Homeಮುಖಪುಟಕೊತ್ತು: ರಾಜಕೀಯ ಕೊಲೆಗಳ ಸುತ್ತ ಒಂದು ಸುತ್ತು...

ಕೊತ್ತು: ರಾಜಕೀಯ ಕೊಲೆಗಳ ಸುತ್ತ ಒಂದು ಸುತ್ತು…

- Advertisement -
- Advertisement -

ಕರ್ನಾಟಕ ರಾಜ್ಯ ರಾಜಕಾರಣದಿಂದಲೇ ಮಾತು ಆರಂಭಿಸಬಹುದು. ಮಲೆನಾಡು ಹಾಗೂ ಕರಾವಳಿ ಕರ್ನಾಟಕ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಕೊಲೆಗಳಿಗೆ ಪದೇಪದೇ ಸಾಕ್ಷಿಯಾಗುತ್ತಲೇ ಇದೆ. ಹಿಂದೂ- ಮುಸ್ಲಿಂ ಸಮುದಾಯದ ಯುವಕರು ಧರ್ಮದ ಕಾರಣಕ್ಕೆ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಸರಣಿ ಕೊಲೆಗಳು ನಡೆದವು. ಮಸೂದ್ ಎಂಬ ಯುವಕ ಕ್ಷುಲ್ಲಕ ಕಾರಣಕ್ಕೆ ಕೊಲೆಯಾದನು. ನಂತರ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರನ್ನು ಕೊಲ್ಲಲಾಗುತ್ತದೆ. ಇದಕ್ಕೆ ಪ್ರತಿಕಾರವೆಂಬಂತೆ ಫಾಜಿಲ್ ಎಂಬ ಅಮಾಯಕನ ಹೆಣ ಬಿತ್ತು. ಹೀಗೆ ‘ಕೊಲೆಗೆ ಕೊಲೆ’, ‘ರಕ್ತಕ್ಕೆ ರಕ್ತ’ ಎಂಬ ಭೀಕರ ಚರಿತ್ರೆಯನ್ನು ಕರ್ನಾಟಕದ ರಾಜಕೀಯ ಪರಿಸರದಲ್ಲಿ ಕಟ್ಟುತ್ತಿರುವುದು ವಿಷಾದನೀಯ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಾಚೆಗೆ ಜಿಗಿದು, ದ್ವೇಷದ ಎಲ್ಲೆ ಮೀರಿದಾಗ ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ. ಭಿನ್ನಮತದ ಸಹಿಷ್ಣುತೆ ಇಲ್ಲವಾದಾಗ ಈ ಅತಿರೇಕಕ್ಕೆ ಕಡಿವಾಣ ಇಲ್ಲವಾಗುತ್ತದೆ. ಈ ಮೇಲಾಟಗಳಿಂದಾಗಿ ಯಾವ ಪರಿಣಾಮಗಳು ಬೀರುತ್ತವೆ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು.

2015ರಲ್ಲಿ ಶಿವಮೊಗ್ಗದಲ್ಲಿ ನಡೆದ ಘಟನೆ. ಪಿಎಫ್‌ಐ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಕೆಲವರು ಗಾಜನೂರು ಬಳಿ ಆಲ್ಕೊಳದ ಹಿಂದುತ್ವ ವಿಶ್ವನಾಥ ಶೆಟ್ಟಿ ಅವರನ್ನು ಕೊಲೆ ಮಾಡಿದ್ದರು. ವಿಶ್ವನಾಥ್ ಶೆಟ್ಟಿ ಕೊಲೆಯಾದಾಗ ಹಿಂದುತ್ವ ಸಂಘಟನೆಗಳು ಶಿವಮೊಗ್ಗ ನಗರವನ್ನು ಬಂದ್ ಮಾಡಿದ್ದವು. ಭಾರೀ ಪ್ರತಿಭಟನೆ ನಡೆಸಿದ್ದವು. ವಿಶ್ವನಾಥ್‌ ಕುಟುಂಬದ ಪರ ಹಿಂದುತ್ವ ಸಂಘಟನೆಗಳು ನಿಂತವು. ಆ ನಂತರ ಏನಾಯಿತು?

