ಕೊರೊನಾ ಸೋಂಕಿತರಿಗಾಗಿ ಆಕ್ಸಿಜನ್ ಲಂಗರ್‌ ಆರಂಭಿಸಿದ ಗುರುದ್ವಾರ
PC: ANI

ಕೊರೊನಾ ಸೋಂಕಿತರಿಗಾಗಿ ಮಸೀದಿಗಳು, ಮಠಗಳು ಆಸ್ಪತ್ರೆಗಳಾಗಿ ಬದಲಾಗಿವೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಗುರುದ್ವಾರಗಳು ಆಮ್ಲಜನಕ ಬಿಕ್ಕಟಿನ ಹಿನ್ನೆಲೆಯಲ್ಲಿ ಆಕ್ಸಿಜನ್ ಒದಗಿಸಲು ದೆಹಲಿಯ ಗಾಜಿಯಾಬಾದ್ ಬಳಿ ಆಕ್ಸಿಜನ್ ಲಂಗರ್ ಆರಂಭಿಸಿವೆ.

ಕೊರೊನಾ ವೈರಸ್ ಸೋಂಕಿತರು ನವದೆಹಲಿ ಆಸ್ಪತ್ರೆಯಲ್ಲಿ ತುರ್ತು ಆರೈಕೆಯಲ್ಲಿರಬೇಕಾದವರೂ ಈಗ ಸಿಖ್ ಗುರುದ್ವಾರದ ಹೊರಗೆ ಕಾರಿನ ಹಿಂಬದಿಯ ಸೀಟಿನಲ್ಲಿ, ಬೆಂಚಿನ ಮೇಲೆ, ಮರದ ನೆರಳಿನಲ್ಲಿ ಆಕ್ಸಿಜನ್ ಮಾಸ್ಕ್ ತೊಟ್ಟು ಕುಳಿತಿದ್ದಾರೆ.

ನವದೆಹಲಿಯ ಹೊರವಲಯದಲ್ಲಿರುವ ಗಾಜಿಯಾಬಾದ್ ನಗರದ ಸಿಖ್ ಗುರುದ್ವಾರ (ದೇವಸ್ಥಾನ) ದಲ್ಲಿ, ಸಿಖ್ ನೆರವು ಗುಂಪು ಖಾಲ್ಸಾ ಹೆಲ್ಪ್ ಇಂಟರ್ನ್ಯಾಷನಲ್ ಸಂಸ್ಥೆ, ತುರ್ತು ಅಗತ್ಯವಿರುವವರಿಗೆ ಸಹಾಯ ಮಾಡಲು  ಕಡಿಮೆ ಪ್ರಮಾಣದಲ್ಲಿ ಆಮ್ಲಜನಕವನ್ನು ಖರೀದಿಸಿ, ನೀಡುತ್ತಿದೆ.

ಇದನ್ನೂ ಓದಿ: ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಉಡುಪಿ ಜಿಲ್ಲಾಧಿಕಾರಿ? ಅವರು ಹೇಳಿದ್ದೇನು?

ಕೊರೊನಾ ರೋಗಿಗಳು ಗುರುದ್ವಾರದ ಹೊರಗೆ ಕಾರುಗಳು, ವ್ಯಾನ್‌ಗಳು ಮತ್ತು ರಿಕ್ಷಾಗಳಲ್ಲಿ ಬೀದಿಯಲ್ಲಿಯೇ ನಿಲ್ಲಿಸಿಕೊಂಡು ಆಮ್ಲಜನಕದ ಮಾಸ್ಕ್ ಹಾಕಿಕೊಂಡು ಉಸಿರಾಡಲು ಹೋರಾಟ ನಡೆಸುತ್ತಿದ್ದಾರೆ. ಇತ್ತ ಸ್ವಯಂಸೇವಕರು ಆಮ್ಲಜನಕದ ಸಿಲಿಂಡರ್‌ಗಳನ್ನು ಹಿಡಿದಿದುಕೊಂಡು ಓಡಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

“ನನಗೆ ಬೇರೆಲ್ಲಿಯೂ ಸಹಾಯ ಸಿಗಲಿಲ್ಲ ಅದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಕಾರಿನಲ್ಲಿ ತನ್ನ ತಾಯಿ ದೇವಿಯವರ ಪಕ್ಕದಲ್ಲಿ ಕುಳಿತಿದ್ದ ಮನೋಜ್ ಕುಮಾರ್ ಹೇಳುತ್ತಾರೆ. ನಾನು ಆಕ್ಸಿಜನ್‌ಗಾಗಿ ಎಲ್ಲಾ ಕಡೆ ವಿಚಾರಿಸಿದೆ. ಆದರ ಎಲ್ಲೂ ಸಿಗಲಿಲ್ಲ. ತಕ್ಷಣ ನಾನು ಗುರುದ್ವಾರಗೆ ಕರೆ ಮಾಡಿದೆ. ಅವರು ತಕ್ಷಣ ಇಲ್ಲಿಗೆ ಬೇಗ  ತಲುಪಲು ತಿಳಿಸಿದರು” ಎಂದು ಕುಮಾರ್ ಹೇಳಿದ್ದಾರೆ.

ಗುರುದ್ವಾರದ ಅಧ್ಯಕ್ಷ ಮತ್ತು ಖಲ್ಸಾ ಹೆಲ್ಪ್ ಇಂಟರ್‌ನ್ಯಾಷನಲ್‌ನ ಸಂಸ್ಥಾಪಕ ರಮ್ಮಿ, ನವದೆಹಲಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಮೂರು ದಿನಗಳ ಹಿಂದೆ ಆಕ್ಸಿಜನ್ ಲಂಗರ್‌ ಸೇವೆಯನ್ನು ನೀಡಲು ಪ್ರಾರಂಭಿಸಿದೆ. ಜನರು ಕೊರೊನಾದಿಂದ ಬೀದಿಗಳಲ್ಲಿ ಸಾಯುತ್ತಿದ್ದಾರೆ. ಅದಕ್ಕಾಗಿಯೇ ನಾವು ಇದನ್ನು ಪ್ರಾರಂಭಿಸಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜಕೀಯ ಕೆಲಸ ಬಿಟ್ಟು, ಜನರ ಸಹಾಯಕ್ಕೆ ನಿಲ್ಲುವಂತೆ ಕಾರ್ಯಕರ್ತರಲ್ಲಿ ರಾಹುಲ್ ಗಾಂಧಿ ಮನವಿ

ಖಲ್ಸಾ ಹೆಲ್ಪ್ ಇಂಟರ್ನ್ಯಾಷನಲ್ ಗ್ರೂಪ್ ಇಲ್ಲಿಯವರೆಗೆ ಸುಮಾರು 700 ರೋಗಿಗಳನ್ನು ಉಳಿಸಿದೆ ಎಂದು ರಮ್ಮಿ ಅಂದಾಜು ಮಾಡಿದ್ದಾರೆ.


ಇದನ್ನೂ ಓದಿ: ಆಕ್ಸಿಜನ್ ಬಿಕ್ಕಟ್ಟಿನಲ್ಲಿ ಹಲವು ರಾಜ್ಯಗಳು, ನಮ್ಮಲ್ಲಿ ಕೊರತೆಯಿಲ್ಲ ಎಂದ ಉತ್ತರಪ್ರದೇಶ ಸಿಎಂ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

2 COMMENTS

LEAVE A REPLY

Please enter your comment!
Please enter your name here