Homeಮುಖಪುಟಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ: ಉದಾಹರಣೆಗಳು ಬೇಕೆ? - ಇಸ್ಮತ್‌ ಪಜೀರ್‌

ಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ: ಉದಾಹರಣೆಗಳು ಬೇಕೆ? – ಇಸ್ಮತ್‌ ಪಜೀರ್‌

ಬ್ಯಾರಿ ಭಾಷೆಗೆ ಅಕಾಡೆಮಿಕ್ ಮನ್ನಣೆಯೊದಗಿಸಿದ ಮೊಟ್ಟ ಮೊದಲ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಎಂಬ ಬ್ರಾಹ್ಮಣ ಮಹಿಳೆ.

- Advertisement -
- Advertisement -

ಡಾ.ಫಿರೋಝ್ ಖಾನ್ ಎಂಬ ಸಂಸ್ಕೃತ ವಿದ್ವಾಂಸ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರೊಫೆಸರ್ ಆದದ್ದನ್ನು ಸಹಿಸದ ಮನುವಾದಿಗಳು ಅವರ ವಿರುದ್ಧ ದೊಡ್ಡ ಮಟ್ಟದ ಗಲಾಟೆಯೆಬ್ಬಿಸಿದ್ದಾರೆ. ಬನಾರಸ್ ವಿವಿಯ ವಿದ್ಯಾರ್ಥಿಗಳಲ್ಲಿ ಒಂದು ವಿಭಾಗವು ಡಾ.ಫಿರೋಝ್ ಖಾನ್ ಪರವಾಗಿದ್ದರೆ ಮನುವಾದಿ ಸಂಘಪರಿವಾರದ ಪರವಿರುವ ವಿದ್ಯಾರ್ಥಿ ಗುಂಪು ಖಾನರ ವಿರುದ್ಧವಿದ್ದಾರೆ. ಈ ಹೆಸರಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಮಾಡುತ್ತಿರುವ ರಾಜಕೀಯ ಅತ್ಯಂತ ನಾಚಿಕೆಗೇಡಿನದ್ದು ಎಂದು ನಾವು ಹೇಳಿದರೆ ಅದೇನೂ ಅವರಿಗೆ ನಾಟದು..‌ ಉಡಲು ಉಡುಪಿದ್ದೂ ಅದನ್ನು ಕಳಚಿ ಬಿಟ್ಟು ಪ್ರಜ್ಞಾಪೂರ್ವಕವಾಗಿ
ಬೆತ್ತಲಾದವರಲ್ಲಿ ಈ ರೀತಿಯ ವಾದವೇ ವ್ಯರ್ಥ…

ಅದಾಗ್ಯೂ ಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ. ಇಂದು ಜಗತ್ತು ಮುಸ್ಲಿಮರ ಭಾಷೆ ಎನ್ನುವ ಖುರ್‌ಆನಿನ ಭಾಷೆ ಅರಬಿಕ್. ಅಂದ ಮಾತ್ರಕ್ಕೆ ಅದನ್ನು ಯಾವತ್ತೂ ಮುಸ್ಲಿಮರ ಭಾಷೆ ಎನ್ನಲಾಗದು. ಮಧ್ಯ ಪ್ರಾಚ್ಯದ ಹೆಚ್ಚಿನೆಲ್ಲಾ ದೇಶಗಳ ಕ್ರೈಸ್ತರು ಮತ್ತು ಯಹೂದಿಯರ ಮಾತೃ ಭಾಷೆಯೇ ಅರಬಿಕ್. ಅರಬಿ ಮಾತೃ ಭಾಷೆಯವರು ಎಂಬ ಕಾರಣಕ್ಕೆ ಅವರನ್ನು ಮುಸ್ಲಿಮರೆನ್ನಲಾದೀತೆ..?

ಇದನ್ನೂ ಓದಿ: ಸಂಸ್ಕೃತ ಪ್ರೊಫೆಸರ್‌ ಫಿರೋಜ್‌ ಖಾನ್‌ರನ್ನು ಬೆಂಬಲಿಸಿ ವಿದ್ಯಾರ್ಥಿಗಳ ರ್‍ಯಾಲಿ: ಧರ್ಮ ತಾರತಮ್ಯಕ್ಕೆ ಖಂಡನೆ

