Homeಕರ್ನಾಟಕ''ಭ್ರಷ್ಟಾಚಾರದ ರೇಟ್ ಕಾರ್ಡ್'' ಜಾಹೀರಾತು ವಿಚಾರಕ್ಕೆ ನೋಟಿಸ್: ಚುನಾವಣಾ ಆಯೋಗ ಪಕ್ಷಪಾತಿಯಾಗಿದೆ ಎಂದ ಕಾಂಗ್ರೆಸ್‌

”ಭ್ರಷ್ಟಾಚಾರದ ರೇಟ್ ಕಾರ್ಡ್” ಜಾಹೀರಾತು ವಿಚಾರಕ್ಕೆ ನೋಟಿಸ್: ಚುನಾವಣಾ ಆಯೋಗ ಪಕ್ಷಪಾತಿಯಾಗಿದೆ ಎಂದ ಕಾಂಗ್ರೆಸ್‌

- Advertisement -
- Advertisement -

”ಭ್ರಷ್ಟಾಚಾರದ ರೇಟ್ ಕಾರ್ಡ್” ಜಾಹೀರಾತುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಕರ್ನಾಟಕದ ಕಾಂಗ್ರೆಸ್ ಘಟಕಕ್ಕೆ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ಪಕ್ಷಪಾತಿಯಾಗಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ, ಉದ್ಯೋಗ ನೇಮಕಾತಿ ಮತ್ತು ವರ್ಗಾವಣೆಗಳಿಗೆ ಜನರು ಪಾವತಿಸಬೇಕಾದ ಲಂಚದ ದರವನ್ನು ನಿಗದಿಪಡಿಸಿದೆ ಎಂದು ಆ ಜಾಹೀರಾತು ಆರೋಪಿಸಿತ್ತು.

ಶನಿವಾರ ಬಿಜೆಪಿ ದೂರಿಗೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗವು ಕಾಂಗ್ರೆಸ್‌ಗೆ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷ ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ನೋಟಿಸ್ ಹೇಳಿದೆ.

ಭಾನುವಾರ ಸಂಜೆ 7 ಗಂಟೆಯೊಳಗೆ ಭ್ರಷ್ಟಾಚಾರ ಆರೋಪದ ಕುರಿತು ಪ್ರಾಯೋಗಿಕ ಸಾಕ್ಷ್ಯಗಳನ್ನು ತೋರಿಸುವಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ಸೂಚಿಸಿತ್ತು.

ಇದನ್ನೂ ಓದಿ: ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ, ‘ಧಾರ್ಮಿಕ’ ಘೋಷಣೆ ಕೂಗಿದ್ದು ಆಶ್ಚರ್ಯ ತಂದಿದೆ: ಶರದ್ ಪವಾರ್

ಸೋಮವಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಚುನಾವಣಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದರೂ, ಚುನಾವಣಾ ಆಯೋಗ ಮಾತ್ರ ಯಾವುದೇ ನೋಟಿಸ್ ನೀಡಿಲ್ಲ ಎಂದು ಪಿಟಿಐ ವರದಿ ಮಾಡಿದೆ.

”ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದಿಂದ ಅನ್ಯಾಯ ಮತ್ತು ಅಸಮಾನ ವರ್ತನೆಗೆ ಒಳಗಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಪಕ್ಷ ಹೇಳಿದೆ.

”ಚುನಾವಣಾ ಮಾನದಂಡಗಳನ್ನು ಕೇವಲ ಪ್ರತಿಪಕ್ಷಗಳಿಗೆ ಮಾತ್ರ ಮೀಸಲಿಟ್ಟಂತೆ ತೋರುತ್ತಿದೆ. ಸಣ್ಣದೊಂದು ತಪ್ಪಾದರೂ ತಮ್ಮನ್ನು ವಿವರಣೆ ಕೇಳಲು ಕರೆಸಿದ್ದಾರೆ” ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ರಾಜಕೀಯ ಜಾಹೀರಾತಿಗೆ ಪುರಾವೆಗಳನ್ನು ಒದಗಿಸಲು ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷವನ್ನು ಕರೆಸಿರುವುದು ಇದೇ ಮೊದಲು ಎಂದು ಕಾಂಗ್ರೆಸ್ ಹೇಳಿದೆ.

”ಚುನಾವಣಾ ಆಯೋಗವು ಆ ಆರೋಪಗಳ ತನಿಖೆ ನಡೆಸಲು ಹೇಳಬಹುದಿತ್ತು ಆ ಅಧಿಕಾರ ಆಯೋಗಕ್ಕೆ ಇದೆ. ಏಕೆಂದರೆ ಆ ಆರೋಪಗಳಿಗೆ ಪುರಾವೆಗಳು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿವೆ. ಆದರೆ ಚುನಾವಣಾ ಆಯೋಗವು ಆ ಭ್ರಷ್ಟಾಚಾರದ ಮೇಲೆ ಬೆಳಕು ಚೆಲ್ಲುವ ಪಕ್ಷವನ್ನು ಗುರಿಯಾಗಿಸಲು ತನ್ನ ಅಧಿಕಾರ ಬಳಸಿಕೊಂಡಿದೆ” ಎಂದು ಕಾಂಗ್ರೆಸ್ ಆರೋಪಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...