Homeಎಕಾನಮಿನೂರಾರು ಕಂಪನಿಗಳಲ್ಲಿ ಸಾವಿರಾರು ಕೋಟಿ ಹೂಡಿರುವ ಎಲ್.ಐ.ಸಿ : ಆಗಿದ್ದರೂ ಮಾರುತ್ತಿರುವುದೇಕೆ?

ನೂರಾರು ಕಂಪನಿಗಳಲ್ಲಿ ಸಾವಿರಾರು ಕೋಟಿ ಹೂಡಿರುವ ಎಲ್.ಐ.ಸಿ : ಆಗಿದ್ದರೂ ಮಾರುತ್ತಿರುವುದೇಕೆ?

ಬ್ಯಾಂಕಿಂಗ್, ಐಟಿ, ಆಟೋ ಮೊಬೈಲ್, ಸಿಮೆಂಟ್‌, ವಿದ್ಯುತ್‌ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಎಲ್‌.ಐ.ಸಿಯ ಕೋಟ್ಯಾಂತರ ಬೆಲೆ ಬಾಳುವ ಷೇರುಗಳನ್ನು ಹೊಂದಿದೆ. ಆದರೂ ಸರ್ಕಾರ ಇದನ್ನೇ ಮಾರಲು ಹೊರಟಿದೆ..

- Advertisement -
- Advertisement -

ದೇಶದ ಸಾರ್ವಜನಿಕ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ ದೇಶ-ವಿದೇಶಗಳ 65ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಲ್ಲಿ ನೂರಾರು ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದೆ. ಹೀಗೆ ಹೂಡಿಕೆ ಮಾಡಿರುವ ಶೇರುಗಳ ಡಿವಿಡೆಂಡ್ ಒಂದರಿಂದಲೇ ವಾರ್ಷಿಕ  1 ಲಕ್ಷ 76 ಸಾವಿರ ಕೋಟಿ ರೂಪಾಯಿ ಲಾಭಾಂಶ ಪಡೆದಿರುವ ಸಂಸ್ಥೆ ದೇಶಕ್ಕೆ ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡುತ್ತಲೇ ಬರುತ್ತಿದೆ. ಲಾಭದ-ಪೈಪೋಟಿ ಜೊತೆಗೆ ಜನರ ವಿಶ್ವಾಸ ಗಳಿಸುತ್ತ ಸರ್ಕಾರಕ್ಕೂ ಲಾಭದ ಪಾಲು ಕೊಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.

ಜೀವ ವಿಮಾ ನಿಗಮ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಹೂಡಿಕೆ ಮಾಡಿದೆ. ಸರ್ಕಾರಿ ಮತ್ತು ಖಾಸಗೀ ಸೇರಿಂದತೆ 21 ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂಪಾಯಿ ಶೇರುಗಳನ್ನು ಹೊಂದಿದೆ. ಐಡಿಬಿಐಯಲ್ಲಿ ಶೇ.51ರಷ್ಟು ಶೇರುಗಳನ್ನು ತೊಡಗಿಸಿದೆ.  ಆಕ್ಸಿಸ್ ಬ್ಯಾಂಕ್ ನಲ್ಲಿ ಶೇ.10.37ರಷ್ಟು, ಐಸಿಐಸಿಐ ಬ್ಯಾಂಕ್ ನಲ್ಲಿ ಶೆ.10.37ರಷ್ಟು, ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 9.25ರಷ್ಟು, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ 7.4ರಷ್ಟು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 7.3ರಷ್ಟು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇ.6.4ರಷ್ಟು, ಕರ್ನಾಟಕ ಬ್ಯಾಂಕ್ ನಲ್ಲಿ ಶೇ.4.97ರಷ್ಟು ಹೂಡಿಕೆ ಮಾಡಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ 5 ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲೂ ಎಲ್.ಐ.ಸಿ ಶೇರುಗಳನ್ನು ಹೂಡಿಕೆ ಮಾಡಿದೆ. ವಿಶ್ವದ ಐಟಿ ದಿಗ್ಗಜ ಇನ್ಫೋಸಿಸ್ ನಲ್ಲಿ ಶೇ.5.85ರಷ್ಟು ಶೇರುಗಳನ್ನು ತೊಡಗಿಸಿದೆ. ವಿಪ್ರೋದಲ್ಲಿ ಶೇ.4.81ರಷ್ಟು, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನಲ್ಲಿ ಶೇ.3.98 ಹಾಗೂ ಒರೆಕಲ್ ಪಿಸ್‌ನಲ್ಲಿ 2.12ರಷ್ಟು ಶೇರುಗಳನ್ನು ಹಾಕಿದೆ.

