
ಕುನಾಲ್ ಕಾರ್ಯಕ್ರಮಕ್ಕೆ ಮಾರ್ಚ್ 23 ರಂದು ಕುನಾಲ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಿಂದಿ ಚಲನಚಿತ್ರವೊಂದರ ವಿಡಂಬನಾತ್ಮಕ ಹಾಡಿನ ಆವೃತ್ತಿಯನ್ನು ಪ್ರಕಟಿಸಿದ್ದರು. ಈ ಹಾಡಿನಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಶಿಂಧೆ ಅವರ ಹೆಸರನ್ನು ಉಲ್ಲೇಖಿಸದೆ 'ದೇಶದ್ರೋಹಿ' ಎಂದು ಟೀಕಿಸಲಾಗಿತ್ತು. ಈ ಪ್ರದರ್ಶನದ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡ ನಂತರ, ಮಾರ್ಚ್ 23 ರ ರಾತ್ರಿ ಶಿವಸೇನೆಯ ಶಿಂಧೆ ನೇತೃತ್ವದ ಬಣದ ಕಾರ್ಯಕರ್ತರು ಕಾರ್ಯಕ್ರಮ ರೆಕಾರ್ಡ್ ಮಾಡಲಾದ ಮುಂಬೈನ ಖಾರ್ ಪ್ರದೇಶದಲ್ಲಿರುವ ದಿ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು.
ಕುನಾಲ್ ಕಾರ್ಯಕ್ರಮಕ್ಕೆ ಮರುದಿನ, ಮುಂಬೈ ಪೊಲೀಸರು ಮಾನನಷ್ಟ ಮತ್ತು ಸಾರ್ವಜನಿಕ ದುಷ್ಕೃತ್ಯಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತದ ವಿಭಾಗಗಳ ಅಡಿಯಲ್ಲಿ ಕುನಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಬಗ್ಗೆ ಮಾರ್ಚ್ 31 ರ ಮೊದಲು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಅವರಿಗೆ ಎರಡು ಸಮನ್ಸ್‌ಗಳನ್ನು ಕಳುಹಿಸಿದ್ದರು. ಅದಾಗ್ಯೂ, ಕುನಾಲ್ ಅವರು ಮುಂಬೈಗೆ ಪ್ರಯಾಣಿಸಲು ಏಳು ದಿನಗಳನ್ನು ಕೋರಿದ್ದು, ಆದರೆ ಪೊಲೀಸರು ಅವರ ವಿನಂತಿಯನ್ನು ನಿರಾಕರಿಸಿದ್ದರು. ಶುಕ್ರವಾರ ಮದ್ರಾಸ್ ಹೈಕೋರ್ಟ್ ಈ ಪ್ರಕರಣದಲ್ಲಿ ಏಪ್ರಿಲ್ 7 ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ತಮಿಳುನಾಡಿನ ವಿಲ್ಲುಪುರಂ ಪಟ್ಟಣದ ಖಾಯಂ ನಿವಾಸಿಯಾಗಿರುವುದರಿಂದ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಲಿಸುವ ಅಧಿಕಾರ ಮದ್ರಾಸ್ ಹೈಕೋರ್ಟ್‌ಗೆ ಇದೆ ಎಂದು ಕುನಾಲ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದಾಗಿ ಒಂದು ದಿನದ ನಂತರ, ಶಿಂಧೆ ನೇತೃತ್ವದ ಶಿವಸೇನೆ ಕಾರ್ಯಕರ್ತರು ಸಲ್ಲಿಸಿದ ದೂರುಗಳ ಆಧಾರದ ಮೇಲೆ ಕುನಾಲ್ ವಿರುದ್ಧ ಮೂರು ಹೆಚ್ಚುವರಿ ಎಫ್‌ಐಆರ್ ದಾಖಲಿಸಲಾಗಿದೆ. ಈ ನಡುವೆ ರಾಜ್ಯ ಸರ್ಕಾರವು ಕುನಾಲ್ ಕಾಮ್ರಾ ಅವರೊಂದಿಗೆ ಕ್ಷಮೆಯಾಚಿಸುವಂತೆ ಕೋರಿದೆ. ಇಡೀ ಘಟನೆ ಬಗ್ಗೆ ಮಾರ್ಚ್ 24 ರಂದು ಪ್ರತಿಕ್ರಿಯಿಸಿದ್ದ ಕುನಾಲ್ "ಈ ಜನಸಮೂಹಕ್ಕೆ ನಾನು ಹೆದರುವುದಿಲ್ಲ, ಕ್ಷಮೆಯಾಚಿಸುವ ಪ್ರಶ್ನೆಯೆ ಇಲ್ಲ" ಎಂದು ಹೇಳಿದ್ದಾರೆ.
