Homeಕರ್ನಾಟಕಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

ಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

"ನಾವು ಮನಸ್ಸು, ಹೃದಯಗಳನ್ನು ನೇಯೋಣ, ಹರಿಯೋದು ಬೇಡ" ಎಂದು ಹಂಸಲೇಖ ಅವರು ಮನವಿ ಮಾಡಿದರು.

- Advertisement -
- Advertisement -

ಜೇನುಕುರುಬ ಸಮುದಾಯದ ಸಂಗೀತ ಕಲೆಯನ್ನು ಝೀ ಕನ್ನಡ ವಾಹಿನಿಯಲ್ಲಿ ಪ್ರದರ್ಶಿಸೋಣ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ ಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ಆಯೋಜಿಸಿದ್ದ ‘ನೆಲದ ಪದ’ ಸಾಂಸ್ಕೃತಿಕ ಯುವಜನ ಉತ್ಸವವನ್ನು ಉದ್ಘಾಟಿಸಿದ ಅವರು, ಜೇನುಕುರುಬ ಯುವಜನರ ಕಲಾ ಪ್ರದರ್ಶನವನ್ನು ನೋಡಿ, ‘ಜೇನುಕುರುಬ ಯುವಕರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ’ ಎಂದರು.

ಝೀ ಕನ್ನಡ ವಾಹಿನಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಜಾನಪದ ವಿಚಾರವಾಗಿ ಚರ್ಚಿಸುವಾಗಲೆಲ್ಲ ಯಾವುದಾದರೂ ವಿಶೇಷ ಕಾರ್ಯಕ್ರಮ ರೂಪಿಸಲು ಸಾಧ್ಯವಿದ್ದರೆ ತಿಳಿಸಿ ಸರ್ ಎಂದು ನನಗೆ ಕೇಳಿಕೊಳ್ಳುತ್ತಾರೆ. ನಾನು ಯಾವಾಗಲೂ ಗೊಂದಲದಲ್ಲೇ ಇರುತ್ತಿದ್ದೆ. ಇವತ್ತು ಒಂದು ಸರಿಯಾದ ಚಿತ್ರಣ ಸಿಕ್ಕಿದೆ. ಆ ಜೇನುಕುರುಬ ತಂಡಕ್ಕೆ ಇನ್ನೊಂದಿಷ್ಟು ಅಭ್ಯಾಸ ಕೊಡಿಸಿ, ಅದಕ್ಕೊಂದು ಅಲಂಕಾರಿಕ ರೂಪವನ್ನು ನೀಡಿ, ಝೀ ವಾಹಿನಿಯಲ್ಲಿ ಪ್ರದರ್ಶನ ಪಡಿಸೋಣ ಎಂದರು.

25,000 ರೂ.ಗಳನ್ನು ತಂಡಕ್ಕೆ ಬಹುಮಾನವಾಗಿ ಘೋಷಿಸಿದ ಅವರು, “ಜೇನುಕುರುಬರ ತಂಡ ವೇದಿಕೆಗೆ ಬಂದಾಗ ನನ್ನ ಕಣ್ಣಂಚಿನಲ್ಲಿ ನೀರು ಬಂದವು. ಎಷ್ಟು ಉತ್ಸಾಹ, ಎಷ್ಟು ಅದಮ್ಯವಾದ ಚೈತನ್ಯ ಅವರದ್ದು. ಲಯಬದ್ಧತೆಯೊಂದಿಗೆ ಸಭೆಗೆ ಬಂದು ಸಭಾ ಗೌರವವನ್ನು ಪಡೆದು, ಅವರು ಹಾಡಿದ ನಾಲ್ಕು ರಾಗಗಳೂ ಬಹಳ ಅದ್ಭುತವಾಗಿದ್ದವು” ಎಂದು ಬಣ್ಣಿಸಿದರು.

