Homeಮುಖಪುಟಬಸವ ತತ್ವ-ಸಂವಿಧಾನದ ಆಶಯ | ಕತ್ತಲು ಕವಿಯುವಾಗ ಮಿಣುಕು ದೀಪ : ಲಿಂಗಾಯತ ಮಠದ ಪೀಠವೇರಿದ...

ಬಸವ ತತ್ವ-ಸಂವಿಧಾನದ ಆಶಯ | ಕತ್ತಲು ಕವಿಯುವಾಗ ಮಿಣುಕು ದೀಪ : ಲಿಂಗಾಯತ ಮಠದ ಪೀಠವೇರಿದ ದಿವಾನ್ ಶರೀಫ್

- Advertisement -
- Advertisement -

ಮೇಲಿನ ತಲೆಬರಹವನ್ನು ‘ಲಿಂಗಾಯತ ಮಠದ ಪೀಠದಲ್ಲಿ ಮುಲ್ಲಾ’ ಎಂದು ಒಂದು ವ್ಯಾಟ್ಸಾಪ್ ಸಂದೇಶ ಅಥವಾ ಫೇಸ್‌ಬುಕ್ ಪೋಸ್ಟ್ ಹಾಕಿ ನೋಡಿ, ಈ ದೇಶದ ಸಂವಿಧಾನ, ಸರ್ವಧರ್ಮ ಗೌರವಿಸುವವರು ಕುತೂಹಲದಿಂದ, ‘ಒಳ್ಳೆ ಬೆಳವಣಿಗೆ. ವಿವರ ಕೊಡಿ’ ಎನ್ನುತ್ತಾರೆ. ಆದರೆ, ಹಿಂದೆ ಮುಂದೆ ನೋಡದ, ಹುಸಿ ದೇಶಭಕ್ತಿಯ ಅಮಲಿನಲ್ಲಿ ತೇಲುತ್ತಿರುವವರು ಟ್ರೋಲ್ ಮಾಡಲು ಆರಂಭಿಸುತ್ತಾರೆ.

ಇಂತಹ ಒಂದು ಬಿಕ್ಕಟ್ಟಿನ ಕಾಲದಲ್ಲೂ ಬೆಳ್ಳಿಗೆರೆಗಳು ಮೂಡುತ್ತಿವೆ. ಇವತ್ತಿನ ಸಾಮಾಜಿಕ-ಧಾರ್ಮಿಕ ತಲ್ಲಣಗಳನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ, ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಎಂಬ ಪುಟ್ಟ ಗ್ರಾಮದಲ್ಲಿ ಒಂದು ದೊಡ್ಡ ಕ್ರಾಂತಿ ನಡೆದಿದೆ. ಮುಸ್ಲಿಂ ಯುವಕನೊಬ್ಬ ಇಷ್ಟಲಿಂಗ ದೀಕ್ಷೆ ಪಡೆದು, ಬಸವ ತತ್ವದ ಮುರುಘರಾಜೇಂದ್ರ ಕೋರಣೇಶ್ವರ ಮಠದ (ಶಾಂತಿಧಾಮ) ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅನೇಕ ದಲಿತ, ಹಿಂದುಳಿದವರನ್ನು ತಮ್ಮ ಶಾಖಾಮಠಗಳಿಗೆ ನೇಮಿಸಿದ ಚಿತ್ರದುರ್ಗದ ಮುರುಘಾಮಠದ ಶಾಖಾ ಮಠಗಳಲ್ಲಿ ಈ ಅಸೂಟಿ ಮಠವೂ ಒಂದು.

