ಖಾಸಗಿ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಕೊಲ್ಕತ್ತಾದ ಎಂಟಲ್ಲಿ ಪ್ರದೇಶದಲ್ಲಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅವರಿಂದ 2.66 ಕೋಟಿ ರೂ. ಲೂಟಿ ಮಾಡಿದ್ದ ಆರೋಪದ ಮೇಲೆ ಬುಧವಾರ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಲ್ಕತ್ತಾ | ಚಲಿಸುವ
ಮೇ 5 ರಂದು ಬೆಳಿಗ್ಗೆ 11.45 ರ ಸುಮಾರಿಗೆ ಖಾಸಗಿ ವಿದೇಶಿ ವಿನಿಮಯ ಕಂಪನಿಯ ಇಬ್ಬರು ಉದ್ಯೋಗಿಗಳು ಕೊಲ್ಕತ್ತಾದ ಎಸ್.ಎನ್. ಬ್ಯಾನರ್ಜಿ ರಸ್ತೆಯಿಂದ ಪಾರ್ಕ್ ಸರ್ಕಸ್ ಪ್ರದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗೆ ಹಣವನ್ನು ಠೇವಣಿ ಇಡಲು ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ದರೋಡೆ ನಡೆದಿದೆ ಎಂದು ಆರೋಪಿಸಲಾಗಿದೆ.
“ಎಎಸ್‌ಐ ಸಂಪೂರ್ಣ ದರೋಡೆಯನ್ನು ಯೋಜಿಸಿದ್ದರು. ನಾವು ಅವರನ್ನು ಬಂಧಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಘಟನೆಯನ್ನು ವಿವರಿಸದೆ ಹೇಳಿದ್ದಾರೆ.
ನಗರದ ಕಮರ್ದಂಗ ಬಳಿ ಚಾಲಕನನ್ನು ಬಲವಂತವಾಗಿ ತಡೆದು, ನಂತರ ಇಬ್ಬರು ಅಪರಿಚಿತ ವ್ಯಕ್ತಿಗಳು ಟ್ಯಾಕ್ಸಿ ಒಳಗೆ ಹತ್ತಿದ್ದರು. ಅದರ ನಂತರ ಅವರು ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಕಂಪನಿಯ ನೌಕರರು ಹೇಳಿಕೊಂಡಿದ್ದರು. ಈ ಬಗ್ಗೆ ದೂರು ಸ್ವೀಕರಿಸಿದ್ದ ಕೋಲ್ಕತ್ತಾ ಪೊಲೀಸರ ಪತ್ತೇದಾರಿ ವಿಭಾಗ ತನಿಖೆ ಆರಂಭಿಸಿತ್ತು.
ಎಎಸ್‌ಐ ಬಂಧನದೊಂದಿಗೆ, ದರೋಡೆಗೆ ಸಂಬಂಧಿಸಿದಂತೆ ಸಂಸ್ಥೆಯ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ. ಕೋಲ್ಕತ್ತಾ | ಚಲಿಸುವ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಂಧಿತ ಬಿಎಸ್‌ಎಫ್ ಸೈನಿಕನನ್ನು ಭಾರತಕ್ಕೆ 21 ದಿನಗಳ ನಂತರ ಹಸ್ತಾಂತರಿಸಿದ ಪಾಕಿಸ್ತಾನ
ಬಂಧಿತ ಬಿಎಸ್‌ಎಫ್ ಸೈನಿಕನನ್ನು ಭಾರತಕ್ಕೆ 21 ದಿನಗಳ ನಂತರ ಹಸ್ತಾಂತರಿಸಿದ ಪಾಕಿಸ್ತಾನ

