ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೊರೊನಾ ಲಸಿಕೆ ಸರಬರಾಜುಗಳನ್ನು ಜೂನ್ ಮೊದಲ ವಾರದಿಂದಲೇ ಲೋಡ್ ಮಾಡುವಂತೆ ಕೇಂದ್ರವನ್ನು ಕೋರಿದ್ದಾರೆ. ಚೆಂಗಲ್‌ಪಟ್ಟಿಯಲ್ಲಿರುವ ಇಂಟಿಗ್ರೇಟೆಡ್ ಲಸಿಕೆ ಕಾಂಪ್ಲೆಕ್ಸ್‌ನಲ್ಲಿ ಲಸಿಕೆಗಳ ಉತ್ಪಾದನೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕು ಎಂಬ ಮನವಿಯನ್ನು ಅವರು ಮತ್ತೆ ಮಾಡಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷ್ ವರ್ಧನ್ ಅವರಿಗೆ ಬರೆದಿರುವ ಪತ್ರದಲ್ಲಿ, ತಮಿಳುನಾಡು ತನ್ನ ಜನಸಂಖ್ಯೆಯ ಗಾತ್ರ ಮತ್ತು ಸೋಂಕಿತರಿಗೆ ಅನುಗುಣವಾಗಿ ಲಸಿಕೆಗಳನ್ನು ಸ್ವೀಕರಿಸಿಲ್ಲ. ಇದನ್ನು ಕೇಂದ್ರ ಮತ್ತು ಇತರ ಮಾರ್ಗಗಳ ಮೂಲಕ 50 ಲಕ್ಷ ವಿಶೇಷ ಹಂಚಿಕೆಯಿಂದ ಮಾತ್ರ ಸರಿಪಡಿಸಬಹುದು ಎಂದು ಒತ್ತಿಹೇಳಿದ್ದಾರೆ.
ಇದನ್ನೂ ಓದಿ: ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ, ಕಠಿಣ ಕಾಯ್ದೆ ರೂಪಿಸಲು IMA ಆಗ್ರಹ
ಇತ್ತೀಚಿನ ಹಂಚಿಕೆಯಡಿಯಲ್ಲಿ, ಮೊದಲಿಗೆ 25.84 ಲಕ್ಷ ಡೋಸೇಜ್‌ಗಳು ಮತ್ತು ನಂತರ 16.74 ಲಕ್ಷ ಡೋಸುಗಳನ್ನು ನಮಗೆ ಹಂಚಿಕೆ ಮಾಡಲಾಗಿದೆ, ಈ ಹಂಚಿಕೆಗೆ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.
ಲಸಿಕೆಯ ಅನಿಶ್ಚಿತತೆಯನ್ನು ಹೋಗಲಾಡಿಸಲು ಕಳೆದ ಒಂದು ತಿಂಗಳಲ್ಲಿ ತಮಿಳುನಾಡು ಸರ್ಕಾರ ಕೈಗೊಂಡ ಪ್ರಯತ್ನಗಳು ಮತ್ತು ರಾಜ್ಯದ ಜನರಲ್ಲಿ ಲಸಿಕೆಗಳಿಗೆ ಅಪಾರ ಬೇಡಿಕೆಯನ್ನು ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರ ಹೇಗೆ ಯಶಸ್ವಿಯಾಗಿದೆ ಎಂಬುದನ್ನು ಮುಖ್ಯಮಂತ್ರಿ ಎತ್ತಿ ತೋರಿಸಿದರು.
ಇತರ ರಾಜ್ಯಗಳಿಗೆ ಹಂಚಿಕೆ ಮಾಡಿರುವ ಲಸಿಕೆಯಷ್ಟೇ ತಮಿಳುನಾಡಿಗೆ ಕೂಡಾ ಹಂಚಿಕೆ ಮಾಡಲಾಗಿದೆಯೆ ಎಂದು ಖಚಿತಪಡಿಸಬೇಕು ಎಂದು ತಮ್ಮ ಪತ್ರದಲ್ಲಿ ಕೇಂದ್ರ ಸರ್ಕಾರಕ್ಕೆ ಸ್ಟಾಲಿನ್ ಮತ್ತೆ ನೆನಪಿಸಿದ್ದಾರೆ.
ಚೆಂಗಲ್‌ಪಟ್ಟಿಯಲ್ಲಿರುವ ಲಸಿಕೆ ಕಾಂಪ್ಲೆಕ್ಸ್ ಅನ್ನು ಹಸ್ತಾಂತರಿಸುವಂತೆ ರಾಜ್ಯ ಸರ್ಕಾರದ ಮನವಿಯನ್ನು ಮುಖ್ಯಮಂತ್ರಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ವಿವಿಗಳಲ್ಲಿ ಯೋಗಿ ಆದಿತ್ಯನಾಥ್, ಬಾಬಾ ರಾಮದೇವ್ ಕುರಿತು ಪಠ್ಯ!


