ಚಿಪ್ಕೋ ಚಳುವಳಿಯ ನೇತಾರ, ಖ್ಯಾತ ಪರಿಸರ ಹೋರಾಟಗಾರ ಸುಂದರ್‌ಲಾಲ್ ಬಹುಗುಣರವರು (94) ಕೋವಿಡ್‌ನಿಂದಾಗಿ ರುಷಿಕೇಷದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
ಕಳೆದ ಹತ್ತು ದಿನಗಳ ಹಿಂದೆ ಕೊರೊನಾ ವೈರಸ್ ದೃಢಪಟ್ಟಿದ್ದರಿಂದ ಅವರನ್ನು ರುಷಿಕೇಷದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಅವರು ನಿಧನರಗಿದ್ದಾರೆ.
ಗಾಂಧಿಯವರ ಅನುಯಾಯಿಯದ ಸುಂದರ್‌ಲಾಲ್ ಬಹುಗೂಣರವರು ಕಾಡಿನ ಮರಗಳನ್ನು ರಕ್ಷಿಸಲು ಉತ್ತರಪ್ರದೇಶದಲ್ಲಿ 26 ಮಾರ್ಚ್ 1974 ಚಿಪ್ಕೊ ಚಳುವಳಿಯನ್ನು ಆರಂಭಿಸಿ ದೇಶದಾದ್ಯಂತ ಪ್ರಖ್ಯಾತರಾದರು. ಅದು ನಂತರದಲ್ಲಿ ಕರ್ನಾಟದಲ್ಲಿನ ಅಪ್ಪಿಕೋ ಚಳುವಳಿಗೂ ಪ್ರೇರಣೆಯಾಗಿತ್ತು.
1980 ರ ದಶಕದಲ್ಲಿ ತೆಹ್ರಿ ಅಣೆಕಟ್ಟು ವಿರೋಧಿ ಚಳುವಳಿಯಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದರು. ಅವರಿಗೆ 1981ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. 2009 ರಲ್ಲಿ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಅವರು ಬೆಂಬಲಿಸಿದ್ದರು. “ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ನನ್ನ ಬೆಂಬಲ ಇದೆ. ರೈತರ ಹೋರಾಟವನ್ನು ಮನ್ನಿಸಿ ಕೇಂದ್ರ ಸರ್ಕಾರ ಈ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು” ಎಂದು ಅವರು ಒತ್ತಾಯಿಸಿದ್ದರು.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ನೀಡಿದ ಚಿಪ್ಕೋ ಚಳುವಳಿಯ ನೇತಾರ ಸುಂದರ್‌ಲಾಲ್ ಬಹುಗುಣ


