Homeಅಂತರಾಷ್ಟ್ರೀಯ‘ಗಾಝಾದಲ್ಲಿ ಈದ್‌ ಪ್ರಾರಂಭ!’ - ಕದನ ವಿರಾಮ ಘೋಷಿಸಿದ ಇಸ್ರೇಲ್‌

‘ಗಾಝಾದಲ್ಲಿ ಈದ್‌ ಪ್ರಾರಂಭ!’ – ಕದನ ವಿರಾಮ ಘೋಷಿಸಿದ ಇಸ್ರೇಲ್‌

- Advertisement -
- Advertisement -

ಫ್ಯಾಲೆಸ್ತೀನ್‌‌ನ ಗಾಝಾದಲ್ಲಿ ನಡೆಯುತ್ತಿರುವ 11 ದಿನಗಳ ಸಂಘರ್ಷವನ್ನು ನಿಲ್ಲಿಸುವ ಒಪ್ಪಂದಕ್ಕೆ, ಇಸ್ರೇಲ್ ಮತ್ತು ಹಮಾಸ್ ನಡುವೆ ಈಜಿಫ್ಟ್‌‌ ಮದ್ಯವರ್ತಿಯಾದ ನಂತರ ಶುಕ್ರವಾರ ಮುಂಜಾನೆ ಗಾಜಾ ಪ್ರದೇಶದಲ್ಲಿ ಕದನ ವಿರಾಮ ಜಾರಿಗೆ ಬಂದಿದೆ.

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು, “ಭದ್ರತಾ ಕ್ಯಾಬಿನೆಟ್‌ ಬೇಷರತ್ತಾದ… ಕದನ ವಿರಾಮಕ್ಕಾಗಿ ಈಜಿಪ್ಟಿನ ಉಪಕ್ರಮವನ್ನು ಸ್ವೀಕರಿಸುವ ಶಿಫಾರಸುಗಳನ್ನು ಸರ್ವಾನುಮತದಿಂದ ಸ್ವೀಕರಿಸಿದೆ” ಎಂದು ಹೇಳಿದೆ.

ಪ್ಯಾಲೇಸ್ಟಿನಿಯನ್ ಗುಂಪುಗಳಾದ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್‌ ಮೂವ್ಮೆಂಟ್‌‌ ಕೂಡಾ ಕದನ ವಿರಾಮವನ್ನು ಶುಕ್ರವಾರ ಮುಂಜಾನೆ 2:00 ಗಂಟೆಗೆ (ಗುರುವಾರ 23:00 GMT) ಜಾರಿಗೆ ತರಲಿದೆ ಎಂದು ಹೇಳಿಕೆಯಲ್ಲಿ ದೃಡಪಡಿಸಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಕೊರೊನಾ ನಿರ್ವಹಣೆ ಬಗ್ಗೆ ಸಿಎಂ ಆದಿತ್ಯನಾಥ್‌ಗೆ ಪತ್ರ ಬರೆದ ಪ್ರಿಯಾಂಕಾ ಗಾಂಧಿ

“ಇಸ್ರೇಲ್‌ನ ಈ ಘೋಷಣೆ ಪ್ರಧಾನಿ ನೆತನ್ಯಾಹು ಅವರ ಸೋಲು ಮತ್ತು ಪ್ಯಾಲೇಸ್ತೀನಿ ಜನರ ಜಯ” ಎಂದು ಹಮಾಸ್‌‌‌ನ ಅರಬ್ ಮತ್ತು ಇಸ್ಲಾಮಿಕ್ ಸಂಬಂಧಗಳ ಬ್ಯೂರೋದ ಸದಸ್ಯ ಅಲಿ ಬರಾಕೆಹ್ ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮೇ 10 ರಂದು ಹಿಂಸಾಚಾರ ಭುಗಿಲೆದ್ದ ನಂತರ 65 ಮಕ್ಕಳು ಮತ್ತು 39 ಮಹಿಳೆಯರು ಸೇರಿದಂತೆ 232 ಪ್ಯಾಲೆಸ್ತೀನಿ ಜನರು ಸಾವನ್ನಪ್ಪಿದ್ದಾರೆ. 1,900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕನಿಷ್ಠ 160 ಇಸ್ರೇಲ್‌ನ ಯೋಧರನ್ನು ಗಾಝಾದಲ್ಲಿ ಕೊಲ್ಲಾಗಿದೆ ಎಂದು ಇಸ್ರೇಲ್ ಹೇಳಿದ್ದು, ಆದರೆ ಅದು ಯಾವುದೆ ಸಾಕ್ಷ್ಯಾಧಾರಗಳನ್ನು ನೀಡಿಲ್ಲ. ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಮೂವ್ಮೆಂಟ್‌ ಕೂಡಾ ತಮ್ಮ ಕನಿಷ್ಠ 20 ಯೋಧರನ್ನು ಕೊಲ್ಲಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ‘ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

ಈ ಒಪ್ಪಂದವು 2014 ರಿಂದೀಚೆಗೆ ನಡೆಯುತ್ತಿರುವ ಕೆಲವು ಭೀಕರ ಹೋರಾಟಗಳನ್ನು ಕೊನೆಗೊಳಿಸುತ್ತದೆ. ಇದು ಗಾಝಾದಲ್ಲಿ ವ್ಯಾಪಕ ವಿನಾಶಕ್ಕೆ ಕಾರಣವಾಗಿದ್ದು, ಇಸ್ರೇಲ್‌ನಲ್ಲಿ ದೈನಂದಿನ ಜನ ಜೀವನದ ಬಹುಭಾಗವನ್ನು ನಿಲ್ಲಿಸಿತ್ತು.

ಕದನ ವಿರಾಮವನ್ನು ‘ಗಾಝಾದಲ್ಲಿ ಇಸ್ರೇಲ್‌ನ ಸೋಲು’ ಎಂದು ಹಮಾಸ್‌ ಬಣ್ಣಿಸಿದ್ದು ಸಾವಿರಾರು ಪ್ಯಾಲೆಸ್ತೀನಿಯರು ಗಾಝಾ ನಗರದ ಬೀದಿಗಳಲ್ಲಿ ಜಮಾಯಿಸಿ ಫ್ಯಾಲೆಸ್ತೀನ್‌ ಧ್ವಜಗಳನ್ನು ಬೀಸಿ ಸಂಭ್ರಮ ಆಚರಿಸಿದರು.

ಪ್ಯಾಲೆಸ್ತೀನಿ ಹೋರಾಟಗಾರ, ಪತ್ರಕರ್ತ ಮಹ್ಮೋದ್ ಅವರು, ಇದನ್ನು ಫ್ಯಾಲೆಸ್ತೀನಿಗಳ ಜಯ ಎಂದು ಬಣ್ಣಸಿದ್ದಾರೆ. “ಗಾಝಾ ಪಟ್ಟಿಯ ಹೋರಾಟಕ್ಕೆ ಜಯ ಸಿಕ್ಕಿದೆ. ಗಾಝಾದಲ್ಲಿ ‘ಈದ್‌’ ಈಗ ಪ್ರಾರಂಭವಾಯಿತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?’- ಸಿದ್ದರಾಮಯ್ಯ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...