Homeಕರ್ನಾಟಕ'ಕಳ್ಳರನ್ನು ಕಳ್ಳ ಎನ್ನದೆ ಸಾಧು-ಸಂತರು, ಸಮಾಜ ಸುಧಾರಕರೆಂದು ಕರೆಯಬೇಕೇ?': ಸಿದ್ದರಾಮಯ್ಯ ಪ್ರಶ್ನೆ

‘ಕಳ್ಳರನ್ನು ಕಳ್ಳ ಎನ್ನದೆ ಸಾಧು-ಸಂತರು, ಸಮಾಜ ಸುಧಾರಕರೆಂದು ಕರೆಯಬೇಕೇ?’: ಸಿದ್ದರಾಮಯ್ಯ ಪ್ರಶ್ನೆ

- Advertisement -
- Advertisement -

ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ರವಿವಾರ ದೇಶಾದ್ಯಂತ ಅಹೋರಾತ್ರಿ ಸತ್ಯಾಗ್ರಹ ನಡೆಸಲು ಕರೆ ಕೊಡಲಾಗಿತ್ತು. ರಾಜ್ಯದಲ್ಲಿ ಬೆಂಗಳೂರು ಕೇಂದ್ರ, ದಕ್ಷಿಣ ಹಾಗೂ ಉತ್ತರ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಭಾನುವಾರ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ”ಭಾರತ್‌ ಜೋಡೊ ಯಾತ್ರೆಯ ಬಳಿಕ ರಾಹುಲ್‌ ಗಾಂಧಿ ಅವರ ವರ್ಚಸ್ಸು ವೃದ್ಧಿಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಆತಂಕ ಹೆಚ್ಚಿಸಿದೆ. ರಾಜಕೀಯ ದ್ವೇಷದಿಂದ ಅನರ್ಹತೆ ಮಾಡಲಾಗಿದೆ” ಎಂದು ಹೇಳಿದರು.

”ಇದು ಹಿಟ್ಲರ್‌ನ ಜರ್ಮನಿಯೂ ಅಲ್ಲ. ಮುಸೊಲಿನಿಯ ಇಟಲಿಯೂ ಅಲ್ಲ. ನಾವು ಪ್ರಜಾಪ್ರಭುತ್ವ ಒಪ್ಪಿಕೊಂಡು ಬದುಕುತ್ತಿದ್ದೇವೆ. ಅನರ್ಹತೆ ಕ್ರಮವು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಆಘಾತ ತಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡಲಾಗುತ್ತಿದೆ” ಎಂದು ವಾಗ್ದಾಳಿ ನಡೆಸಿದರು.

”2019ರ ಲೋಕಸಭೆ ಚುನಾವಣೆ ಹಿನ್ನೆಲೆ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ರಾಹುಲ್‌ ಗಾಂಧಿ ಅವರು ಭಾಷಣ ಮಾಡುವ ವೇಳೆ ನಾನೂ ವೇದಿಕೆಯಲ್ಲಿದ್ದೆ. ಜಾತಿ ನಿಂದನೆ ಅಥವಾ ಮಾನಹಾನಿಕರ ರೀತಿಯಲ್ಲಿ ಮಾತನಾಡಿಲ್ಲ. ದೇಶದ ಜನರ ಹಣವನ್ನು ಕೊಳ್ಳೆ ಹೊಡೆದು ವಿದೇಶಕ್ಕೆ ಹೋದವರ ಹೆಸರು ಪ್ರಸ್ತಾಪಿಸಿದ್ದರು. ಅವರನ್ನು ಕಳ್ಳರು ಎಂದು ಕರೆಯುವ ಸ್ವಾತಂತ್ರ್ಯವೂ ಇಲ್ಲವೇ? ಹಾಗಿದ್ದರೆ ಅವರು ಸಮಾಜ ಸುಧಾರಕರೇ? ಹಿಟ್ಲರ್‌, ಮುಸೊಲಿನಿ ವಂಶಸ್ಥರಿಂದ ನಾವು ದೇಶ ಭಕ್ತಿಯ ಪಾಠ ಕಲಿಯಬೇಕಿಲ್ಲ” ಎಂದು ಹೇಳಿದರು.

