ಬಿಹಾರದ ನಿತಿಶ್ ಕುಮಾರ್ ನೇತೃತ್ವದ ಸರ್ಕಾರವನ್ನು ಉರುಳಿಸಿ ಮಹಾಘಟಬಂಧನ್ ಅನ್ನು ಅಧಿಕಾರಕ್ಕೆ ತರಲು ಲಾಲು ಪ್ರಸಾದ್ ಯಾದವ್ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೊದಿ ಆರೋಪಿಸಿದ್ದಾರೆ.
ಈ ಕುರಿತು ಮೊಬೈಲ್ ಸಂಖ್ಯೆಯನ್ನು ಸೇರಿಸಿ ಟ್ವೀಟ್ ಮಾಡಿರುವ ಸುಶೀಲ್ ಮೋದಿ, “ಲಾಲು ಯಾದವ್ ಎನ್‌ಡಿಎ ಶಾಸಕರಿಗೆ ಕರೆ ಮಾಡಿ (8051216302) ಸಚಿವ ಸ್ಥಾನಗಳ ಭರವಸೆ ನೀಡುತ್ತಿದ್ದಾರೆ. ನಾನು ಈ ಸಂಖ್ಯೆಗೆ ಕರೆ ಮಾಡಿದಾಗ ಲಾಲು ನೇರವಾಗಿ ಕರೆ ಸ್ವೀಕರಿಸಿದರು. ಜೈಲಿನಲ್ಲಿದ್ದುಕೊಂಡು ಇಂತಹ ಕೊಳಕು ತಂತ್ರಗಳನ್ನ ಬಳಸಬೇಡಿ. ನೀವು ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದೇನೆ” ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಿಹಾರ: 19 ಲಕ್ಷ ಉದ್ಯೋಗ ನೀಡದಿದ್ದರೆ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ – ತೇಜಸ್ವಿ ಯಾದವ್ ಎಚ್ಚರಿಕೆ
Lalu Yadav making telephone call (8051216302) from Ranchi to NDA MLAs & promising ministerial berths. When I telephoned, Lalu directly picked up.I said don’t do these dirty tricks from jail, you will not succeed. @News18Bihar @ABPNews @ANI @ZeeBiharNews
— Sushil Kumar Modi (@SushilModi) November 24, 2020
ಇದನ್ನೂ ಓದಿ: ತೇಜಸ್ವಿ ಯಾದವ್ ಬಿಹಾರ ವಿರೋಧ ಪಕ್ಷದ ನಾಯಕನಾಗಬಾರದು: ಜೆಡಿಯು ಆಗ್ರಹ
1970 ರ ದಶಕದಿಂದ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಪರಿಚಯ ಸುಶೀಲ್ ಮೋದಿಯವರಿಗಿದೆ. ಇಬ್ಬರೂ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿ ನಾಯಕರಾಗಿ, ಜೆಪಿ ಚಳುವಳಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
ಲಾಲು ಪ್ರಸಾದ್ ಈಗ ರಾಂಚಿ ಜೈಲಿನಲ್ಲಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಮೂರೇ ದಿನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಹಾರದ ಶಿಕ್ಷಣ ಸಚಿವ!
ಕೊರೊನಾ ಸಾಂಕ್ರಾಮಿಕ ರೋಗದ ನಂತರ ದೇಶದಲ್ಲಿ ನಡೆದ ಮೊದಲ ದೊಡ್ಡ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು ಉಂಟಾಗಿತ್ತು. ಇದಕ್ಕೆ ಪ್ರಭಲ ಪೈಪೋಟಿ ನೀಡಿದ್ದ ಮಹಾಘಟಬಂಧನ್ ಅಂಚಿನಲ್ಲಿ ಸೋತಿದೆ. ರಾಜ್ಯದ ಅತಿದೊಡ್ಡ ಪಕ್ಷವಾಗಿ ಆರ್‌ಜೆಡಿ ಹೊರಹೊಮ್ಮಿದೆ.
ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷವು 75 ಸ್ಥಾನಗಳನ್ನು ಗೆದ್ದುಕೊಂಡಿದೆ. ನಂತರದ ಸ್ಥಾನದಲ್ಲಿ ಬಿಜೆಪಿಯು 74 ಸ್ಥಾನಗಳನ್ನು ಗೆದ್ದುಕೊಂಡಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಕೇವಲ 43 ಸ್ಥಾನಗಳನ್ನು ಗೆದ್ದುಕೊಂಡಿದೆ. ಎನ್‌ಡಿಎ ಮೈತ್ರಿ ಪಕ್ಷವು 125 ಸ್ಥಾನಗಳನ್ನು ಗೆದ್ದುಕೊಂಡು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಬಿಹಾರದ ಹಂಗಾಮಿ ಸ್ಪೀಕರ್ ಆಗಿ ಜಿತನ್ ರಾಮ್ ಮಾಂಜಿ ಪ್ರಮಾಣ ವಚನ- ಯಾರಿವರು ?