ಈ ಹೊತ್ತಿನಲ್ಲಿ ಇದು ಏಕೆ ಮುಖ್ಯವೆಂದರೆ, ಧರ್ಮಾಧಾರಿತ ಪೌರತ್ವ ಪ್ರತಿಪಾದಿಸಲು ಹೊರಟ ಪಟ್ಟಭದ್ರ ಶಕ್ತಿಗಳಿಗೆ ಇಂತಹ ಸಣ್ಣ, ಆದರೆ ಧಾರ್ಮಿಕವಾಗಿ ಅತಿ ಮಹತ್ವದ್ದಾದ ಘಟನೆಗಳೇ ಉತ್ತರ ಕೊಡಬಲ್ಲವು. ಧರ್ಮದ ಆಧಾರದಲ್ಲಿ ವಿಭಜನೆ ನಿರೀಕ್ಷಿಸಿದ್ದವರು ಬೆಚ್ಚಿ ಬೀಳುವಂತೆ ದೇಶದ ಜನರು ಸಿಎಎ-ಎನ್‌ಆರ್‌ಸಿ ವಿರುದ್ಧ ಧರ್ಮಾತೀತರಾಗಿ ಬೀದಿಗಿಳಿದ ಈ ಹೊತ್ತಲ್ಲೇ, ಮುನ್ನಾ ಎಂಬ ಯುವಕ ಬಸವ ತತ್ವದ ಲಿಂಗಾಯತ ಮಠದ ಪೀಠಾಧಿಪತಿಯಾಗುತ್ತಿರುವುದು ಏಕತೆ, ಸೌಹಾರ್ದತೆಯ ಸಂದೇಶವನ್ನು ಗಾಢವಾಗಿ ಹರಡಲಿದೆ.

ಬಸವ ಪರಂಪರೆಯ ವಾರಸುದಾರರು
ಅಸೂಟಿಯ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿಗಳು ಅಪ್ಪಟ ಬಸವಪ್ರಿಯರು. ಆಚರಣೆಯಲ್ಲೂ ಅವರು ಅದನ್ನು ಪಾಲಿಸುತ್ತ ಬಂದಿದ್ದಾರೆ. ಅವರ ಪುಟ್ಟ ಮಠಕ್ಕೆ ಎಲ್ಲ ಜಾತಿ ಜನಾಂಗಗಳ ಭಕ್ತರಿದ್ದು, ಇಸ್ಲಾಂ ಧರ್ಮದವರೂ ಅನುಯಾಯಿಗಳಾಗಿದ್ದಾರೆ.

ಧರ್ಮ ನಿರಪೇಕ್ಷತೆ, ಜಾತ್ಯಾತೀತೆಗಳಲ್ಲಿ ನಂಬಿಕೆಯಿಟ್ಟ ಅಸೂಟಿಯ ಮುನ್ನಾ ಮತ್ತು ಆತನ ತಂದೆ-ತಾಯಿ ಕೋರಣೇಶ್ವರ ಮಠದ ಭಕ್ತರು. ಬಸವ ತತ್ವದಲ್ಲಿ ಮುನ್ನಾ ತೋರಿದ ಆಸಕ್ತಿ, ಆತನ ಕಲಿಕೆ, ನಿರ್ಮಲ ಮನಸ್ಸನ್ನು ಗಮನಿಸಿದ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿ, ಮುನ್ನಾಗೆ ಲಿಂಗದೀಕ್ಷೆ ನೀಡಿದ್ದಾರೆ. ಮುನ್ನಾ ಈಗ ದಿವಾನ್ ಶರೀಫ್ ಮುಲ್ಲಾ ಆಗಿದ್ದಾರೆ. ಫೆಬ್ರುವರಿ 20ರ ನಂತರ ನಡೆಯಲಿರುವ ಬಸವ ತತ್ವ ಉತ್ಸವದಲ್ಲಿ ದಿವಾನ್ ಶರೀಫರು ಅಧಿಕೃತವಾಗಿ ಮಠದ ಪೀಠವೇರಲಿದ್ದಾರೆ.