ಕನಿಷ್ಟ 5 ಯುಟಿಲಿಟಿ ಕಂಪನಿಗಳಲ್ಲೂ ಹೂಡಿಕೆ ಮಾಡಿರುವ ಎಲ್ಐಸಿ ಅಲ್ಲಿಂದಲೂ ಲಾಂಭಾಂಶ ಪಡೆಯುತ್ತಿದೆ. ಬಾಟ ಕಂಪನಿಯಲ್ಲಿ ಶೇ.3.05ರಷ್ಟು, ಪೆಡಿಲೈಟ್ ಇಂಡಸ್ಟ್ರೀಯಲ್ಲಿ 1.56ರಷ್ಟು, ವಿಡಿಯೋ ಕಾನ್ ಕಂಪನಿಯಲ್ಲಿ 4.56ರಷ್ಟು ಶೇರುಗಳನ್ನು ತೊಡಗಿಸಿದೆ. ಔಷಧಿ ಕಂಪನಿಗಳಲ್ಲೂ ಎಲ್ಐಸಿ ತನ್ನ ಪಾರುಪತ್ಯವನ್ನು ಮೆರೆದಿದೆ. ಐದು ಪ್ರತಿಷ್ಠಿತ ಕಂಪನಿಗಳಾದ ಸನ್ ಫಾರ್ಮ, ಡಾ.ರೆಡ್ಡಿ ಲ್ಯಾಬರೋಟರಿ, ಕೆಡಿಲಾ ಹೆಲ್ತ್ ಕೇರ್ ಕಂಪನಿಗಳಲ್ಲಿ  ಶೇ. 14ರಷ್ಟು ಹಣವನ್ನು ಹೂಡಿಕೆ ಮಾಡಿದೆ.

ಅಖಿಲ ಭಾರತ ವಿಮಾ ನೌಕರರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಹೇಳುವಂತೆ, ವಿಮಾ ನಿಗಮದಲ್ಲಿ ಹೂಡಿಕೆ ವಿಭಾಗವಿದೆ. ಅದು ಯಾವ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ವರುತ್ತದೆ ಎಂಬ ಬಗ್ಗೆ ಆಲೋಚಿಸಿ ಹಣವನ್ನು ತೊಡಗಿಸುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಐಸಿ ಕೂಡ ಮಾರುಕಟ್ಟೆಯಲ್ಲಿ ಇರಲೇಬೇಕು. ಹಾಗಾಗಿ ಹೂಡಿಕೆ ವಿಭಾಗ ಬ್ಲೂಚಿಪ್ ಕಂಪನಿಗಳಲ್ಲಿ ಹೂಡಿಕೆಗೆ ತೊಡಗುತ್ತದೆ. ಅತ್ಯಂತ ವಿಶ್ವಾಸಾರ್ಹ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಹೂಡುವುದರಿಂದ ಲಾಭವೂ ಬರುತ್ತದೆ. ಪೈಪೋಟಿಯನ್ನೂ ನೀಡಿದಂತಾಗುತ್ತದೆ. ಪಾಲಿಸಿದಾರರು ಮತ್ತು ಸರ್ಕಾರಕ್ಕೆ ಲಾಭವನ್ನು ನೀಡಲು ಅನುಕೂಲವಾಗುತ್ತದೆ ಎನ್ನುತ್ತಾರೆ.

ದೇಶದ 5 ಪ್ರಮುಖ ಆಟೋ ಮೊಬೈಲ್ ಕಂಪನಿಗಳಲ್ಲು ಎಲ್ಐಸಿ ಕೋಟ್ಯಂತರ ರೂಪಾಯಿ ಹೂಡಿದೆ. ಈ ಕಂಪನಿಗಳ ಪೈಕಿ ಟಿವಿಎಸ್ ನಲ್ಲಿ 1.7ರಷ್ಟು ಹೂಡಿಕೆ ಮಾಡಿದ್ದರೆ ಬಜಾಜ್ ಕಂಪನಿಯಲ್ಲಿ 4.6ರಷ್ಟು ಹಾಗೂ ಹಿರೋ ಹೋಂಡಾ ಕಂಪನಿಯಲ್ಲಿ ಶೇ.5.54ರಷ್ಟು ಮತ್ತು ಅಶೋಕ ಲೈಲ್ಯಾಂಡ್ ನಲ್ಲಿ 1.36ರಷ್ಟು ಶೇರುಗಳನ್ನು ತೊಡಗಿಸಲಾಗಿದೆ. ಜೊತೆಗೆ ಒಎಂಸಿ ಕಂಪನಿಗಳಲ್ಲೂ ಹಣ ತೊಡಗಿಸಲಾಗಿದೆ. ಕ್ಯಾಸ್ಟ್ರೋಲ್ ಕಂಪನಿಯಲ್ಲಿ 10.32ರಷ್ಟು, ಓಎನ್.ಜಿ.ಸಿಯಲ್ಲಿ 9.48ರಷ್ಟು ಐಓಸಿಎಲ್ ನಲ್ಲಿ 6.51 ಮತ್ತು ಬಿಪಿಸಿಲ್ ನಲ್ಲಿ 5.88ರಷ್ಟು ಶೇರುಗಳನ್ನು ಹೂಡಿಕೆ ಮಾಡಲಾಗಿದೆ.

