Homeಮುಖಪುಟಕೋವಿಶೀಲ್ಡ್ V/s ಕೋವ್ಯಾಕ್ಸಿನ್: ಎರಡು ಲಸಿಕೆಗಳ ಬಗ್ಗೆ ಸರ್ಕಾರಕ್ಕೇ ಗೊಂದಲವಿದೆ, ಕುಮಾರಸ್ವಾಮಿಯವರು ಗಮನಿಸಲಿ!

ಕೋವಿಶೀಲ್ಡ್ V/s ಕೋವ್ಯಾಕ್ಸಿನ್: ಎರಡು ಲಸಿಕೆಗಳ ಬಗ್ಗೆ ಸರ್ಕಾರಕ್ಕೇ ಗೊಂದಲವಿದೆ, ಕುಮಾರಸ್ವಾಮಿಯವರು ಗಮನಿಸಲಿ!

- Advertisement -
- Advertisement -

ಜನವರಿಯಲ್ಲಿ ಲಸಿಕಾ ಅಭಿಯಾನ ಪ್ರಾರಂಭವಾದಾಗಿನಿಂದ, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡನ್ನೂ ಒಳಗೊಂಡ 23,000 ಪ್ರತಿಕೂಲ ಘಟನೆಗಳು ವರದಿಯಾಗಿವೆ. ಅವುಗಳಲ್ಲಿ 700 ಗಂಭೀರವಾಗಿವೆ……

ಇಲ್ಲಿ ನೋಡಿದರೆ, ಮಾಜಿ ಸಿಎಂ ಕುಮಾರಸ್ವಾಮಿಯವರು, “ಲಸಿಕೆ ವಿಚಾರವಾಗಿ ಕಾಂಗ್ರೆಸ್ ಅನುಮಾನದ ಮಾತುಗಳನ್ನು ಆಡಲಿಲ್ಲವೇ? ಭಾರತದ್ದೇ ಕೋವ್ಯಾಕ್ಸಿನ್‌ನ ಬಗ್ಗೆ ಅಪಪ್ರಚಾರ ಮಾಡಲಿಲ್ಲವೇ? ನಮ್ಮದೇ ಲಸಿಕೆಯನ್ನು ನೀವು ಪ್ರೋತ್ಸಾಹಿಸಬೇಕಿತ್ತೋ ಇಲ್ಲವೋ? ಅದು ಬಿಟ್ಟು ನೀವು ಮಾಡಿದ್ದೇನು? ಅಡಿಗಡಿಗೆ ಲಸಿಕೆ ಮೇಲೆ ಅನುಮಾನ. ಈ ಮೂಲಕ ಭಾರತೀಯ ವಿಜ್ಞಾನಿಗಳ ಅಪಮಾನ” ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಕೋವಿಶೀಲ್ಡ್ ಮೊದಲ ಡೋಸ್ ನೀಡುವ ರಕ್ಷಣೆಯು ದೀರ್ಘಕಾಲ ಉಳಿಯುತ್ತದೆ ಮತ್ತು ಆದ್ದರಿಂದ ಎರಡನೇ ಡೋಸ್ ನೀಡುವ ಸಮಯವನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಇತ್ತೀಚೆಗೆ ಒಪ್ಪಿಕೊಂಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕೋವಿಡ್ ವಿರುದ್ಧ ತಮ್ಮ ವ್ಯಾಕ್ಸಿನೇಷನ್‌ಗಾಗಿ ಕಾಯುತ್ತಿರುವ ಜನರು ಸೀರಮ್ ಕಂಪನಿಯ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ನಡುವೆ ಯಾವ ಲಸಿಕೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಗಲಿಬಿಲಿಗೆ ಬಿದ್ದಿದ್ದಾರೆ.