ಸೂಫಿ ಪರಂಪರೆಯ ನೆಲವಿದು
ಗೋವಿಂದ ಭಟ್ಟರು ಶಿಶುನಾಳ ಶರೀಫರಿಗೆ ಜನಿವಾರ ಹಾಕಿ ಜಾತಿ ಕಟ್ಟಳೆ ಮುರಿದಿದ್ದರು. ಈಗ ಅದೇ ಹಾದಿಯಲ್ಲಿ ಕೋರಣೇಶ್ವರ ಶ್ರೀಗಳು ಸಂವಿಧಾನ ಮತ್ತು ಬಸವ ತತ್ವಗಳ ಆಶಯಕ್ಕೆ ಅನುಗುಣವಾಗಿ ಇಸ್ಲಾಂ ಧರ್ಮದ ಯುವಕನಿಗೆ ಮನ್ನಣೆ ನೀಡಿದ್ದಾರೆ.

ಈ ದೇಶದ ಮಣ್ಣಲ್ಲಿ ಧರ್ಮಗಳು ಒಂದರಲ್ಲೊಂದಾಗಿ ಬೆರೆತು ಬದುಕಿದ ಭಾವಸೆಲೆಗಳಿವೆ. ಅಷ್ಟು ಸುಲಭವಾಗಿ ಕಾನೂನು, ಬಲಪ್ರಯೋಗ ಮೂಲಕ ಆ ಭಾವತಂತುವನ್ನು ಹರಿಯುವುದು ಸುಲಭವಲ್ಲ. ಈ ನೆಲದ ಸೂಫಿ ಪರಂಪರೆಯ ಗುಣಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಶಹೀನ್ ಬಾಗ್‌ನಲ್ಲಿ ಹಿಂದೂ-ಮುಸ್ಲಿಂ-ಸಿಖ್-ಜೈನ್ ಧರ್ಮದ ಹೆರ್ಣಮಕ್ಕಳೆಲ್ಲ ಸತತ 60ಕ್ಕೂ ಹೆಚ್ಚು ದಿನದಿಂದ ಒಡ್ಡುತ್ತಿರುವ ಪ್ರತಿರೋಧವೇ ಸಾಕ್ಷಿ. ಹಾಗೆಯೇ ಅಸೂಟಿಯಂತಹ ಪುಟ್ಟ ಹಳ್ಳಿಗಳಲ್ಲಿ ಮತ್ತೆ ಮತ್ತೆ ಬಸವ, ಕುವೆಂಪು ಹುಟ್ಟಿ ಬರುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಲಿಂಗದೀಕ್ಷೆಯೇ ಸಾಕ್ಷಿ.

32 ವರ್ಷದ ದಿವಾನ್ ಶರೀಫ ಮುಲ್ಲಾ ಕುಟುಂಬಕ್ಕೆ ಅಸೂಟಿ ಗ್ರಾಮದ ಹೊರವಲಯದಲ್ಲಿ ಎರಡು ಎಕರೆ ಜಮೀನಿತ್ತು. ಅದನ್ನೀಗ ಅವರು ಮಗನ ಜೊತೆ ಮಠಕ್ಕೆ ಧಾರೆ ಎರದಿದ್ದಾರೆ. ಅಲ್ಲೀಗ ಕೋರಣೇಶ್ವರ ಮಠವೊಂದನ್ನು ನಿರ್ಮಾಣ ಮಾಡುತ್ತಿದ್ದು, ಅದೇ ಮಠಕ್ಕೆ ಶರೀಫ ಪೀಠಾಧಿಪತಿ ಅಗಲಿದ್ದಾರೆ. ಶರೀಫ ಅವರಿಗೆ ಈಗಾಗಲೇ ಮದುವೆಯಾಗಿದ್ದು, ನಾಲ್ಕು ಜನ ಮಕ್ಕಳೂ ಸಹ ಇದ್ದಾರೆ. ತಂದೆ ರಹೀಮ ಸಾಬ್ ಹಾಗೂ ತಾಯಿ ಫಾತೀಮ ಕೋರಣೇಶ್ವರ ಮಠದ ಭಕ್ತರಾಗಿದ್ದರು. ಹಾಗಾಗಿ ತಮ್ಮ ಜಮೀನಿನಲ್ಲಿ ಮಠವನ್ನು ಕಟ್ಟಿಸಿ ಬಸವತತ್ವವನ್ನು ಪರಿಪಾಲನೆ ಮಾಡಬೇಕು ಎನ್ನುತ್ತಾರೆ ಮುಲ್ಲಾ ಶರೀಫ್ ಸ್ವಾಮಿ.

