ಕೇರಳದ ಆಲಪ್ಪುಳ ಜಿಲ್ಲೆಯ ಪಡಯನಿವೆಟ್ಟಂ ದೇವಸ್ಥಾನದಲ್ಲಿ ನಡೆದ ಹಬ್ಬದ ವೇಳೆ ಹತ್ತನೇ ತರಗತಿಯ ವಿದ್ಯಾರ್ಥಿ ಅಭಿಮನ್ಯು ಎಂಬಾತನನ್ನು ಪುರುಷರ ಗುಂಪೊಂದು ಇರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಪಿಐ(ಎಂ) ಇದು “ರಾಜಕೀಯ ಕೊಲೆ” ಎಂದು ಆರೋಪಿಸಿದ್ದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಈ ಹತ್ಯೆಗೆ ಕಾರಣ ಎಂದು ದೂಷಿಸಿದೆ.
ಮಂಗಳವಾರ ರಾತ್ರಿ ದೇವಾಲಯದ ಉತ್ಸವ ಸಂದರ್ಭದಲ್ಲಿ 15 ವರ್ಷದ ಬಾಲಕನನ್ನು ಇರಿದು ಕೊಂದ ಪ್ರಕರಣದ ತನಿಖೆಯನ್ನು ಕೇರಳ ಪೊಲೀಸರು ತೀವ್ರಗೊಳಿಸಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ.
ಅಭಿಮನ್ಯು ಜೊತೆ ವಾದಕ್ಕೆ ಇಳಿದ ಪುರುಷರ ಗುಂಪೊಂದು ಅಭಿಮನ್ಯುವಿಗೆ ಇರಿದು ಕೊಲೆ ಮಾಡಿತ್ತು. ‘ನಾವು ಪ್ರಸ್ತುತ ಕೆಲವರನ್ನು ಪ್ರಶ್ನಿಸುತ್ತಿದ್ದೇವೆ. ಕೊಲೆಯ ಹಿಂದಿನ ಉದ್ದೇಶವನ್ನು ಪರಿಶೀಲಿಸಲಾಗುತ್ತಿದೆ” ಎಂದು ಸಂಬಂಧಪಟ್ಟ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಸಿಪಿಐ (ಎಂ) ಇದು “ರಾಜಕೀಯ ಕೊಲೆ” ಎಂದು ಆರೋಪಿಸಿದೆ. ಬಿಜೆಪಿ ಮತ್ತು ಕಾರ್ಯಕರ್ತರೇ ಈ ಕೊಲೆಗೆ ಕಾರಣ ಎಂದು ದೂಷಿಸಿದೆ. ಸಿಪಿಐ (ಎಂ)ನ ಅಂಗಸಂಘಟನೆ ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಎ ರಹೀಂ ಮಾತನಾಡಿ, “ಅಭಿಮನ್ಯು ಅವರ ಅಣ್ಣ ಪಕ್ಷದ ಕಾರ್ಯಕರ್ತನಾಗಿದ್ದಾನೆ. ಆತನನ್ನು ಹುಡುಕಿಬಂದಿ ಗುಂಪು ಆತ ಸಿಗದಿದ್ದಾಗ ಅಭಿಮನ್ಯುವಿನ ಮೇಲೆ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಇತರ ಇಬ್ಬರು ಎಸ್‌ಎಫ್‌ಐ ಕಾರ್ಯಕರ್ತರು ಸಹ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಹತ್ಯೆಯಲ್ಲಿ ತಮ್ಮ ಪಕ್ಷ ಅಥವಾ ಆರ್‌ಎಸ್‌ಎಸ್‌ನ ಯಾವುದೇ ಪಾತ್ರವನ್ನು ಬಿಜೆಪಿ ಜಿಲ್ಲಾ ನಾಯಕರು ನಿರಾಕರಿಸಿದ್ದಾರೆ. “ಇದೀಗ, ಇದು ರಾಜಕೀಯ ಪ್ರೇರಿತ ಕೊಲೆ ಅಥವಾ ಅಲ್ಲವೇ ಎಂದು ಹೇಳುವುದು ಅಕಾಲಿಕವಾಗಿದೆ. ಆದರೆ ತನಿಖೆ ಇನ್ನೂ ನಡೆಯುತ್ತಿದೆ ಮತ್ತು ನಾವು ಹೆಚ್ಚಿನ ಜನರನ್ನು ಪ್ರಶ್ನಿಸುತ್ತಿದ್ದೇವೆ. ಪ್ರಾಥಮಿಕ ತನಿಖೆಯ ನಂತರವೇ ನಾವು ಏನನ್ನೂ ನಿರ್ಣಾಯಕವಾಗಿ ಹೇಳಲು ಸಾಧ್ಯವಾಗುತ್ತದೆ” ಎಂದು ಸಬ್ ಇನ್ಸ್ಪೆಕ್ಟರ್ ಹೇಳಿದ್ದಾರೆ.
ಇದನ್ನೂ ಓದಿ: ಇದು ನೀಟ್ ಪರೀಕ್ಷೆ ನಡೆಸಲು ಸರಿಯಾದ ಸಮಯವೆ?: ಕೇಂದ್ರಕ್ಕೆ ಎಂ. ಕೆ. ಸ್ಟಾಲಿನ್


