್ಡೆ, ರಾಣೋ ಪೊರೆಟಿ, ಸಂತು ಪೊರೆಟಿ, ಸಂಗೀತಾ ಪಂಢರೆ, ಪ್ರತಾಪ್ ಬಂತುಲ, ಅನುಜಾ ಕಾರ, ಪೂಜಾ ಮುದಿಯಂ, ದಿನೇಶ್ ಸೊಟ್ಟಿ, ಶೀಲಾ ಮಾದವಿ ಮತ್ತು ಅರ್ಜುನ್ ದೊಡಿ ಶುಕ್ರವಾರ ಶರಣಾದ ಇತರರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಶರಣಾದ ಮಾವೋವಾದಿಗಳ ತಲೆಗೆ 89 ಲಕ್ಷ ರೂಪಾಯಿಗಳ ಸಾಮೂಹಿಕ ಬಹುಮಾನ ಘೋಷಣೆಯಾಗಿತ್ತು ಎಂದು ಗೊಂಡಿಯಾ ಪೊಲೀಸ್ ವರಿಷ್ಠಾಧಿಕಾರಿ ಗೋರಖ್ ಸುರೇಶ್ ಭಮಾರೆ ಪತ್ರಿಕೆಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಮಾರ್ಚ್ 31, 2026ರೊಳಗೆ ಮಾವೋವಾದವನ್ನು ಕೊನೆಗೊಳಿಸುವುದಾಗಿ ಪದೇ ಪದೇ ಪ್ರತಿಜ್ಞೆ ಮಾಡುತ್ತಿದೆ.

ಜನವರಿಯಿಂದ 114 ಮಾವೋವಾದಿಗಳು ಮಹಾರಾಷ್ಟ್ರ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅಕ್ಟೋಬರ್ 15 ರಂದು, ಸಿಪಿಐ (ಮಾವೋವಾದಿ) ಪೊಲಿಟ್‌ಬ್ಯೂರೋ ಸದಸ್ಯ ಮಲ್ಲುಜೋಳ ವೇಣುಗೋಪಾಲ್ ಅಲಿಯಾಸ್ ಭೂಪತಿ ಸೇರಿದಂತೆ 61 ಮಾವೋವಾದಿಗಳು ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಮ್ಮುಖದಲ್ಲಿ ಶರಣಾಗಿದ್ದರು.

ನೆರೆಯ ಛತ್ತೀಸ್‌ಗಢದಲ್ಲಿ ಇತ್ತೀಚಿನ ದಿನಗಳಲ್ಲಿ ಸುಮಾರು 2,400 ಮಾವೋವಾದಿಗಳು ಶರಣಾಗಿದ್ದಾರೆ. ಇದೇ ವೇಳೆ 1,792 ಜನರನ್ನು ಬಂಧಿಸಲಾಗಿದೆ ಮತ್ತು 485 ಜನರನ್ನು ಭದ್ರತಾ ಪಡೆಗಳು ಕೊಂದಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ವಿವರಿಸಿದೆ.

2024ರಲ್ಲಿ ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಕೊಲ್ಲಲ್ಪಟ್ಟವರಲ್ಲಿ ಅನೇಕರು ಬಹುಮಾನ ಘೋಷಣೆಯಾಗಿದ್ದ ಮಾವೋವಾದಿಗಳು ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ, ಅವರ ಕುಟುಂಬಗಳು ಈ ಹೇಳಿಕೆಯನ್ನು ವಿರೋಧಿಸಿವೆ. ಕೊಲ್ಲಲ್ಪಟ್ಟ ವ್ಯಕ್ತಿಗಳು ನಾಗರಿಕರು ಎಂದು ಕುಟುಂಬಗಳು ಹೇಳಿಕೊಂಡಿವೆ ಎಂದು ಮಾಲಿನಿ ಸುಬ್ರಮಣಿಯಂ ಸುದ್ದಿ ಸಂಸ್ಥೆ ಸ್ಕ್ರೋಲ್‌ಗಾಗಿ ಮಾಡಿದ ವರದಿಯಲ್ಲಿ ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೊಲೀಸ್ ಕಾರ್ಯಾಚರಣೆ ತಡೆದು ಕೋಳಿ ಅಂಕ : ಪುತ್ತೂರು ಶಾಸಕ ಅಶೋಕ್ ರೈ ಸೇರಿ 17 ಮಂದಿ ವಿರುದ್ಧ ಪ್ರಕರಣ ದಾಖಲು

ಶಾಸಕರೇ ಮುಂದೆ ನಿಂತು ಕಾನೂನುಬಾಹಿರ ಚಟುವಟಿಕೆ ನಡೆಸಲು ಜನರನ್ನು ಪ್ರೋತ್ಸಾಹಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿ ಶನಿವಾರ (ಡಿ.20) ನಡೆದಿದೆ. ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯುತ್ತಿದ್ದ...

ನಾಲ್ವರು ಬಾಲಕರಿಂದ ಬಾಲಕಿಗೆ ಕಿರುಕುಳ ಆರೋಪ : ‘ಉತ್ತಮ ಸಂಸ್ಕಾರ ಕಲಿಸಿಲ್ಲ’ ಎಂದು ತಾಯಂದಿರನ್ನು ಬಂಧಿಸಿದ ಪೊಲೀಸರು!

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಾಲ್ವರು ಬಾಲಕರ ವಿರುದ್ಧ ಬಾಲಕಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಪೊಲೀಸರು ಬಾಲಕರ ತಾಯಂದಿರನ್ನು 'ಪ್ರಿವೆಂಟಿವ್ ಅರೆಸ್ಟ್' ಮಾಡಿದ್ದಾರೆ ಎಂದು indianexpress.com ಶನಿವಾರ (ಡಿ.20) ವರದಿ...