ಕಾರ್ಮೋಡಗಳ ಅಂಚಿನಲ್ಲಿ ಬೆಳ್ಳಿಗೆರೆ ಹುಟ್ಟವುದು ಹೀಗೆಯೇ ಅಲ್ಲವೇ? ಬಂದೇ ಬರುತಾವ ಕಾಲ ಎಂದು ಆಶಾವಾದಿಯಾದವರಿಗೆ ಯಾವ ಕೋಮುಶಕ್ತಿಯೂ ಅಲ್ಲಾಡಿಸಲು ಸಾಧ್ಯವಿಲ್ಲ. ಅಸೂಟಿ ಮಠದ ಈ ಪರಂಪರೆ ಉಳಿದ ಬಸವ ಮಠಗಳಿಗೂ ಹಬ್ಬಲಿ, ಮಾನವ ಧರ್ಮ ಎಲ್ಲೆಡೆ ಹರಡಲಿ. ಎಂದಿನಂತೆ ರಾಮ-ಭೀಮರು ಅಲಾಯಿ-ಕುಲಾಯಿ ಎಂದು ಕುಣಿಯಲಿ, ರಹೀಮರು ದೀಪಾವಳಿಯ ಚುರ್‌ಚುರ್ ಕಡ್ಡಿ ಬೆಳಗಲಿ.


ನಮ್ಮದು ಬಸವ ಪರಂಪರೆಯ ಮಠ. ಇಲ್ಲಿ ಎಲ್ಲ ಜಾತಿ-ಧರ್ಮಗಳಿಗೂ ಅವಕಾಶವಿದೆ. ಈ ನೆಲ ಸರ್ವ ಜನಾಂಗದ ಶಾಂತಿಯ ತೋಟ. ಈ ದೇಶದ ಎಲ್ಲರಿಗೂ ಅವರಿಗಿಷ್ಟವಾದ ಧರ್ಮವನ್ನು ಆಚರಿಸುವ ಹಕ್ಕನ್ನು ನಮ್ಮ ಸಂವಿಧಾನವೇ ನೀಡಿದೆ. ಹನ್ನೆರಡನೇ ಶತಮಾನದಲ್ಲೇ ನಮ್ಮ ಶರಣರು ಇದನ್ನು ಪ್ರತಿಪಾದಿಸಿದ್ದಾರೆ. ವಚನಕಾರ ಮರುಳ ಶಂಕರ ಅಫಘಾನಿಸ್ತಾನ ಮೂಲದ ಸೂಫಿ ಸಂತರು. ಇಲ್ಲಿ ಮುನ್ನಾ ದಿವಾನ್ ಶರೀಫರಾಗಿ ಪೀಠ ಏರುತ್ತಿರುವ ಘಟನೆ ಆಸ್ತಿಗಾಗಿ ಅಲ್ಲ, ಅಸ್ತಿತ್ವಕ್ಕಾಗಿ. ಮಾನವ ಧರ್ಮದ ಅಸ್ತಿತ್ವಕ್ಕಾಗಿ. ಈಗಂತೂ ಇದನ್ನು ಯಾರೂ ವಿರೋಧಿಸಿಲ್ಲ. ವಿರೋಧಿಸುವವರು ಬಂದರೆ, ಅವರಿಗೆ ಸೌಹಾರ್ದಯುತ ರೀತಿಯಲ್ಲಿ ಮನವರಿಕೆ ಮಾಡಿಕೊಡಲು ಸಿದ್ಧರಿದ್ದೇವೆ. ನಮ್ಮ ಚಿತ್ರದುರ್ಗ ಮುರುಘರಾಜೇಂದ್ರ ಸ್ವಾಮೀಜಿ ಈ ನಡೆಯನ್ನು ಬೆಂಬಲಿಸಿದ್ದಾರೆ.
-ಮುರುಘರಾಜೇಂದ್ರ ಕೋರಣೇಶ್ವರ ಶ್ರೀ, ಅಸೂಟಿ