ವಿಶ್ವನಾಥ್‌ ಅವರ ಹೆಂಡತಿ ಕಾಯಿಲೆ ಬಿದ್ದರು. ಸರ್ಕಾರ ನೀಡಿದ್ದ ಐದು ಲಕ್ಷ ರೂ. ಪರಿಹಾರ ಹಣ ವಿಶ್ವನಾಥ್‌ ಅವರ ಪತ್ನಿಯ ಆಸ್ಪತ್ರೆಯ ಖರ್ಚಿಗಾಯಿತು. ಜಾಂಡೀಸ್ ಆಗಿ ಅವರು ತೀರಿಕೊಂಡ ಬಳಿಕ ಪುಟಾಣಿ ಆದಿತ್ಯನ ಭಾರ ವಿಶ್ವನಾಥ್ ಅವರ ತಾಯಿ ಮೀನಾಕ್ಷಮ್ಮನ ಅವರ ಹೆಗಲ ಮೇಲೆ ಬಿತ್ತು. ಮಗಳು ಕೂಡ ತೀರಿಕೊಂಡ ಬಳಿಕ ಮೀನಾಕ್ಷಮ್ಮ ಅನಾಥೆಯಾದರು. ಮಗುವನ್ನು ಓದಿಸುವ ಭಾರಹೊತ್ತಿಕೊಂಡ ಅಜ್ಜಿ, ಚಿಂದಿ ಆಯುತ್ತ ಬದುಕು ಸವೆಸುವಂತಾಯಿತು. ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯಾದ ಬಳಿಕ ಆತನ ಕುಟುಂಬಕ್ಕೆ ರಾಜಕಾರಣಿಗಳು ಭರಪೂರ ನೆರವು ನೀಡುವಾಗ, ಮೀನಾಕ್ಷಮ್ಮನ ಬದುಕು ‘ಚಿಂದಿ’ಯಾಗಿರುವುದು ಸುದ್ದಿಯಾಗಿತ್ತು.

ರಾಜಕೀಯ ಕೊಲೆಗಳಾದಾಗ ಶವ ಮೆರವಣಿಗೆ ಮಾಡುವುದು, ಕೊಲೆ ಮಾಡಿ ಜೈಲಿಗೆ ಹೋಗಿ ಬಂದವನಿಗೆ ಹಾರ ತುರಾಯಿ ಹಾಕಿ ಸನ್ಮಾನಿಸುವುದು- ಇವೆಲ್ಲ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತವೆ?

ಹಿರಿಯ ನಿರ್ದೇಶಕ ‘ಸಿಬಿ ಮಲಯಿಲ್’ ನಿರ್ದೇಶನದ ‘ಕೊತ್ತು’ (ಇರಿತ/ಮಲಯಾಳಂ) ಸಿನಿಮಾ ನೋಡಿದರೆ ಕರ್ನಾಟಕ ಹಾಗೂ ಇಡೀ ದೇಶದ ರಾಜಕೀಯ ಕೊಲೆಗಳ ಪರಿಣಾಮಗಳು ಕಣ್ಣಮುಂದೆ ಬರುತ್ತವೆ. ರಕ್ತಕ್ಕೆ ರಕ್ತ, ಕೊಲೆಗೆ ಕೊಲೆ ಎಂದು ಹೊರಟರೆ ಮನುಷ್ಯನ ನೆಮ್ಮದಿ ಹಾಳಾಗುತ್ತದೆ. ಸಾವನ್ನು ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾದ ಸ್ಥಿತಿ ಉಂಟಾಗುತ್ತದೆ. ಕೊಲೆಯಾದವರ ಕುಟುಂಬ ಬೀದಿಗೆ ಬಿದ್ದು, ನರಳಬೇಕಾಗುತ್ತದೆ.

‘ಅಯ್ಯಪ್ಪನುಂ ಕೋಶಿಯುಮ್‌’, ‘ನಾಯಟ್ಟು’ ಸಿನಿಮಾ ನಿರ್ಮಾಪಕರಾದ ರಂಜಿತ್‌, ಪಿ.ಎಂ.ಸಸಿಧರನ್‌ ನಿರ್ಮಾಣದ ‘ಕೊತ್ತು’- ಈ ಕಾಲದ ರಾಜಕೀಯ ಕಥನ. ‘ಕೇಸರಿ’ ಮತ್ತು ‘ಕೆಂಪು’- ರಾಜಕೀಯ ಗುಂಪುಗಳ ನಡುವಿನ ಜಿದ್ದಾಜಿದ್ದಿ, ವೈಷಮ್ಯದ ಕಥೆಯನ್ನು ಕೇರಳದ ಪರಿಸರದ ಮೂಲಕ ಹೇಳಲಾಗುತ್ತಿದೆಯಾದರೂ, ಭಾರತದ ಯಾವುದೇ ಪ್ರಾಂತ್ಯದಲ್ಲಿ ನಡೆಯಬಹುದಾದ ರಾಜಕೀಯ ಕಥೆಯನ್ನು ಇಲ್ಲಿ ತೋರಿಸಲಾಗಿದೆ. ಈ ಎರಡು ಗುಂಪುಗಳ ನಡುವೆ ಹರಿಯುತ್ತಿರುವ ಕೊನೆಯಿಲ್ಲದ ರಕ್ತವು, ಮನುಷ್ಯನ ನೆಮ್ಮದಿಯನ್ನು ಹಾಳುಗೆಡುವುತ್ತದೆ. ಊರು ಊರುಗಳ ನಡುವೆ, ಕೇರಿ ಕೇರಿಗಳ ನಡುವೆ ಗೋಡೆಗಳನ್ನು ನಿರ್ಮಿಸುತ್ತದೆ. ರಾಜಕೀಯ ಕೊಲೆಗಳಾಚೆಗೆ ಎದುರಾಗುವ ಬದುಕಿನ ಸಂದಿಗ್ಧತೆಗಳು ಇಕ್ಕಟ್ಟಿಗೆ ಸಿಲುಕಿಸುತ್ತವೆ.