”ಕಳ್ಳರನ್ನು ಕಳ್ಳ ಎಂದು ಕರೆಯದೇ ಸಾಧುಗಳು, ಸಂತರು, ಸಮಾಜ ಸುಧಾರಕರೆಂದು ಕರೆಯಬೇಕೇ” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ: ರಾಹುಲ್ ಅನರ್ಹತೆ ವಿರೋಧಿಸಿ ಕಾಂಗ್ರೆಸ್‌ನಿಂದ ದೇಶಾದ್ಯಂತ ಅಹೋರಾತ್ರಿ ಸತ್ಯಾಗ್ರಹ

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮಾತನಾಡಿ, ”ಲಲಿತ್ ಮೋದಿ, ನೀರವ್‌ ಮೋದಿ ಸೇರಿ ಹಲವರು ಬ್ಯಾಂಕ್‌ಗಳನ್ನು ಕೊಳ್ಳೆ ಹೊಡೆದು ವಿದೇಶದಲ್ಲಿದ್ದಾರೆ. ಅದು ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ, ನಳಿನ್‌ಕುಮಾರ್ ಕಟೀಲ್‌, ನಡ್ಡಾ, ಅಮಿತ್‌ ಶಾ ಅವರ ಹಣ ಅಲ್ಲ. ಜನರ ದುಡ್ಡು. ಪ್ರಜಾಪ್ರಭುತ್ವದ ತಾಯಿ ಭಾರತವೆಂದು ಕರೆಯಲಾಗುತ್ತಿತ್ತು. ಅದನ್ನೇ ನಾಶ ಪಡಿಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ದಿನೇಶ್‌ ಗುಂಡೂರಾವ್‌ ಮಾತನಾಡಿ, ”ತನ್ನ ವಿರುದ್ಧ ಮಾತನಾಡುವವರನ್ನು ಬಿಜೆಪಿ ಅನರ್ಹಗೊಳಿಸುತ್ತಿದೆ. ಪ್ರಜಾಪ್ರಭುತ್ವದ ವಿರೋಧಿ ನಡೆಯನ್ನು ಮಾಧ್ಯಮಗಳೂ ಪ್ರಶ್ನಿಸುತ್ತಿಲ್ಲ. ತಪ್ಪು ಮಾಡಿದಾಗ ಟೀಕೆಗಳು ಪ್ರಜಾತಂತ್ರ ವ್ಯವಸ್ಥೆಯ ಭಾಗ. ದುರುದ್ದೇಶದಿಂದ ರಾಹುಲ್‌ ಅವರ ಬಾಯಿ ಮುಚ್ಚಿಸಲು ಅನರ್ಹತೆ ಕ್ರಮ ಬಳಸಲಾಗಿದೆ” ಎಂದು ಕಿಡಿಕಾರಿದರು.

ಈ ಪ್ರತಿಭಟನೆಯಲ್ಲಿ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಶಾಸಕರಾದ ಕೆ.ಜೆ.ಜಾರ್ಜ್‌, ಎನ್‌.ಎ. ಹ್ಯಾರೀಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಇತರರು ಭಾಗಿಯಾಗಿದ್ದರು.

ಪ್ರತಿಪಕ್ಷಗಳಿಂದಲೂ ಪ್ರತಿಭಟನೆ

ರಾಹುಲ್ ಗಾಂಧಿಯವರನ್ನು ಲೋಕಸಭೆಯಿಂದ ಅನರ್ಹಗೊಳಿಸುವುದರ ವಿರುದ್ಧ ರವಿವಾರ ದೇಶಾದ್ಯಂತ ಕಾಂಗ್ರೆಸ್ ಅಹೋರಾತ್ರಿ ಸತ್ಯಾಗ್ರಹ ನಡೆಸಿತು. ರಾಹುಲ್ ಅನರ್ಹತೆ ಖಂಡಿಸಿ ಸೋಮವಾರ 17 ಪ್ರತಿಪಕ್ಷಗಳು ದೆಹಲಿಯಲ್ಲಿ ಜಂಟಿ ಪ್ರತಿಭಟನೆ ನಡೆಸಿದವು.

ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್, ಸಿಎಂಕೆ, ಸಮಾಜವಾದಿ ಪಾರ್ಟಿ, ಜೆಡಿಯು, ಬಿಆರ್‌ಎಸ್, ಸಿಪಿಎಂ, ಆರ್‌ಜೆಡಿ, ನ್ಯಾಷನಲ್ ಕಾಂಗ್ರೆಸ್ ಪಕ್ಷ, ಸಿಪಿಐ, ಇಂಡೀಯನ್ ಯುನಿಯನ್ ಮುಸ್ಲಿಂ ಲೀಗ್, ಎಮ್‌ಡಿಎಮ್‌ಕೆ, ಕೆಸಿ, ಟಿಎಂಸಿ, ಶಿವಸೇನಾ ಹಾಗೂ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಭಾಗವಹಿಸಿದ್ದವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...