Homeಮುಖಪುಟಕೆನಡಾ ಚುನಾವಣೆ: ಮೂರನೇ ಅವಧಿಯಲ್ಲೂ ಲಿಬರಲ್ಸ್‌‌‌ನ ಜೆಸ್ಟಿನ್‌ ಮೇಲುಗೈ

ಕೆನಡಾ ಚುನಾವಣೆ: ಮೂರನೇ ಅವಧಿಯಲ್ಲೂ ಲಿಬರಲ್ಸ್‌‌‌ನ ಜೆಸ್ಟಿನ್‌ ಮೇಲುಗೈ

- Advertisement -
- Advertisement -

ಕೆನಡಾ ದೇಶದ ಚುನಾವಣೆ (2021)ಯಲ್ಲಿ ಲಿಬರಲ್ಸ್‌‌ ಪಾರ್ಟಿ ಮೇಲುಗೈ ಸಾಧಿಸಿದ್ದು, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕೆನಡಾ ಪ್ರಜೆಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮುಂಜಾನೆಯಿಂದಲೇ ಫಲಿತಾಂಶ ಹೊರ ಬೀಳುತ್ತಿದ್ದು, ಇನ್ನೂ ಪೂರ್ಣ ಪ್ರಮಾಣದ ಫಲಿತಾಂಶ ಹೊರಬಿದ್ದಿಲ್ಲ. ಲಿಬರಲ್ಸ್‌‌ ಮೇಲುಗೈ ಸಾಧಿಸಿದ್ದರೂ ಪೂರ್ಣ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

49 ವರ್ಷ ವಯಸ್ಸಿನ ಜಸ್ಟಿನ್ ಟ್ರುಡೊ ಅವರು 2015ರಲ್ಲಿ ಅಧಿಕಾರ ಹಿಡಿದು, ಅತ್ಯಂತ ಕಿರಿಯ ವಯಸ್ಸಿನಲ್ಲೇ ಕೆನಡಾ ಪ್ರಧಾನಿಯಾದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜೆಸ್ಟಿನ್‌ ಅವರ ತಂದೆ ಪೆರ್‍ರಿ ಟ್ರುಡೋ ಕೆನಡಾ ದೇಶದ ರಾಜಕಾರಣಿ ಹಾಗೂ 15ನೇ ಪ್ರಧಾನಿಯಾಗಿದ್ದರು. 2013ರಲ್ಲಿ ಜೆಸ್ಟಿನ್‌ ಲಿಬರಲ್‌ ಪಾರ್ಟಿಯ ನಾಯಕರಾಗಿದ್ದರು. 2015ರಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿದ್ದರು.

2019ರಲ್ಲಿ 157 ಸ್ಥಾನಗಳಲ್ಲಿ ಲಿಬರಲ್‌ ಪಾರ್ಟಿ ಗೆದ್ದಿತ್ತು. ಅಷ್ಟೇ ಸ್ಥಾನಗಳಲ್ಲಿಯೇ 2021ರ ಚುನಾವಣೆಯಲ್ಲಿಯೂ ಮುನ್ನಡೆ ಕಾಯ್ದುಕೊಂಡಿದೆ. ಬಹುಮತಕ್ಕೆ 170 ಸ್ಥಾನಗಳು ಬೇಕಿದ್ದು, 13 ಸ್ಥಾನಗಳ ಕೊರತೆ ಉಂಟಾಗಿದೆ.

121 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕನ್ಸರ್‌ವೇಟಿವ್ ಪಕ್ಷವು 2019ರ ಚುನಾವಣೆಯಲ್ಲಿಯೂ ಇಷ್ಟೇ ಸ್ಥಾನಗಳಲ್ಲಿ ಗೆದ್ದಿತ್ತು. ಲೆಫ್ಟಿಸ್ಟ್‌ ನ್ಯೂ ಡೆಮಕ್ರಟಿಕ್‌ ಪಕ್ಷವು 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಕೆನಡಾ ದೇಶದಲ್ಲಿ ಕೋವಿಡ್‌ ಲಸಿಕಾ ಕಾರ್ಯ ಬಿರುಸಾಗಿ ನಡೆದಿದ್ದರಿಂದ ಟ್ರಡೋ ಮೇಲುಗೈ ಸಾಧಿಸಿದರು ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ಸಂಪೂರ್ಣ ಲಸಿಕೆಯಾದ ದೇಶಗಳಲ್ಲಿ ಕೆನಡಾ ಮುಂಚೂಣಿಯಲ್ಲಿದೆ. ಲಸಿಕಾ ಕಾರ್ಯಕ್ರಮಕ್ಕಾಗಿ ನೂರು ಬಿಲಿಯನ್‌ಗೂ ಹೆಚ್ಚು ಹಣವನ್ನು ಟ್ರುಡೋ ಖರ್ಚು ಮಾಡಿದ್ದರು ಎನ್ನಲಾಗಿದೆ. ಕನ್ಸರ್‌ವೇಟಿವ್‌ ವಿಜ್ಞಾನಕ್ಕೆ ವಿರೋಧಿಯಾಗಿದೆ ಎಂದು ಟ್ರುಡೋ ಪ್ರಚಾರ ಮಾಡಿದ್ದರು.


ಇದನ್ನೂ ಓದಿ: ಅಲ್ಬೇನಿಯಾ ದಾಖಲೆ – ದೇಶದ ಸಚಿವ ಸಂಪುಟದಲ್ಲಿ 70.5% ಮಹಿಳೆಯರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...