ಎನ್‌ಇಇಟಿ-ಪಿಜಿ (The National Entrance cum Eligibility Test Postgraduate)ಯನ್ನು ಮೇ 21ರಂದು ನಿಗದಿಪಡಿಸಲಾಗಿದೆ. ಆದರೆ ಪರೀಕ್ಷಾ ತಯಾರಿಗೆ ಯಾವುದೇ ಸಮಯವನ್ನು ನೀಡಿಲ್ಲ ಎಂದು ಪರೀಕ್ಷೆಯ ಆಕಾಂಕ್ಷಿಗಳು ಆತಂಕಿತರಾಗಿದ್ದಾರೆ.
ಅನೇಕ ರಾಜ್ಯಗಳಲ್ಲಿ NEET-PG 2021ರ ಕೌನ್ಸೆಲಿಂಗ್ ಇನ್ನೂ ಮುಗಿದಿಲ್ಲ. ಹಲವಾರು ವಿದ್ಯಾರ್ಥಿಗಳು ಕೌನ್ಸೆಲಿಂಗ್‌ಗೆ ಹಾಜರಾಗುತ್ತಲೇ ಇದ್ದಾರೆ. ನಮ್ಮಲ್ಲಿ ಅನೇಕರು ಒಂದು ಸ್ಥಳದಲ್ಲಿ ಕೌನ್ಸೆಲಿಂಗ್‌ಗೆ ಹಾಜರಾಗಿರುತ್ತಾರೆ. ಹೀಗಿರುವಾಗ ಇನ್ನೊಂದು ಸ್ಥಳದಲ್ಲಿ ಪರೀಕ್ಷೆಗೆ ಹಾಜರಾಗಲು ಹೇಗೆ ಸಾಧ್ಯ? ಎಂದು ಆಕಾಂಕ್ಷಿಗಳು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಮೇ 21ರಂದು ನಡೆಸಲಿರುವ NEET-PG 2022 ಪರೀಕ್ಷೆಯನ್ನು ಬರೆಯಲು ನಾನು ನಿರ್ಧರಿಸಿದ್ದೇನೆ. NEET-PG 2021 ಪರೀಕ್ಷೆಯ ಕೌನ್ಸೆಲಿಂಗ್ ಇನ್ನೂ ಹಲವು ರಾಜ್ಯಗಳಲ್ಲಿ ಮುಗಿದಿಲ್ಲ. ಕೆಲವು ರಾಜ್ಯಗಳಲ್ಲಿ ಅದನ್ನು ಮುಂದೂಡಲಾಗಿದೆ. ಕೌನ್ಸಲಿಂಗ್ ಹಾಗೂ ಕೆಲವೇ ದಿನಗಳ ಅಂತರದಲ್ಲಿ ಪರೀಕ್ಷೆಯನ್ನು ಎದುರಿಸಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ?” ಎಂದು ನೀಟ್-ಪಿಜಿ ಆಕಾಂಕ್ಷಿ ಡಾ.ವಿದ್ಯಾ ಎಂಬವರು ಕೇಳಿರುವುದಾಗಿ ‘ದಿ ಕ್ವಿಂಟ್’ ವರದಿ ಮಾಡಿದೆ.
“ವೈದ್ಯರ ಜೀವನ ಎಷ್ಟು ಕಷ್ಟ, ನೀಟ್-ಪಿಜಿ ಓದುವುದು ಎಷ್ಟು ಕಷ್ಟ ಎಂದು ಅವರಿಗೆ ಅರ್ಥವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ನಾವು 5 ವರ್ಷಗಳ ಅವಧಿಯಲ್ಲಿ ಕಲಿತದ್ದು. ನಾವು ಏನನ್ನು ಅನುಭವಿಸುತ್ತಿದ್ದೇವೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ” ಎಂಉ ವಿಷಾದಿಸಿದ್ದಾರೆ ವಿದ್ಯಾ.