ಅವೆರಡನ್ನು ವೈಜ್ಞಾನಿಕವಾಗಿ ಪರಸ್ಪರ ಹೋಲಿಸಲಾಗುವುದಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸಿದೆ. “ಲಭ್ಯವಿರುವ ಎರಡು ಲಸಿಕೆಗಳ ನಡುವೆ ನೇರ ವೈಜ್ಞಾನಿಕ ಹೋಲಿಕೆ ಇಲ್ಲ. ಆದ್ದರಿಂದ ಒಂದನ್ನು ಇನ್ನೊಂದರ ಮೇಲೆ ಆಯ್ಕೆ ಮಾಡಲು ಸಾಧ್ಯವಿಲ್ಲ. ಎರಡೂ ಲಸಿಕೆಗಳು ಸೋಂಕನ್ನು ತಡೆಗಟ್ಟುವಲ್ಲಿ ಮತ್ತು ತೀವ್ರ ಅನಾರೋಗ್ಯವನ್ನು ತಡೆಗಟ್ಟುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಯಾವುದನ್ನಾದರೂ ನೀವು ಆಯ್ಕೆ ಮಾಡಬಹುದು, ನಿಮ್ಮ ಲಸಿಕೆ ಕೇಂದ್ರದಲ್ಲಿ ಯಾವುದು ಲಭ್ಯವಿದೆಯೋ ಅದನ್ನು ಪಡೆಯಿರಿ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಎರಡೂ ಲಸಿಕೆಗಳು ಪ್ರಸ್ತುತ ದೇಶದಲ್ಲಿ ಲಭ್ಯವಿದ್ದರೂ ಒಂದೇ ಕೇಂದ್ರದಲ್ಲಿ ಲಭ್ಯವಿಲ್ಲ. ಕೋ-ವಿನ್ ಅಪ್ಲಿಕೇಶನ್‌ನಲ್ಲಿ ಜನರು ತಮ್ಮ ಲಸಿಕೆ ಆದ್ಯತೆಗೆ ಅನುಗುಣವಾಗಿ ಕೇಂದ್ರಗಳನ್ನು ಆಯ್ಕೆ ಮಾಡಬಹುದು. ಏಕೆಂದರೆ ಕೇಂದ್ರಗಳು ತಮ್ಮ ಸೈಟ್‌ನಲ್ಲಿರುವ ಲಸಿಕೆಯ ಹೆಸರನ್ನು ಪ್ರದರ್ಶಿಸುತ್ತಿವೆ.

ಕೋವಿಶೀಲ್ಡ್ ಲಸಿಕೆಯ ಪ್ರಯೋಗದ ನಂತರ ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆಯ 26 ಸಂಭಾವ್ಯ ಪ್ರಕರಣಗಳು ವರದಿಯಾಗಿವೆ ಎಂದು ಸರ್ಕಾರ ಇತ್ತೀಚೆಗೆ ಹೇಳಿದೆ. ಜನವರಿಯಲ್ಲಿ ಲಸಿಕಾ ಅಭಿಯಾನ ಪ್ರಾರಂಭವಾದಾಗಿನಿಂದ, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡನ್ನೂ ಒಳಗೊಂಡ 23,000 ಪ್ರತಿಕೂಲ ಘಟನೆಗಳು ವರದಿಯಾಗಿವೆ. ಮತ್ತು 700 ಗಂಭೀರವಾಗಿವೆ ಎಂದು ವರದಿಯಾಗಿದೆ.

ಪ್ರತಿ ಡೋಸ್‌ನ್ ಬೆಲೆಗೆ ಸಂಬಂಧಿಸಿದಂತೆ, ಕೋವಿಶೀಲ್ಡ್ ಕೋವ್ಯಾಕ್ಸಿನ್‌ಗಿಂತ ಅಗ್ಗವಾಗಿ ಬರುತ್ತದೆ. ರಷ್ಯಾ ನಿರ್ಮಿತ ಸ್ಪುಟ್ನಿಕ್-ವಿ ಅನ್ನು ಶೀಘ್ರದಲ್ಲೇ ಪಟ್ಟಿಗೆ ಸೇರಿಸಲು ಕೇಂದ್ರವು ಆಶಿಸುತ್ತಿದೆ.

‘ಕೋವಿಶೀಲ್ಡ್‌ನ ಮೊದಲ ಡೋಸ್ ನೀಡುವ ರಕ್ಷಣೆಯು ದೀರ್ಘಕಾಲ ಉಳಿಯುತ್ತದೆ, ಅದಕ್ಕಾಗಿಯೇ ಎರಡನೇ ಡೋಸ್ ಸಮಯವು 12 ರಿಂದ 6 ವಾರಗಳವರೆಗೆ ವಿಳಂಬವಾಗಿದೆ’ ಎಂದು ಕಂಡುಹಿಡಿದಿದ್ದನ್ನು ಸರ್ಕಾರ ಇತ್ತೀಚೆಗೆ ಒಪ್ಪಿಕೊಂಡಿದೆ. ಆದರೆ ಕೋವ್ಯಾಕ್ಸಿನ್ ಎರಡನೆ ಡೋಸ್ ಅನ್ನು ಈಗಿರುವ 28 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕಾಗಿದೆ.

