Homeಮುಖಪುಟಲಾಕ್‌ಡೌನ್‌ ಶ್ರಮಜೀವಿಗಳ ಬದುಕನ್ನು ದುಸ್ತರಗೊಳಿಸಿದೆ: ಬಡಜನರ ಸ್ಥಿತಿಗತಿ ಬಿಚ್ಚಿಟ್ಟ ಜನಶಕ್ತಿಯ ಅಧ್ಯಯನ ವರದಿ

ಲಾಕ್‌ಡೌನ್‌ ಶ್ರಮಜೀವಿಗಳ ಬದುಕನ್ನು ದುಸ್ತರಗೊಳಿಸಿದೆ: ಬಡಜನರ ಸ್ಥಿತಿಗತಿ ಬಿಚ್ಚಿಟ್ಟ ಜನಶಕ್ತಿಯ ಅಧ್ಯಯನ ವರದಿ

ಅಧ್ಯಯನದ ಫಲಿತವಾಗಿ ಮುಂದಿಟ್ಟಿರುವ ಹಕ್ಕೊತ್ತಾಯಗಳು ಸಂಪೂರ್ಣವಾಗಿ ಕಾರ್ಯಸಾಧುವಾದವು ಮತ್ತು ನ್ಯಾಯೋಚಿತವಾದವುಗಳಾಗಿದ್ದು ಕೂಡಲೇ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಕುಮಾರ್‌ ಸಮತಳ, ಮಲ್ಲಿಗೆ ಸಿರಿಮನೆ, ಚಂದ್ರಶೇಖರ್‌, ವರದರಾಜೇಂದ್ರ, ಸತೀಶ್‌ ಮುಂತಾದವರನ್ನು ಒಳಗೊಂಡ ಕರ್ನಾಟಕ ಜನಶಕ್ತಿಯ ಸಾಮಾಜಿಕ ಅಧ್ಯಯನ ಸಮಿತಿ ಒತ್ತಾಯಿಸಿದೆ. 

- Advertisement -
- Advertisement -

ಕೊರೊನಾ ಕಾರಣಕ್ಕಾಗಿ ತೆಗೆದುಕೊಂಡ ಲಾಕ್‌ಡೌನ್‌ನಿಂದಾಗಿ ರಾಜ್ಯದ ಶ್ರಮಿಕರ, ದುಡಿಯುವವರ, ಬಡವರ ಜೀವನ ಅತ್ಯಂತ ಶೋಚನೀಯ ಮಟ್ಟಕ್ಕೆ ತಲುಪಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯು ನಡೆಸಿದ ಸಾಮಾಜಿಕ ಅಧ್ಯಯನ ವರದಿ ತಿಳಿಸಿದೆ.

ಶ್ರಮಜೀವಿಗಳ ಜನಾಗ್ರಹ ಅಭಿಯಾನ ಹೆಸರಿನಲ್ಲಿ ಏಪ್ರಿಲ್ 22 ರಿಂದ 28ರವರೆಗೆ, ಉತ್ತರ ಕರ್ನಾಟಕ, ಹಳೇ ಮೈಸೂರು ಪ್ರಾಂತ್ಯ, ಮುಂಬೈ ಕರ್ನಾಟಕ, ಮಲೆನಾಡು, ಬೆಂಗಳೂರು-ಹೀಗೆ ರಾಜ್ಯದ ವಿವಿಧ ಪ್ರದೇಶಗಳಿಗೆ ಸೇರಿದ 8 ಜಿಲ್ಲೆಗಳ 153 ಮಂದಿಯನ್ನು ಸಂದರ್ಶನ ನಡೆಸಿದ್ದು ಅದರ ವರದಿಯನ್ನು ಮೇ 1ರ ಕಾರ್ಮಿಕ ದಿನಾಚರಣೆಯಂದು ಬಿಡುಗಡೆ ಮಾಡಲಾಗಿದೆ. ವರದಿಯ ಪ್ರಮುಖ ಅಂಶಗಳು ಕೆಳಗಿನಂತಿವೆ.

