ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಹೇಶ್ ಕುಮಟಳ್ಳಿ ವಿರುದ್ಧ ಬಿಜೆಪಿಯಿಂದ ಲಕ್ಷ್ಮಣ್ ಸವದಿಯವರು ಕಳೆದ ಚುನಾವಣೆಯಲ್ಲಿ ಸೋತಿದ್ದರು. ಆದರೂ ಸಹ ಯಡಿಯೂರಪ್ಪನವರು ಅವರನ್ನು ಡಿಸಿಎಂ ಆಗಿ ಮಾಡಿದ್ದರು.
ಲಕ್ಷ್ಮಣ್ ಸವದಿಯವರ ಡಿಸಿಎಂ ಪಟ್ಟ ಉಳಿಯಬೇಕಾದರೆ ಅವರು ವಿಧಾನಸಭೆ ಅಥವಾ ವಿಧಾನ ಪರಿಷತ್‌ನ ಯಾವುದಾದರೊಂದರಲ್ಲಿ ಆರು ತಿಂಗಳೊಳಗಾಗಿ ಸದಸ್ಯರಾಗಬೇಕಿತ್ತು. ಹಾಗಾಗಿ ಅವರು ಉಪಚುನಾವಣೆಯಲ್ಲಿ ಅಥಣಿಯಿಂದ ಟಿಕೆಟ್ ಪಡೆಯಲು ತೀವ್ರವಾಗಿ ಸ್ಪರ್ಧಿಸಿದ್ದರು. ಬಂಡಾಯದ ವಾತವರಣ ನಿರ್ಮಾಣವಾಗಿತ್ತು.
ಆಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಲಕ್ಷ್ಮಣ್ ಸವಧಿಯವರಿಗೆ ಎಂಎಲ್‌ಸಿ ಮಾಡಿ ಡಿಸಿಎಂ ಪಟ್ಟ ಉಳಿಸುವಾಗಿ ಭರವಸೆ ನೀಡಿ ಬಂಡಾಯ ಶಮನ ಮಾಡಿದ್ದರು. ಹಾಗಾಗಿಯೇ ಅಲ್ಲಿ ಮಹೇಶ್ ಕುಮಟಳ್ಳಿ ಸ್ಪರ್ಧಿಸಿದ್ದು ಈಗ ವಿಜಯಿಯಾಗಿದ್ದಾರೆ.
ಇನ್ನು ಲಕ್ಷ್ಮಣ್ ಸವದಿಯವರ ಡಿಸಿಎಂ ಪಟ್ಟ ಉಳಿಯಲು ಸಹ ಕಾಂಗ್ರೆಸ್ ನೆರವಾಗಿದೆ. ಹೇಗೆಂದರೆ ಶಿವಾಜಿನಗರದಿಂದ ಎಂಎಲ್‌ಸಿಯಾಗಿದ್ದ ರಿಜ್ವಾನ್ ಅರ್ಷದ್ ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ ಅವರಿಂದ ತೆರವಾಗುವ ಎಂಎಲ್‌ಸಿ ಸ್ಥಾನಕದಿಂದ ಲಕ್ಷ್ಮಣ್ ಸವದಿಯವರನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ.
ಈಗ ಸದ್ಯ ಬಿಜೆಪಿ ಬಳಿ 117 ಶಾಸಕರ ಬಲವಿದೆ. ಕಾಂಗ್ರೆಸ್ 68ಕ್ಕೆ ಕುಸಿದಿದೆ. ಹಾಗಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿಯವರನ್ನು ಗೆಲ್ಲಿಸಿಕೊಳ್ಳುವುದು ಬಿಜೆಪಿಗೆ ಕಷ್ಟವಾಗಲಾರದು..


