ಏರ್ ಇಂಡಿಯಾ ವಿಮಾನದಲ್ಲಿ ಸಸ್ಯಾಹಾರಿ ಜೈನ ಪ್ರಯಾಣಿಕರೊಬ್ಬರಿಗೆ ಮಾಂಸಾಹಾರಿ ಆಹಾರವನ್ನು ಬಡಿಸಿದ ಘಟನೆ ಬೆಳಕಿಗೆ ಬಂದ ನಂತರ, ಜೈನ ಸಮುದಾಯ ಮತ್ತು ಗುಜರಾತ್ ಪ್ರಾಣಿ ಕಲ್ಯಾಣ ಮಂಡಳಿಗಳು ಆಂತರಿಕ ವಿಮಾನಯಾನಗಳಲ್ಲಿ ಮಾಂಸಹಾರ ಊಟವನ್ನು ನಿಷೇಧಿಸುವಂತೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿವೆ.
“ಸಸ್ಯಾಹಾರಿ ಪ್ರಯಾಣಿಕರ ಪರವಾಗಿ ಈ ವಿನಂತಿಯನ್ನು ಮಾಡಲಾಗುತ್ತಿದೆ… ಕಟ್ಟುನಿಟ್ಟಾಗಿ ಸಸ್ಯಾಹಾರವನ್ನು ಪಾಲಿಸುವ ಪ್ರಯಾಣಿಕರು ಸಸ್ಯಾಹಾರಿ ಆಹಾರದ ಬದಲಿಗೆ ಮಾಂಸಾಹಾರಿ ಆಹಾರವನ್ನು ಪಡೆದಾಗ ಹೆಚ್ಚು ತೊಂದರೆ ಮತ್ತು ಅಸಮಾಧಾನಕ್ಕೆ ಒಳಗಾಗುತ್ತಾರೆ” ಎಂದು ಮಂಡಳಿಯ ಸದಸ್ಯ ರಾಜೇಂದ್ರ ಶಾ ಪತ್ರದಲ್ಲಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಗುಜರಾತ್ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ರಾಜೇಂದ್ರ ಶಾ, “ಕಟ್ಟುನಿಟ್ಟಾಗಿ ಸಸ್ಯಾಹಾರಿ ಪಾಲಿಸುವ ಜನರು, ಸಸ್ಯಾಹಾರಿ ಆಹಾರದ ಬದಲಿಗೆ ಇಂತಹ ಮಾಂಸಾಹಾರಿ ಆಹಾರವನ್ನು ಪಡೆದು ಮನನೊಂದಿದ್ದಾರೆ ಮತ್ತು ತೊಂದರೆ ಅನುಭವಿಸುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾಂಸಾಹಾರಿ ಸಮುದಾಯಗಳ ರಾಕ್ಶಸೀಕರಣ ನಿಲ್ಲಲಿ
ಟೋಕಿಯೊದಿಂದ ದೆಹಲಿಗೆ ತನ್ನ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸುತ್ತಿದ್ದ ರಾಘವೇಂದ್ರ ಜೈನ್‌ಗೆ ಆಕಸ್ಮಿಕವಾಗಿ ಮಾಂಸಾಹಾರಿ ಊಟವನ್ನು ಬಡಿಸಿದ್ದರಿಂದ ಜೈನ ಸಮುದಾಯ ವಿಮಾನಗಳಲ್ಲಿ ಮಾಂಸಹಾರವನ್ನು ನಿಷೇಧ ಮಾಡುವಂತೆ ಒತ್ತಾಯಿಸಿದೆ.
