ಕೋವಿಡ್ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿದ್ದರೂ ಟೈಮ್ಸ್ ನೌ ಮಾತ್ರ ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಟೈಮ್ಸ್ ನೌ ಇಂಗ್ಲಿಷ್ ಚಾನೆಲ್‌ನ ಮಾಜಿ ಮತ್ತು ಹಾಲಿ ವರದಿಗಾರರು, ಉದ್ಯೋಗಿಗಳು ಸಂಪಾದಕ ಮಂಡಳಿಗೆ ಬರೆದ ಪತ್ರಕ್ಕೆ ಶಿಕ್ಷಣ ತಜ್ಞ ಅನಿಲ್ ಸದ್ಗೋಪಾಲ್ ಪ್ರತಿಕ್ರಿಯಿಸಿದ್ದಾರೆ.
‘ಟೈಮ್ಸ್ ನೌ’ನ ಹಿಂದಿನ ಮತ್ತು ಪ್ರಸ್ತುತ ಉದ್ಯೋಗಿಗಳ’ ಈ ಪತ್ರವು ಕೇವಲ ದಂಗೆಯಲ್ಲ. ಸಂವಿಧಾನಕ್ಕೆ ಅನುಗುಣವಾಗಿ ಭಾರತವನ್ನು ನಿರ್ಮಿಸುವ ಆಕಾಂಕ್ಷೆಯದ್ದು. ಜಾತಿ ವಿರೋಧಿ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ನೆಲೆಯಲ್ಲಿ ಸ್ವಾತಂತ್ರ‍್ಯ ಹೋರಾಟದ ಆಕಾಂಕ್ಷೆಗಳಿಗೆ ಅನುಗುಣವಾಗಿ ಒಂದು ಪ್ರಮುಖ ಸಾಮಾಜಿಕ-ರಾಜಕೀಯ ಪರಿವರ್ತನೆಗಾಗಿ ಬಿತ್ತಲ್ಪಟ್ಟ ಬೀಜವಾಗಿದೆ ಎಂದು ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯ ಮುಖಂಡರಾದ ಪ್ರೊ. ಅನಿಲ್ ಸದ್ಗೋಪಾಲ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಸಿಗಲು ಕಾರಣರಾದ ನಿಜವಾದ ಶಿಕ್ಷಣದ ಸಂತ ಅನಿಲ್ ಸದ್ಗೋಪಾಲ್
ಈ ಐತಿಹಾಸಿಕ ಪತ್ರದ ಲೇಖಕರ ಧೈರ್ಯ, ನೇರ, ಒಳನೋಟ, ಸತ್ಯಕ್ಕೆ ಬದ್ಧತೆ ಮತ್ತು ಭಾರತದ ಜನರ ಮೇಲಿನ ಪ್ರೀತಿಗಾಗಿ ನಮಸ್ಕರಿಸೋಣ ಎಂದು ಅವರು ತಿಳಿಸಿದ್ದಾರೆ.
ಈ ಪತ್ರದ ಲೇಖಕರು, ಈಗ ಅಧಿಕಾರದ ಆಕ್ರಮಣಕ್ಕೆ ಒಳಗಾಗಿರುವ ಸಾರ್ವತ್ರಿಕ ಪತ್ರಿಕೋದ್ಯಮದ ಮೂರು ಮೂಲಭೂತ ಸಿದ್ಧಾಂತಗಳನ್ನು ರೂಪಿಸುವ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. “ಯಾವಾಗಲೂ ಜನರ ಪರವಾಗಿರಿ. ಯಾವಾಗಲೂ ಮಾನವೀಯತೆಯ ಬದಿಯಲ್ಲಿರಿ. ತಪ್ಪುಗಳಾದಾಗ ಅಧಿಕಾರದಲ್ಲಿರುವವರನ್ನು ಜವಾಬ್ದಾರರನ್ನಾಗಿ ಮಾಡಿ…” ಎಂದಿದ್ದಾರೆ.
ನಮ್ಮ ದೇಶದ ಭವಿಷ್ಯಕ್ಕಾಗಿ ನಾವು ಮಾಡಬಹುದಾದ ಕನಿಷ್ಠವೆಂದರೆ, ಸತ್ಯ ದಾಖಲಿಸಲು ಧೈರ್ಯ ಮಾಡಿದ ಟೈಮ್ಸ್ ನೌ ಚಾನೆಲ್‌ನ ಈ ಮಾಜಿ ಮತ್ತು ಪ್ರಸ್ತುತ ಉದ್ಯೋಗಿಗಳೊಂದಿಗೆ ನಿಲ್ಲುವುದು ಎಂದು ಅನಿಲ್ ಸದ್ಗೋಪಾಲ್ ಕರೆ ನೀಡಿದ್ದಾರೆ.
ಇದನ್ನೂ ಓದಿ: ಜನರ ಸಂಕಷ್ಟ ಮರೆತು ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿರುವ ಟೈಮ್ಸ್ ನೌ: ಸಂಪಾದಕರಿಗೆ ಚಾನೆಲ್ ವರದಿಗಾರರ ‘ದಿಟ್ಟ ಪತ್ರ’



ಕೊನೆಗೂ ಪತ್ರಕರ್ತರು ಧ್ವನಿ ಎತ್ತುತ್ತಿರುವುದು ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಒಂದು ಒಳ್ಳೆಯ ಲಕ್ಷಣ. ಜನ ಇವರ ಪರವಾಗಿ ನಿಲ್ಲಬೇಕಾಗಿದೆ. ಸರ್ವಾಧಿಕಾರದ ದೌರ್ಜನ್ಯವನ್ನು ಖಂಡಿಸಬೇಕಾಗಿದೆ.
Rare incidents happened in the country,
Some of the godi media’s also voice against bjp bad govarnance,it’s very good
development,,,,