ಶರದ್ ಪವಾರ್‌ ಮತ್ತು ಪ್ರಶಾಂತ್‌ ಕಿಶೋರ್‌ 2 ನೇ ಭೇಟಿ; 2024 ಕ್ಕೆ ತೃತೀಯ ರಂಗ ಸಜ್ಜು? | Naanu gauri

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಪ್ರಶಾಂತ್‌ ಕಿಶೋರ್‌ ಅವರನ್ನು ಸೋಮವಾರ ಭೇಟಿಯಾಗಿದ್ದಾರೆ. ಇದು ಈ ತಿಂಗಳಲ್ಲಿ ಅವರ ನಡುವೆ ನಡೆಯುತ್ತಿರುವ ಎರಡನೆ ಸಭೆಯಾಗಿದೆ. ಮುಂದಿನ 2024 ರ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ರಚನೆಯಾಗಲಿದೆ ಎನ್ನಲಾಗಿರುವ ತೃತೀಯ ರಂಗದ ಊಹಾಪೋಹಗಳಿಗೆ ಈ ಭೇಟಿಯು ಮತ್ತಷ್ಟು ಪುಷ್ಠಿ ನೀಡಿದೆ.

ಸಭೆಯ ಬೆನ್ನಿಗೆ ಶರಾದ್ ಪವಾರ್‌ ನಾಳೆ ವಿರೋಧ ಪಕ್ಷಗಳ ಸಭೆಯನ್ನು ಕರೆದಿದ್ದಾರೆ. ನಾಳಿನ ಸಭೆಯು 2024 ರ ಲೋಕ ಸಭಾ ಚುನಾವಣೆ ಮಾತ್ರವಲ್ಲದೆ, ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಜಂಟಿ ಹೋರಾಟ ನಡೆಸುವ ಬಗ್ಗೆ ಕೂಡಾ ಗಮನ ಹರಿಸಲಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಪ್ರಶಾಂತ್ ಕಿಶೋರ್ ಇಲ್ಲದೆಯೂ TMC ಗಾಗಿ ಕೆಲಸ ಮಾಡಲಿದೆ I-PAC!

ಇಂದು ಪ್ರಶಾಂತ್‌ ಕಿಶೋರ್‌ ಮತ್ತು ಶರದ್‌ ಪವಾರ್ ನಡುವಿನ ನಿವಾಸದಲ್ಲಿ ಆಂತರಿಕ ಚರ್ಚೆಗಳು ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದವು ಎಂದು ಮೂಲಗಳು ತಿಳಿಸಿವೆ. ಇಷ್ಟೇ ಅಲ್ಲದೆ ಎನ್‌ಸಿಪಿಯ ಸಾಮಾನ್ಯ ಸಭೆಯು ಕೂಡಾ ನಾಳೆಯೆ ಅವರ ನಿವಾಸದಲ್ಲಿ ನಡೆಯಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಶಾಂತ್‌‌ ಕಿಶೋರ್, ಜೂನ್ 11 ರಂದು ಶರದ್‌ ಪವಾರ್ ಅವರನ್ನು ಭೇಟಿ ಮಾಡಿದ್ದು, ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಸೇರುವ ಮಾತುಕತೆಗೆ ಉತ್ತೇಜನ ನೀಡಿತ್ತು.

ಮಾಜಿ ಹಣಕಾಸು ಸಚಿವ ಪ್ರಸ್ತುತ ಟಿಎಂಸಿ ಮುಖಂಡರಾಗಿರುವ ಯಶ್ವಂತ್ ಸಿನ್ಹಾ, ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ಮನೋಜ್ ಝಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಸಂಜಯ್ ಸಿಂಗ್ ಕೂಡ ಮಂಗಳವಾರ ಶರದ್‌ ಪವಾರ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಖಾಸಗಿ ಭೇಟಿಯೆಂದ ಪ್ರಶಾಂತ್ ಕಿಶೋರ್: ವಿರೋಧ ಪಕ್ಷಗಳ ಒಗ್ಗಟ್ಟು ಎಂದ NCPಯ ನವಾಬ್ ಮಲ್ಲಿಕ್!

2014 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಪರವಾಗಿ ಕೆಲಸ ಮಾಡಿದ್ದ ಪ್ರಶಾಂತ್‌‌ ಕಿಶೋರ್ ನಂತರ ಅವರೊಂದಿಗೆ ಮುನಿಸಿಕೊಂಡಿದ್ದರು. ಅದರ ನಂತರ ಅವರು ಹಲವಾರು ಬಿಜೆಪಿ ಮೈತ್ರಿ ಕೂಟದ ವಿರುದ್ದವಾಗಿ ಚುನಾವಣೆಗಳಲ್ಲಿ ಕೆಲಸ ಮಾಡಿದ್ದರು.

ಪ್ರಶಾಂತ್‌ ಕಿಶೋರ್‌ ಅವರು ಟಿಎಂಸಿಗೆ ಮಾತ್ರವಲ್ಲದೆ, ತಮಿಳುನಾಡಿನ ಡಿಎಂಕೆಗೆ ಕೂಡಾ ಅವರು ಚುನಾವಣಾ ಕಾರ್ಯತಂತ್ರವನ್ನು ಮಾಡಿದ್ದರು. 2015 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ-ಯುನೈಟೆಡ್ (ಜೆಡಿ-ಯು) ಮತ್ತು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮೈತ್ರಿಕೂಟಕ್ಕೂ ಅವರು ಚುನಾವಣಾ ತಂತ್ರಗಾರರಾಗಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ: ಶರದ್ ಪವಾರ್ ಭೇಟಿಯಾದ ಪ್ರಶಾಂತ್ ಕಿಶೋರ್: 2024ರಲ್ಲಿ ಮೋದಿ ವಿರುದ್ಧ ಮೈತ್ರಿಕೂಟಕ್ಕೆ ಸಿದ್ದತೆ?

LEAVE A REPLY

Please enter your comment!
Please enter your name here