Homeಮುಖಪುಟಹತ್ರಾಸ್ ದಲಿತ ಹೆಣ್ಣು ಮಗಳ ನ್ಯಾಯಕ್ಕಾಗಿ ಹೋರಾಡೋಣ- ಡಿ.ಕೆ ಶಿವಕುಮಾರ್

ಹತ್ರಾಸ್ ದಲಿತ ಹೆಣ್ಣು ಮಗಳ ನ್ಯಾಯಕ್ಕಾಗಿ ಹೋರಾಡೋಣ- ಡಿ.ಕೆ ಶಿವಕುಮಾರ್

ನಿರ್ಭಯ ಘಟನೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ಮಾಡಿದವರು, ಹತ್ರಾಸ್ ಘಟನೆ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಲ್ಲಿದ್ದಾರೆ ಅವರೆಲ್ಲ? ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.

- Advertisement -
- Advertisement -

ಹತ್ರಾಸ್‍ನ ಯುವತಿಯ ಮೇಲೆ ನಡೆದ ಅತ್ಯಾಚಾರ, ದಲಿತ ಹೆಣ್ಣು ಮಗಳಿಗಾದ ನೋವು, ಸಂಸ್ರಸ್ತೆಯ ಕುಟುಂಬಕ್ಕೆ ಮಗಳ ಮುಖ ನೋಡಲೂ ಸಿಗದ ಅವಕಾಶ, ಎಲ್ಲದರ ವಿರುದ್ಧ ನಾವು-ನೀವೆಲ್ಲಾ ಧ್ವನಿ ಎತ್ತಬೇಕಿದೆ, ಹೋರಾಟ ಮಾಡಬೇಕಿದೆ. ಇಲ್ಲದಿದ್ದರೆ ನಮ್ಮ ತಾಯಂದಿರಿಗೆ, ಈ ಭೂಮಿ ತಾಯಿಗೆ ಯಾರು ಗೌರವ ಕೊಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ದೇಶದ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಬೇಕೇಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ಪ್ರಾರಂಭಿಸಿರುವ SpeakUpForWomenSafety ಅಭಿಯಾನಕ್ಕೆ ದನಿಗೂಡಿಸಿರುವ ಅವರು, ಭೂಮಿಯನ್ನೂ ತಾಯಿ ಎಂದು ಕರೆಯುವ ಸಂಸ್ಕೃತಿ ನಮ್ಮದು. ನಾವು ಮಹಿಳೆಯರನ್ನು ಗೌರವಿಸುತ್ತೇವೆ. ಇಂಥಹ ದೇಶದಲ್ಲಿ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯಗಳನ್ನ ನಾವು, ನೀವೆಲ್ಲಾ ಸೇರಿ ವಿರೋಧಿಸಬೇಕಿದೆ. ಈ ಮೂಲಕ ನಮ್ಮ ತಾಯಂದಿರು, ಸಹೋದರಿಯರು, ಮಕ್ಕಳಲ್ಲಿ ಸುರಕ್ಷತೆಯ ಭಾವನೆಯನ್ನು ನೆಲೆಗೊಳಿಸಬೇಕಿದೆ ಎಂದು ಕರೆ ನೀಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದ ಮಹಿಳೆಯರು ಹಗಲು ಹೊತ್ತಿನಲ್ಲೂ ಸುರಕ್ಷಿತವಾಗಿ ಓಡಾಡುವ ಪರಿಸ್ಥಿತಿ ಇಲ್ಲ. ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಇಂಥಹದೇ ಸ್ಥಿತಿ ಇದೆ. ನಿರ್ಭಯ ಘಟನೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ಮಾಡಿದವರು, ಹತ್ರಾಸ್ ಘಟನೆ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಲ್ಲಿದ್ದಾರೆ ಅವರೆಲ್ಲ? ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.

ಪ್ರತಿ 16 ನಿಮಿಷಕ್ಕೆ ಓರ್ವ ಮಹಿಳೆಯ ಮೇಲೆ ಅತ್ಯಾಚಾರವಾಗುತ್ತಿದೆ. ಪ್ರತಿ 1 ಗಂಟೆ 13 ನಿಮಿಷಕ್ಕೆ ವರದಕ್ಷಿಣೆ ಕಿರುಕುಳಕ್ಕೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಹೀಗಿದ್ದರೂ ಸಹ ನರೇಂದ್ರ ಮೋದಿ ಸರ್ಕಾರವು ಸರಿಯಾದ ರಕ್ಷಣಾ ವ್ಯವಸ್ಥೆಯನ್ನು ರೂಪಿಸದೇ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಹಿಳಾ ಸಬಲೀಕರಣ, ಸ್ತ್ರೀಯರ ಸುರಕ್ಷತೆಯ ಬಗ್ಗೆ ಇಡೀ ಪ್ರಪಂಚವೇ ಮಾತನಾಡುತ್ತಿರುವಾಗ ಭಾರತದಲ್ಲಿ ಏನಾಗುತ್ತಿದೆ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳಾ ಸಬಲೀಕರಣ, ಸ್ತ್ರೀಯರ ಸುರಕ್ಷತೆ ಎನ್ನುವುದು ಚರ್ಚಾರ್ಹ ಹಾಗೂ ಆದ್ಯತೆಯ ವಿಚಾರಗಳೇ ಅಲ್ಲ. ಇದು ಅತ್ಯಂತ ನಾಚಿಕೆಗೇಡು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

ನಿರ್ಭಯ ಅತ್ಯಾಚಾರ ಪ್ರಕರಣ ನಂತರ 2013-2019 ರ ಅವಧಿಯಲ್ಲಿ ಒಟ್ಟು 2.42 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು ಈ ಅವಧಿಯಲ್ಲಿ ದೇಶದಲ್ಲಿ ಪ್ರತಿ ನಿತ್ಯ 95 ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ ಆದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.


ಇದನ್ನೂ ಓದಿ: ಹತ್ರಾಸ್ ಸಂತ್ರಸ್ತ ಕುಟುಂಬ ಕೇಳುತ್ತಿರುವುದೇನು?: 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...