ಎರಡೂ ಲಸಿಕೆಗಳ ಸಂಯೋಜನೆಯು ವಿಭಿನ್ನವಾಗಿದೆ. ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯಾದ ಕೋವಿಶೀಲ್ಡ್ ಅನ್ನು ಚಿಂಪಾಂಜಿಗಳಿಗೆ ಸೋಂಕು ತಗುಲಿಸುವ ಸಾಮಾನ್ಯ ಶೀತ ವೈರಸ್‌ನ ದುರ್ಬಲಗೊಂಡ ಆವೃತ್ತಿಯಿಂದ ತಯಾರಿಸಲಾಗುತ್ತದೆ. ಇದು SARS-CoV-2 ವೈರಸ್ ಪ್ರೋಟೀನ್‌ನ ಆನುವಂಶಿಕ ವಸ್ತುಗಳನ್ನು ಸಹ ಒಳಗೊಂಡಿದೆ. ಮತ್ತೊಂದೆಡೆ, ಕೋವಾಕ್ಸಿನ್ ಅನ್ನು ನಿಷ್ಕ್ರಿಯ ಕೊರೊನಾ ವೈರಸ್‌ನಿಂದ ಅಭಿವೃದ್ಧಿಪಡಿಸಲಾಗಿದೆ.

ಯಾವ ಆಸ್ಪತ್ರೆ ಅಥವಾ ಲಸಿಕಾ ಕೇಂದ್ರಗಳಲ್ಲಿ ಯಾವುದು ಲಭ್ಯ ಎಂದು ಇಂಟರನೆಟ್ ತಿಳಿಯದವರಿಗೆ ಹೇಗೆ ಗೊತ್ತಾಗುತ್ತದೆ? ಸರ್ಕಾರಕ್ಕೇ ಸರಿಯಾದ ವಿವರಣೆ ಗೊತ್ತಿಲ್ಲ.
ಈಗ ಮೊದಲ ಸುತ್ತಿನಲ್ಲಿ ಹಳ್ಳಿಗಳಿಗೆ ಹೋಗಿ ಲಸಿಕೆ ಹಾಕಲಾಗಿತು. ಅವರು ಕೋವಿಶೀಲ್ಡ್ ಹಾಕಿದರೋ, ಕೋವ್ಯಾಕ್ಸಿನ್ ಹಾಕಿದರೋ ಅದು ಜನರಿಗೆ ಗೊತ್ತಿರುತ್ತದೆಯೇ? ಆದರೆ, ಎರಡನೇ ಲಸಿಕೆ ಹಾಕಲು ಅವರು ಹಳ್ಳಿಗಳಿಗೆ ಬರುತ್ತಿಲ್ಲ.

ಇಂತಹ ಸಂದರ್ಭದಲ್ಲಿ ಜನರೇ ಸ್ವಯಂ ನಿರ್ಧಾರದಿಂದ ಲಸಿಕಾ ಕೇಂದ್ರವೊಂದಕ್ಕೆ ಹೋದರೆ, ಅವರಿಗೆ ಬೇರೆ ಲಸಿಕೆ ನೀಡಿದರೆ ಏನಾಗುತ್ತದೆ? ಇದು ಅಡ್ಡ ಪರಿಣಾಮ ಬೀರಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಲಸಿಕೆಗಳ ಬಗ್ಗೆ ಸರ್ಕಾರಕ್ಕೇ ಸ್ಪಷ್ಟ ನಿಲುವಿಲ್ಲ ಮತ್ತು ಲಸಿಕೆಗಳ ಕೊರತೆಯಿದೆ ಎಂಬುದನ್ನು ನಾವು ನೆನಪಿಡಬೇಕು. ಎರಡನೇ ಲಸಿಕೆ ಸಿಗದೇ ಒದ್ದಾಡುವವರ ಬಗ್ಗೆ, ಮೊದಲ ಲಸಿಕೆಗಾಗಿ ಪರದಾಡುತ್ತಿರುವ 18-44 ವಯೋಮಾನದವರ ಬಗ್ಗೆ ಯಾರೂ ಯೋಚಿಸುತ್ತಿಲ್ಲ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? – ಕಾಂಗ್ರೆಸ್ ಅಭಿಯಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...