ಗಲಭೆ ಪೀಡಿತ ಮಣಿಪುರದ ಚುರಾಚಂದ್‌ಪುರದಲ್ಲಿ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ ಘಟನೆ ಕುರಿತು ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದ್ದು, ದೌರ್ಜನ್ಯ ನಡೆಯುವುದಕ್ಕೂ ಮೊದಲು ಇಬ್ಬರೂ ಮಹಿಳೆಯರು ಪೊಲೀಸ್ ಜೀಪಿನಲ್ಲಿ ಆಶ್ರಯ ಪಡೆದಿದ್ದರು ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
ಘಟನೆ ನಡೆದು ಸುಮಾರು ಒಂದು ವರ್ಷದ ನಂತರ ಇದೀಗ ಇನ್ನಷ್ಟು ಆತಂಕಕಾರಿ ವಿವರಗಳು ಹೊರಬೀಳುತ್ತಿದ್ದು, ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ ಚಾರ್ಜ್‌ಶೀಟ್ ಅನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಬಹುಸಂಖ್ಯಾತರ ಮೈತೇಯಿ ಗುಂಪಿನ ಪುರುಷರು ಕುಕಿ-ಜೋಮಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಮೊದಲು ಮತ್ತು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮೊದಲು, ಇಬ್ಬರೂ ಪೊಲೀಸರಲ್ಲಿ ಆಶ್ರಯ ಪಡೆದಿದ್ದರು. ರಸ್ತೆಬದಿಯಲ್ಲಿ ಜಿಪ್ಸಿ ನಿಲ್ಲಿಸಿತ್ತಾದರೂ, ವಾಹನವನ್ನು ಪ್ರಾರಂಭಿಸುವಂತೆ ಸಂತ್ರಸ್ತೆಯರು ಮಾಡಿದ ಮನವಿಗೆ ಪೊಲೀಸ್ ಚಾಲಕ ಸ್ಪಂಧಿಸಿಲ್ಲ ಎನ್ನಲಾಗಿದೆ. “ವಾಹನದ ಕೀ ಇಲ್ಲ” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪೊಲೀಸ್ ಜಿಪ್ಸಿಯೊಳಗೆ ಇಬ್ಬರು ಪುರುಷ ಸಂತ್ರಸ್ತರು ಸಹ ಇದ್ದರು ಎನ್ನಲಾಗಿದ್ದು, ಸ್ಥಳದಲ್ಲಿದ್ದ ಎಲ್ಲಾ ಪೊಲೀಸರು ಗಲಭೆ ನಂತರ ಅಲ್ಲಿಂದ ಹೊರಟಿದ್ದಾರೆ. ದೊಡ್ಡ ಜನಸಮೂಹವು ಸಂತ್ರಸ್ತರನ್ನು ವಾಹನದಿಂದ ಬಲವಂತವಾಗಿ ಹೊರಗೆಳೆದು, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಚುರಾಚಂದ್‌ಪುರದಲ್ಲಿ ನಡೆದ ಮಣಿಪುರದ ಭಯಾನಕ ಘಟನೆಯನ್ನು ಸಿಬಿಐ ತನಿಖೆಯು ಬಹಿರಂಗಪಡಿಸಿದೆ. ಅಕ್ಟೋಬರ್‌ನಲ್ಲಿ ಗುವಾಹಟಿಯ ವಿಶೇಷ ನ್ಯಾಯಾಲಯದಲ್ಲಿ ಆರು ವ್ಯಕ್ತಿಗಳು ಮತ್ತು ಬಾಲಾಪರಾಧಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಒರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸ್ ಎಫ್‌ಐಆರ್ ಹೇಳಿತ್ತು. ಮಣಿಪುರ ಪೊಲೀಸರು ಅಪರಾಧ ಸ್ಥಳದಲ್ಲಿ ಉಪಸ್ಥಿತರಿದ್ದರು. ಆದರೆ, ಅವರಿಗೆ ಸಹಾಯ ಮಾಡಲಿಲ್ಲ ಎಂದು ‘ದಿ ವೈರ್’ಗೆ ವರದಿ ಮಾಡಿದೆ.
ಮುಖ್ಯಮಂತ್ರಿ ಬಿರೇನ್ ಸಿಂಗ್ ಸರ್ಕಾರವು ರಾಜ್ಯದಲ್ಲಿನ ಹಿಂಸಾಚಾರದ ಪ್ರಮಾಣ ಮತ್ತು ಪ್ರಕಾರವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿತು ಮತ್ತು ಘಟನೆ ನಡೆದ ತಿಂಗಳುಗಳ ನಂತರ ಆರೋಪಿಯನ್ನು ಬಂಧಿಸುವ ಘೋರ ವೀಡಿಯೊ, ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಜನಸಮೂಹದಿಂದ ಮೆರವಣಿಗೆ ಮಾಡುವುದನ್ನು ತೋರಿಸುತ್ತದೆ. ಘಟನೆಯ ನಂತರ ಸಂತ್ರಸ್ತೆಯೊಬ್ಬರು ಮಾತನಾಡಿ, “ಮಣಿಪುರದ ಪೊಲೀಸರು ಅಲ್ಲಿ ಹಾಜರಿದ್ದರು. ಆದರೆ, ಅವರು ನಮಗೆ ಸಹಾಯ ಮಾಡಲಿಲ್ಲ” ಎಂದು ಹೇಳಿದ್ದಾರೆ.
