Homeಅಂಕಣಗಳುನೂರರ ನೋಟ: ಸಾಗುವಳಿ ಭೂಮಿಯ ಅಕ್ರಮ ಸಕ್ರಮ ಅರ್ಜಿಗಳು ಶೀಘ್ರ ಇತ್ಯರ್ಥವಾಗಲಿ..

ನೂರರ ನೋಟ: ಸಾಗುವಳಿ ಭೂಮಿಯ ಅಕ್ರಮ ಸಕ್ರಮ ಅರ್ಜಿಗಳು ಶೀಘ್ರ ಇತ್ಯರ್ಥವಾಗಲಿ..

- Advertisement -
- Advertisement -

ಅಕ್ರಮವಾಗಿ ಸರ್ಕಾರಿ ಭೂಮಿ ಸಾಗುವಳಿಯನ್ನು ಮಾಡುತ್ತಿದ್ದ ಒಬ್ಬ ರೈತ ಅಕ್ರಮ ಸಕ್ರಮ ಅರ್ಜಿ ಸಲ್ಲಿಸಿ, ತಹಶೀಲ್ದಾರರ ಕಚೇರಿಗೆ ತಿರುಗಿ ತಿರುಗಿ ಬೇಸತ್ತು ಹತಾಶನಾಗಿ ತಹಶೀಲ್ದಾರರನ್ನೇ ಗುಂಡಿಕ್ಕಿ ಕೊಂದ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದರಲ್ಲಿ ತಹಶೀಲ್ದಾರನ ತಪ್ಪೇನೂ ಇಲ್ಲ. ಅಕ್ರಮ ಸಕ್ರಮ ಜಮೀನನ್ನು ರೈತನ ಹೆಸರಿಗೆ ಪಟ್ಟ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಪತ್ರ ಬರೆಯದ ಹೊರತು ಜಿಲ್ಲಾಧಿಕಾರಿಯಾಗಲಿ, ತಹಶೀಲ್ದಾರರಾಗಲಿ ಆ ಕೆಲಸ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಅಕ್ರಮ ಸಕ್ರಮದ ಅರ್ಜಿಗಳನ್ನು ಕರೆಯಲು ತೀರ್ಮಾನ ತೆಗೆದುಕೊಂಡು 3-4 ವರ್ಷ ಆಗಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದೊಡನೆ ಅರ್ಜಿ ಸ್ವೀಕರಿಸಲು ಕೊನೆಯ ದಿನವನ್ನು 1-2 ವರ್ಷ ಕಾಲ ವಿಸ್ತರಿಸುತ್ತಾ ಹೋಗುತ್ತದೆ.