ಮಾರ್ಚ್ 25 ರಂದು ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನ ಸಿಬ್ಬಂದಿಯ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ತನಗೆ ಮಾಂಸಾಹಾರಿ ನೀಡಿದ್ದಾರೆ ಎಂದು ರಾಘವೇಂದ್ರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ತಾನು ಸಸ್ಯಾಹಾರಿ ಆಹಾರವನ್ನು ಮೊದಲೇ ಬುಕ್ ಮಾಡಿದ್ದೆ ಮತ್ತು ಚೆಕ್-ಇನ್ ಕೌಂಟರ್‌ನಲ್ಲಿ ಅದನ್ನು ದೃಢಪಡಿಸಿದ್ದೆ ಎಂದು ಜೈನ್ ಹೇಳಿದ್ದಾರೆ. ಆದರೆ ಪುನರಾವರ್ತಿತ ದೃಢೀಕರಣದ ನಂತರವೂ ಸಿಬ್ಬಂದಿ ಅವರಿಗೆ ಮಾಂಸಾಹಾರಿ ಆಹಾರವನ್ನು ನೀಡಿದ್ದಾಗಿ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಕೆಲವು ಜನರ ಅಹಂ ತಣಿಸಲು ಹೊರಗಡೆ ಮಾಂಸಾಹಾರ ಮಾರಾಟ ಮಾಡಬೇಡಿ ಎನ್ನುತ್ತೀರಿ’: ಚಾಟಿ ಬೀಸಿದ ಗುಜರಾತ್ ಹೈಕೋರ್ಟ್
ಅವರು ಸಿಬ್ಬಂದಿಯೊಂದಿಗೆ ಮರುಪರಿಶೀಲಿಸುವಂತೆ ಹೇಳಿದರೂ, ಅವರು ಅದನ್ನು ಮಾಂಸಾಹಾರಿ ಆಹಾರವಲ್ಲ, ಸಸ್ಯಾಹಾರಿ ಆಹಾರ ಎಂದು ಅವರಿಗೆ ಭರವಸೆ ನೀಡಿ ಅವರಿಗೆ ನೀಡಿದ್ದಾಗಿ ದೂರಿದ್ದಾರೆ. “ತಮ್ಮ ತಪ್ಪಿಗಾಗಿ ಸಿಬ್ಬಂದಿ ಕ್ಷಮೆಯಾಚಿಸಲಿಲ್ಲ, ವಾಸ್ತವವಾಗಿ, ಪ್ರಯಾಣದುದ್ದಕ್ಕೂ ನನಗೆ ಕಿರುಕುಳ ನೀಡಿದರು” ಎಂದು ಅವರು ಹೇಳಿದ್ದಾರೆ.
ಈ ಘಟನೆಯ ನಂತರ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಏರ್ ಇಂಡಿಯಾದ ಟೋಕಿಯೊದಿಂದ ದೆಹಲಿ ವಿಮಾನದ ಸಿಬ್ಬಂದಿಗೆ ಹಾರಾಟವನ್ನು ನಿಷೇಧಿಸಲಾಗಿದೆ. ಆಹಾರವನ್ನು ಒತ್ತಾಯ ಮಾಡಿ ತಿನ್ನಿಸಿರುವ ವಿವಾದದ ನಡುವೆ ಜೈನ ಸಮುದಾಯ ಮತ್ತು ಗುಜರಾತ್ ಪ್ರಾಣಿ ಕಲ್ಯಾಣ ಮಂಡಳಿಗಳು ವಿಮಾನಗಳಲ್ಲಿ ಮಾಂಸದ ಊಟವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಪತ್ರವನ್ನು ಬರೆದಿದೆ.
ಹಿಂದಿನ ವಾರವಷ್ಟೆ, ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ನವರಾತ್ರಿ ಹಬ್ಬದ 9 ದಿನಗಳ ಕಾಲ ಪುರಸಭೆಯ ವ್ಯಾಪ್ತಿಯಲ್ಲಿರುವ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದೆ. ಇದರ ಬೆನ್ನಲ್ಲೇ, ಪೂರ್ವ ದೆಹಲಿ ಮೇಯರ್ ಶ್ಯಾಮ್ ಸುಂದರ್ ಅಗರ್ವಾಲ್ ಮತ್ತು ಗಾಜಿಯಾಬಾದ್ ಮೇಯರ್ ಆಶಾ ಶರ್ಮಾ ಅವರು ನವರಾತ್ರಿಯಲ್ಲಿ ಮಾಂಸ ಮಾರಾಟ ಮಾಡದಂತೆ ಮತ್ತು ಅಂಗಡಿಗಳನ್ನು ಮುಚ್ಚುವಂತೆ ಮಾಂಸ ಮಾರಾಟಗಾರರಿಗೆ ಸೂಚಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಮಾಂಸಾಹಾರದ ಮೇಲಿನ ಕೀಳರಿಮೆ ತೊಲಗಬೇಕಿದೆ: ಚಿತ್ರಸಾಹಿತಿ ಕವಿರಾಜ್ ಬರಹಕ್ಕೆ ಮಿಡಿದ ಕನ್ನಡಿಗರು



Instead of taking action on that staff why to induce your veg rule to others ,