ಎಲ್ಲ ಸಂಗೀತ ಪ್ರಕಾರಗಳು ಇಂದು ಶ್ರುತಿ ಬದ್ಧತೆಗೆ ಹಾಗೂ ಶಿಸ್ತಿಗೆ ಒಳಪಟ್ಟಿವೆ. ನಾವು ಒಂಚೂರು ಶ್ರುತಿ ಹಾಗೂ ಶಿಸ್ತಿಗೆ ಒಳಪಟ್ಟರೆ ನಾವು ಮೇಲೇರುವ ಸ್ಥಿತಿ ಹೆಚ್ಚಾಗುತ್ತದೆ. ನಮ್ಮ ಮೆದುಳೇ ನಮ್ಮ ಹೆಡ್‌ ಮಾಸ್ಟರ್‌. ಈ ಮೆದುಳಿಗೆ ಯಾರು ಹೆಡ್ ಮಾಸ್ಟರ್‌ ಎಂಬುದು ನಮಗೆ ಗೊತ್ತಿಲ್ಲ. ಈ ಮೆದುಳು ನಮ್ಮನ್ನು ನಿಯಂತ್ರಿಸುತ್ತದೆ. ಈ ಮೆದುಳಿಗೆ ನೀವು ಆಜ್ಞೆ ಮಾಡಿ. ನೀವು ಅಂದುಕೊಂಡಂತೆ ಆಗುತ್ತೀರಿ. ಅಂದುಕೋ, ನೀ ಆಗುತ್ತೀಯ ಎಂದು ಪ್ರೋತ್ಸಾಹಿಸಿದರು.

ಜಗತ್ತಿನಲ್ಲಿ ಜನಪದದ ಕುರಿತು ಅನುಕಂಪದ ಅಲೆ ಎದ್ದಿದೆ. ಜನಪದರು ಶ್ರುತಿಬದ್ಧತೆಗೆ ಮರಳಿದ್ದಾರೆ. ಉತ್ಸಾಹ, ಹುಮ್ಮಸ್ಸು ಹುಟ್ಟಿನಿಂದಲೇ ಜನಪದರಿಗೆ ಇದೆ. ಆದರೆ ಕೊಂಚ ಶ್ರುತಿ, ಲಯಬದ್ಧತೆ, ಕೊಂಚ ಸಭಾ ಮರ್ಯಾದೆ ನಡೆಸಿಕೊಟ್ಟರೆ ಜಗತ್ತು ಜನಪದರನ್ನು ಆಲಂಗಿಸಲು ಸಿದ್ಧವಾಗಿದೆ ಎಂದು ಹೇಳಿದರು.

ತಮ್ಮ ದೇಸಿ ಸಂಸ್ಥೆ ಕುರಿತು ಮಾತನಾಡಿದ ಅವರು, “ಈ ಸಂಸ್ಥೆಯಲ್ಲಿ ಈ ನೆಲದ ಜಾನಪದೀಯ ಸೊಗಡನ್ನು ಕಟ್ಟಲು, ಪಠ್ಯವನ್ನು ರೂಪಿಸಲು ಸಾಕಷ್ಟು ಕಷ್ಟಪಟ್ಟಿದ್ದೇವೆ. ಬಹಳ ದಿಕ್ಕು ತೋಚದೆ ಈಗಲೂ ಒದ್ದಾಡುತ್ತಿದ್ದೇವೆ. ಜಾನಪದೀಯ ಸೊಗಡನ್ನು ಪಠ್ಯದ ಮೂಲಕ ಹೇಳಲು ಸಾಧ್ಯವೇ? ಅದು ಸ್ವಾ- ಅನುಭವದಿಂದ ಬರಬೇಕು. ಜನಪದ ಎಂಬುದು ಸಂಭ್ರಮ, ಸೊಗಡು. ಆ ಸೊಗಡಿಗೆ ಪಠ್ಯವನ್ನು ರೂಪಿಸುವುದು ಬಹಳ ಕಷ್ಟ. ಆದರೂ ನಾವು ಒಂದು ತಾಳ ಶಾಸ್ತ್ರವನ್ನು ರಚಿಸಿದ್ದೇವೆ. ಜನಪದ ಸಂಗೀತವನ್ನು ಕಲಿಯುವುದಕ್ಕಾಗಿ ಶಿಸ್ತುಬದ್ಧ ಸಂಗೀತ ಲಿಪಿ ಹಾಗೂ ಪಠ್ಯಕ್ರಮವನ್ನು ರೂಪಿಸಿದ್ದೇವೆ. ಜೊತೆಗೆ ಪ್ರದರ್ಶನ ಕಲೆಗಳಿಗೆ ಬೇಕಾಗಿರುವ ಎಲ್ಲ ಸುಧಾರಣೆ ಕುರಿತು ಪಠ್ಯದಲ್ಲಿ ಸೇರಿಸಿದ್ದೇವೆ. ನಮಗೆ ಈಗ ವಿದ್ಯಾರ್ಥಿಗಳು ಅಥವಾ ಪ್ರತಿಭೆಗಳು ಬೇಕಿದ್ದಾರೆ. ಹಂಸಲೇಖ ದೇಸಿ ವಿದ್ಯಾ ಸಂಸ್ಥೆ ನಿಮ್ಮ ಸೇವೆಗೆ ಕಂಕಣ ಕಟ್ಟಿ ನಿಂತಿದೆ” ಎಂದು ಆಹ್ವಾನಿಸಿದರು.