ಇಸ್ಲಾಮಿಕ್ ಕರ್ಮಶಾಸ್ತ್ರ ಮತ್ತು ಚರಿತ್ರೆಗಳು ಅರಬಿಕ್‌ನ ಬಳಿಕ ಅತೀ ಹೆಚ್ಚು ಬರೆದಿಡಲ್ಪಟ್ಟ ಭಾಷೆ ಪರ್ಶ್ಯನ್ ಭಾಷೆ. ಅಂತೆಯೇ ಅರೆಬಿಕ್ ಬಿಟ್ಟರೆ ಅತೀ ಹೆಚ್ಚು ಇಸ್ಲಾಮೀ ಸಾಹಿತ್ಯವಿರುವುದೂ ಪರ್ಷ್ಯನ್ ಭಾಷೆಯಲ್ಲಾಗಿದೆ. ಆದರೆ ಪರ್ಷ್ಯನ್ ಆ ಭಾಗದ ಅಥವಾ ಜಗತ್ತಿನ ಯಾವುದೇ ಭಾಗದ ಮುಸ್ಲಿಮರು ಮಾತ್ರ ಮಾತನಾಡುವ ಭಾಷೆಯಲ್ಲ. ಹಾಗೆಯೇ ಪಾರ್ಸಿ ಎಂದು ಅರಿಯಲ್ಪಡುವ ಜನಾಂಗವೇ ಇಸ್ಲಾಮ್ ಧರ್ಮಾನುಯಾಯಿಗಳಲ್ಲ.

ಜಗತ್ತಿನ ಅತ್ಯಂತ ಸುಂದರ ಮತ್ತು ಮಧುರ ಭಾಷೆಗಳಲ್ಲೊಂದೆಂದು ಗುರುತಿಸಲ್ಪಟ್ಟ ಉರ್ದುವಿನ ಮೇಲೆ ಸಂಘಪರಿವಾರದ ಉರಿನಂಜು ಇಂದು ನಿನ್ನೆಯದಲ್ಲ. ಅದಾಗ್ಯೂ ಉರ್ದು ಸಾಹಿತ್ಯದ ಮೇರು‌ ಸಾಹಿತಿಗಳಲ್ಲಿ ಅಸಂಖ್ಯ ಹಿಂದೂಗಳಿದ್ದಾರೆ. ಪಾಕಿಸ್ತಾನದ ಹಿಂದೂಗಳು ಮತ್ತು ಸಿಖ್ಖರಲ್ಲಿ ಬಹು ಸಂಖ್ಯಾತರ ಮಾತೃ ಭಾಷೆಯೂ ಉರ್ದು. ಅಷ್ಟು ದೂರವೇಕೆ ನಮ್ಮದೇ ದೇಶದ ಲಕ್ನೋ ಮತ್ತು ಹೈದರಾಬಾದಿನಲ್ಲಿ ಉರ್ದು ಮಾತೃ ಭಾಷಿಕರಾದ ಹಿಂದೂಗಳು ಧಾರಾಳವಾಗಿ ಕಾಣಸಿಗುತ್ತಾರೆ.

ಕಾಶ್ಮೀರಿಗರ ಅಧಿಕೃತ ಭಾಷೆ ಕಾಶ್ಮೀರಿ ಎಂದು ಎಲ್ಲಾ ಕಾಶ್ಮೀರಿಗರೂ ಒಪ್ಪುತ್ತಾರೆ. ಕಾಶ್ಮೀರದಲ್ಲಿ ಮುಸ್ಲಿಮರೇ ಬಹು ಸಂಖ್ಯಾತರು. ಅವರಲ್ಲಿ ಬಹುತೇಕರು ಕಾಶ್ಮೀರಿ ಮನೆ ಭಾಷೆಯವರು. (ಉರ್ದು ಮ‌ನೆ ಭಾಷಿಕರೂ ಇದ್ದಾರೆ) ಅಂತೆಯೇ ಅಲ್ಲಿನ ಹಿಂದೂಗಳ ಮನೆಭಾಷೆಯೂ ಕಾಶ್ಮೀರಿ.

