ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ ಆರೋಪದ ಮೇಲೆ ವಿವಾದಾತ್ಮಕ ಧಾರ್ಮಿಕ ಗುರು ನಿತ್ಯಾನಂದ ಸ್ಥಾಪಿಸಿದ ಕಾಲ್ಪನಿಕ ದೇಶವಾದ ಕೈಲಾಸದ 20 ಸದಸ್ಯರನ್ನು ಬೊಲಿವಿಯಾ ಮಂಗಳವಾರ ಗಡೀಪಾರು ಮಾಡಿದೆ ಎಂದು ವರದಿಯಾಗಿದೆ. ನಿತ್ಯಾನಂದ ವಿರುದ್ಧ ಭಾರತದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ದೇಶದಿಂದ ಪರಾರಿಯಾಗಿದ್ದಾರೆ. ಸ್ಥಳೀಯ ಬುಡಕಟ್ಟು ಸಮುದಾಯದ
“ಈ ಗುಂಪಿಗೆ ಸೇರಿದ ಜನರ ಕಡ್ಡಾಯ ನಿರ್ಗಮನವನ್ನು ಜಾರಿಗೆ ತರಲಾಗಿದೆ. ಅವರು ಇನ್ನು ಮುಂದೆ ನಮ್ಮ ರಾಷ್ಟ್ರೀಯ ಪ್ರದೇಶದಲ್ಲಿ ಇರುವಂತಿಲ್ಲ” ಎಂದು ಬೊಲಿವಿಯಾದ ವಲಸೆ ನಿರ್ದೇಶಕಿ ಕ್ಯಾಥರೀನ್ ಕಾಲ್ಡೆರಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅವರ ವಿರುದ್ಧ ವಾರಾಂತ್ಯದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಸ್ಥಳೀಯ ಬುಡಕಟ್ಟು ಸಮುದಾಯದ
ಭಾರತದಲ್ಲಿ ಅತ್ಯಾಚಾರದ ಆರೋಪ ಹೊತ್ತಿರುವ ನಿತ್ಯಾನಂದ, ಈಕ್ವೆಡಾರ್ ಕರಾವಳಿಯಲ್ಲಿ ಒಂದು ದ್ವೀಪ ಎಂದು ಹೇಳಲಾದ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ದೇಶವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾರೆ.
“ಈ ಪಂಥವು ನಮ್ಮ ದೇಶಕ್ಕೆ ಆಗಮಿಸಿದ್ದು, ನಮ್ಮ ಸ್ಥಳೀಯ ಬುಡಕಟ್ಟು ಜನರ ನಂಬಿಕೆಯನ್ನು ಗಳಿಸಿ ಅವರ ಹಕ್ಕುಗಳನ್ನು ಉಲ್ಲಂಘಿಸಲು ಪ್ರಯತ್ನಿಸಿದೆ. ಅವರ ಸ್ಥಳೀಯ ಭೂಮಿಯನ್ನು ಬಳಸುವಂತೆ ಮಾಡಿ ಅವರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದೆ” ಎಂದು ಕಾಲ್ಡೆರಾನ್ ಹೇಳಿದ್ದಾರೆ.
ಈ ಬಗ್ಗೆ ಬೊಲಿವಿಯನ್ ಪತ್ರಿಕೆ ಎಲ್ ಡೆಬರ್ ಮಾರ್ಚ್ 16 ರಂದು ತನಿಖಾ ವರದಿ ಪ್ರಕಟಿಸಿತ್ತು. ಇದರ ನಂತರ ಈ ಗಡಿಪಾರು ಮಾಡಲಾಗಿದೆ ಎಂದು ವರದಿಯಾಗಿದೆ. ಬೌರೆ, ಕಯುಬಾಬಾ ಮತ್ತು ಎಸ್ಸೆ ಎಜ್ಜಾ ಎಂಬ ಮೂರು ಸ್ಥಳೀಯ ಬುಡಕಟ್ಟು ಗುಂಪುಗಳು ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ಸುಮಾರು 4.8 ಲಕ್ಷ ಹೆಕ್ಟೇರ್ ಸಾರ್ವಜನಿಕ ಭೂಮಿಗೆ ಕೈಲಾಸದೊಂದಿಗೆ ಗುತ್ತಿಗೆ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ವರದಿ ಬಹಿರಂಗಪಡಿಸಿತ್ತು.
ಈ ಒಪ್ಪಂದಗಳ ಪ್ರಕಾರ, “ಸಾವಿರ ವರ್ಷಗಳ ಕಾಲ” ಭೂಮಿಯ ಬಳಕೆಗೆ ಪ್ರತಿಯಾಗಿ ವಾರ್ಷಿಕ ಬಾಡಿಗೆಯನ್ನು ಪಾವತಿಸಲಾಗುವುದು ಎಂದು ವರದಿ ಹೇಳಿದೆ. ಆರೋಪಗಳು ಬೆಳಕಿಗೆ ಬಂದ ನಂತರ, ಮತ್ತೊಂದು ಸುದ್ದಿ ಸಂಸ್ಥೆ, ಲಾ ರಿಪಬ್ಲಿಕಾ, ಕೈಲಾಸಕ್ಕೆ ಅಂತರರಾಷ್ಟ್ರೀಯ ಮನ್ನಣೆ ಇಲ್ಲ ಎಂದು ಬೊಲಿವಿಯನ್ ವಿದೇಶಾಂಗ ಸಚಿವಾಲಯ ಹೇಳಿರುವುದನ್ನು ಉಲ್ಲೇಖಿಸಿದೆ.