ಆಹಾರದ ಲಭ್ಯತೆ

ಲಾಕ್‌ಡೌನ್‌ನಿಂದ ಕೂಲಿ, ಸಂಬಳ ಸಿಗದಿರುವುದರಿಂದ ಬಹಳಷ್ಟು ಜನರು ಹಸಿವಿನಿಂದ ನರಳುತ್ತಿದ್ದಾರೆ ಎಂಬ ಚರ್ಚೆಗಳ ನಡುವೆ ಈ ಅಧ್ಯಯನ ವರದಿಯೂ ಅದನ್ನೆ ಸೂಚಿಸುತ್ತದೆ. ಮುಂದಿನ ಒಂದು ತಿಂಗಳಿಗೆ ಆಗುವಷ್ಟು ದಿನಸಿ ತರಕಾರಿ ನಿಮಲ್ಲಿ ಲಭ್ಯವಿದೆಯೇ ಎಂಬ ಪ್ರಶ್ನೆಗೆ ಕೇವಲ 11% ಜನರು ಮಾತ್ರ ಅದಕ್ಕೆ ಶಕ್ತರಾಗಿದ್ದು ಉಳಿದ 89% ಜನರಿಗೆ ಆಹಾರದ ಕೊರತೆಯಿರುವುದನ್ನು ವರದಿ ಕಂಡುಕೊಂಡಿದೆ.

ಅಲ್ಲದೇ ದಿನಸಿಗಳನ್ನು ಕೊಳ್ಳಲು ನಿಮ್ಮಲ್ಲಿ ಹಣವಿದೆಯೇ ಎಂಬ ಪ್ರಶ್ನೆಗೆ ಕೇವಲ 6% ಜನ ಮಾತ್ರ ಹೌದು ಎಂದರೆ 94% ಜನರು ಇಲ್ಲ ಎಂದು ಉತ್ತರ ನೀಡಿದ್ದಾರೆ.

ಸರ್ಕಾರಿ ಸೌಲಭ್ಯಗಳು

ಇನ್ನು ಲಾಕ್‌ಡೌನ್‌ ಕಾರಣಕ್ಕಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಈ ಕುರಿತು ಕೇಳಲಾದ ಪ್ರಶ್ನೆಗೆ ಬಹಳ ನಿರಾಶದಾಯಕ ಉತ್ತರ ಸಿಕ್ಕಿದ್ದು ಶೇ.72% ಜನರು ಕೇವಲ ರೇಷನ್‌ ಸಿಕ್ಕಿದೆ ಎಂದು ಉತ್ತರಿಸಿದ್ದಾರೆ. ಇನ್ನು ಕೇವಲ 2% ಜನರಿಗೆ ಮಾತ್ರ ಹಣಕಾಸಿನ ಸೌಲಭ್ಯಗಳು ಸಿಕ್ಕಿದ್ದು, ಉಳಿದ ಶೇ.76% ಜನರಿಗೆ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ.

ಜನಪ್ರತಿನಿಧಿಗಳ ಸ್ಪಂದನೆ

ಈ ಸಮಯದಲ್ಲಿ ಜನರ ಕಷ್ಟ ನಷ್ಟಕ್ಕೆ ಆಯಾ ಕ್ಷೇತ್ರದ ಶಾಸಕರು, ಸಂಸದರು, ಸಚಿವರು ಹೇಗೆ ಪ್ರತಿಕ್ರಿಯಿಸಿದ್ದಾರೆ, ನಿಮ್ಮ ಕಷ್ಟಕ್ಕೆ ಸ್ಪಂದಿಸಿದ್ದಾರೆಯೇ ಎಂಬ ಪ್ರಶ್ನೆಗೆ 30% ಜನರು ಹೌದು ಎಂದಿದ್ದಾರೆ. ಉಳಿದ 70% ಜನರು ಇಲ್ಲ ಎಂದಿದ್ದಾರೆ.

ಅದೇ ಸಂದರ್ಭದಲ್ಲಿ ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ಪಂದಿಸಿದ್ದಾರೆಯೇ ಎಂಬ ಪ್ರಶ್ನೆಗೆ ಶೇ. 46ರಷ್ಟು ಜನರು ಹೌದು ಎಂದಿದ್ದಾರೆ. ಅಲ್ಲಿಗೆ ಜನಪ್ರತಿನಿಧಿಗಳಿಗಿಂತಲೂ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.

ಮುಂದೇನು?