ಇದನ್ನೂಓದಿ: ವಿಟ್ಲ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಪೋಕ್ಸೋ ದಾಖಲಾಗಿದ್ದರೂ ಬಿಜೆಪಿ ಮುಖಂಡನ ಬಂಧನವಿಲ್ಲ; ಹೋರಾಟಕ್ಕೆ ಮುಂದಾದ ಡಿಎಚ್‌ಎಸ್ https://naanugauri.com/dalit-girl-sexual-assault-pocso-bjp-leader-arrest-struggle-dhs/"
/>
- Advertisement -
- Advertisement -
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಟೀಕಿಸಿದ್ದ ಕುನಾಲ್ ಕಮ್ರಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರಿಗೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಮಂಗಳವಾರ ವರದಿ ಮಾಡಿದೆ. ಅದಾಗ್ಯೂ, ಕಾರ್ಯಕ್ರಮದ ಎಲೆಕ್ಟ್ರಾನಿಕ್ ಪುರಾವೆಗಳು ಲಭ್ಯವಿರುವುದರಿಂದ ಪ್ರಕರಣದಲ್ಲಿ ಪ್ರೇಕ್ಷಕರಿಗೆ ಸಮನ್ಸ್ ನೀಡುವುದು ಕಡ್ಡಾಯವಲ್ಲ ಎಂದು ವಕೀಲ ವೈ.ಪಿ. ಸಿಂಗ್ ಹೇಳಿರುವುದನ್ನು ಪತ್ರಿಕೆ ಉಲ್ಲೇಖಿಸಿದೆ. ಕುನಾಲ್ ಕಾರ್ಯಕ್ರಮಕ್ಕೆ
ಮಾರ್ಚ್ 23 ರಂದು ಕುನಾಲ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಿಂದಿ ಚಲನಚಿತ್ರವೊಂದರ ವಿಡಂಬನಾತ್ಮಕ ಹಾಡಿನ ಆವೃತ್ತಿಯನ್ನು ಪ್ರಕಟಿಸಿದ್ದರು. ಈ ಹಾಡಿನಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಶಿಂಧೆ ಅವರ ಹೆಸರನ್ನು ಉಲ್ಲೇಖಿಸದೆ ‘ದೇಶದ್ರೋಹಿ’ ಎಂದು ಟೀಕಿಸಲಾಗಿತ್ತು. ಈ ಪ್ರದರ್ಶನದ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡ ನಂತರ, ಮಾರ್ಚ್ 23 ರ ರಾತ್ರಿ ಶಿವಸೇನೆಯ ಶಿಂಧೆ ನೇತೃತ್ವದ ಬಣದ ಕಾರ್ಯಕರ್ತರು ಕಾರ್ಯಕ್ರಮ ರೆಕಾರ್ಡ್ ಮಾಡಲಾದ ಮುಂಬೈನ ಖಾರ್ ಪ್ರದೇಶದಲ್ಲಿರುವ ದಿ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು. ಕುನಾಲ್ ಕಾರ್ಯಕ್ರಮಕ್ಕೆ
ಮರುದಿನ, ಮುಂಬೈ ಪೊಲೀಸರು ಮಾನನಷ್ಟ ಮತ್ತು ಸಾರ್ವಜನಿಕ ದುಷ್ಕೃತ್ಯಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತದ ವಿಭಾಗಗಳ ಅಡಿಯಲ್ಲಿ ಕುನಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಬಗ್ಗೆ ಮಾರ್ಚ್ 31 ರ ಮೊದಲು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಅವರಿಗೆ ಎರಡು ಸಮನ್ಸ್‌ಗಳನ್ನು ಕಳುಹಿಸಿದ್ದರು.