ಸ್ಥಳೀಯ ಬುಡಕಟ್ಟು ಸಮುದಾಯಗಳು ತಮ್ಮ ಭೂಮಿಯನ್ನು ನಿರ್ವಹಿಸಬಹುದಾದರೂ, ಇತರ ದೇಶಗಳೊಂದಿಗಿನ ಸಂಬಂಧಗಳು ರಾಷ್ಟ್ರೀಯ ಸರ್ಕಾರದ ವಿಶೇಷ ಜವಾಬ್ದಾರಿಯಾಗಿದೆ ಎಂದು ಸಚಿವಾಲಯ ಹೇಳಿದೆ. “ಈ ರೀತಿಯ ಗುಪ್ತ ಒಪ್ಪಂದಗಳನ್ನು ಸರ್ಕಾರ ಎಂದಿಗೂ ಅನುಮೋದಿಸಿಲ್ಲ, ಅಥವಾ ಎಂದಿಗೂ ಅನುಮೋದಿಸುವುದಿಲ್ಲ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಭೂ ಸಚಿವ ಯಾಮಿಲ್ ಫ್ಲೋರ್ಸ್ ಹೇಳಿದ್ದನ್ನು ಲಾ ರಿಪಬ್ಲಿಕಾ ಉಲ್ಲೇಖಿಸಿದೆ.
ಸ್ಥಳೀಯ ನಾಯಕರು ಮತ್ತು ಕಾಲ್ಪನಿಕ ದೇಶದ ಪ್ರತಿನಿಧಿಗಳ ನಡುವೆ ಸಹಿ ಹಾಕಿದ ಒಪ್ಪಂದಗಳನ್ನು ಪರಿಶೀಲಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಫ್ಲೋರ್ಸ್ ಹೇಳಿದರು, ಈ ಅಪರಾಧಗಳನ್ನು ಶಿಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಮಂಗಳವಾರ ದೇಶದಿಂದ ಹೊರಹಾಕಲ್ಪಟ್ಟವರಲ್ಲಿ ಮೂವರನ್ನು ಎಕ್ಸಾಲ್ಟಾಸಿಯಾನ್ ಪುರಸಭೆಯಲ್ಲಿ ಪತ್ತೆ ಮಾಡಿ ಗಡೀಪಾರು ಮಾಡಲು ಸಾಂಟಾ ಕ್ರೂಜ್‌ನ ವಿರು ವಿರು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದೆ ಎಂದು ಕ್ಯಾಲ್ಡೆರಾನ್ ಹೇಳಿದ್ದಾರೆ. ಉಳಿದ 17 ಜನರನ್ನು ಸಾಂಟಾ ಕ್ರೂಜ್‌ನಲ್ಲಿ ಪತ್ತೆ ಮಾಡಲಾಯಿತು ಮತ್ತು ಅವರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ತಿಳಿಸಲಾಯಿತು ಎಂದು ಅವರು ಹೇಳಿದ್ದಾರೆ.
“ಎರಡೂ ನಗರಗಳಲ್ಲಿನ ವಿವಿಧ ಕಾರ್ಯಾಚರಣೆಗಳಲ್ಲಿ ಕಂಡುಬಂದ ಜನರು ಇನ್ನು ಮುಂದೆ ನಮ್ಮ ಪ್ರದೇಶದಲ್ಲಿ ಇರುವಂತಿಲ್ಲ. ಅವರಿಗೆ ಅಂತಿಮ ಕಡ್ಡಾಯ ನಿರ್ಗಮನ ಆದೇಶಗಳನ್ನು ನೀಡಲಾಗಿದೆ, ಇದು ಅವರನ್ನು ಬೊಲಿವಿಯಾಕ್ಕೆ ಮತ್ತೆ ಪ್ರವೇಶಿಸುವುದನ್ನು ತಡೆಯುತ್ತದೆ.” ಎಂದು ಅವರು ಹೇಳಿದ್ದಾರೆ.
ಅತ್ಯಾಚಾರ ಮತ್ತು ಮಕ್ಕಳನ್ನು ತನ್ನ ಆಶ್ರಮದಲ್ಲಿ ಅಕ್ರಮವಾಗಿ ಬಂಧಿಸಿದ ಆರೋಪದ ನಂತರ ನಿತ್ಯಾನಂದ ಭಾರತದಿಂದ ಪಲಾಯನ ಮಾಡಿದ್ದರು. 2019 ರಲ್ಲಿ, ಭಾರತವು ನಿತ್ಯಾನಂದನ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿತು ಮತ್ತು ಹೊಸ ಪಾಸ್‌ಪೋರ್ಟ್‌ಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸಹ ತಿರಸ್ಕರಿಸಿತ್ತು. ಮಕ್ಕಳನ್ನು ಅಪಹರಿಸಿ ತನ್ನ ಆಶ್ರಮಕ್ಕೆ ಹಣವನ್ನು ಸಂಗ್ರಹಿಸಲು ಬಳಸಿಕೊಂಡ ಆರೋಪ ಅವರ ಮೇಲಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹಿಂದೂಗಳು ಸುರಕ್ಷಿತರಾಗಿದ್ದರೆ, ಮುಸ್ಲಿಮರು ಕೂಡಾ ಸುರಕ್ಷಿತರು: ಯುಪಿ ಸಿಎಂ ಆದಿತ್ಯನಾಥ್ ಹೇಳಿಕೆ
ಹಿಂದೂಗಳು ಸುರಕ್ಷಿತರಾಗಿದ್ದರೆ, ಮುಸ್ಲಿಮರು ಕೂಡಾ ಸುರಕ್ಷಿತರು: ಯುಪಿ ಸಿಎಂ ಆದಿತ್ಯನಾಥ್ ಹೇಳಿಕೆ