ಇನ್ನು ಲಾಕ್‌ಡೌನ್‌ ಮುಗಿದ ನಂತರ ನಿಮಗೆ ಮೊದಲು ಮಾಡುತ್ತಿದ್ದ ಕೆಲಸವೇ ಸಿಗುವ ಭರವಸೆಯಿದೆಯೇ ಎಂಬ ಪ್ರಶ್ನೆಗೆ ಬಹಳಷ್ಟು ಜನರು (34%) ಇಲ್ಲ ಎಂಬ ಉತ್ತರ ನೀಡಿದ್ದಾರೆ. 31% ಜನರು ಸಂದೇಹವಿದೆ ಎಂದರೆ, ಕೇವಲ 7% ಜನರಿಗೆ ಮಾತ್ರ ಅದೇ ಕೆಲಸ ಸಿಗುವ ಖಾತ್ರಿಯಿದೆ.

ರೈತರು

ಲಾಕ್‌ಡೌನ್‌ ಇದ್ದರೂ ಕೃಷಿ ಚಟುವಟಿಕೆಗಳಿಗೆ ಮತ್ತು ಸಾಗಾಣಿಕೆ ಮಾರಾಟಕ್ಕೆ ತೊಂದರೆಯಿಲ್ಲ ಎಂದು ಸರ್ಕಾರ ಘೋಷಿಸಿದೆ. ಆದರೆ ಕೇವಲ 2% ಜನ ಮಾತ್ರ ತಮ್ಮ ಬೆಳೆಗಳನ್ನು ಲಾಭಕ್ಕೆ ಮಾರಾಟ ಮಾಡಿದ್ದಾರೆ. ಶೇ.46 ರಷ್ಟು ಜನರ ನಷ್ಟಕ್ಕೆ ಮಾರಿದ್ದಾರೆ. ಶೇ.50% ರಷ್ಟು ಜನರು ಭಾರೀ ಕಷ್ಟಪಟ್ಟು ತಮ್ಮ ಬೆಳೆಗಳನ್ನು ಮಾರಿದ್ದಾರೆ. ಶೇ.2 ರಷ್ಟು ಜನರು ಸ್ವಲ್ಪ ಮಾತ್ರ ಮಾರಿದ್ದಾರೆ.

ಗುತ್ತಿಗೆ ನೌಕರರು/ಕಾರ್ಮಿಕರು

ಗುತ್ತಿಗೆ ನೌಕರರು, ಕಾರ್ಮಿಕರಂತೂ ಸಂಪೂರ್ಣ ಭರವಸೆ ಕಳೆದುಕೊಂಡಿದ್ದಾರೆ. ಅವರಿಗೆ ತಮ್ಮ ಮುಂದಿನ ಭವಿಷದ್ಯದ ಕುರಿತು ಅನಿಶ್ಚಿತತೆ ಕಾಡುತಲಿದೆ.

ಈ ರೀತಿಯಾಗಿ ಒಟ್ಟಾರೆ ಅಧ್ಯಯನವು ಲಾಕಾ‌ಡೌನ್‌ ಯಾವುದೇ ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳದೇ ಘೋಷಿಸಲಾಗಿದೆ ಎಂಬ ಅಭಿಪ್ರಾಯಕ್ಕೆ ಬಂದಿದೆ. ಅಲ್ಲದೇ ಲಾಕ್‌ಡೌನ್‌ ಮುಗಿದರೂ ಜನರ ಬದುಕು ಯಥಾಸ್ಥಿತಿಗೆ ಬರಲು ಸರ್ಕಾರದ ಬಲವಾದ ಇಚ್ಛಾಶಕ್ತಿ ಮತ್ತು ಮಧ್ಯಪ್ರವೇಶವನ್ನು ಕೇಳುತ್ತದೆ. ಅದಕ್ಕಾಗಿ ಕರ್ನಾಟಕ ಜನಶಕ್ತಿಯ ವರದಿಯಲ್ಲಿ ಸರ್ಕಾರದ ಮುಂದೆ ಒಂದಷ್ಟು ಹಕ್ಕೊತ್ತಾಯಗಳನ್ನು ಇರಿಸಿದೆ.