ಅದಾಗ್ಯೂ, ಕುನಾಲ್ ಅವರು ಮುಂಬೈಗೆ ಪ್ರಯಾಣಿಸಲು ಏಳು ದಿನಗಳನ್ನು ಕೋರಿದ್ದು, ಆದರೆ ಪೊಲೀಸರು ಅವರ ವಿನಂತಿಯನ್ನು ನಿರಾಕರಿಸಿದ್ದರು. ಶುಕ್ರವಾರ ಮದ್ರಾಸ್ ಹೈಕೋರ್ಟ್ ಈ ಪ್ರಕರಣದಲ್ಲಿ ಏಪ್ರಿಲ್ 7 ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ತಮಿಳುನಾಡಿನ ವಿಲ್ಲುಪುರಂ ಪಟ್ಟಣದ ಖಾಯಂ ನಿವಾಸಿಯಾಗಿರುವುದರಿಂದ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಲಿಸುವ ಅಧಿಕಾರ ಮದ್ರಾಸ್ ಹೈಕೋರ್ಟ್‌ಗೆ ಇದೆ ಎಂದು ಕುನಾಲ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದಾಗಿ ಒಂದು ದಿನದ ನಂತರ, ಶಿಂಧೆ ನೇತೃತ್ವದ ಶಿವಸೇನೆ ಕಾರ್ಯಕರ್ತರು ಸಲ್ಲಿಸಿದ ದೂರುಗಳ ಆಧಾರದ ಮೇಲೆ ಕುನಾಲ್ ವಿರುದ್ಧ ಮೂರು ಹೆಚ್ಚುವರಿ ಎಫ್‌ಐಆರ್ ದಾಖಲಿಸಲಾಗಿದೆ. ಈ ನಡುವೆ ರಾಜ್ಯ ಸರ್ಕಾರವು ಕುನಾಲ್ ಕಾಮ್ರಾ ಅವರೊಂದಿಗೆ ಕ್ಷಮೆಯಾಚಿಸುವಂತೆ ಕೋರಿದೆ. ಇಡೀ ಘಟನೆ ಬಗ್ಗೆ ಮಾರ್ಚ್ 24 ರಂದು ಪ್ರತಿಕ್ರಿಯಿಸಿದ್ದ ಕುನಾಲ್ “ಈ ಜನಸಮೂಹಕ್ಕೆ ನಾನು ಹೆದರುವುದಿಲ್ಲ, ಕ್ಷಮೆಯಾಚಿಸುವ ಪ್ರಶ್ನೆಯೆ ಇಲ್ಲ” ಎಂದು ಹೇಳಿದ್ದಾರೆ.
ಇದನ್ನೂಓದಿ: ವಿಟ್ಲ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಪೋಕ್ಸೋ ದಾಖಲಾಗಿದ್ದರೂ ಬಿಜೆಪಿ ಮುಖಂಡನ ಬಂಧನವಿಲ್ಲ; ಹೋರಾಟಕ್ಕೆ ಮುಂದಾದ ಡಿಎಚ್‌ಎಸ್
ವಿಟ್ಲ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಪೋಕ್ಸೋ ದಾಖಲಾಗಿದ್ದರೂ ಬಿಜೆಪಿ ಮುಖಂಡನ ಬಂಧನವಿಲ್ಲ; ಹೋರಾಟಕ್ಕೆ ಮುಂದಾದ ಡಿಎಚ್‌ಎಸ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