ಅಕ್ಟೋಬರ್ 03, 2021ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ಒಟ್ಟು 8 ಜನರ ಸಾವಿಗೆ ಕಾರಣನಾದ ಪ್ರಧಾನ ಆರೋಪಿ ಆಶಿಶ್ ಮಿಶ್ರಾನ ತಂದೆ ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ವಜಾಗೊಳಿಸಬೇಕೆಂದು ರೈತರ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಈ ದುರ್ಘಟನೆ ಜರುಗಿ ಒಂದು ವರ್ಷವಾಗುತ್ತ ಬಂದರೂ ಮೋದಿ ಸರ್ಕಾರ ಅವರನ್ನು ಸಂಪುಟದಿಂದ ವಜಾಗೊಳಿಸದಿರುವುದನ್ನು ಖಂಡಿಸಿ ಮತ್ತು ಎಂಎಸ್‌ಪಿ ಜಾರಿಯಾಗಬೇಕು, ರೈತರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು, ವಿದ್ಯುತ್ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.
#Farmers under #SKM are sitting on a 3 day dharna in Lakhimpur Kheri from 18'th August.
Demands:
~Take back the cases filed on farmers.
~Provide 10 lakh compensation to injured farmers.
~Suspension of MOS Ajay Mishra from the Union Cabinet.
~Filing a FIR against MOS Ajay Mishra. pic.twitter.com/cGWvRH2sNY— Ramandeep Singh Mann (@ramanmann1974) August 17, 2022
75 ಗಂಟೆಗಳ ಕಾಲ ನಡೆಯುವ ಧೀರ್ಘ ಧರಣಿಗೆ ಸಂಯುಕ್ತ ಕಿಸಾನ್ ಮೋರ್ಚಾ, ಭಾರತೀಯ ಕಿಸಾನ್ ಯೂನಿಯನ್ ಸೇರಿ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಉತ್ತರ ಪ್ರದೇಶದ ಹಲವು ಭಾಗಗಳಿಂದ ಸೇರಿದಂತೆ, ಉತ್ತರಖಂಡ, ಹರಿಯಾಣ ಮತ್ತು ಪಂಜಾಬ್‌ನಿಂದಲೂ ರೈತರು ಹೋರಾಟಕ್ಕೆ ಜೊತೆಗೂಡಿದ್ದಾರೆ.
ಹೋರಾಟದಲ್ಲಿ 10,000ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ರೈತ ಮುಖಂಡ ಮಂಜೀತ್ ಸಿಂಗ್ ರೈ ತಿಳಿಸಿದ್ದಾರೆ. ಬಸ್ಸು ಮತ್ತು ರೈಲಿನ ಮೂಲಕ ಹೋರಾಟದ ಸ್ಥಳ ತಲುಪಲಿದ್ದಾರೆ ಎಂದಿದ್ದಾರೆ.
ಎಸ್‌ಕೆಎಂ ಮುಖಂಡರಾದ ಡಾ.ದರ್ಶನ್ ಪಾಲ್, ಬಿಕೆಯು ರೈತ ಮುಖಂಡ ರಾಕೇಶ್ ಟಿಕಾಯತ್, ಬಹುದೇವ್ ಶರ್ಮಾ, ದಿಲ್‌ಬಾಗ್ ಸಿಂಗ್ ಸಂಧು ಸೇರಿ ಹಲವರು ಹೋರಾಟದ ನೇತೃತ್ವ ವಹಿಸಿದ್ದಾರೆ.
ಕಳೆದ ತಿಂಗಳು ಅಲಹಾಬಾದ್ ಹೈಕೋರ್ಟ್ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ನೀಡಲು ನಿರಾಕರಿಸಿತ್ತು.
ಇದನ್ನೂ ಓದಿ: ನಾನೇನು ಮಾಡಬೇಕು ಎಂಬ ಅಧಿಕಾರ ಜನ ನೀಡಿದ್ದಾರೆ, ಮೋದಿ ಮಾತು ಯಾಕೆ ಕೇಳಬೇಕು: ತಮಿಳುನಾಡು ಹಣಕಾಸು ಸಚಿವ