ಅಕ್ರಮ ಸಕ್ರಮ ಅರ್ಜಿಗಳನ್ನು ಪರಿಶೀಲಿಸಿ ಅಕ್ರಮವಾಗಿರುವುದನ್ನು ತಿರಸ್ಕರಿಸಲು, ಸಕ್ರಮವಾಗಿರುವುದನ್ನು ಅಂಗೀಕರಿಸಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದೆ. ಇದಕ್ಕಾಗಿ ಪ್ರತಿ ತಾಲ್ಲೂಕಿನಲ್ಲೂ ಒಂದು ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಯ ಸಂಚಾಲಕರ ಸದಸ್ಯರು ಆಯಾ ತಾಲ್ಲೂಕಿನ ತಹಶೀಲ್ದಾರರು. ಮೂರು ಸದಸ್ಯರ ಈ ಸಮಿತಿಗೆ ಅಲ್ಲಿಯ ಶಾಸಕರು ಮತ್ತು ಒಬ್ಬ ಖಾಸಗಿ ವ್ಯಕ್ತಿ ಸದಸ್ಯರು. ಈ ಸಮಿತಿ ಪ್ರತಿ ಶನಿವಾರ ಸಭೆ ನಡೆಸಿ ಅರ್ಜಿಗಳನ್ನು ಪರಿಶೀಲಿಸಿ ತೀರ್ಮಾನಕ್ಕೆ ಬರುವ ಅಧಿಕಾರ ಹೊಂದಿದೆ. ಆದರೆ ಅನೇಕ ತಾಲ್ಲೂಕುಗಳಲ್ಲಿ ಅಲ್ಲಿಯ ಶಾಸಕರ ಆಲಕ್ಷ್ಯದಿಂದ ಸಮಿತಿಯ ಸಭೆಗಳೇ ನಡೆದಿಲ್ಲ. ಇದನ್ನು ಗಮನಿಸಿದ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪನವರು ರೋಸಿ ಹೋಗಿ ಶನಿವಾರದ ಸಭೆಗಳಿಗೆ ಇಬ್ಬರು ಸದಸ್ಯರು ಹಾಜರಾದರೂ ಸಾಕು, ಸಭೆ ನಡೆಸಿ ಎಂದು ತಹಶೀಲ್ದಾರರಿಗೆ ಪತ್ರಗಳನ್ನು ಬರೆದರು. ಅದೂ ಕಾರ್ಯಗತವಾಗಲಿಲ್ಲ. ಈ ಜಮೀನನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಬಡ ರೈತರ ಕೆಲಸವನ್ನು ಆದ್ಯತೆಯಿಂದ ಮಾಡಿಕೊಡಬೇಕು ಎಂದು ಈ ಶಾಸಕರಿಗೆ ಅನ್ನಿಸಲೇ ಇಲ್ಲ, ಇಂದಿಗೂ ಈ ಪರಿಸ್ಥಿತಿ ಮುಂದುವರೆಯುತ್ತಿದೆ. ಬಡ ರೈತರು ತಾವು ಹಿಡಿದಿರುವ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಪಟ್ಟ ಮಾಡಿಕೊಡುತ್ತಾರೆಂದು ತಾಲ್ಲೂಕು ಆಫೀಸಿಗೆ ಅಲೆದಾಡಿ ಹತಾಶರಾಗಿದ್ದಾರೆ. ಹೊಟ್ಟೆ ತುಂಬಿದ ಶಾಸಕರಿಗೆ ಈ ಬಡ ಜನರ ಬವಣೆ ಗೊತ್ತಿದ್ದರೂ ಅವರನ್ನು ಆಲಕ್ಷ್ಯ ಮಾಡಿದ್ದಾರೆ. ಇದು ಬಡವರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವು ತಾಲ್ಲೂಕುಗಳಲ್ಲಿ ಶಾಸಕರು ಮುತುವರ್ಜಿವಹಿಸಿ ಸಭೆಗಳನ್ನು ನಡೆಸಿ ಅಕ್ರಮ ಸಕ್ರಮ ಅರ್ಜಿಗಳನ್ನು ಪರಿಶೀಲಿಸಿ ಅನರ್ಹವಾದದ್ದು ಯಾವುದು, ಅರ್ಹವಾದದ್ದು ಯಾವುದು ಎಂದು ಪರಿಶೀಲಿಸಿ ಪಟ್ಟ ಮಾಡಿದ್ದಾರೆ. ನನಗೆ ತಿಳಿದಂತೆ ಗೌರಿಬಿದನೂರಿನ ಶಾಸಕರು ಅರ್ಹರಾದವರಿಗೆ ಪಟ್ಟ ಕೊಡಿಸಿದ್ದಾರೆ ಅಲೆಮಾರಿ ಹಕ್ಕಿಪಿಕ್ಕರಿಗೆ ಪಟ್ಟ ಹಂಚುವ ಸಮಾರಂಭಕ್ಕೆ ಶಾಸಕರು ನನ್ನನ್ನು ಆಹ್ವಾನಿಸಿದ್ದರು. ನಾನು ಹೋಗಿದ್ದೆ.