ಎಸ್‌ಐಆರ್‌: ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಲ್ಲಿ 1 ಲಕ್ಷ ಮತದಾರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಡಿಲೀಟ್

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಿಂದ 1,03,812 ಕ್ಕೂ ಹೆಚ್ಚು ಮತದಾರರ ಹೆಸರು ತೆಗೆದುಹಾಕಲಾಗಿದೆ. ಇದು ತಮಿಳುನಾಡಿನಲ್ಲಿ ರಾಜ್ಯಾದ್ಯಂತ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಮತದಾರರ ಪಟ್ಟಿಯಲ್ಲಿನ ಅತಿದೊಡ್ಡ ಮತದಾರರ...

ಅಸ್ಸಾಂ : 15 ಮಂದಿಗೆ 24 ಗಂಟೆಯೊಳಗೆ ದೇಶ ತೊರೆಯಲು ಆದೇಶ : ಮಾಧ್ಯಮಗಳ ಮೂಲಕ ವಿಷಯ ತಿಳಿದುಕೊಂಡ ಕುಟುಂಬಸ್ಥರು

ಅಸ್ಸಾಂನ ನಾಗಾಂವ್ ಜಿಲ್ಲಾಡಳಿತವು 15 ಘೋಷಿತ ವಿದೇಶಿಯರಿಗೆ 24 ಗಂಟೆಗಳ ಒಳಗೆ ರಾಜ್ಯ ತೊರೆಯುವಂತೆ ಆದೇಶಿಸಿದ ಬಗ್ಗೆ ವರದಿಯಾಗಿದೆ. ಬುಧವಾರ (ಡಿ.17) ಜಿಲ್ಲಾಡಳಿತ ಈ ಆದೇಶ ನೀಡಿತ್ತು. ಆದರೆ, ಇದುವರೆಗೆ (ಡಿ.20) ಈ 15...

ಸಿರಿಯಾದ ಐಸಿಸ್ ಅಡಗುತಾಣಗಳ ಮೇಲೆ ಅಮೆರಿಕ ವಾಯುದಾಳಿ

ಕಳೆದ ವಾರ ಅಮೆರಿಕದ ಸಿಬ್ಬಂದಿ ಮೇಲೆ ನಡೆದ ಮಾರಕ ದಾಳಿಗೆ ಪ್ರತೀಕಾರವಾಗಿ ಅಮೆರಿಕವು ಮಧ್ಯ ಸಿರಿಯಾದಾದ್ಯಂತ ಡಜನ್‌ಗಟ್ಟಲೆ ಇಸ್ಲಾಮಿಕ್ ಸ್ಟೇಟ್ (ಐಎಸ್) ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಆಪರೇಷನ್ ಹಾಕೈ...

16 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ‘ಮನರೇಗಾ’ ಪಟ್ಟಿಯಿಂದ ಕೈಬಿಟ್ಟ ಕೇಂದ್ರ ಸರ್ಕಾರ: ವರದಿ

ಯುಪಿಎ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಹೆಸರನ್ನು ಬದಲಿಸಲು ಪ್ರಯತ್ನಿಸುವ 'ವಿಕ್ಷಿತ್ ಭಾರತ್ - ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ–ಜಿ...

ಅಮೆರಿಕದ ಬಹು ನಿರೀಕ್ಷಿತ ‘ಎಪ್‌ಸ್ಟೀನ್ ಫೈಲ್ಸ್’ ಬಿಡುಗಡೆ : ಬಿಲ್ ಕ್ಲಿಂಟನ್, ಮೈಕಲ್ ಜಾಕ್ಸನ್ ಸೇರಿದಂತೆ ಪ್ರಮುಖರ ಫೋಟೋಗಳು ಬಹಿರಂಗ

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ(ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು...

ಕೋಮು ಸಾಮರಸ್ಯಕ್ಕಾಗಿ ಭಾರತದ ಮುಸ್ಲಿಮರು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು: ಜಮಾಅತ್ ಅಧ್ಯಕ್ಷ

'ಭಾರತದ ಮುಸ್ಲಿಮರು, ದೇಶದಲ್ಲಿ ಕೋಮು ಸಾಮರಸ್ಯಕ್ಕಾಗಿ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು' ಎಂದು ಜಮಾಅತೆ-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಅವರು ಒತ್ತಾಯಿಸಿದರು. ಕೋಮು ಸಾಮರಸ್ಯ ಇಲಾಖೆಯು ಆಯೋಜಿಸಿದ್ದ 'ಅಖಿಲ...

3 ವರ್ಷಗಳಲ್ಲಿ ರಷ್ಯಾ ಸೇನೆ ಸೇರಿದ 200 ಕ್ಕೂ ಹೆಚ್ಚು ಭಾರತೀಯರು; 26 ಮಂದಿ ಸಾವು: ವಿದೇಶಾಂಗ ಸಚಿವಾಲಯ

2022 ರಿಂದ ಕನಿಷ್ಠ 202 ಭಾರತೀಯ ಪ್ರಜೆಗಳು ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇಬ್ಬರನ್ನು ರಷ್ಯಾದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ)...

ಎಸ್‌ಐಆರ್‌ ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ : ತಮಿಳುನಾಡಿನಲ್ಲಿ 97 ಲಕ್ಷ, ಗುಜರಾತ್‌ನಲ್ಲಿ 73 ಲಕ್ಷ ಹೆಸರು ಡಿಲೀಟ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ತಮಿಳುನಾಡು ಮತ್ತು ಗುಜರಾತ್‌ನ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ್ದು, ಕ್ರಮವಾಗಿ 97.3 ಮತ್ತು 73.7 ಲಕ್ಷ ಮತದಾರರ...