ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ್ದ ಕದನ ವಿರಾಮವನ್ನು ಇಸ್ರೇಲ್ ಮತ್ತು ಇರಾನ್ ಒಪ್ಪಿಕೊಂಡಿವೆ ಎಂದು ಇತ್ತೀಚಿನ ವರದಿಗಳು ಹೇಳಿವೆ.
ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವವನ್ನು ಇಸ್ರೇಲ್ ಒಪ್ಪಿಕೊಂಡಿದೆ ಎಂದು ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಬೆಳಿಗ್ಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಇರಾನ್‌ನಲ್ಲಿ ಕದನ ವಿರಾಮ ಪ್ರಾರಂಭಗೊಂಡಿದೆ ಎಂಬುವುದಾಗಿ ಅಲ್ಲಿನ ಟಿವಿ ಮಾಧ್ಯಮಗಳು ವರದಿ ಮಾಡಿವೆ ಎಂದು ಅಲ್-ಜಝೀರಾ ಸುದ್ದಿ ಸಂಸ್ಥೆ ತಿಳಿಸಿದೆ.
ಟ್ರಂಪ್ ಅವರ ಸಮನ್ವಯದೊಂದಿಗೆ ಇಸ್ರೇಲ್ ಇರಾನ್‌ನೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಒಪ್ಪಿಕೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾಗಿ ಇತರ ಕೆಲ ಮಾಧ್ಯಮ ವರದಿಗಳು ಹೇಳಿವೆ.
BREAKING: Israeli PM Netanyahu has accepted US President Trump's ceasefire deal and will be delivering a statement later today, says the PM's office.
🔴 LIVE updates: https://t.co/Ww09tsUIOK pic.twitter.com/CEebivMEoq
— Al Jazeera English (@AJEnglish) June 24, 2025
ಇಸ್ರೇಲ್ ಮತ್ತು ಇರಾನ್ ಪೂರ್ಣ ಕದನ ವಿರಾಮ ಒಪ್ಪಂದ ಮಾಡಿಕೊಂಡಿವೆ ಎಂದು ಇಂದು (ಮಂಗಳವಾರ) ಮುಂಜಾನೆ ಟ್ರಂಪ್ ಘೋಷಣೆ ಮಾಡಿದ್ದರು. ಆದರೆ, ಅದನ್ನು ಇರಾನ್ ಅಲ್ಲಗಳೆದಿತ್ತು.
“ಇಸ್ರೇಲ್ ದಾಳಿ ಪ್ರಾರಂಭಿಸಿದೆ. ಅದು ನಿಲ್ಲಿಸುವವರೆಗೆ ನಾವು ನಿಲ್ಲಿಸುವುದಿಲ್ಲ. ನಾವು ಕೊನೆವರೆಗೆ ಹೋರಾಡುತ್ತೇವೆ. ಯಾರಿಗೂ ಶರಣಾಗಲ್ಲ” ಎಂದು ಇರಾನ್ ವಿದೇಶಾಂಗ ಸಚಿವ ಹೇಳಿದ್ದರು.
ಟ್ರಂಪ್ ಕದನ ವಿರಾಮ ಘೋಷಣೆಯ ಬಳಿಕ, ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ನಾಲ್ವರು ಸಾವನ್ನಪ್ಪಿದ್ದಾರೆ.
“ಮಧ್ಯಪ್ರಾಚ್ಯದಲ್ಲಿ ವ್ಯಾಪಕ ಸಂಘರ್ಷದ ಭೀತಿಯನ್ನು ಹುಟ್ಟುಹಾಕಿದ್ದ 12 ದಿನಗಳ ಭೀಕರ ಯುದ್ಧದ ನಂತರ, ಇಸ್ರೇಲ್ ಮತ್ತು ಇರಾನ್ ನಡುವೆ ಈಗ ಕದನ ವಿರಾಮ ಜಾರಿಯಾಗಿದೆ. ಎರಡೂ ರಾಷ್ಟ್ರಗಳು ಇದನ್ನು ಉಲ್ಲಂಘಿಸಬಾರದು” ಎಂದು ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಸೋಮವಾರ ರಾತ್ರಿ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಕಳೆದ ಭಾನುವಾರ ಅಮೆರಿಕ ತನ್ನ ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಗೆ ಇರಾನ್ ಪ್ರತೀಕಾರ ತೀರಿಸಿಕೊಂಡಿದೆ ಎಂದು ವರದಿಗಳು ಹೇಳಿವೆ.
Latest Update | ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್: ಮೂವರು ಸಾವು