PC : Patrika

ಈಗ ನನಗೆ ತಿಳಿದುಬಂದಿರುವಂತೆ ಕೆಲವು ತಾಲ್ಲೂಕುಗಳಲ್ಲಿ ಒಟ್ಟು 4 ಲಕ್ಷ ಅರ್ಜಿಗಳು ಬಂದಿದ್ದರೂ ಅವುಗಳ ಪೈಕಿ ಸಮಿತಿ ಎರಡೂವರೆ ಲಕ್ಷ ಅರ್ಜಿಗಳನ್ನು ತಿರಸ್ಕರಿಸಿ ಒಂದೂವರೆ ಲಕ್ಷ ಅರ್ಜಿದಾರರಿಗೆ ಪಟ್ಟ ಮಾಡಿ ಕೊಡಬಹುದೆಂದು ಶಿಫಾರಸು ಮಾಡಿದೆ.

ಜಾತಕ ಪಕ್ಷಿಗಳಂತೆ ಪಟ್ಟಕ್ಕಾಗಿ ಕಾಯುತ್ತಿರುವ ಈ ಬಡ ರೈತರಿಗೆ, ತೀರ್ಮಾನಗೊಂಡ ಈ ಒಂದೂವರೆ ಲಕ್ಷ ಅರ್ಹ ಅರ್ಜಿದಾರರಿಗೆ ಪಟ್ಟವನ್ನು ಕೂಡಲೇ ಹಂಚಲು ಸರ್ಕಾರ ಸುತ್ತೋಲೆ ಹೊರಡಿಸಬೇಕು. ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಈ ಅರ್ಹ ಅರ್ಜಿದಾರರಿಗೆ ಪಟ್ಟ ಮಾಡಿಕೊಡಲು ಅನುಮತಿ ನೀಡಬೇಕು. ಈ ಪ್ರಕ್ರಿಯೆ ಕೂಡಲೇ ಕಾರ್ಯಗತಗೊಳ್ಳಲು ಸೂಚಿಸಿ, 6 ತಿಂಗಳೊಳಗೆ ಈ ಒಂದೂವರೆ ಲಕ್ಷ ಅರ್ಹ ಅರ್ಜಿದಾರರಿಗೆ ಪಟ್ಟ ದೊರೆಯುವಂತೆ ಸುಗ್ರೀವಾಜ್ಞೆ ಹೊರಡಿಸಬೇಕು.

ಸರ್ಕಾರ ಬಡ ರೈತರ ಕಾತರವನ್ನು ಅರ್ಥಮಾಡಿಕೊಳ್ಳಬೇಕು. ಈ ರೈತರು ತಹಶೀಲ್ದಾರರ ಕಚೇರಿಗೆ ನೂರಾರು ಸಲ ಹೋಗಿ ಹತಾಶರಾಗಿ ಹಿಂದಿರುಗಿರುವುದನ್ನು ಗಮನಿಸಬೇಕು. ಬಡ ರೈತರ ತಾಳ್ಮೆಯನ್ನು ಪರೀಕ್ಷಿಸುವುದಕ್ಕಲ್ಲ ಸರ್ಕಾರ ಇರುವುದು. ಅವರ ಕಣ್ಣೀರನ್ನು ಒರೆಸುವುದಕ್ಕೆ. ಸಾಂತ್ವನ ಹೇಳುವುದಕ್ಕೆ. ಹತಾಶನಾದ ರೈತ ತಾಲ್ಲೂಕು ಕಚೇರಿಗೆ ತಿರುಗಿ ತಿರುಗಿ ಬೇಸತ್ತು ಅಸಹಾಯಕರಾದ ತಹಶೀಲ್ದಾರರನ್ನೂ ಗುಂಡಿಟ್ಟು ಕೊಂದಿರುವುದನ್ನು ಸರ್ಕಾರ ಒಂದು ಎಚ್ಚರಿಕೆಯ ಗಂಟೆ ಎಂದು ಪರಿಭಾವಿಸಬೇಕು. ತ್ವರಿತಗತಿಯಿಂದ ಅವರ ಬವಣೆಯನ್ನು ನೀಗುವುದು ಸರ್ಕಾರದ ಆದ್ಯತೆಯಾಗಬೇಕು.