ಇದನ್ನೂ ಓದಿರಿ: ವಿಶೇಷ ವರದಿ: ಪಿಎಸ್‌ಐ ಪರೀಕ್ಷೆ ಅಕ್ರಮ ಒಂದೇ ಅಲ್ಲ, ಶಿಕ್ಷಣದ ಅವ್ಯವಸ್ಥೆಗೆ ಕೊನೆಯೇ ಇಲ್ಲ!
ಮತ್ತೊಬ್ಬ ಆಕಾಂಕ್ಷಿ ಡಾ.ರೇಷ್ಮಾ ಪ್ರತಿಕ್ರಿಯೆ ನೀಡಿದ್ದು, “ನಾವು ಮೇ 7 ರಂದು ನಮ್ಮ (NEET-PG 2021) ಕೌನ್ಸೆಲಿಂಗ್ ಅನ್ನು ಪೂರ್ಣಗೊಳಿಸಿದ್ದೇವೆ ಮತ್ತು ಪರೀಕ್ಷೆಯನ್ನು ಮೇ 21 ಕ್ಕೆ ನಿಗದಿಪಡಿಸಲಾಗಿದೆ. 14 ದಿನಗಳ ಒಳಗೆ 19 ವಿಷಯಗಳಿಗೆ ನಾವು ಸಿದ್ಧರಾಗಬೇಕೆಂದು ನೀವು ನಿರೀಕ್ಷಿಸುತ್ತಿದ್ದೀರೆಂದು ನಮಗೆ ತಿಳಿದಿಲ್ಲ” ಎಂದಿದ್ದಾರೆ.
ಮುಂದುವರಿದು, ಪ್ರಮುಖ ವಿಷಯಗಳನ್ನು ಅತ್ಯಂತ ವೇಗವಾಗಿ ಅವಲೋಕಿಸುತ್ತೇನೆ ಎಂದರೂ ಕನಿಷ್ಠ ಮೂರು ದಿನಗಳು ಬೇಕಾಗುತ್ತವೆ. ಕೌನ್ಸೆಲಿಂಗ್‌ನಲ್ಲಿ ಸೀಟು ಸಿಗದಿರುವ ಮಧ್ಯಮ ಶ್ರೇಣಿಯವರ ಪರಿಸ್ಥಿತಿ ಏನಾಗಬಹುದು? ನೋಂದಣಿಯ ಬಾಗಿಲು ಕೂಡ ಮುಚ್ಚಲಾಗಿದೆ. ಅವರು ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿರಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ
ನಾವು ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಸೇರಿದಂತೆ ಹಲವಾರು ಸಚಿವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ನಮ್ಮ ಮನವಿಗಳಿಗೆ ಅವರು ಕಿವುಡರಾಗಿದ್ದಾರೆ. ನಮ್ಮ ಪರೀಕ್ಷೆಗಳನ್ನು ಮುಂದೂಡುವಂತೆ ನಾವು ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) ಮತ್ತು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC)ಗೆ ಮನವಿ ಮಾಡುತ್ತಿದ್ದೇವೆ. ಆದರೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ ಆಕಾಂಕ್ಷಿಗಳು.
“ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿದ್ದೇವೆ. ಮೇಲ್ಮನವಿಯನ್ನು ಆಲಿಸುವುದಾಗಿ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ” ಎಂದು ತಿಳಿಸಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ನಾವು ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದೇವೆ. ನಮ್ಮ ರಕ್ತ, ಬೆವರು ಮತ್ತು ಕಣ್ಣೀರು ಕೋವಿಡ್‌ನಂತಹ ತೊಂದರೆಯೊಂದೆ ಮತ್ತೆ ಬರಬೇಕೆಂದು ನೀವು ಬಯಸುವುದಿಲ್ಲ ಎಂದು ಭಾವಿಸುತ್ತೇವೆ. ದಯವಿಟ್ಟು NEET-PG 2022 ಪರೀಕ್ಷೆಯನ್ನು ಕನಿಷ್ಠ 8 ರಿಂದ 10 ವಾರಗಳವರೆಗೆ ಮುಂದೂಡಿ” ಎಂದು ವಿನಂತಿಸಿಕೊಂಡಿದ್ದಾರೆ.