ನನ್ನ ತಂದೆ, ತಾಯಿ ಮೊದಲಿನಿಂದಲೂ ಕೋರಣೇಶ್ವರ ಮಠದ ಭಕ್ತರು. ನಾನು ಓದಿದ್ದು ಮೂರನೇ ತರಗತಿ. ಆದರೆ ಬಸವ ತತ್ವಕ್ಕೆ ಆಕರ್ಷಿತನಾಗಿ ಮಾನವತೆಯೇ ದೊಡ್ಡ ಧರ್ಮ ಎಂದು ಅರಿತುಕೊಂಡಿದ್ದೇನೆ. ತಮ್ಮ ಇಷ್ಟದ ಧರ್ಮ ಆಚರಿಸಲು ಎಲ್ಲರಿಗೂ ಸ್ವಾತಂತ್ರ್ಯ ವಿದೆ. ಬಸವಧರ್ಮ ಯಾವ ತಾರತಮ್ಯವೂ ಇಲ್ಲದೇ ಎಲ್ಲರನ್ನೂ ಮನುಷ್ಯರೆಂದೇ ಪರಿಗಣಿಸುತ್ತದೆ.
-ದಿವಾನ್ ಶರೀಫ ಮುಲ್ಲಾ


ಕಳೆದ ವಾರವೇ ಈ ಸುದ್ದಿ ಕಿವಿಗೆ ಬಿದ್ದಾಗ ಖುಷಿಯಾಗಿತ್ತು. ಇವತ್ತಿನ ಈ ದುರಿತ ಕಾಲದಲ್ಲಿ ಇಂತಹ ಪುಟ್ಟ ಪುಟ್ಟ ದೀಪಗಳೇ ನಮಗೆ ಬೆಳಕು. ಸೂಫಿ ಮತ್ತು ಬಸವ ಪರಂಪರೆಯ ನೆರಳನ್ನು ಅಸೂಟಿ ಕ್ರಾಂತಿಯಲ್ಲಿ ಕಾಣುತ್ತಿದ್ದೇನೆ.
ಡಾ. ಅರುಣ್ ಜೋಳದಕೂಡ್ಲಿಗಿ, ಸಂಶೋಧಕ
ಕನ್ನಡ ವಿವಿ, ಹಂಪಿ


ಯಾರು ಯಾವ ಧರ್ಮ ಇಷ್ಟಪಡುತ್ತಾರೋ ಅದನ್ನು ಸ್ವೀಕರಿಸಲು ಸ್ವತಂತ್ರರು. ಮುನ್ನಾ ಎಂಬ ಯುವಕನ ಇಚ್ಛೆಯನ್ನು ಗೌರವಿಸಿ, ಆತನನ್ನು ಮಠವೊಂದಕ್ಕೆ ಪೀಠಾಧಿಪತಿ ಮಾಡುತ್ತಿರುವ ಸ್ವಾಮೀಜಿಯ ವೈಶಾಲ್ಯತೆ ದೊಡ್ಡದು. ಕುತೂಹಲದ ವಿಷಯ ನೋಡಿ: ಶರಣರ ಲಿಂಗಾಯತ ಮತ್ತು ಪ್ರವಾದಿಗಳ ಇಸ್ಲಾಂ ಧರ್ಮಗಳಲ್ಲಿ ಮೂರ್ತಿ ಪೂಜೆಯಿಲ್ಲ, ಏಕದೇವೋಪಾಸನೆಯೇ ಎರಡರಲ್ಲೂ ಆಚರಣೆಯಲ್ಲಿದೆ.
-ರಂಜಾನ ದರ್ಗಾ, ಚಿಂತಕ-ಲೇಖಕ, ಧಾರವಾಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...