ಕೊರೊನಾ ವೈರಸ್ ಸೋಂಕು ಆತಂಕಕಾರಿಯಾಗಿ ಹರಡುತ್ತಿರುವುದರಿಂದ ಕೇಂದ್ರವು ಸಿಬಿಎಸ್‌ಇ ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿರುವುದನ್ನು ಉಲ್ಲೇಖಿಸಿ, ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಸ್ನಾತಕೋತ್ತರ ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಸಲು ಇದು ಸರಿಯಾದ ಸಮಯವೇ ಎಂದು ಗುರುವಾರ ಪ್ರಶ್ನಿಸಿದ್ದಾರೆ.
ನೀಟ್-ಪಿಜಿ 2021 ರ ಪರೀಕ್ಷೆಯು ಏಪ್ರಿಲ್ 18 ರಂದು ನಿಗದಿಯಾಗಿದೆ.
ನೀಟ್ ಪರೀಕ್ಷೆಯ ಪ್ರಮುಖ ವಿರೋಧಿಯಾಗಿರುವ ಸ್ಟಾಲಿನ್, ಸಿಬಿಎಸ್ಇ ಹತ್ತನೇ ತರಗತಿಯ ಪರೀಕ್ಷೆಗಳನ್ನು ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಬೇಕಾಗಿ ರದ್ದುಗೊಳಿಸಿರುವ ಬಗ್ಗೆ ಗಮನಸೆಳೆದಿದ್ದಾರೆ.
ಇದನ್ನೂ ಓದಿ: ಬಂಗಾಳ: ಸೀತಾಲ್ಕುಚ್ಚಿ ಗೋಲಿಬಾರ್ ವಿಡಿಯೋ ವೈರಲ್, ಕೇಂದ್ರ ಪಡೆಗಳ ಮೇಲೆ ಸಂಶಯದ ಹುತ್ತ!
ಅವರು ತಮ್ಮ ಟ್ವೀಟ್‌ನಲ್ಲಿ, “ಕೊರೊನಾ ಎರಡನೇ ಅಲೆಯಿಂದಾಗಿ ಸಿಬಿಎಸ್‌ಇ ಪರೀಕ್ಷೆಗಳು ಈಗ ರದ್ದಾಗಿವೆ. ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಸಾವು ನೋವುಗಳೊಂದಿಗೆ, ನಮ್ಮ ವೈದ್ಯರು ರೋಗದ ವಿರುದ್ಧ ತೀವ್ರವಾಗಿ ಹೋರಾಡುತ್ತಿರುವಾಗ, ಪಿಜಿ ಕೋರ್ಸ್‌ಗಳಿಗೆ ನೀಟ್ ಪರೀಕ್ಷೆ ನಡೆಸಲು ಇದು ಸರಿಯಾದ ಸಮಯವೆ?” ಎಂದು ಅವರು ಪ್ರಶ್ನಿಸಿದ್ದಾರೆ.
CBSE exams have now got cancelled due to the second wave of #COVID19. With increasing cases and fatalities, when our doctors are fighting hard against all odds, is this the right time to hold National Eligibility Cum Entrance Test (NEET) for PG courses?@PMOIndia@drharshvardhan pic.twitter.com/ALMtqnLXLA
— M.K.Stalin (@mkstalin) April 15, 2021
ಕೊರೊನಾ ವೈರಸ್ ಪ್ರಕರಣಗಳ ಉಲ್ಬಣದಿಂದಾಗಿ ಸಿಬಿಎಸ್ಇ ಬುಧವಾರ 10 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿ 12 ನೇ ತರಗತಿಗೆ ಪರೀಕ್ಷೆಯನ್ನು ಮುಂದೂಡಿತ್ತು.
ಇದನ್ನೂ ಓದಿ: ಮತ್ತೆ ಶುರುವಾಯಿತು ವಲಸೆ: ಊರುಗಳಿಗೆ ತೆರಳಲು ಮುಂಬೈ ರೈಲು ನಿಲ್ದಾಣದಲ್ಲಿ ಜಮಾಯಿಸಿದ ಸಾವಿರಾರು ಜನ