Homeಮುಖಪುಟತೀವ್ರ ಟೀಕೆ ನಂತರ ಎಚ್ಚೆತ್ತ ಸರ್ಕಾರ: ಒಂದೇ ಕಡೆಯ ಬಸ್‌ ದರ ಪಡೆಯಲು ನಿರ್ಧಾರ

ತೀವ್ರ ಟೀಕೆ ನಂತರ ಎಚ್ಚೆತ್ತ ಸರ್ಕಾರ: ಒಂದೇ ಕಡೆಯ ಬಸ್‌ ದರ ಪಡೆಯಲು ನಿರ್ಧಾರ

- Advertisement -
- Advertisement -

ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದ ಕಾರ್ಮಿಕರಿಗೆ ಮೂರು ಪಟ್ಟು ಬಸ್‌ ದರ ನಿಗಧಿ ಮಾಡಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಸರ್ಕಾರ ಆ ನಿರ್ಧಾರದಿಂದ ಹಿಂದೆ ಸರಿದಿದ್ದು, ಕೇವಲ ಒಂದೇ ಕಡೆಯ ಬಸ್‌ ಟಿಕೆಟ್‌ ದರ ಪಡೆಯಲು ತೀರ್ಮಾನಿಸಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಈ ಮೊದಲು ಕಾರ್ಮಿಕರು ಈ ಕಡೆಯ ಬಸ್ ಟಿಕೆಟ್‌‌ ದರ, ಆ ಕಡೆಯಿಂದ ಬಸ್‌ ಖಾಲಿ ಬರುವುದಕ್ಕೆ ಅದರ ದರ ಮತ್ತು ಕೇವಲ 40% ಜನ ಮಾತ್ರ ಒಂದು ಬಸ್‌ನಲ್ಲಿ ತೆರಳಬೇಕಿರುವುದರಿಂದ ಉಳಿದ ಎಲ್ಲಾ ದರವನ್ನು ಕಾರ್ಮಿಕರು ಭರಸಬೇಕೆಂಬ ಷರತ್ತು ವಿಧಿಸಿತ್ತು. ಹಾಗಾಗಿ ಕೇವಲ 400-500 ಇದ್ದ ಬಸ್‌ ದರ ಏಕಾಏಕಿ 1200-1500 ರೂಗಳಿಗೆ ಏರಿಕೆಯಾಗಿ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಿತ್ತು.


ಇದನ್ನೂ ಓದಿ: ಊರಿಗೆ ತೆರಳಲು ಬಸ್‌: ಟಿಕೆಟ್ ಬೆಲೆ ಮೂರು ಪಟ್ಟು ಹೆಚ್ಚು, ಸಂಕಷ್ಟದಲ್ಲಿ ಕಣ್ಣೀರಿಡುತ್ತಿರುವ ಕಾರ್ಮಿಕರು


ಈ ಮೊದಲೇ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರು. ಉಳಿದ ರಾಜ್ಯಗಳು ಉಚಿತವಾಗಿ ಬೇರೆ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕೇವಲ ನಮ್ಮ ರಾಜ್ಯದೊಳಗಿನ ಸಂಚಾರಕ್ಕೆ ಮೂರು ಪಟ್ಟು ಹಣ ಪಡೆಯುತ್ತಿರುವುದಕ್ಕೆ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಈಗ ಸದ್ಯಕ್ಕೆ ಸರ್ಕಾರ ಕೇವಲ ಒಂದು ಕಡೆಯ ದರ ಪಡೆಯುವುದಾಗಿ ನಿರ್ಧರಿಸಿದೆ. ಆದರೆ ಅದು ಕೂಡ ದುಬಾರಿಯಾಗಲಿದ್ದು ವಲಸೆ ಕಾರ್ಮಿಕರು ಅದನ್ನು ಭರಿಸುವ ಶಕ್ತಿ ಉಳಿಸಿಕೊಂಡಿಲ್ಲ. ಹಾಗಾಗಿ ಉಚಿತವಾಗಿ ಅವರನ್ನು ತಮ್ಮ ತಮ್ಮ ಊರುಗಳಿಗೆ ಕಳಿಸಿಕೊಡಬೇಕೆಂಬ ಆಗ್ರಹ ಕೇಳಿಬಂದಿದೆ.

ಕಾರ್ಮಿಕ ದಿನಾಚರಣೆ ದಿನ ಒಳ್ಳೆಯದು ಮಾಡುವ ಹೆಸರಿನಲ್ಲಿ ಸರ್ಕಾರದ ಲೂಟಿ. ದಯವಿಟ್ಟು ಕೇಳಿ ಮತ್ತು ಸರ್ಕಾರ ಇದನ್ನು ವಾಪಸ್ ತೆಗೆದುಕೊಳ್ಳಲು ದನಿಯೆತ್ತಿ ಮತ್ತು ಷೇರ್ ಮಾಡಿ.

Posted by Naanu Gauri on Friday, May 1, 2020

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...