ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ವಕೀಲರ ನಿರಂತರ ಮುಷ್ಕರದ ಕಾರಣಕ್ಕಾಗಿ ಮತ್ತೆ ಮುಂದೂಡಲಾಗಿದೆ ಎಂದು ವರದಿಯಾಗಿದೆ. ಕರ್ನಾಟಕ ಚುನಾವಣೆಯ ಸಮಯದಲ್ಲಿ ಗೃಹ ಸಚಿವ ಅಮಿತ್ ಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ವಕೀಲರ ಮುಷ್ಕರ
ಪ್ರಕರಣದ ಕ್ರಾಸ್ ಎಕ್ಸಾಮಿನೇಷನ್ ಪೂರ್ಣಗೊಳಿಸಲು ವಿಶೇಷ ಸಂಸದ ಶಾಸಕ ನ್ಯಾಯಾಲಯದ ನ್ಯಾಯಾಧೀಶ ಶುಭಂ ವರ್ಮಾ ಅವರು ಜನವರಿ 30 ರಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ ಎಂದು ವಾದಿ ವಿಜಯ್ ಮಿಶ್ರಾ ಅವರ ವಕೀಲ ಸಂತೋಷ್ ಕುಮಾರ್ ಪಾಂಡೆ ಹೇಳಿದ್ದಾರೆ.
ಕರ್ನಾಟಕ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿ ನಾಯಕ ಅಮಿತ್ ಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಬಿಜೆಪಿ ರಾಜಕಾರಣಿ ಮಿಶ್ರಾ ಅವರು 2018 ರಲ್ಲಿ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ರಾಹುಲ್ ಗಾಂಧಿ ಅವರು ಹೇಳಿಕೆಯು ತನ್ನ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಮಿಶ್ರಾ ಅವರು ಕೋರ್ಟ್‌ಗೆ ದೂರಿದ್ದರು. ವಕೀಲರ ಮುಷ್ಕರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಕರಣವು ಐದು ವರ್ಷಗಳ ಕಾಲ ಬಾಕಿ ಇತ್ತು. ಅದಾಗ್ಯೂ, ರಾಹುಲ್ ಗಾಂಧಿ ಹಾಜರಾಗಲು ವಿಫಲವಾದಾಗ, ನ್ಯಾಯಾಲಯವು ಡಿಸೆಂಬರ್ 2023 ರಲ್ಲಿ ಅವರಿಗೆ ಸಮನ್ಸ್ ಜಾರಿ ಮಾಡಿ ವಾರಂಟ್ ಹೊರಡಿಸಿತ್ತು. ಹಾಗಾಗಿ, ಫೆಬ್ರವರಿ 2024 ರಲ್ಲಿ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗಿದ್ದರು ಮತ್ತು ಜುಲೈ 26, 2024 ರಂದು ಅವರ ಹೇಳಿಕೆಯನ್ನು ದಾಖಲಿಸಲಾಯಿತು.
ಇದರ ನಂತರ, ವಿಶೇಷ ಮ್ಯಾಜಿಸ್ಟ್ರೇಟ್ ತಲಾ 25,000 ರೂ.ಗಳ ಎರಡು ಶ್ಯೂರಿಟಿಗಳ ಮೇಲೆ ಅವರಿಗೆ ಜಾಮೀನು ನೀಡಿದ್ದರು. ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದಾಗ ರಾಹುಲ್ ಗಾಂಧಿಯವರು ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ತನ್ನ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗುತ್ತಿದೆ ಎಂದು ವಾದಿಸಿದ್ದರು. ಇದರ ನಂತರ ನ್ಯಾಯಾಲಯವು ವಾದಿಗಳಿಗೆ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಲು ಸೂಚಿಸಿತ್ತು.
ಡಿಸೆಂಬರ್ 16, 2024 ರಂದು ವಿಚಾರಣೆಯನ್ನು ನಿಗದಿಪಡಿಸಲಾಗಿದ್ದರೂ, ನ್ಯಾಯಾಧೀಶರ ಅನುಪಸ್ಥಿತಿಯಿಂದಾಗಿ ಅದನ್ನು ಮುಂದೂಡಲಾಯಿತು. ಜನವರಿ 2, 2025 ರಂದು, ಕ್ರಾಸ್ ಎಕ್ಸಾಮಿನೇಷನ್ ಪೂರ್ಣಗೊಳ್ಳದಿದ್ದಾಗ, ನ್ಯಾಯಾಲಯವು ಮುಂದಿನ ದಿನಾಂಕವನ್ನು ಜನವರಿ 10, 2025 ಕ್ಕೆ ನಿಗದಿಪಡಿಸಿತ್ತು. ಆದಾಗ್ಯೂ, ವಕೀಲರ ಮುಷ್ಕರದಿಂದಾಗಿ ವಿಚಾರಣೆಯನ್ನು ಜನವರಿ 22, 2025 ಕ್ಕೆ ಮರು ನಿಗದಿಪಡಿಸಲಾಯಿತು.
ಇದನ್ನೂಓದಿ: ವಿಜಯಪುರ | ಮೂವರು ದಲಿತ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ : ಐವರ ಬಂಧನ


