ಅಕ್ಟೋಬರ್ 3 ರಂದು ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಹತ್ಯಾಕಾಂಡದ ಘಟನೆಗಳನ್ನು ಮರುಸೃಷ್ಟಿಸಲು ಉತ್ತರ ಪ್ರದೇಶ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ರೈತರ ಹತ್ಯೆಯ ಆರೋಪಿ ಆಶಿಶ್ ಮಿಶ್ರಾ ಜೊತೆಗೆ ಆತನ ಸ್ನೇಹಿತ, ಪ್ರಕರಣದ ಸಹ ಆರೋಪಿ ಅಂಕಿತ್ ದಾಸ್‌ನನ್ನು ಪೊಲೀಸರು ಜೊತೆಗೆ ಸ್ಥಳಕ್ಕೆ ಕರೆತಂದಿದ್ದು, ಅಂದಿನ ಘಟನೆಗಳನ್ನು ಮರುಸೃಷ್ಟಿಸಲು ಕಾರುಗಳನ್ನು ಬಳಸಿದ್ದಾರೆ ಎಂದು ಅದು ಹೇಳಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರಾ, ಘಟನೆ ನಡೆದಾಗ ತಾನು ಅಲ್ಲಿ ಇರಲಿಲ್ಲ ಎಂದು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ.
ಇದನ್ನೂ ಓದಿ: ದೇಶದಲ್ಲಿ ಲಖಿಂಪುರ್ ಖೇರಿಯಂತಹ ಘಟನೆ ನಡೆಯುತ್ತಲೇ ಇರುತ್ತವೆ: ನಿರ್ಮಲಾ ಸೀತಾರಾಮನ್
ಘಟನೆಗಳನ್ನು ಮರುಸೃಷ್ಟಿ ಮಾಡುತ್ತಿರುವಾಗ ಚಿತ್ರೀಕರಿಸಿದ ದೃಶ್ಯದಲ್ಲಿ, ಪೊಲೀಸ್ ಜೀಪ್ ಅತಿವೇಗದಲ್ಲಿ ಚಲಿಸುತ್ತಿರುವುದು ಮತ್ತು ಡಮ್ಮಿಗಳನ್ನು ವಾಹನದ ಮುಂದೆಯಿಟ್ಟು ಪುಡಿಮಾಡುವುದು ಕಾಣುತ್ತಿದೆ. ಈ ಡಮ್ಮಿಯನ್ನು ಹತ್ಯಗೀಡಾದ ರೈತರನ್ನು ಪ್ರತಿನಿಧಿಸಲು ರಸ್ತೆಯಲ್ಲಿ ಇರಿಸಲಾಗಿದೆ.
UP Police Take Minister's Son To 'Recreate' Crime Scene In Farmers Killing
NDTV's Alok Pandey reports
Read More: https://t.co/0N8Z8Dk0DE pic.twitter.com/TejDs20C36
— NDTV (@ndtv) October 14, 2021
ಪ್ರಕರಣದಲ್ಲಿ ಎಫ್ಐಆರ್‌ನಲ್ಲಿ ಆಶಿಶ್ ಮಿಶ್ರಾ ಹೆಸರಿಸಲಾಗಿದ್ದರೂ ಘಟನೆ ನಡೆದು ಸುಮಾರು ಏಳು ದಿನಗಳ ನಂತರ ಬಂಧಿಸಲಾಗಿತ್ತು. ಬುಧವಾರ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಲಯ ಮೂರು ದಿನಗಳ ಪೊಲೀಸ್ ರಿಮಾಂಡ್‌ಗೆ ಕಳುಹಿಸಿದ್ದು, ಅದು ಇಂದಿಗೆ ಕೊನೆಗೊಳ್ಳುತ್ತದೆ. ಆದರೆ, ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುಯುವ ಸಾಧ್ಯತೆಯಿದೆ.
ಈ ಮಧ್ಯೆ ಪ್ರರಣದಲ್ಲಿ ಬುಧವಾರದಂದು ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.
ಅಕ್ಟೋಬರ್ 3 ರಂದು ಯುಪಿ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಲಖಿಂಪುರ್ ಖೇರಿಗೆ ನೀಡಿದ ಭೇಟಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ವಾಪಾಸಾಗುತ್ತಿದ್ದ ರೈತರ ಮೇಲೆ ಕಾರುಗಳನ್ನು ಹರಿಸಲಾಗಿತ್ತು. ಈ ಕಾರಿನಲ್ಲಿ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಇದ್ದರು ಎಂದು ರೈತರು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಲಖಿಂಪುರ್: ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ; ಇನ್ನಿಬ್ಬರ ಬಂಧನ


