ಲೆಬನಾನಿನ ಬಂಡುಕೋರ ಗುಂಪು ಹಿಜ್ಬುಲ್ಲಾದ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರ ಹತ್ಯೆಯ ಒಂದು ದಿನದ ನಂತರ, ಬೈರುತ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ಸಂಘಟನೆಯ ಮತ್ತೊಬ್ಬ ಉನ್ನತ ನಾಯಕ ನಬಿಲ್ ಕೌಕ್ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.ಇಸ್ರೇಲ್ ದಾಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಇರಾನ್ ಬೆಂಬಲಿತ ಬಂಡುಕೋರ ಸಂಘಟನೆಯೊಳಗಿನ ಹಿರಿಯ ವ್ಯಕ್ತಿಯಾದ ಕೌಕ್‌ನ ಹತ್ಯೆಯನ್ನು ಎಕ್ಸ್‌ನಲ್ಲಿ ಘೋಷಿಸಿದೆ. “ಮಿಲಿಟರಿ ಗುಪ್ತಚರ ಮಾರ್ಗದರ್ಶನದಲ್ಲಿ ಇಸ್ರೇಲಿ ಫೈಟರ್ ಜೆಟ್‌ಗಳು ಆಯೋಜಿಸಿದ ನಿಖರವಾದ ವೈಮಾನಿಕ ದಾಳಿಯಲ್ಲಿ ನಬೀಲ್ ಕೌಕ್ ಅವರನ್ನು ಹತ್ಯೆ ಮಾಡಲಾಗಿದೆ” ಎಂದು ಪೋಸ್ಟ್ ಹೇಳಿದೆ.
ಇದನ್ನೂಓದಿ: ದೆಹಲಿ: ವೇಗ ತಗ್ಗಿಸುವಂತೆ ಹೇಳಿದ ಪೊಲೀಸ್‌ಗೆ ಗುದ್ದಿದ ಕಾರು ಚಾಲಕ; ಗಂಭೀರ ಗಾಯಗೊಂಡಿದ್ದ ಪೇದೆ ಸಾವು
ಹೆಜ್ಬೊಲ್ಲಾ ಬಂಡುಕೋರ ಗುಂಪಿನ ಪ್ರಮುಖ ಕಮಾಂಡರ್ ಆಗಿದ್ದ ನಬಿಲ್ ಕೌಕ್, ಗುಂಪಿನ ಪ್ರಿವೆಂಟಿವ್ ಸೆಕ್ಯುರಿಟಿ ಘಟಕದ ಮುಖ್ಯಸ್ಥರಾಗಿದ್ದರು ಮತ್ತು ಅದರ ಕೇಂದ್ರ ಮಂಡಳಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದರು. ಅವರನ್ನು ನಸ್ರಲ್ಲಾ ಅವರ ನಂತರದ ಸಂಭಾವ್ಯ ಉತ್ತರಾಧಿಕಾರಿ ಎಂದು ಭಾವಿಸಲಾಗಿತ್ತು.
ನಬೀಲ್ ಕೌಕ್ ಅವರು 1980 ರ ದಶಕದಿಂದಲೂ ಹಿಜ್ಬೊಲ್ಲಾದ ಸದಸ್ಯರಾಗಿದ್ದರು ಮತ್ತು ಈ ಹಿಂದೆ ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬೊಲ್ಲಾದ ಮಿಲಿಟರಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. 2020 ರಲ್ಲಿ ಅಮೆರಿಕ ಅವರ ವಿರುದ್ಧ ನಿರ್ಬಂಧಗಳನ್ನು ಘೋಷಿಸಿತ್ತು.ಇಸ್ರೇಲ್ ದಾಳಿ
ಇಸ್ರೇಲ್ ಘೋಷಣೆಗೆ ಹಿಜ್ಬುಲ್ಲಾ ತಕ್ಷಣಕ್ಕೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿನ ವಾರಗಳಲ್ಲಿ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಹಲವಾರು ಹಿರಿಯ ಹಿಜ್ಬುಲ್ಲಾ ಕಮಾಂಡರ್‌ಗಳು ಕೊಲ್ಲಲ್ಪಟ್ಟಿದ್ದಾರೆ. ಇದಕ್ಕೆ ಉತ್ತರವಾಗಿ ಉತ್ತರ ಇಸ್ರೇಲ್ ಮೇಲೆ ನೂರಾರು ರಾಕೆಟ್‌ಗಳು ಮತ್ತು ಕ್ಷಿಪಣಿಗಳನ್ನು ಹಾರಿಸುವುದನ್ನು ಹಿಜ್ಬುಲ್ಲಾ ಮುಂದುವರಿಸಿದೆ. ಆದರೆ ಈ ದಾಳಿಗಳಲ್ಲಿ ಹೆಚ್ಚಿನವುಗಳನ್ನು ಇಸ್ರೇಲ್ ಹೊಡೆದುರುಳಿಸಿದೆ ಎಂದು ವರದಿಯಾಗಿದೆ.
ವಿಡಿಯೊ ನೋಡಿ: ಪ್ರಬಲ ಜಾತಿ ಸಂಘಗಳಿಗೆ ಹಣ ಹರಿದುಬರುತ್ತೆ, ತಳಸಮುದಾಯಗಳ ಸಂಪನ್ಮೂಲ ಸಂಪೂರ್ಣ ಕಿತ್ತುಕೊಳ್ಳಲಾಗಿದೆ-ಸಿ.ಜಿ. ಲಕ್ಷ್ಮಿಪತಿ