ಅವುಗಳೆಂದರೆ,

1. ರಾಜ್ಯದ ಪ್ರತಿಯೊಂದು ಶ್ರಮಜೀವಿ ಕುಟುಂಬಕ್ಕೆ ಮೇತಿಂಗಳಿನಿಂದ ಆರಂಭಿಸಿ ಸಂಪೂರ್ಣ ಲಾಕ್‌ಡೌನ್ ತೆರೆದ ನಂತರದ 3 ತಿಂಗಳ ಕಾಲ ಆಹಾರ ಕಿಟ್ ಉಚಿತವಾಗಿ ನೀಡಬೇಕು. ವ್ಯಕ್ತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ಮತ್ತು ಇತರೆ ಬೇಳೆಕಾಳುಗಳು, ಎಣ್ಣೆ, ಉಪ್ಪು, ಸಂಬಾರು ಪದಾರ್ಥಗಳು ಸೇರಿದಂತೆ ಕುಟುಂಬದ ಆಹಾರ ಅಗತ್ಯಗಳೆಲ್ಲವನ್ನೂ ಅದು ಒಳಗೊಂಡಿರಬೇಕು. ಪೌಷ್ಟಿಕಾಂಶ ಕೊರತೆಯಿಂದ ಸೋಂಕು ಬೇಗ ಬರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ತಮಿಳುನಾಡು ಮತ್ತು ಕೇರಳ ಸರ್ಕಾರಗಳ ಮಾದರಿಯನ್ನು ಎಲ್ಲೆಡೆ ಅನುಷ್ಠಾನಕ್ಕೆ ತರಬೇಕು.

2.   ದುಡಿಯುವ ಜನರ ಕುಟುಂಬಗಳಿಗೆ ನೇರ ವರ್ಗಾವಣೆಯ ಮೂಲಕ ತಿಂಗಳಿಗೆ 7,000₹ ರೂ.ನಂತೆ ಮುಂದಿನ 3 ತಿಂಗಳು ಸಹಾಯ ಧನ ನೀಡಬೇಕು. ಅಲೆಮಾರಿ, ಬುಡಕಟ್ಟು ಜನರು ಸೇರಿದಂತೆ ಬಿಪಿಎಲ್ ಕಾರ್ಡು, ಜನಧನ್ ಅಕೌಂಟುಗಳಿಲ್ಲದ ಯಾರೂ ಇದರಿಂದ ಹೊರಗುಳಿಯದಂತೆ ವ್ಯವಸ್ಥೆ ಆಗಬೇಕು. ದೆಹಲಿ ರಾಜ್ಯ ಸರ್ಕಾರದ ಮಾದರಿಯನ್ನು ಇನ್ನೂ ವಿಸ್ತಾರಗೊಳಿಸಬೇಕು.

3.   ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ಕೇತ್ರವನ್ನು ಬಲಪಡಿಸುವುದು ಈ ಸಂದರ್ಭದ ತುರ್ತು ಅಗತ್ಯಗಳಲ್ಲೊಂದಾಗಿದೆ. ವೆಂಟಿಲೇಟರ್, ಆಕ್ಸಿಜನ್, ಡಯಾಲಿಸಿಸ್, ಶಸ್ತ್ರಚಿಕಿತ್ಸೆ ಲಭ್ಯವಿರುವ ಸುಸಜ್ಜಿತ ಘಟಕಗಳು ಪ್ರತಿ ತಾಲೂಕಿನಲ್ಲಿ ಏರ್ಪಾಡಾಗಬೇಕು. ಅಗತ್ಯಬಿದ್ದರೆ ಖಾಸಗಿ ವಲಯದ ಆಸ್ಪತ್ರೆಗಳನ್ನು ಸೂಕ್ತ ಪ್ರಕ್ರಿಯೆಯ ಮೂಲಕ ಸರ್ಕಾರದ ವಶಕ್ಕೆ ಪಡೆಯಬೇಕು. ಆರೋಗ್ಯ ವ್ಯವಸ್ಥೆಯ ತುರ್ತು ಸುಧಾರಣೆ ತಕ್ಷಣದಲ್ಲಿ, ಅಲ್ಪಕಾಲದಲ್ಲಿ ಮತ್ತು ದೀರ್ಘಾವಧಿಯಲ್ಲಿ ದೊಡ್ಡ ಡಿವಿಡೆಂಡ್ ನೀಡುತ್ತದೆ.