ನೀವು ನುಡಿಸುವ ಡೊಳ್ಳು ವಾದ್ಯವನ್ನು ಶ್ರುತಿ ಮಾಡಲು ಯೋಗ್ಯವಾಗಿ ತಯಾರು ಮಾಡಿದ್ದೇವೆ. ಅದನ್ನು ಇನ್ನೂ ನಾಡಿಗೆ ಅರ್ಪಣೆ ಮಾಡಿಲ್ಲ ಎಂದ ಅವರು, ಯಾರಾದರೂ 25 ಜನರ ತಂಡಗಳಾಗಿ ಬಂದರೆ ಅಥವಾ ನಾನಾಗಿಯೇ ಬಂದು ತಯಾರು ಮಾಡುವ ಕೆಲಸವನ್ನು ಮಾಡಬಲ್ಲೆ. ಲಯಬದ್ಧತೆ ರೂಪಿಸಿಕೊಂಡರೆ ಜನಪದಕ್ಕೆ ಕೊಂಬು, ಕೋಡುಗಳು ಹೆಚ್ಚಾಗುತ್ತವೆ. ನಾನು ನಿಮ್ಮ ಜೊತೆಯಲ್ಲಿ ಮುಂದೆ ಕೆಲಸ ಮಾಡುತ್ತೇನೆ ಎಂದರು.

“ನಾವು ನೇಯೋಣ, ಹರಿಯದಿರೋಣ. ಬಟ್ಟೆಯನ್ನು, ಸಂಭ್ರಮವನ್ನು, ಅಕ್ಷರವನ್ನು, ಮನಸ್ಸು, ಹೃದಯಗಳನ್ನು ನೇಯೋಣ. ಆದರೆ ಹರಿಯೋದು ಬೇಡ” ಎಂದು ಅವರು ತಮ್ಮ ಭಾಷಣದ ಆರಂಭದಲ್ಲಿ ಹೇಳಿದರು.

ಹಂಸಲೇಖ ಅವರು ಮಾರ್ಮಿಕವಾಗಿ ಹೇಳಿದ ‘ನೇಯುವ ಕಾರ್ಯ’ವನ್ನು ಉಲ್ಲೇಖಿಸಿ ಮಾತನಾಡಿದ ಸ್ಫೂರ್ತಿಧಾಮದ ಅಧ್ಯಕ್ಷರು, ಐಪಿಎಸ್‌ ನಿವೃತ್ತ ಅಧಿಕಾರಿಯಾಗಿರುವ ಮರಿಸ್ವಾಮಿಯವರು, “ಉತ್ತರಖಾಂಡ್‌ನಲ್ಲಿ ನಡೆದ ಧರ್ಮ ಸಂಸತ್‌ ಇಡೀ ಒಂದು ಜನಾಂಗವನ್ನೇ ನಾಶ ಮಾಡುವ ಮಾತನಾಡುತ್ತದೆ. ಹೀಗಾಗಿ ಹರಿದು ಹಾಕುವ ಕೆಲಸ ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆ ಕಾಣುತ್ತದೆ. ನೇಯುವಲ್ಲಿ ನಾವು ಎಲ್ಲಿ ಸೋತುಬಿಡುತ್ತೇವೆ ಎಂಬ ಭಯ ಕಾಡುತ್ತಿದೆ. ಹೀಗೆ ಹರಿಯೋರನ್ನು ಅಧಿಕಾರಕ್ಕೆ ಕೂರಿಸಿದವರು ಯಾರು? ಹಾಲನ್ನು ಹಾಕಿ ಸಾಕಿ, ಗಟ್ಟಿ ಮಾಡಿ ಕೂರಿಸಿದವರು ನಾವು. ಈಗ ಅವರು ಇಡೀ ದೇಶವನ್ನೇ ಹರಿದುಹಾಕುವ ಮಾತನಾಡುತ್ತಿದ್ದಾರೆ. ಇಡೀ ದೇಶ ಯೋಚಿಸಬೇಕಾದ ವಿಚಾರವಿದು” ಎಂದು ಎಚ್ಚರಿಸಿದರು.

