ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಬೇಕು ಎಂದು ನೋಯ್ಡಾ ಸೆಕ್ಟರ್ 126 ಪೊಲೀಸ್ ಠಾಣೆಗೆ ಸೂಚಿಸಿದೆ.
ನೋಯ್ಡಾ ಪೊಲೀಸರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಇದು ಸಿಸಿಟಿವಿ ದೃಶ್ಯಾವಳಿಗಳನ್ನು ನಿರ್ಬಂಧಿಸಿದ ಪ್ರಕರಣವಾಗಿದೆ ಎಂದು ಹೇಳಿದೆ. ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳು ಕಾರ್ಯನಿರ್ವಹಿಸದಂತೆ ನೋಡಿಕೊಳ್ಳುವ ದೊಡ್ಡ ಸಮಸ್ಯೆ ಇದೆ ಎಂಬುದನ್ನು ಗಮನಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎನ್ ವಿ ಅಂಜಾರಿಯಾ ಅವರ ಪೀಠವು, “ನ್ಯಾಯಾಲಯವು ಸಾಮಾನ್ಯವಾಗಿ ಇಂತಹ ಪ್ರಕರಣಗಳನ್ನು ಪರಿಗಣಿಸುವುದಿಲ್ಲ” ಎಂದು ಹೇಳಿದೆ. ಆದರೆ, ಪೊಲೀಸರ ಮೇಲಿನ ಗಂಭೀರ ಆರೋಪಗಳನ್ನು ಪರಿಗಣಿಸಿ, ಈ ವಿಷಯವು ಸಿಸಿಟಿವಿ ಕ್ಯಾಮೆರಾಗಳ ನಿರ್ಬಂಧಕ್ಕೂ ಸಂಬಂಧಿಸಿದೆ ಎಂಬ ಕಾರಣಕ್ಕೆ ನ್ಯಾಯಾಲಯವು ವಿನಾಯಿತಿ ನೀಡಿದೆ” ಎಂದು ಹೇಳಿದೆ.
ಜನವರಿ 7 ರೊಳಗೆ ಉತ್ತರ ನೀಡಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. “ಪೊಲೀಸ್ ಆಯುಕ್ತ ಗೌತಮ್ ಬುದ್ಧ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟ ಅವಧಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸದಂತೆ ಮತ್ತು ಮುಚ್ಚಿದ ಕವರ್‌ನಲ್ಲಿ ಇರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ಆದೇಶಿಸಿದರು.
ನೋಯ್ಡಾ ಸೆಕ್ಟರ್ 126 ರ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 3 ರಂದು ರಾತ್ರಿ ಕಕ್ಷಿದಾರರಿಗೆ ಸಹಾಯ ಮಾಡಲು ಹೋದಾಗಿನಿಂದ, ವಕೀಲೆಯಾಗಿರುವ ಅರ್ಜಿದಾರರನ್ನು ಸಮವಸ್ತ್ರ ಧರಿಸಿದ ಪೊಲೀಸ್ ಸಿಬ್ಬಂದಿ ಸತತ 14 ಗಂಟೆಗಳ ಕಾಲ ಅಕ್ರಮ ಬಂಧನ, ಕಸ್ಟಡಿಯಲ್ಲಿ ಲೈಂಗಿಕ ದೌರ್ಜನ್ಯ, ಚಿತ್ರಹಿಂಸೆ ನೀಡಿದದ್ದಾರೆ ಎಂದು ಆರೋಪಿಸಲಾಗಿದೆ.
ಈ ಅವಧಿಯಲ್ಲಿ, ಮಹಿಳಾ ವಕೀಲೆ ಕಸ್ಟಡಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು, ಅಲ್ಲಿ ಎಸ್‌ಎಚ್‌ಒ ಸೇರಿದಂತೆ ಪುರುಷ ಪೊಲೀಸ್ ಸಿಬ್ಬಂದಿ ಅವರಿಗೆ ದೈಹಿಕ ಕಿರುಕುಳ ನೀಡಿ, ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದರು. ವಕೀಲೆಗೆ ಲೈಂಗಿಕ ಬೆದರಿಕೆಗಳನ್ನು ಸಹ ನೀಡಿದರು ಎಂದು ದೂರಿನಲ್ಲಿ ಉಲ್ಲೆಖಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪೊಲೀಶರು ಬಲವಂತವಾಗಿ ವಕೀಲರ ಕೋಟನ್ನು ಹರಿದು, “ರಹಸ್ಯ ವೀಡಿಯೊ ರೆಕಾರ್ಡರ್” ಅನ್ನು ಹುಡುಕಲು ಅವರ ದೇಹ ಮತ್ತು ಬಟ್ಟೆಗಳನ್ನು ಪರೀಕ್ಷಿಸಿದರು. ಅವರಿಗೆ ಅಸಭ್ಯ ಬೆದರಿಕೆ ಹಾಕಿದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಪೊಲೀಸರು ವಕೀಲೆ ಕುತ್ತಿಗೆಗೆ ಪಿಸ್ತೂಲ್ ಇಟ್ಟು, ಅವರ ಮೊಬೈಲ್ ಫೋನ್ ಪಾಸ್‌ವರ್ಡ್‌ಗಳನ್ನು ಒಪ್ಪಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ನಕಲಿ ಎನ್‌ಕೌಂಟರ್” ನಲ್ಲಿ ಕೊಲ್ಲಲ್ಪಡುವ ನಿರಂತರ ಬೆದರಿಕೆಗಳನ್ನು ಸಹ ಅವರು ಎದುರಿಸುತ್ತಿದ್ದರು ಎಂದು ದೂರಿದ್ದಾರೆ.
ಈ ಬಲವಂತವು ಅವರ ಮತ್ತು ಅವರ ಕಕ್ಷಿದಾರರ ಮೊಬೈಲ್ ಸಾಧನಗಳಿಂದ ಎಲ್ಲಾ ರೆಕಾರ್ಡ್ ಮಾಡಿದ ವೀಡಿಯೊ ಸಾಕ್ಷ್ಯಗಳನ್ನು ತಕ್ಷಣ ಮತ್ತು ಉದ್ದೇಶಪೂರ್ವಕವಾಗಿ ಅಳಿಸಲು ಕಾರಣವಾಯಿತು ಎಂದು ಅವರ ಅರ್ಜಿಯಲ್ಲಿ ಹೇಳಿದ್ದಾರೆ.