ಹಿಂದೆ ಎರಡನೇ ಮಹಾಯುದ್ಧದ ಸಮಯದಲ್ಲಿ ಮತ್ತು ಸ್ವಾತಂತ್ರ ಪ್ರಾಪ್ತವಾದ ಹೊಸದರಲ್ಲಿ ಆಹಾರ ಧಾನ್ಯಗಳ ಕೊರೆತೆಯಿಂದ ಬಡಜನರು ತೊಳಲಾಡುವುದನ್ನು ಗಮನಿಸಿದ ಅಂದಿನ ಸರ್ಕಾರ ಭೂಹೀನ ಬಡರೈತರಿಗೆ ಸರ್ಕಾರಿ ಜಮೀನಿನಲ್ಲಿ ಬೆಳೆ ಬೆಳೆದುಕೊಳ್ಳಲು ಅನುಮತಿ ನೀಡಿತು. ಇದಕ್ಕಾಗಿ ಸರ್ಕಾರ Grow more food campaign ಆರಂಭ ಮಾಡಿತು. ಸಹಸ್ರಾರು ಬಡರೈತರು ಒಂದು ಎಕರೆ, ಎರಡು ಎಕರೆ ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಮಾಡಲು ಆರಂಭಿಸಿದರು. ಈ ಮೂಲಕ ಈ ಬಡರೈತರು ತಮ್ಮ ಮನೆಗೆ ಬೇಕಾದಷ್ಟನ್ನು ಬೆಳೆದುಕೊಂಡು ಸ್ವಾವಲಂಬಿಗಳಾದರು. ಆಹಾರ ಧಾನ್ಯವನ್ನು ಜನರಿಗೆ ಒದಗಿಸುವ ಹೊಣೆಗಾರಿಕೆಯಿಂದ ಸ್ವಲ್ಪಮಟ್ಟಿಗೆ ಪಾರಾಗಲು ಈ Grow more food campaign ಯೋಜನೆ ಸಹಕಾರಿಯಾಯಿತು.

ಈ ರೈತರು ಕೂಡ ತಮ್ಮ ಜಮೀನಿಗೆ ಸರ್ಕಾರ ಪಟ್ಟ ಕೊಡುವುದೆಂದು ಅಂದಿನಿಂದ ಕಾಯುತ್ತಿದ್ದಾರೆ. ಸರ್ಕಾರವೇ ಸರ್ಕಾರಿ ಜಮೀನನ್ನು ಆಹಾರಧಾನ್ಯ ಬೆಳೆದುಕೊಳ್ಳುವುದಕ್ಕಾಗಿ ರೈತರಿಗೆ ಕೊಟ್ಟಿರುವುದರಿಂದ ಈ ಜಮೀನು ಅಕ್ರಮ ಸಕ್ರಮದಡಿಯಲ್ಲಿ ಪರಿಶೀಲಿಸಲು ಬರುವುದಿಲ್ಲ.

ಆದ್ದರಿಂದ ಈ ರೈತರು ಬೇರೆ ಜಮೀನನ್ನು ಹೊಂದಿರದಿದ್ದರೆ ಅಂಥವರಿಗೆ ನೇರವಾಗಿ ಪಟ್ಟ ನೀಡಲು ತಹಶೀಲ್ದಾರುಗಳಿಗೆ ಅಧಿಕಾರ ನೀಡಬೇಕು. ಇಂತಹವರು ಸಕ್ರಮ ಅಕ್ರಮದಡಿ ಅರ್ಜಿ ಸಲ್ಲಿಸಿದ್ದರೆ ಅದನ್ನು ಬೇರ್ಪಡಿಸಿ ಈ ರೈತರಿಗೆ ಕೂಡಲೇ ಪಟ್ಟ ಮಾಡಿಕೊಡಬೇಕು.


ಇದನ್ನೂ ಓದಿ: ನೂರರ ನೋಟ: ಪ್ರಜಾಪ್ರಭುತ್ವದ ಕಗ್ಗೊಲೆಯ ಮೂರು ಪ್ರಕರಣಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...