4.   ರೈತರು ಬೆಳೆದಿರುವ ಎಲ್ಲಾ ರೀತಿಯ ಬೆಳೆಗಳನ್ನು ಬೆಂಬಲ ಬೆಲೆಯಡಿ ಕೊಂಡುಕೊಂಡು ಎಲ್ಲಾ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ತಲುಪಿಸಬೇಕು. ರೈತರು ಸರಕುಗಳನ್ನು ಮಾರುಕಟ್ಟೆಗೆ ಒಯ್ಯುವಾಗ ಹೈವೇಗಳಲ್ಲಿ ಟೋಲ್‌ಗಳನ್ನು ಈಗಿಂದೀಗಲೇ ರದ್ದುಗೊಳಿಸಬೇಕು.

5.   ಮುಂಗಾರು ಮಳೆಗಾಲ ಆರಂಭವಾಗಿದ್ದು ಎಲ್ಲಾ ರೈತರಿಗೆ ಬೆಳೆ ಬೆಳೆಯಲು ಆಯಾ ಪ್ರದೇಶಕ್ಕೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರಗಳ ಪೂರೈಕೆಗೆ ಯಾವುದೇ ತೊಂದರೆಯಿಲ್ಲದಂತೆ ನೋಡಿಕೊಳ್ಳಬೇಕು. 5 ಎಕರೆಯವರೆಗಿನ ವ್ಯವಸಾಯಕ್ಕೆ ಹಿಂದಿನ ಸುಸ್ತಿಗಳು ಏನೇ ಇದ್ದರೂ, ಕಾಗದ ಪತ್ರಗಳು ಅನುಭೋಗದಾರರ ಬಳಿ ಇರದಿದ್ದರೂ ಶೂನ್ಯ ಬಡ್ಡಿಯ ಸಾಲದ ವ್ಯವಸ್ಥೆ ಮಾಡಬೇಕು.

6.   ಕೊರೋನ ಕಾರಣದಿಂದ ಉದ್ಯೋಗ ಕಳೆದುಕೊಂಡಿರುವ ಎಲ್ಲಾ ಕಾರ್ಮಿಕರಿಗೆ ಲಾಕ್‌ಡೌನ್ ಕಾಲದ ವೇತನವನ್ನು ಖಾತ್ರಿಪಡಿಸಬೇಕು. ಈ ಸಂದರ್ಭದ ದುರುಪಯೋಗ ಮಾಡಿಕೊಳ್ಳಲು ಉದ್ದಿಮೆದಾರರಿಗೆ ಅವಕಾಶ ನೀಡಬಾರದು.

7.   ಕರೋನ ಕಾರಣದಿಂದ ನಷ್ಟ ಹೊಂದಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ಮತ್ತು ಗುಡಿ ಕೈಗಾರಿಕೆಗಳಿಗೆ ಸಹಾಯ ಧನ ಘೋಷಿಸಿ ಪೋಷಿಸಬೇಕು.

8.   ಕೊರೋನ ದುಸ್ಥಿತಿಯ ದುರುಪಯೋಗ ಮಾಡಿಕೊಳ್ಳಲು ಹೊರಟಿರುವ ಕಾರ್ಪೋರೇಟ್ ಉದ್ದಿಮೆದಾರರು ಕೆಲಸದ ಅವಧಿಯನ್ನು 8 ಗಂಟೆಯಿಂದ ಹೆಚ್ಚಿಸಲು ಮಾಡುತ್ತಿರುವ ಹುನ್ನಾರದ ಜೊತೆಗೆ ಜನರಿಂದ ಆಯ್ಕೆಯಾದ ಸರ್ಕಾರವು ಶಾಮೀಲಾಗಬಾರದು.

9.  ಆರ್ಥಿಕತೆಯ ಅಭಿವೃದ್ಧಿಗೆ ಮತ್ತು ಹೊಸ ಉದ್ಯೋಗ ಸೃಷ್ಟಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಸ್ಥಳೀಯ ಬೆಳೆಗಳ ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಸ್ಥಳೀಯ ಉದ್ಯೋಗ ಸೃಷ್ಟಿಯ ಎಲ್ಲಾ ಸಾಧ್ಯತೆಗಳನ್ನೂ ಪರಿಶೀಲಿಸಿ ಉತ್ತೇಜನ ನೀಡಬೇಕು.