ವಿದ್ಯುತ್ ವಲಯದ 5 ಕಂಪನಿಗಳಾದ ಪವರ್ ಗ್ರೀಡ್ ನಲ್ಲಿ 4.89 ರಷ್ಟು ಕೆಇಸಿ ಇನ್  ನಲ್ಲಿ ಶೇ.1.7ರಷ್ಟು, ಜೆ.ಇ. ಪವರ್ ಕಂಪನಿಯಲ್ಲಿ 1.63ರಷ್ಟು ಶೇರುಗಳು ಇವೆ. ದೇಶದಲ್ಲಿ ಹೆಸರು ಮಾಡಿರುವ ಸಿಮೆಂಟ್ ಕಂಪನಿಗಳಲ್ಲೂ ಹಣ ಹೂಡಿಕೆ ಮಾಡಲಾಗಿದೆ. ಎಸಿಸಿ-6.5ರಷ್ಟು, ಅಂಬುಜ ಸಿಮೆಂಟ್ ಕಂಪನಿಯಲ್ಲಿ 4.80ರಷ್ಟು, ಲಕ್ಷ್ಮಿ ಸಿಮೆಂಟ್ ನಲ್ಲಿ 2.46ರಷ್ಟು ಆಲ್ಟ್ರಾಟೆಕ್ ನಲ್ಲಿ ಶೇ.4.06ರಷ್ಟು ಹೂಡಿಕೆಯಾಗಿದೆ. ಅಂದರೆ ನಾಲ್ಕು ಸಿಮೆಂಟ್ ಕಂಪನಿಗಳಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದು ಅಲ್ಲಿಂದಲೂ ಲಾಭದ ಹಣವನ್ನು ಎಲ್ಐಸಿ ಪಡೆದುಕೊಳ್ಳುತ್ತಿದೆ.

ಉಕ್ಕು ತಯಾರಿಕೆ ಕಂಪನಿಗಳಾದ ಎಸ್ಎಐಎಲ್ ನಲ್ಲಿ 9.6ರಷ್ಟು, ಟಾಟಾ ಸ್ಟೀಲ್ ಕಂಪನಿಯಲ್ಲಿ 9ರಷ್ಟು ವೇದಾಂತ ಕಂಪನಿಯಲ್ಲಿ 6.39ರಷ್ಟು, ನಾಲ್ಕೋದಲ್ಲಿ 5.27ರಷ್ಟು ಹೂಡಕೆಯಾಗಿದೆ. ಎರಡು ಖಾಸಗಿ ವಿಮಾ ಸಂಸ್ಥೆಗಳಲ್ಲೂ ಭಾರತೀಯ ಜೀವ ವಿಮಾ ನಿಗಮದಿಂದ ಹೂಡಿಕೆ ಮಾಡಿದ್ದು ಅಂತಾರಾಷ್ಟ್ರೀಯ ಮಟ್ಟದ ಐಟಿಸಿ 16.32ರಷ್ಟು ಎಲ್ ಅಂಡ್ ಟಿ ಕಂಪನಿಯಲ್ಲಿ 16.9ರಷ್ಟು ಶೇರುಗಳನ್ನು ತೊಡಗಿಸಿ ಪ್ರತಿಯೊಂದು ಕ್ಷೇತ್ರದಿಂದಲೂ ಲಾಭ ಮಾಡುತ್ತಿದೆ. 2017ರಲ್ಲಿ  ಶೇರುಗಳ ಡಿವಿಡೆಂಡ್ ನಿಂದ 1.59 ಲಕ್ಷ ಕೋಟಿ ರೂಪಾಯಿ ಲಾಭ ಬಂದಿದೆ. ಅದು 2018ನೇ ಸಾಲಿನಲ್ಲಿ ಲಾಭಾಂಶದಲ್ಲಿ ಶೇ. 0.17ರಷ್ಟು ಹೆಚ್ಚಳವಾಗಿರುವುದು ಕಂಡು ಬಂದಿದೆ. ಅಂದರೆ 1.76 ಲಕ್ಷ ಕೋಟಿ ರೂಪಾಯಿ ಹಣ ಎಲ್ಐಸಿಗೆ ಬಂದಿದೆ.

ಎಲ್ಲಾ ವಲಯದಲ್ಲೂ ಹಣ ತೊಡಗಿಸಿ ಪೈಪೋಟಿ ನೀಡುತ್ತಿರುವ, ಲಾಭ ಗಳಿಸುತ್ತಿರುವ ಭಾರತೀಯ ಜೀವ ವಿಮಾ ನಿಗಮದ ಶೇರುಗಳನ್ನು ಸರ್ಕಾರ ಮಾರಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಯಾವುದೇ ಕಾರಣಕ್ಕೂ ಭಾರತ ಸರ್ಕಾರ ಇಂತಹ ಜನವಿರೋಧಿ ಕೃತ್ಯಕ್ಕೆ ಕೈಹಾಕದೆ ಸಾರ್ವಜನಿಕ ಉದ್ಯಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ಜನರಿಗೆ ಉದ್ಯೋಗ ನೀಡಬೇಕು. ಪಾಲಿಸಿದಾರರು ನೌಕರರ ಹಿತಕಾಯಲು ಮುಂದಾಗಬೇಕಾದ ಜರೂರತ್ತು ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...