ನನ್ನದೇ ಮಾತೃಭಾಷೆ ಬ್ಯಾರಿಯನ್ನು ತೆಗೆದುಕೊಳ್ಳೋಣ. ಬ್ಯಾರಿ ಭಾಷೆ ಕೇವಲ ಮುಸ್ಲಿಮರ ಭಾಷೆ ಎಂಬ ನಂಬಿಕೆ ಬಹುತೇಕರಲ್ಲಿದೆ. ಈ ಭಾಷೆಯಲ್ಲಿ ಎರಡು ಪ್ರಬೇಧಗಳಿವೆ. ಒಂದು ಬ್ಯಾರಿ ,ಇನ್ನೊಂದು ಮಲಾಮೆ. ಇವೆರಡರಲ್ಲಿರುವ ಶಬ್ಧಗಳು 98% ಒಂದೇ ಆಗಿವೆ. ಲಯದಲ್ಲಿ ಬ್ಯಾರಿ ಎಂಬ ಪ್ರಬೇಧ ತುಳುವನ್ನು ಹೋಲುತ್ತದಾದರೆ, ಮಲಾಮೆ ಮಲಯಾಳವನ್ನು ಹೋಲುತ್ತದೆ. ಆದರೆ ಮಲಾಮೆ ಮಲಯಾಳಂಗೆ ಬಹಳ ವ್ಯತ್ಯಾಸವಿದೆ. ಮಲಾಮೆ ಎಂಬ ಪ್ರಬೇಧದಲ್ಲಿ ಬ್ಯಾರಿಗಳಲ್ಲದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತೀಯ ಸಮುದಾಯ, ಮೋಯ ಸಮುದಾಯ,ಮಣಿಯಾಣಿ ಸಮುದಾಯ ಮತ್ತು ಆಶಾರಿ ಸಮುದಾಯದವರ ಮನೆಭಾಷೆಯೂ ಹೌದು. ಹಾಗಾದರೆ ಇದು ಯಾರ ಭಾಷೆ?

ಇದನ್ನೂ ಓದಿ: ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಬ್ಯಾರಿ ಭಾಷೆಗೆ ಅಕಾಡೆಮಿಕ್ ಮನ್ನಣೆಯೊದಗಿಸಿದ ಮೊಟ್ಟ ಮೊದಲ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಎಂಬ ಬ್ರಾಹ್ಮಣ ಮಹಿಳೆ. ಆ ಭಾಷೆಯ ಕುರಿತಂತೆ ಅವರು ಪೂನಾ ವಿಶ್ವವಿದ್ಯಾನಿಲಯಕ್ಕೆ ಸಂಶೋಧನಾ ಪ್ರಬಂಧ ಮಂಡಿಸಿ ೧೯೬೮ರಲ್ಲಿ ಪಿ.ಎಚ್.ಡಿ.ಪಡೆದಿರುತ್ತಾರೆ. ಅಂದಿನಿಂದ ಇಂದಿನವರೆಗೆ ಬ್ಯಾರಿ ಭಾಷೆಯ ಕುರಿತಂತೆ ಇನ್ನೊಂದು ಪಿ.ಎಚ್.ಡಿ. ಅಧ್ಯಯನ ನಡೆದಿಲ್ಲ.

ತುಳು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹಿಂದೂ ಧರ್ಮೀಯರ ಭಾಷೆ. ಆದರೆ ತುಳು ಭಾಷೆಯಲ್ಲಿ ಗ್ರಾಂಥಿಕ ಸಾಹಿತ್ಯಕ್ಕೆ ನಾಂದಿ ಹಾಡಿದವರು ಮತ್ತು ತುಳು ಭಾಷೆಗೆ ಅಕಾಡೆಮಿಕ್ ಮನ್ನಣೆ ಒದಗಿಸಿದವರು ದೂರದ ಜರ್ಮನಿಯ ಬಾಸೆಲ್ ಮಿಶನ್‌‌ನ ಪ್ರವರ್ತಕರು. ಆಧುನಿಕ ತುಳು ರಂಗ ಭೂಮಿಯ ಭೀಷ್ಮ ಮೊಯ್ದಿನಬ್ಬ ಎಂಬ ಬ್ಯಾರಿ ಮುಸ್ಲಿಂ ನಾಟಕಕಾರ. (ಆದರೆ ದುರದೃಷ್ಟವಶಾತ್ ಇಂದು ತುಳು ನಾಟಕರಂಗ ಅವರನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆ.)

ಕನ್ನಡದ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ ಕೂಡಿಟ್ಟ ಜಾನಪದ ದಿಗ್ಗಜ ಎಸ್.ಕೆ.ಕರೀಂ ಖಾನ್ ಅಫ್ಘಾನ್ ಮೂಲದವರು. ಅವರ ಮನೆ ಭಾಷೆ ಕನ್ನಡವಲ್ಲ.

ಕನ್ನಡದ ಮೇರು ಸಾಹಿತಿಗಳಾದ ಬೇಂದ್ರೆ ಮರಾಠಿ ಮನೆ ಭಾಷಿಕರಾದರೆ, ಮಾಸ್ತಿ ತಮಿಳು ಮನೆ ಭಾಷಿಕರು, ಗಿರೀಶ್ ಕಾರ್ನಾಡ್ ಕೊಂಕಣಿ ಮನೆ ಭಾಷಿಕರು, ಅಮೃತ ಸೋಮೇಶ್ವರ ಮಲಾಮೆ ಮನೆ ಭಾಷಿಕರು.

