Homeಕರ್ನಾಟಕಬಸ್‌ನಿಲ್ದಾಣಗಳಲ್ಲಿ ಜಾಹೀರಾತು: ಬಿಜೆಪಿ ಪರ ಚುನಾವಣಾ ಆಯೋಗಕ್ಕೆ ಮೃದು ಧೋರಣೆ ಏಕೆ?; ಕಾಂಗ್ರೆಸ್‌ ಪ್ರಶ್ನೆ

ಬಸ್‌ನಿಲ್ದಾಣಗಳಲ್ಲಿ ಜಾಹೀರಾತು: ಬಿಜೆಪಿ ಪರ ಚುನಾವಣಾ ಆಯೋಗಕ್ಕೆ ಮೃದು ಧೋರಣೆ ಏಕೆ?; ಕಾಂಗ್ರೆಸ್‌ ಪ್ರಶ್ನೆ

- Advertisement -
- Advertisement -

ರಾಜ್ಯವಿಧಾನಸಭಾ ಚುನಾವಣೆ ಹಿನ್ನೆಲೆ 24ಗಂಟೆಗೂ ಮುನ್ನವೇ ತಾತ್ಕಾಲಿಕ ಅನುಮತಿ ಪಡೆದ ಜಾಹೀರಾತುಗಳನ್ನು ತೆರವುಗೊಳಿಸಬೇಕಿತ್ತು, ಆದರೆ ಈವರೆಗೂ ಬಿಜೆಪಿ ಜಾಹಿರಾತು ಇನ್ನೂ ಹಾಗೆಯೇ ಇದೆ. ಬಹುಶಃ ಚುನಾವಣಾಧಿಕಾರಿಗಳಿಗೆ ಬಿಜೆಪಿ ಜಾಹಿರಾತುಗಳಿಗೆ ಕೈ ಹಾಕುವುದಕ್ಕೆ ಭಯ ಇರಬಹುದೇ? ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕ, ”ಚುನಾವಣೆಗೆ 24ಗಂಟೆಗೂ ಮುನ್ನವೇ ತಾತ್ಕಾಲಿಕ ಅನುಮತಿ ಪಡೆದ ಜಾಹೀರಾತುಗಳನ್ನು ತೆರವುಗೊಳಿಸಬೇಕಿತ್ತು, ಆದರೆ ಶಿವಾನಂದ ಸರ್ಕಲ್ ಬಳಿಯ ಬಸ್ ನಿಲ್ದಾಣದಲ್ಲಿನ ಬಿಜೆಪಿ ಜಾಹಿರಾತು ಇನ್ನೂ ಹಾಗೆಯೇ ಇದೆ.. ಬಹುಶಃ ಚುನಾವಣಾಧಿಕಾರಿಗಳಿಗೆ ಬಿಜೆಪಿ ಜಾಹಿರಾತುಗಳಿಗೆ ಕೈ ಹಾಕುವುದಕ್ಕೆ ಅಲರ್ಜಿ ಇರಬಹುದು ಅಥವಾ ಭಯ ಇರಬಹುದೇ?” ಎಂದು ಕೇಳಿದೆ.

ಇದನ್ನೂ ಓದಿ: ”ಭ್ರಷ್ಟಾಚಾರದ ರೇಟ್ ಕಾರ್ಡ್” ಜಾಹೀರಾತು ವಿಚಾರಕ್ಕೆ ನೋಟಿಸ್: ಚುನಾವಣಾ ಆಯೋಗ ಪಕ್ಷಪಾತಿಯಾಗಿದೆ ಎಂದ ಕಾಂಗ್ರೆಸ್‌