“ಸಮಾತೆಯ ಹೆಸರಲ್ಲಿ ಅಸಮಾನತೆಯನ್ನು ಹೇಳುವವರು ಬಯಲಾಗುತ್ತಿದ್ದಾರೆ. ನಾವು ಪ್ರೊಗೆಸಿವ್ ಎಂದುಕೊಂಡ ಅನೇಕರು ಆಂತರಿಕವಾಗಿ ರಿಗ್ರೆಸಿವ್ ಆಗಿದ್ದಾರೆ. ತಮ್ಮ ಆತ್ಮವನ್ನು ತೆರೆದಿಟ್ಟು ತಾವು ಎಲ್ಲಿದ್ದೇವೆ ಎಂಬುದನ್ನು ತೋರಿಸುತ್ತಿದ್ದಾರೆ” ಎಂದರು.

ಪ್ರಗತಿಪರ ಆಗುವುದು ಹೆಣ್ಣುಮಕ್ಕಳಿಗೆ ಅನಿವಾರ್ಯ: ಎಂ.ಡಿ.ಪಲ್ಲವಿ

ಗಾಯಕಿ ಎಂ.ಡಿ.ಪಲ್ಲವಿ ಅವರು ಮಾತನಾಡಿ, “ನಾವು ನಮ್ಮ ಬದುಕನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಬೇಕು. ನನ್ನ ಹೋರಾಟ- ನಾನು ಪ್ರಗತಿಪರ ಆಗಿರಬೇಕು ಎಂಬುದಕ್ಕಾಗಿರುತ್ತದೆ. ನಾನು ಪ್ರಗತಿಪರ ಆಗಿದ್ದೇನೆ, ಆಗಿರುತ್ತೇನೆ. ಪ್ರಗತಿಪರ ಆಗುವುದು ಹೆಣ್ಣು ಮಕ್ಕಳಿಗೆ ಅನಿವಾರ್ಯ. ಇಲ್ಲವಾದರೆ ವಿದ್ಯಾಭ್ಯಾಸವೂ ಸಿಗುವುದಿಲ್ಲ. ಸಮಾಜ ಪ್ರಗತಿಗಪರ ಆಗಬೇಕೆಂದರೆ ವಿದ್ಯಾಭ್ಯಾಸದ ಜೊತೆಗೆ ಸಮಾನತೆಯೂ ಮುಖ್ಯ. ಆ ಸಮಾನತೆಯನ್ನು ಡಾ.ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಕೊಟ್ಟಿದ್ದಾರೆ. ಸಮಾನತೆಯನ್ನು ಸಂಪೂರ್ಣವಾಗಿ ತರಲು ಸಾಧ್ಯವಾಗಿಲ್ಲ. ಅದರತ್ತ ನಾವು ಹೆಜ್ಜೆ ಹಾಕಬೇಕು. ನಮ್ಮ ದಾರಿಯನ್ನು ನಾವೇ ಕಲ್ಪಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