ಹೀಗೆ ಜಗತ್ತಿನ ಎಲ್ಲಾ ಭಾಷೆಗಳಿಗೂ ಆಯಾ ಭಾಷಿಕಲ್ಲದವರ ಕೊಡುಗೆ ಧಾರಾಳವಾಗಿ ಕಾಣಸಿಗುತ್ತವೆ.

ಹೀಗಿರುವಾಗ ಭಾಷೆಯೊಂದನ್ನು ನಿರ್ಧಿಷ್ಟ ಜಾತಿ, ಧರ್ಮ, ಜನಾಂಗ ಮತ್ತು ಭಾಷಿಕರಿಗೆ ಮಾತ್ರ ಸೀಮಿತಗೊಳಿಸಲು ಮನುವಾದಿಗಳಿಗೆ ಮಾತ್ರ ಸಾಧ್ಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...

‘ಒಂದು ಲೀಟರ್ ತೈಲವನ್ನೂ ರಫ್ತು ಮಾಡುವುದಿಲ್ಲ’: ಟ್ರಂಪ್ ‘ಹಾರ್ಮುಜ್ ಜಲಸಂಧಿ ಸ್ವಾಧೀನ’ ಹೇಳಿಕೆಯ ನಂತರ ಕಠಿಣ ಎಚ್ಚರಿಕೆ ನೀಡಿದ ಇರಾನ್

ಟೆಹ್ರಾನ್: ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ತನ್ನ ವಿರುದ್ಧ ದಾಳಿಗಳು ಮುಂದುವರಿದರೆ, ಈ ಪ್ರದೇಶದಿಂದ ಒಂದು ಲೀಟರ್ ತೈಲವನ್ನು ರಫ್ತು ಮಾಡಲು ಸಹ ಇರಾನ್ ಅನುಮತಿಸುವುದಿಲ್ಲ ಎಂದು ಇರಾನ್...

ನ್ಯಾಯಾಂಗದ ಕುರಿತ ಅಧ್ಯಾಯ ವಿವಾದ: ಬೇಷರತ್ ಕ್ಷಮೆಯಾಚಿಸಿದ ಎನ್‌ಸಿಇಆರ್‌ಟಿ

ಇತ್ತೀಚೆಗೆ ಪ್ರಕಟವಾದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಅಧ್ಯಾಯವನ್ನು ಸೇರಿಸಿದ್ದಕ್ಕಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಮಂಗಳವಾರ (ಮಾ.10) ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸಿದೆ ಮತ್ತು...

ಟ್ರಕ್ ಚಾಲಕನಿಗೆ ಥಳಿಸಿ, ಸೆಗಣಿ ತಿನ್ನಿಸಿದ ಪ್ರಕರಣ : ಇಬ್ಬರು ಸ್ವಘೋಷಿತ ಗೋರಕ್ಷಕರ ಬಂಧನ

ಎಮ್ಮೆಗಳನ್ನು ಸಾಗಿಸುತ್ತಿದ್ದ ಟ್ರಕ್‌ ಚಾಲಕನಿಗೆ ಥಳಿಸಿ, ಸೆಗಣಿ ತಿನ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ವಘೋಷಿತ ಗೋರಕ್ಷಕರನ್ನು ಮಹಾರಾಷ್ಟ್ರದ ಪುಣೆ ನಗರ ಪೊಲೀಸರು ಬಂಧಿಸಿದ್ದಾರೆ. ಬಿಪಾಶಾ ಅಲಿಯಾಸ್ ಆಕಾಶ್ ಮಾಣಿಕಂ ಮತ್ತು ಹೇಮಂತ್ ಗಾಯಕ್ವಾಡ್ ಬಂಧಿತರು....

ದೆಹಲಿ ಗಲಭೆ ಪ್ರಕರಣ : ಶಾರ್ಜೀಲ್ ಇಮಾಮ್‌ಗೆ 10 ದಿನಗಳ ಮಧ್ಯಂತರ ಜಾಮೀನು

ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅವರಿಗೆ ನ್ಯಾಯಾಲಯ ಸೋಮವಾರ (ಮಾ.9) 10 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ತನ್ನ ಸಹೋದರನ...

‘ಬಲಾಢ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ..’; ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ

'ಬಲಾಢ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ ಮಾಡಲಾಗಿದೆ; ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ' ಸಿದ್ದರಾಮಯ್ಯ ಅವರ ಬಜೆಟ್‌ ಕುರಿತು ಅಸಮಾಧಾನ ಹೊರಹಾಕಿದೆ. ಈ ಕುರಿತು...