ದೇಶದಾದ್ಯಂತ ಅದರಲ್ಲೂ ದಕ್ಷಿಣ ಭಾರತದಾದ್ಯಂತ ಭಾಷಾ ವಿವಾದ ನಡೆಯುತ್ತಿರುವ ನಡುವೆಯೂ, ಉಪ ರಾಷ್ಟ್ರಪತಿ ಜಗದೀಪ್ ಧನ್ಖರ್ ಅವರು, ಭಾಷೆಯ ಬಗ್ಗೆ ಸಂಘರ್ಷದ ನಿಲುವು ಏಕೆ ಇರಬೇಕು ಎಂದು ಭಾನುವಾರ ಕೇಳಿದ್ದಾರೆ. ಪ್ರತಿಯೊಂದು ಭಾಷೆಯನ್ನು ಪೋಷಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ಹೈದರಾಬಾದ್‌ನ ಐಐಟಿಯ ವಿದ್ಯಾರ್ಥಿಗಳೊಂದಿಗೆ ವರ್ಚುವಲ್ ಸಂವಾದದ ಸಂದರ್ಭದಲ್ಲಿ ಮಾತನಾಡಿದ ಧನ್ಖರ್, ಭಾರತವು ಸಂಸ್ಕೃತ, ಬಾಂಗ್ಲಾ, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಇತರ ಹಲವು ಶ್ರೀಮಂತ ಭಾಷೆಗಳ ಭೂಮಿಯಾಗಿದ್ದು, ಸಂಸತ್ತಿನಲ್ಲಿಯೂ ಸಹ, 22 ಭಾಷೆಗಳಲ್ಲಿ ಏಕಕಾಲದಲ್ಲಿ ಅನುವಾದ ನಡೆಯುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕೆಲವು ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿರುವುದನ್ನು ಹೆಮ್ಮೆಯ ಕ್ಷಣ ಎಂದು ಅವರು ಉಲ್ಲೇಖಿಸಿದ್ದಾರೆ. ಭಾಷೆಗಳು ಜಾಗತಿಕ ವ್ಯಾಪ್ತಿಯನ್ನು ಹೊಂದಿರುವುದರಿಂದ, ಪ್ರತಿಯೊಂದು ಭಾಷೆಯನ್ನು ಪೋಷಿಸಬೇಕು. ಅವು ಸಾಹಿತ್ಯದ ಚಿನ್ನದ ಗಣಿ, ಮತ್ತು ಈ ಸಾಹಿತ್ಯ ಕೃತಿಗಳಾದ ವೇದಗಳು, ಪುರಾಣಗಳು, ಮಹಾಕಾವ್ಯಗಳು ರಾಮಾಯಣ, ಮಹಾಭಾರತ ಮತ್ತು ಗೀತೆಯು ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ತುಂಬಿವೆ ಎಂದು ಅವರು ಹೇಳಿದ್ದಾರೆ. ಭಾಷೆಯ ಬಗ್ಗೆ
ಪ್ರತಿಷ್ಠಿತ ಸಂಸ್ಥೆಗಳಿಂದ ಹಳೆಯ ವಿದ್ಯಾರ್ಥಿಗಳ ಸಂಘಗಳ ಒಕ್ಕೂಟವನ್ನು ರಚಿಸುವ ಕಲ್ಪನೆಯ ಬಗ್ಗೆ ಮಾತನಾಡಿದ ಜಗದೀಪ್ ಧನ್ಖರ್ ಅವರು, “ಜಾಗತಿಕ ವಿಶ್ವವಿದ್ಯಾಲಯಗಳು ಮತ್ತು ಅವುಗಳ ದತ್ತಿ ನಿಧಿಯನ್ನು ಗಮನಿಸಿ. ಅವುಗಳ ಶತಕೋಟಿ ಯುಎಸ್ ಡಾಲರ್‌ಗಳಾಗಿರುತ್ತವೆ. ಅಗ್ರ ಪಟ್ಟಿಯಲ್ಲಿ 50 ಬಿಲಿಯನ್ ಡಾಲರ್‌ಗಳನ್ನು ಸಮೀಪಿಸುತ್ತದೆ. ಇದು ನಮ್ಮಲ್ಲಿ ಏಕೆ ಇಲ್ಲ?” ಎಂದು ಪ್ರಶ್ನಿಸಿದ್ದಾರೆ.
“ನಮ್ಮಲ್ಲಿ ಹಳೆಯ ವಿದ್ಯಾರ್ಥಿಗಳಿದ್ದಾರೆ. ನಮ್ಮ ಹಳೆಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಿಗೆ ಕೊಡುಗೆ ನೀಡಲಿ. ಇಲ್ಲಿ ಮೊತ್ತವು ಅಪ್ರಸ್ತುತವಾಗುತ್ತದೆ; ಆದರೆ ಸಂಸ್ಥೆಯೊಂದಿಗೆ ಸಂಪರ್ಕವನ್ನು ಬೆಳೆಸುವುದು ಈ ಕೊಡುಗೆಯ ಮನೋಭಾವವಾಗಿದೆ.” ಎಂದು ಅವರು ಹೇಳಿದ್ದಾರೆ.
“ನಾನು ಒಂದು ಕಲ್ಪನೆಯನ್ನು ಪ್ರಸ್ತಾಪಿಸುತ್ತಿದ್ದೇನೆ. ನಮ್ಮಲ್ಲಿ ಐಐಟಿಗಳು ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳಿವೆ. ಅದರ ಹಳೆಯ ವಿದ್ಯಾರ್ಥಿಗಳ ಸಂಘಗಳು ಒಂದು ಒಕ್ಕೂಟವನ್ನು ರಚಿಸಬೇಕು. ಅದು ನೀತಿ ನಿರೂಪಕರಿಗೆ ಉನ್ನತ ಜಾಗತಿಕ ಮಾನದಂಡದ ಚಿಂತಕರ ಚಾವಡಿಯಾಗುತ್ತದೆ.” ಎಂದು ಅವರು ಹೇಳಿದ್ದಾರೆ.
ಕಾರ್ಪೊರೇಟ್ ವಲಯವು ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದ ಅವರು, “ಮೊದಲನೆಯದಾಗಿ, ನಮ್ಮ ಕಾರ್ಪೊರೇಟ್‌ಗಳು ಸಂಶೋಧನೆಯಲ್ಲಿ ಹೂಡಿಕೆ ಮಾಡಬೇಕು. ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ಸಂಶೋಧನೆಯಲ್ಲಿ ಹೂಡಿಕೆ ಮಾಡಬೇಕು.” ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಿಬಿಐ ನಿರ್ದೇಶಕರ ನೇಮಕಾತಿಯಲ್ಲಿ ಮುಖ್ಯ ನ್ಯಾಯಮೂರ್ತಿ ಯಾಕೆ ಪಾಲ್ಗೊಳ್ಳಬೇಕು – ಉಪ ರಾಷ್ಟ್ರಪತಿ ಪ್ರಶ್ನೆ
ಸಿಬಿಐ ನಿರ್ದೇಶಕರ ನೇಮಕಾತಿಯಲ್ಲಿ ಮುಖ್ಯ ನ್ಯಾಯಮೂರ್ತಿ ಯಾಕೆ ಪಾಲ್ಗೊಳ್ಳಬೇಕು – ಉಪ ರಾಷ್ಟ್ರಪತಿ ಪ್ರಶ್ನೆ