”ಡಾ.ರಾಜ್‌ಕುಮಾರ್ ರಸ್ತೆಯಲ್ಲಿನ ಬಸ್ ನಿಲ್ದಾಣದಲ್ಲಿ ಬಿಜೆಪಿ ಜಾಹಿರಾತು ಇನ್ನೂ ರಾರಾಜಿಸುತ್ತಿದೆ. ಇದು ನಿಯಮ ಉಲ್ಲಂಘನೆಯಲ್ಲವೇ? ಚುನಾವಣಾ ಆಯೋಗಕ್ಕೆ ಬಿಜೆಪಿಯ ಪರ ಏಕೆ ಮೃದು ಧೋರಣೆ? ಹಲವು ವಿಷಯಗಳಲ್ಲಿ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವುದು ಈಗಾಗಲೇ ಜನರ ಗಮನಕ್ಕೆ ಬಂದಿದೆ. ನಿರ್ದಾಕ್ಷಿಣ್ಯವಾಗಿ ಬಿಜೆಪಿ ವಿರುದ್ಧ ಕ್ರಮ ಜರುಗಿಸಿ ಜನರ ವಿಶ್ವಾಸ ಉಳಿಸಿಕೊಳ್ಳಬೇಕು” ಎಂದು ಕರ್ನಾಟಕ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಕಾಂಗ್ರೆಸ್ ಹೇಳಿದೆ.

ಚುನಾವಣಾ ಆಯೋಗ ಪಕ್ಷಪಾತಿಯಾಗಿದೆ: ಕಾಂಗ್ರೆಸ್ ಆರೋಪ

‘ಭ್ರಷ್ಟಾಚಾರದ ರೇಟ್ ಕಾರ್ಡ’ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಕರ್ನಾಟಕದ ಕಾಂಗ್ರೆಸ್ ಘಟಕಕ್ಕೆ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಕ್ರಿಸಿದ್ದ ಕಾಂಗ್ರೆಸ್‌, ”ಚುನಾವಣಾ ಆಯೋಗವು ಪಕ್ಷಪಾತಿಯಾಗಿದೆ” ಎಂದು ಆರೋಪಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಚುನಾವಣಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದರೂ, ಚುನಾವಣಾ ಆಯೋಗ ಮಾತ್ರ ಯಾವುದೇ ನೋಟಿಸ್ ನೀಡಿಲ್ಲ ಎಂದು ಪಿಟಿಐ ವರದಿ ಮಾಡಿದೆ.

”ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದಿಂದ ಅನ್ಯಾಯ ಮತ್ತು ಅಸಮಾನ ವರ್ತನೆಗೆ ಒಳಗಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಪಕ್ಷ ಹೇಳಿದೆ.

”ಚುನಾವಣಾ ಮಾನದಂಡಗಳನ್ನು ಕೇವಲ ಪ್ರತಿಪಕ್ಷಗಳಿಗೆ ಮಾತ್ರ ಮೀಸಲಿಟ್ಟಂತೆ ತೋರುತ್ತಿದೆ. ಸಣ್ಣದೊಂದು ತಪ್ಪಾದರೂ ತಮ್ಮನ್ನು ವಿವರಣೆ ಕೇಳಲು ಕರೆಸಿದ್ದಾರೆ” ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ರಾಜಕೀಯ ಜಾಹೀರಾತಿಗೆ ಪುರಾವೆಗಳನ್ನು ಒದಗಿಸಲು ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷವನ್ನು ಕರೆಸಿರುವುದು ಇದೇ ಮೊದಲು ಎಂದು ಕಾಂಗ್ರೆಸ್ ಹೇಳಿದೆ.

”ಚುನಾವಣಾ ಆಯೋಗವು ಆ ಆರೋಪಗಳ ತನಿಖೆ ನಡೆಸಲು ಹೇಳಬಹುದಿತ್ತು ಆ ಅಧಿಕಾರ ಆಯೋಗಕ್ಕೆ ಇದೆ. ಏಕೆಂದರೆ ಆ ಆರೋಪಗಳಿಗೆ ಪುರಾವೆಗಳು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿವೆ. ಆದರೆ ಚುನಾವಣಾ ಆಯೋಗವು ಆ ಭ್ರಷ್ಟಾಚಾರದ ಮೇಲೆ ಬೆಳಕು ಚೆಲ್ಲುವ ಪಕ್ಷವನ್ನು ಗುರಿಯಾಗಿಸಲು ತನ್ನ ಅಧಿಕಾರ ಬಳಸಿಕೊಂಡಿದೆ” ಎಂದು ಕಾಂಗ್ರೆಸ್ ಆರೋಪಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...