‘ಕೊಲೆ’ ಎಂಬ ಕ್ರಿಯೆಗೆ ‘ಪ್ರತಿಕೊಲೆ’ಯಷ್ಟೇ ಪ್ರತಿಕ್ರಿಯೆಯಾಗಿರಲಾರದು. ಅದರಾಚೆಗೂ ಬೀರುವ ಸಾಮಾಜಿಕ ಪರಿಣಾಮಗಳತ್ತ ಗಮನ ಹರಿಸಬೇಕಾಗುತ್ತದೆ. ಜೀವಹಾನಿಯ ಜೊತೆಗೆ ಆರ್ಥಿಕ ನಷ್ಟ, ಕೌಂಟುಬಿಕ ಕಲಹ- ಎಲ್ಲವೂ ಸುತ್ತಿಕೊಳ್ಳುತ್ತವೆ. ‘ಕೆಂಪು’ ಪಡೆಯ ರಾಜಕೀಯ ನಾಯಕನನ್ನು ಕೇಸರಿ ಪಡೆ ಕೊಲೆ ಮಾಡುವುದರೊಂದಿಗೆ ಆರಂಭವಾಗುವ ಈ ಸಿನಿಮಾ, ಸರಣಿ ಅಪರಾಧಗಳಿಗೆ ಸಾಕ್ಷಿಯಾಗುತ್ತಾ ಹೋಗುತ್ತದೆ. ‘ಮನೆಯೊಳಗಿನ ಕಿಚ್ಚು- ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎಂಬ ವಚನಕಾರರ ಸಂದೇಶ ನೆನಪಾಗುತ್ತದೆ.

ಇದನ್ನೂ ಓದಿರಿ: ಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

ಗಾಂಧಿ ತೋರಿದ ಅಹಿಂಸಾ ಮಾರ್ಗದಲ್ಲಿ ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾದದ್ದು ಇಂದಿನ ತುರ್ತು. ನಮ್ಮ ಮುಂದಿನ ಪೀಳಿಗೆಗೆ ಯಾವ ಇತಿಹಾಸವನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಎಚ್ಚರಿಕೆಯೂ ನಮಗೆ ಮುಖ್ಯ. ಪ್ರತಿಕಾರಕ್ಕೆ ಇಳಿದಾಗ ಅನಾಥವಾಗುವ ಕುಟುಂಬ ನಮ್ಮ ಕಣ್ಣಮುಂದೆ ಬರಬೇಕು ಎಂಬ ಸಂದೇಶವನ್ನು ‘ಕೊತ್ತು’ ನೀಡಿದೆ.

‘ಜೇಕ್ಸ್‌ ಬಿಜಾಯ್‌’ ಅವರ ಹಿನ್ನೆಲೆ ಸಂಗೀತವು ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸಿದೆ. ಹೇಮಂತ್‌ಕುಮಾರ್‌ ಅವರು ಇಂದಿನ ರಾಜಕೀಯ ಕೊಲೆಗಳನ್ನು ಸಶಕ್ತವಾಗಿ ತಮ್ಮ ಕಥೆಯೊಳಗೆ ತಂದಿದ್ದಾರೆ. ಎಂದಿನಂತೆ ಆಸಿಫ್‌ ಅಲಿ, ನಿಖಿಲಾ ವಿಮಲ್‌, ರೋಷನ್ ಮ್ಯಾಥ್ಯೂ, ರಂಜಿತ್‌, ಶ್ರೀಲಕ್ಷ್ಮೀ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...