“ನಾಲ್ವರು ಪೊಲೀಸರು ಕಾರಿನಲ್ಲಿ ಕುಳಿತು ಹಿಂಸಾಚಾರವನ್ನು ನೋಡುತ್ತಿರುವುದನ್ನು ತಾನು ನೋಡಿದ್ದೇನೆ” ಎಂದು ಮತ್ತೋರ್ವ ಸಂತ್ರಸ್ತೆ ಹೇಳಿದ್ದಾರೆ. “ಅವರು ನಮಗೆ ಸಹಾಯ ಮಾಡಲು ಏನನ್ನೂ ಮಾಡಲಿಲ್ಲ” ಎಂದು ಅವರು ಹೇಳಿದರು. ಈ ಗುಂಪಿನ ದಾಳಿಯಲ್ಲಿ ಆಕೆಯ ತಂದೆ ಮತ್ತು ಸಹೋದರ ಸಾವನ್ನಪ್ಪಿದ್ದಾರೆ.
ಕಳೆದ ವರ್ಷ ಮೇ 3 ರಿಂದ ಇಂಫಾಲ್ ಕಣಿವೆ ಮೂಲದ ಮೈತೇಯಿ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿಗಳ ನಡುವಿನ ಜನಾಂಗೀಯ ಕಲಹದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಏನಿದೆ?
“ಬೆತ್ತಲೆ ಮೆರವಣಿಗೆ ನಂತರ ಇತರ ಸ್ಥಳಗಳಲ್ಲಿ ಹಲವಾರು ಘಟನೆಗಳು ನಡೆದವು. ಮೈತೇಯಿ ಸಮುದಾಯಕ್ಕೆ ಸೇರಿದ ಜನಸಮೂಹವು ಒಂದು ಹಳ್ಳಿಯ ಮೇಲೆ ಮನೆಗಳಿಗೆ ಬೆಂಕಿ ಹಚ್ಚುವ ಮೂಲಕ ದಾಳಿಯನ್ನು ಪ್ರಾರಂಭಿಸಿತು ಮತ್ತು ಅಕ್ಕಪಕ್ಕದ ಹಳ್ಳಿಗಳಲ್ಲಿನ ಕೆಲವು ನಿವಾಸಗಳನ್ನು ಗುರಿಯಾಗಿರಿಸಿಕೊಂಡಿತು. ಗುಂಪು ಉದ್ದೇಶಪೂರ್ವಕವಾಗಿ ಚರ್ಚ್‌ಗೆ ಬೆಂಕಿ ಹಚ್ಚಿದೆ. ಮೇ 4 ರಂದು ಸುತ್ತಮುತ್ತಲಿನ ಗ್ರಾಮಗಳ ಪ್ರಧಾನರು ಮತ್ತು ಇತರ ಸಮುದಾಯದ ಗ್ರಾಮಗಳ ಮುಖ್ಯಸ್ಥರ ಸಭೆ ನಡೆದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಹೊರತಾಗಿಯೂ ಗುಂಪು ಚರ್ಚ್, ಕೆಲವು ಮನೆಗಳು ಮತ್ತು ಹತ್ತಿರದ ಹಳ್ಳಿಗಳನ್ನು ಸುಟ್ಟುಹಾಕಿತು ಎಂದು ಸಿಬಿಐ ಚಾರ್ಜ್‌ಶೀಟ್ ಹೇಳಿದೆ.
“ಭಯದಿಂದ ದೂರುದಾರರು, ಮೂವರು ಸಂತ್ರಸ್ತರು ಮತ್ತು ಇಬ್ಬರು ಪುರುಷರು, ಮತ್ತೊಬ್ಬ ವ್ಯಕ್ತಿ ತನ್ನ ಮಗಳು ಮತ್ತು ಮೊಮ್ಮಗಳೊಂದಿಗೆ ಕಾಡಿಗೆ ಓಡಿಹೋದರು ಎಂದು ತನಿಖೆಯಿಂದ ತಿಳಿದುಬಂದಿದೆ. ಒಂದು ಕುಟುಂಬದ ಸದಸ್ಯರು ಅಡಗಿರುವ ಸ್ಥಳವನ್ನು ಗಮನಿಸಿದ ಜನಸಮೂಹವು ಅವರನ್ನು ನೋಡಿದ ನಂತರ ‘ಜನರು ಇಲ್ಲಿ ಅಡಗಿಕೊಂಡಿದ್ದಾರೆ’ ಎಂದು ಕೂಗಲು ಪ್ರಾರಂಭಿಸಿದರು.