ಹೋರಾಟ- ಪ್ರೀತಿಯಿಂದಲೂ ಸಾಧ್ಯವಿದೆ. ಕಿರುಚದೆ, ರೇಗದ ಮೆಲುದನಿಯಲ್ಲಿ ಲಯಬದ್ಧವಾಗಿ, ಶ್ರುತಿಬದ್ಧವಾಗಿಯೂ ಹೋರಾಟ ಮಾಡಬಹುದು ಎಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತರಾದ ವಿಜಯಮ್ಮ ಮಾತನಾಡಿ, “ಇಂದು ಮಾತನಾಡಿದರೆ ದೇಶದ್ರೋಹ ಎಂಬ ಪರಿಸ್ಥಿತಿ ಬಂದಿರುವುದರಿಂದ ನಾವು ಮಾತನಾಡುವುದಿಲ್ಲ. ನಿಮ್ಮ ಧರ್ಮ, ನಿಮ್ಮ ನಂಬಿಕೆಗಳು, ಅಪನಂಬಿಕೆಗಳು, ಮೂಢನಂಬಿಕೆಗಳು ನಿಮಗಿರಲಿ; ನಮ್ಮ ಅಭಿಪ್ರಾಯಗಳನ್ನು ಹೇಳುವುದಕ್ಕೆ ನಾವು ಇನ್ನೊಂದು ದಾರಿಯನ್ನು ಹುಡುಕುತ್ತೇವೆ. ನಮ್ಮ ಸಾಂಸ್ಕೃತಿಕ ದಾರಿಯನ್ನು ಪ್ರತಿರೋಧದ ದನಿಯಾಗಿ ಬಳಸಿಕೊಳ್ಳಲು ಪ್ರಯತ್ನಪಡುತ್ತಿದ್ದೇವೆ” ಎಂದರು.

ಚಲನಚಿತ್ರ ನಿರ್ದೇಶಕ ಮಂಸೋರೆ ಮಾತನಾಡಿ ಕೆವಿಎಸ್‌ ಸಂಘಟನೆಯ ಕೆಲಸಗಳನ್ನು ಶ್ಲಾಘಿಸಿದರು. ಮುಂದುವರಿದು ಮಾತನಾಡಿದ ಅವರು, “ನಿನ್ನೆ ಫೇಸ್‌ಬುಕ್‌ನಲ್ಲಿ ಒಂದು ಘಟನೆ ಓದಿದೆ. ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎಂದು ನಾಚಿಕೆಯಾಗುತ್ತದೆ. ನಾವು ಜಾತಿ, ಧರ್ಮದಿಂದ ಹೊರಬರಬೇಕಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು ಇವುಗಳಿಂದ ಹೊರಬೇಕಾಗಿದೆ. ನಾವು ವೈಯಕ್ತಿಕವಾಗಿಯೂ ಹೋರಾಡಿ ಜಾತಿ, ಧರ್ಮದ ಸಂಕೋಲೆಗಳಿಂದ ಬಿಡುಗಡೆ ಹೊಂದಿ ಮನುಷ್ಯರಾಗಲು ಪ್ರಯತ್ನಪಡಬೇಕು” ಎಂದು ಆಶಿಸಿದರು.

ಬಿ.ಎಂ.ಗಿರಿರಾಜ್ ಮಾತನಾಡಿ, “ಕುವೆಂಪು ಅವರು ಹೇಳಿದಂತೆ ಮನುಷ್ಯನಿಗೆ ಮೂರು ಹಸಿವುಗಳು ಇರಬೇಕಾಗುತ್ತದೆ. ಅಧ್ಯಾತ್ಮದ ಹಸಿವು, ಆಧುನಿಕತೆಯ ಹಸಿವು, ಸಮಾನತೆ ಹಸಿವು. ಈ ಹಸಿವುಗಳು ತುಂಬಿದರೆ ನಾವು ತಪ್ಪು ಮಾಡುವುದು ಕಡಿಮೆಯಾಗುತ್ತದೆ. ಕುವೆಂಪು ಅವರು ಅಧ್ಯಾತ್ಮದ ಕಡೆಗೂ, ಆಧುನಿಕತೆಯ ಕಡೆಗೂ ಒಮ್ಮೆಲೇ ಯೋಚಿಸುತ್ತಿದ್ದರು” ಎಂದು ವಿವರಿಸಿದರು.

ನೆಲದ ಪದ ಕಾರ್ಯಕ್ರಮ ಬಹುತ್ವವನ್ನು ಪ್ರತಿಪಾದಿಸಿತು. (ಹೆಚ್ಚಿನ ವರದಿಯನ್ನು ‘ಇಲ್ಲಿ’ ಓದಬಹುದು.)


ಇದನ್ನೂ ಓದಿರಿ: ಬಹುತ್ವ ಬದುಕಿನ ಸಂದೇಶ ಸಾರಿದ ‘ನೆಲದ ಪದ’ ಸಾಂಸ್ಕೃತಿಕ ಉತ್ಸವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. The present needed culture movement

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...