Homeಮುಖಪುಟನಾಯಕತ್ವ ವ್ಯಕ್ತಿಯೊಬ್ಬರ ‘ದೈವಿಕ ಹಕ್ಕಲ್ಲ’: ರಾಹುಲ್ ಗಾಂಧಿ ವಿರುದ್ದ ಪ್ರಶಾಂತ್‌ ಕಿಶೋರ್‌ ವಾಗ್ದಾಳಿ

ನಾಯಕತ್ವ ವ್ಯಕ್ತಿಯೊಬ್ಬರ ‘ದೈವಿಕ ಹಕ್ಕಲ್ಲ’: ರಾಹುಲ್ ಗಾಂಧಿ ವಿರುದ್ದ ಪ್ರಶಾಂತ್‌ ಕಿಶೋರ್‌ ವಾಗ್ದಾಳಿ

- Advertisement -
- Advertisement -

ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು 90% ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸೋತಿದೆ. ಅದರ ನಾಯಕತ್ವವು ವ್ಯಕ್ತಿಯೊಬ್ಬರ ‘ದೈವಿಕ ಹಕ್ಕಲ್ಲ’ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ರಾಹುಲ್ ಗಾಂಧಿಯವರ ವಿರುದ್ಧ ತಮ್ಮ ತೀಕ್ಷ್ಣವಾದ ವಾಗ್ದಾಳಿ ನಡೆಸಿದ್ದಾರೆ. ಪ್ರಶಾಂತ್‌ ಕಿಶೋರ್‌ ತಿಂಗಳ ಹಿಂದೆಯಷ್ಟೇ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಬುಧವಾರ ಸಂಜೆ ಶರದ್‌ ಪವಾರ್‌ ಅವರನ್ನು ಭೇಟಿ ಮಾಡಿದ್ದ ಮಮತಾ ಬ್ಯಾನರ್ಜಿ ಕೂಡಾ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದರು.

“ಕಾಂಗ್ರೆಸ್ ಪ್ರತಿನಿಧಿಸುವ ಚಿಂತನೆ ಮತ್ತು ಜಾಗವು ಪ್ರಬಲ ಪ್ರತಿಪಕ್ಷಕ್ಕೆ ಅತ್ಯಗತ್ಯ. ಆದರೆ ಕಾಂಗ್ರೆಸ್‌ನ ನಾಯಕತ್ವವು ವ್ಯಕ್ತಿಯೊಬ್ಬರ ದೈವಿಕ ಹಕ್ಕಲ್ಲ. ವಿಶೇಷವಾಗಿ ಕಳೆದ 10 ವರ್ಷಗಳಲ್ಲಿ ಪಕ್ಷವು 90% ಕ್ಕಿಂತ ಹೆಚ್ಚು ಚುನಾವಣೆಗಳನ್ನು ಸೋತಿದೆ. ವಿರೋಧ ಪಕ್ಷವು ತನ್ನ ನಾಯಕತ್ವವನ್ನು ಪ್ರಜಾಸತ್ತಾತ್ಮಕವಾಗಿವ ನಿರ್ಧರಿಸಲಿ.” ಎಂದು ಪ್ರಶಾಂತ್ ಕಿಶೋರ್ ಇಂದು ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಶರದ್ ಪವಾರ್‌ ಮತ್ತು ಪ್ರಶಾಂತ್‌ ಕಿಶೋರ್‌ 2 ನೇ ಭೇಟಿ; 2024 ರ ಚುನಾವಣೆಗೆ ವಿರೋಧ ಪಕ್ಷಗಳು ಸಜ್ಜು?

ಬುಧವಾರದಂದು ಮುಂಬೈನಲ್ಲಿ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರ ಭೇಟಿಯ ಸಂದಂರ್ಭ ಮಾತನಾಡಿದ್ದ ಮಮತಾ ಬ್ಯಾನರ್ಜಿ, “ಏನೂ ಮಾಡದೆ ಅರ್ಧ ಸಮಯ ವಿದೇಶದಲ್ಲಿದ್ದರೆ, ರಾಜಕೀಯ ಮಾಡುವುದು ಹೇಗೆ? ರಾಜಕೀಯಕ್ಕಾಗಿ ನಿರಂತರ ಪ್ರಯತ್ನ ಇರಬೇಕು” ಎಂದು ಕಾಂಗ್ರೆಸ್ ನಾಯಕತ್ವದ ಬಗ್ಗೆ ಟೀಕೆ ಮಾಡಿದ್ದರು.

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ ಜೊತೆಗೆ ಮಾತುಕತೆ ವಿಫಲ ಆದಾಗಿನಿಂದ ‘ಗಾಂಧಿ’ ಕುಟುಂಬದ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.

ಅಕ್ಟೋಬರ್‌ನಲ್ಲಿ ಕೂಡಾ ಪ್ರಶಾಂತ್‌‌ ಕಿಶೋರ್ ಅವರು ಗೋವಾದಲ್ಲಿ, “ಹಲವು ದಶಕಗಳವರೆಗೆ ಬಿಜೆಪಿ ಎಲ್ಲಿಗೂ ಹೋಗುವುದಿಲ್ಲ. ಆದರೆ ರಾಹುಲ್ ಗಾಂಧಿಯ ಸಮಸ್ಯೆಯೆಂದರೆ ಅವರು ಅದನ್ನು ಅರಿತುಕೊಂಡಿಲ್ಲ” ಎಂದು ಹೇಳಿದ್ದರು.

“ಬಿಜೆಪಿ ಭಾರತದ ರಾಜಕೀಯದ ಕೇಂದ್ರವಾಗಲಿದೆ… ಈ ಹಿಂದೆ ಕಾಂಗ್ರೆಸ್‌ಗೆ ಇದ್ದಂತೆ, ಬಿಜೆಪಿ ಕೂಡಾ ಗೆದ್ದರೂ, ಸೋತರೂ ಎಲ್ಲಿಯೂ ಹೋಗುವುದಿಲ್ಲ. ಆದರೆ ಸಮಸ್ಯೆ ಇರುವುದು ರಾಹುಲ್ ಗಾಂಧಿಗೆ. ಬಹುಶಃ ಜನರು ಬಿಜೆಪಿಯನ್ನು ಎಸೆಯುತ್ತಾರೆ ಎಂದು ಅವರು ಭಾವಿಸುತ್ತಾರೆ, ಅದು ಆಗುತ್ತಿಲ್ಲ” ಎಂದು ಪ್ರಶಾಂತ್‌ ಕಿಶೋರ್‌ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ವಿಪಕ್ಷಗಳನ್ನು ಭೇಟಿಯಾಗುತ್ತಿರುವ ಪ್ರಶಾಂತ್‌ ಕಿಶೋರ್‌: ಪರ್ಯಾಯ ಒಕ್ಕೂಟದ ಚರ್ಚೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Ahamed ಪಟೇಲ್ ರ ಸ್ಥಾನವನ್ನು ಕರುಣಿಸಿದ್ದರೆ, ಬಹುಶಃ ರಾಹುಲ್ ಬಗ್ಗೆ Prashanth Kishor ರ ನಿಲುವು ಬೇರೆಯದೇ ಆಗಿರುತ್ತಿತ್ತು

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...