“ದೊಡ್ಡ ಕೊಡಲಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಗುಂಪಿನ ಸದಸ್ಯರು ಅವರತ್ತ ಧಾವಿಸಿ, ‘ಚುರಾಚಂದ್‌ಪುರದ ನೀವು ನಮ್ಮನ್ನು ಹೇಗೆ ನಡೆಸಿಕೊಂಡಿದ್ದೀರಿ, ನಾವು ನಿಮಗೆ ಅದೇ ರೀತಿ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದರು. ಗುಂಪು ಬಲವಂತವಾಗಿ ಎಲ್ಲರನ್ನು ಎಳೆದು ತಂದು, ಸಂತ್ರಸ್ತರಲ್ಲಿ ಒಬ್ಬರನ್ನು ಮತ್ತು ಆಕೆಯ ಮೊಮ್ಮಗಳನ್ನು ಒಂದು ದಿಕ್ಕಿಗೆ, ಅವರ ತಂದೆ ಮತ್ತು ಅವರ ಗ್ರಾಮದ ಮುಖ್ಯಸ್ಥರನ್ನು ಒಂದು ದಿಕ್ಕಿನಲ್ಲಿ, ಇಬ್ಬರು ಮಹಿಳೆಯರು, ಇಬ್ಬರು ಪುರುಷರನ್ನು ಮತ್ತೊಂದು ದಿಕ್ಕಿನಲ್ಲಿ ಕರೆದೊಯ್ಯುವ ಮೂಲಕ ಕುಟುಂಬದ ಸದಸ್ಯರನ್ನು ಪ್ರತ್ಯೇಕಿಸಿದರು ಎಂದು ಸಿಬಿಐ ಹೇಳಿದೆ.
“ಪೊಲೀಸ್ ಜಿಪ್ಸಿಯನ್ನು ಸಮೀಪಿಸುತ್ತಿರುವಾಗ, ಜನಸಮೂಹವು ಮತ್ತೆ ಸಂತ್ರಸ್ತರನ್ನು ಪ್ರತ್ಯೇಕಿಸಿತು…ಇಬ್ಬರು ಮಹಿಳೆಯರು ಪೊಲೀಸ್ ಜಿಪ್ಸಿಯೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಸಾದಾ ಖಾಕಿ ಸಮವಸ್ತ್ರವನ್ನು ಧರಿಸಿದ ಚಾಲಕನೊಂದಿಗೆ ಇಬ್ಬರು ಪೊಲೀಸರು ಪೊಲೀಸ್ ಜಿಪ್ಸಿಯೊಳಗೆ ಅವರೊಂದಿಗೆ ಇದ್ದರು ಮತ್ತು ಮೂರ್ನಾಲ್ಕು ಪೊಲೀಸರು ಹೊರಗೆ ಇದ್ದರು. ಒಬ್ಬ ಸಂತ್ರಸ್ತ ಪುರುಷನು ವಾಹನವನ್ನು ಪ್ರಾರಂಭಿಸಲು ಪೊಲೀಸರನ್ನು ವಿನಂತಿಸಿದನು. ಆದರೆ, ಪೊಲೀಸ್ ಜಿಪ್ಸಿಯ ಚಾಲಕನು ‘ಯಾವುದೇ ಕೀ ಇಲ್ಲ’ ಎಂದು ಉತ್ತರಿಸಿದನು” ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ ಎಂದು ವರದಿಯಾಗಿದೆ.
ಸಂತ್ರಸ್ತರು ಪೊಲೀಸರ ಬಳಿ ಸಹಾಯ ಮಾಡುವಂತೆ ಮತ್ತು ಜನಸಮೂಹದಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ರಕ್ಷಿಸುವಂತೆ ಪದೇ ಪದೇ ಬೇಡಿಕೊಳ್ಳುತ್ತಿದ್ದರು. ಆದರೆ ‘ಪೊಲೀಸರು ಅವರಿಗೆ ಸಹಾಯ ಮಾಡಲಿಲ್ಲ’ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಹೇಳಿದೆ.
ಇದನ್ನೂ ಓದಿ; ಬ್ರಿಟನ್‌ನಲ್ಲಿರುವ ಶೇ.52ರಷ್ಟು ಭಾರತೀಯರು ಪ್ರಧಾನಿ ಮೋದಿ ಬಗ್ಗೆ ನಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ ಎಂದ ಸಮೀಕ್ಷೆ



Fine good