ಬುಕ್‌ಮೈಶೊ (BookMyShow) ತನ್ನ ವೇದಿಕೆಗಳಿಂದ ಸ್ಟ್ಯಾಂಡ್ ಅಪ್ ಹಾಸ್ಯನಟ ಕುನಾಲ್ ಕಮ್ರಾ ಅವರನ್ನು ಕಲಾವಿದರ ಪಟ್ಟಿಯಿಂದ ಹೊರಗಿಟ್ಟಿದೆ ಎಂದು ಶಿವಸೇನೆ ಕಾರ್ಯಕರ್ತ ರಾಹುಲ್ ಕನಾಲ್ ಶನಿವಾರ ಹೇಳಿದ್ದಾರೆ. ಕುನಾಲ್ ಅವರ ಹೆಸರು ಈಗಾಗಲೆ ಬುಕ್‌ಮೈಶೊನಿಂದ ಕಾಣೆಯಾಗಿದೆ. ಅದಾಗ್ಯೂ, ಈ ಬಗ್ಗೆ ಬುಕ್ ಮೈ ಶೊ ತಂಡವು ಯಾವುದೇ ಹೇಳಿಕೆಗಳನ್ನು ನೀಡಲು ಮುಂದಾಗಿಲ್ಲ ಎಂದು ವರದಿಯಾಗಿದೆ. ತನ್ನ ಕಲಾವಿದರ ಪಟ್ಟಿಯಿಂದ
ತನ್ನ ಪೋರ್ಟಲ್ ಅನ್ನು ಸ್ವಚ್ಛವಾಗಿಟ್ಟು ಅಂತಹ ಕಲಾವಿದರನ್ನು ಶುದ್ಧ ಮನರಂಜನೆಯ ಪಟ್ಟಿಯಿಂದ ಹೊರಗಿಟ್ಟಿದ್ದಕ್ಕಾಗಿ ಬುಕ್‌ಮೈಶೊ ಸಿಇಒ ಆಶಿಶ್ ಹೇಮರಾಜ ಅವರಿಗೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಸಾಮಾಜಿಕ ಮಾಧ್ಯಮ ಉಸ್ತುವಾರಿ ಹೊಂದಿರುವ ರಾಹುಲ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
“ಈ ಕಲಾವಿದನನ್ನು ನಿಮ್ಮ ಮಾರಾಟ ಮತ್ತು ಪ್ರಚಾರ ಪಟ್ಟಿಯಿಂದ ತೆಗೆದುಹಾಕಲು ನಿಮ್ಮ ತಂಡಕ್ಕೆ ನೀವು ನಿರಂತರವಾಗಿ ಬೆಂಬಲ ನೀಡಿದ್ದಕ್ಕಾಗಿ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಪ್ರದರ್ಶನದ ಹುಡುಕಾಟದಿಂದ ಅವರನ್ನು ಹೊರತೆಗೆದಿದ್ದಕ್ಕಾಗಿ ಧನ್ಯವಾದಗಳು. ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಅದೇ ಸಮಯದಲ್ಲಿ ನಮ್ಮ ಭಾವನೆಗಳನ್ನು ಗೌರವಿಸುವಲ್ಲಿ ನಿಮ್ಮ ನಂಬಿಕೆ ಬಹಳ ಮುಖ್ಯವಾಗಿದೆ” ಎಂದು ರಾಹುಲ್ ಅವರು ಹೇಮರಾನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮುಂಬೈ ನಿವಾಸಿಗಳು ಪ್ರತಿಯೊಂದು ರೀತಿಯ ಕಲೆಯನ್ನು ಪ್ರೀತಿಸುತ್ತಾರೆ ಮತ್ತು ನಂಬುತ್ತಾರೆ. ಆದರೆ ವೈಯಕ್ತಿಕ ಕಾರ್ಯಸೂಚಿಗಳನ್ನಲ್ಲ ಎಂದು ಅವರು ಹೇಳಿದ್ದಾರೆ. “ನಾವು ಬುಕ್‌ಮೈಶೋನ ಮೌಲ್ಯಗಳ ಬಗ್ಗೆ ನಿಮ್ಮ ಬದ್ಧತೆಯನ್ನು ಗಾಢವಾಗಿ ಗೌರವಿಸುತ್ತೇವೆ. ಇದು ಬೆಂಬಲ ಮತ್ತು ಗ್ರಾಹಕ ಅನುಭವಕ್ಕೆ ಸಂಬಂಧಿಸಿದೆ. ನಿಮ್ಮ ದೃಷ್ಟಿಕೋನ ಮತ್ತು ನಾಯಕತ್ವ ನಿಜವಾಗಿಯೂ ಪ್ರೇರಕವಾಗಿದೆ. ನಿಮ್ಮ ತಂಡವನ್ನು ನಮಗೆ ನೀಡಿ ಇದನ್ನು ಆದಷ್ಟು ಬೇಗ ತೀರ್ಮಾನಿಸಿದ್ದಕ್ಕಾಗಿ ಧನ್ಯವಾದಗಳು.” ಎಂದು ರಾಹುಲ್ ಹೇಳಿದ್ದಾರೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಶಿಂಧೆ ಅವರನ್ನು ದೇಶದ್ರೋಹಿ ಎಂದು ಉಲ್ಲೇಖಿಸಿದ್ದನ್ನು ವಿರೋಧಿಸಿ ಕುನಾಲ್ ಪ್ರದರ್ಶನ ನೀಡಿದ್ದ ಸ್ಟುಡಿಯೋವನ್ನು ರಾಹುಲ್ ಧ್ವಂಸಗೊಳಿಸಿದ್ದರು. ಹಾಗಾಗಿ ಅವರ ಇರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈ ಮಧ್ಯೆ, ಕುನಾಲ್ ಅವರು ಶನಿವಾರ ಮುಂಬೈ ಪೊಲೀಸರ ಮುಂದೆ ಹಾಜರಾಗಲು ವಿಫಲರಾಗಿದ್ದಾರೆ. ಇದು ಅವರ ಮೂರನೇ ಗೈರಾಗಿದ್ದು, ಇದಕ್ಕೂ ಮುಂಚೆ ಅವರು ಪೊಲೀಸರು ನೀಡಿದ್ದ ಎರಡು ಸಮನ್ಸ್ ಅನ್ನು ತಪ್ಪಿಸಿಕೊಂಡಿದ್ದರು.
ಈ ನಡುವೆ ಮದ್ರಾಸ್ ಹೈಕೋರ್ಟ್ ಏಪ್ರಿಲ್ 7 ರವರೆಗೆ ಕುನಾಲ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ತಾನು ತಮಿಳುನಾಡಿನ ಖಾಯಂ ನಿವಾಸಿ ಆಗಿರುವುದರಿಂದ ತನ್ನ ಅರ್ಜಿ ಆಲಿಸುವ ಹಕ್ಕು ಮದ್ರಾಸ್ ಹೈಕೋರ್ಟ್‌ಗೆ ಇದೆ ಎಂದು ಅವರು ಪ್ರತಿಪಾದಿಸಿದ್ದರು. ಅವರ ವಿರುದ್ಧ ನಾಸಿಕ್ ಗ್ರಾಮೀಣ, ಜಲಗಾಂವ್ ಮತ್ತು ನಾಸಿಕ್ (ನಂದಗಾಂವ್) ನಲ್ಲಿ ದಾಖಲಾಗಿರುವ ಮೂರು ಎಫ್‌ಐಆರ್‌ಗಳನ್ನು ಖಾರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತನ್ನ ಕಲಾವಿದರ ಪಟ್ಟಿಯಿಂದ