10.  ನರೇಗಾ ಕೆಲಸದ ಕನಿಷ್ಠ ಕೂಲಿಯನ್ನು 300 ರೂ.ಗಳಿಗೆ ಹೆಚ್ಚಿಸಬೇಕು. ವರ್ಷಕ್ಕೆ 200 ದಿನಗಳಿಗೆ ಹೆಚ್ಚಿಸಬೇಕು. ಕುಟುಂಬಕ್ಕೆ ಒಬ್ಬರು ಎಂಬ ಸೀಲಿಂಗ್ ತೆಗೆಯಬೇಕು. ಒರಿಸ್ಸಾ ಸರ್ಕಾರ ಮಾಡುತ್ತಿರುವ ರೀತಿಯಲ್ಲಿ ನಗರ ಪ್ರದೇಶಕ್ಕೆ ವಿಸ್ತರಿಸಬೇಕು

11. ಗ್ರಾಮೀಣ ಉದ್ಯೋಗ ಖಾತರಿಯ ಮಾದರಿಯಲ್ಲೇ(ನರೇಗಾ) ನಗರ ಉದ್ಯೋಗ ಖಾತರಿ ಯೋಜನೆ ಜಾರಿಮಾಡಬೇಕು

12. ಶ್ರಮಜೀವಿಗಳ ಕುಟುಂಬಗಳಿಗೆ ಶಾಪವಾಗಿರುವ ಹೆಂಡಸಾರಾಯಿಯಿಂದ ಈ ಅವಧಿಯಲ್ಲಿ ತಾತ್ಕಾಲಿಕ ಬಿಡುಗಡೆ ಸಿಕ್ಕಿತ್ತು. ಅದೇ ರೀತಿ ಲಾಕ್‍ಡೌನ್ ತೆರವುಗೊಳಿಸಿದ ನಂತರವೂ ಮದ್ಯನಿಷೇಧ ಮುಂದುವರೆಯಬೇಕು

13. ದುಡಿಯುವ ವರ್ಗದ ಕುಟುಂಬದ ಮಕ್ಕಳಿಗೆ ತೊಂದರೆಯಾಗದಂತೆ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳೆರಡರಲ್ಲೂ ಶುಲ್ಕ ವಿನಾಯಿತಿ ಘೋಷಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಶ್ರಮಿಕರ ಕುಟುಂಬದ ಮಕ್ಕಳ ಶಿಕ್ಷಣ ಮತ್ತು ಶುಲ್ಕಕ್ಕೆ ಸರ್ಕಾರ ವಿದ್ಯಾರ್ಥಿ ವೇತನ ನೀಡಬೇಕು.

ಈ ವರದಿಯು ಮುಂದಿಟ್ಟಿರುವ ಅಂಕಿ-ಅಂಶಗಳನ್ನು ಗಮನಿಸಿದಾಗ ಅಧ್ಯಯನದ ಫಲಿತವಾಗಿ ಮುಂದಿಟ್ಟಿರುವ ಹಕ್ಕೊತ್ತಾಯಗಳು ಸಂಪೂರ್ಣವಾಗಿ ಕಾರ್ಯಸಾಧುವಾದವು ಮತ್ತು ನ್ಯಾಯೋಚಿತವಾದವುಗಳಾಗಿದ್ದು ಕೂಡಲೇ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಕುಮಾರ್‌ ಸಮತಳ, ಮಲ್ಲಿಗೆ ಸಿರಿಮನೆ, ಚಂದ್ರಶೇಖರ್‌, ವರದರಾಜೇಂದ್ರ, ಸತೀಶ್‌ ಮುಂತಾದವರನ್ನು ಒಳಗೊಂಡ ಕರ್ನಾಟಕ ಜನಶಕ್ತಿಯ ಸಾಮಾಜಿಕ ಅಧ್ಯಯನ ಸಮಿತಿ ಒತ್ತಾಯಿಸಿದೆ.


ಇದನ್ನೂ ಓದಿ: ಊರಿಗೆ ತೆರಳಲು ಬಸ್‌: ಟಿಕೆಟ್ ಬೆಲೆ ಮೂರು ಪಟ್ಟು ಹೆಚ್ಚು, ಸಂಕಷ್ಟದಲ್ಲಿ ಕಣ್ಣೀರಿಡುತ್ತಿರುವ ಕಾರ್ಮಿಕರು 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...