Homeಕರ್ನಾಟಕನಾಳೆ ಮತದಾನ: ಟ್ವಿಟರ್‌ನಲ್ಲಿ ಇಂದೇ #ByeByeBJP ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌

ನಾಳೆ ಮತದಾನ: ಟ್ವಿಟರ್‌ನಲ್ಲಿ ಇಂದೇ #ByeByeBJP ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌

- Advertisement -
- Advertisement -

ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಸೋಮವಾರ ಸಂಜೆಗೆ ಅಂತ್ಯವಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ #ByeByeBJP ಎನ್ನುವ ಹ್ಯಾಶ್‌ಟ್ಯಾಗ್‌ ಬಳಸಿ ಟ್ವಿಟರ್‌ ಅಭಿಯಾನ ಆರಂಭವಾಗಿದೆ.

ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಹೇಳುವ ವಿಡಿಯೊ, ಚಿತ್ರ, ವ್ಯಂಗ್ಯಚಿತ್ರ, ಮಾಧ್ಯಮ ವರದಿ ಹಾಗೂ ಬರಹಗಳನ್ನು ಟ್ವೀಟ್‌ ಮಾಡಿ ಈ ಹ್ಯಾಶ್‌ಟ್ಯಾಗ್‌ ಬಳಸಲಾಗುತ್ತಿದೆ.

ಶೇ 40 ಕಮೀಷನ್‌ ಸರ್ಕಾರಕ್ಕೆ ನನ್ನ ಮತ ಇಲ್ಲ ಎನ್ನುವ ಪೋಸ್ಟರ್ ಹಿಡಿದಿರುವ ಜನರ ವಿಡಿಯೊ ಹೆಚ್ಚು ಹರಿದಾಡುತ್ತಿದೆ.

ಬಿಜೆಪಿ ನಾಯಕರ ದ್ವೇಷ ಭಾಷಣ, ಕೋಮು ಗಲಭೆ, ನಂದಿನಿ ವಿವಾದ, ಪೇಸಿಎಂ, ರಸ್ತೆಗುಂಡಿ, ಹಿಜಾಬ್‌ ವಿವಾದ, ನಿರುದ್ಯೋಗ, ಶೇ 40 ಕಮಿಷನ್‌ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ಟ್ವಿಟರ್‌ ಅಭಿಯಾನ ನಡೆಯುತ್ತಿದೆ.

ರಾಜ್ಯ ಕಾಂಗ್ರೆಸ್‌ ಘಟಕ, ಭಾರತೀಯ ಯುವ ಕಾಂಗ್ರೆಸ್, ಕೇರಳ ಕಾಂಗ್ರೆಸ್‌ ಸೇವಾದಳ, ಜಾನ್ಸಿ ಕಾಂಗ್ರೆಸ್‌ ಸೇವಾದಳ, ದೇಶದ ಕಾಂಗ್ರೆಸ್‌ ನಾಯಕರು, ವಕ್ತಾರರು ಟ್ವೀಟ್‌ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

”ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕವನ್ನು ಕೋವಿಡ್ ವೈರಸ್ಸಿಗಿಂತಲೂ ಕ್ರೂರವಾಗಿ ಪೀಡಿಸಿದ ಬಿಜೆಪಿ ಸರ್ಕಾರದ ಅಂತ್ಯ ಸಮೀಪಿಸಿದೆ. ಕರ್ನಾಟಕಕ್ಕೆ ಕಾಡುತ್ತಿದ್ದ 40% ಕಮಿಷನ್ ಪಿಡುಗು ತೊಲಗಲಿದೆ, ಮುಂದೆ ಕಾಂಗ್ರೆಸ್ ನೇತೃತದಲ್ಲಿದೆ ಕರ್ನಾಟಕ ಪ್ರಗತಿಯತ್ತ ಸಾಗಲಿದೆ. #ByeByeBJP” ಎಂದು ಟ್ವೀಟ್ ಮಾಡಿದೆ.

”ರಸ್ತೆಗುಂಡಿಗಳಿಗೆ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ 40% ಕಮಿಷನ್ನಿನ ಭ್ರಷ್ಟ ಬಿಜೆಪಿ ಸರ್ಕಾರ ತೊಲಗುವ ಸಮಯ ಬಂದಿದೆ. ಇನ್ಮುಂದೆ ಕಮಿಷನ್ ರಹಿತ, ಭ್ರಷ್ಟಾಚಾರ ರಹಿತ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ. ಕರ್ನಾಟಕದ ಪ್ರತಿಯೊಬ್ಬರ ಕಾಳಜಿಯೂ ಇನ್ಮುಂದೆ ಕಾಂಗ್ರೆಸ್ ಸರ್ಕಾರದ ಹೊಣೆ. #ByeByeBJP” ಎಂದು ಟ್ವೀಟ್ ಮಾಡಿದೆ.

”ನಮ್ಮ ಬ್ಯಾಂಕುಗಳು ನಮ್ಮ ಸಂಸ್ಥೆಗಳು ನಮ್ಮ ಕೆಎಂಎಫ್ ನಮ್ಮ ನಂದಿನಿ ಎಲ್ಲವೂ ನಮ್ಮ ಅಸ್ಮಿತೆಯ ಸಂಕೇತಗಳು! ಕನ್ನಡಿಗರ ಅಸ್ಮಿತೆಯನ್ನು ಕಾಪಾಡೋಣ! 40% ಸರ್ಕಾರಕ್ಕೆ #ByeByeBJP ಹೇಳೋಣ” ಎಂದು ಟ್ವೀಟ್ ಮಾಡಿದೆ.

”ಕೋರೋನ ಸಮಯದಲ್ಲಿ ಅನುಭವಿಸಿದ್ದು ಸಾಕು ಹಗರಣಗಳನ್ನು ನೋಡಿದ್ದೂ ಸಾಕು ಹಗರಣಗಳಿಗೆ ಮುಕ್ತಿ ಹಾಡೋಣ! 40% ಸರ್ಕಾರಕ್ಕೆ #ByeByeBJP ಹೇಳೋಣ!” ಎಂದು ಟ್ವೀಟ್ ಮಾಡಿದೆ.

”40% ಕಮಿಷನ್ ತೆಗೆದುಕೊಳ್ಳುವ ಪೇಸಿಎಂ ತೊಲಗಿಸೋಣ ರಾಜ್ಯವನ್ನು ಪ್ರಗತಿಯ ಹಾದಿಗೆ ಮರಳಿ ತರೋಣ 40% ಸರ್ಕಾರಕ್ಕೆ #ByeByeBJP ಹೇಳೋಣ!” ಎಂದಿದ್ದಾರೆ.

”ಉದ್ಯೋಗಕ್ಕೂ ಲಂಚ ಅಥವಾ ಮಂಚ ಈ ಲಂಚ ಮಂಚದ ಸರ್ಕಾರ ತೊಲಗಿಸಿಸೋಣ 40% ಸರ್ಕಾರಕ್ಕೆ #ByeByeBJP ಹೇಳೋಣ!” ಎಂದು ಕರೆ ಕೊಟ್ಟಿದ್ದಾರೆ.

”ಸುಳ್ಳು ಭಾಷಣ ಸಾಕು ಪೊಳ್ಳು ಭರವಸೆಯೂ ಸಾಕು ಅಭಿವೃದ್ಧಿಯ ಆಡಳಿತಕ್ಕೆ ಮತ ನೀಡೋಣ! 40% ಸರ್ಕಾರಕ್ಕೆ #ByeByeBJP ಹೇಳೋಣ!” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...