Homeಮುಖಪುಟವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೋಗದಂತೆ ತಡೆಯುತ್ತಿರುವ ಸರ್ಕಾರದ ಕ್ರೌರ್ಯದ ಗಣಿತ: ಶಿವಸುಂದರ್‌ 

ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೋಗದಂತೆ ತಡೆಯುತ್ತಿರುವ ಸರ್ಕಾರದ ಕ್ರೌರ್ಯದ ಗಣಿತ: ಶಿವಸುಂದರ್‌ 

- Advertisement -
- Advertisement -

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕರ್ನಾಟಕ ಸರ್ಕಾರ ನಿಗದಿತ ಬಸ್‌ ದರಕ್ಕಿಂತ ಮೂರು ಪಟ್ಟು ಹೆಚ್ಚುಮಾಡಿತ್ತು. ಇದರ ಕುರಿತು ಆಕ್ರೋಶ ಬಂದ ನಂತರ ಆ ನಿರ್ಧಾರವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಇದರ ಕುರಿತಾಗಿ ಶಿವಸುಂದರ್‌ರವರು ವಿವರವಾದ ವರದಿ ಬರೆದಿದ್ದಾರೆ. ಅದರ ಪೂರ್ಣಪಾಠ ಕೆಳಗಿನಂತಿದೆ.

ನಿನ್ನೆ ಮೇ ದಿನ. ಅದರ ಬಹುಮಾನವೆಂಬಂತೆ ವಲಸೆ ಕಾರ್ಮಿಕರು ತಮ್ಮಊರುಗಳಿಗೆ ಹೋಗಲು ಉಚಿತವಾಗಿ KSRTC ಸಾರಿಗೆ ಕಲ್ಪಿಸುತ್ತೇವೆಂದು ಕರ್ನಾಟಕದ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ ಆಗುತ್ತಿರುವುದೇ ಬೇರೆ..

ಕಳೆದರಡು ತಿಂಗಳಿಂದ ಕೂಲಿ ಇರಲಿ ಹೊಟ್ಟೆಪಾಡಿಗು ಗತಿ ಇಲ್ಲದೆ ತತ್ತರಿಸುತ್ತಿರುವ ವಲಸೆ ಕೂಲಿಗಳಿಂದ KSRTC ಮೂಲಕ ಸರ್ಕಾರ ಮೂರುಪಟ್ಟು ಹೆಚ್ಚಿನ ದರವನ್ನು ವಸೂಲಿ ಮಾಡಲು ಮುಂದಾಗಿದೆ. ಅದಕ್ಕೆ ಮುಂದೊಡ್ಡುತ್ತಿರುವ ನೆಪ ಕೋವಿಡ್ ಮುನ್ನೆಚ್ಚರಿಕೆ.

ಅಂದರೆ ಕೋವಿಡ್ ಕಾರಣದಿಂದ ಬಸ್ಸೊಳಗೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಸಲುವಾಗಿ 52 ಸೀಟುಗಳ ಬಸ್ಸಿನಲ್ಲಿ ಕೇವಲ 30 ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯಬೇಕಿದೆ. . ಹೀಗಾಗಿ ಉಳಿದ ಸೀಟುಗಳ ಟಿಕೇಟಿನ ಹೊರೆಯನ್ನು ಸರ್ಕಾರ ಪ್ರಯಾಣ ಮಾಡುವ ಸಂತ್ರಸ್ತ ವಲಸೆ ಕಾರ್ಮಿಕರ ಮೇಲೆ ಹಾಕುತ್ತಿದೆ. ಆದರಿಂದಲೇ ರೂಟ್ ಬಸ್ಸುಗಳನ್ನು ಬಿಡದೆ ಪ್ರಯಾಣದ ಗುತ್ತಿಗೆಯ ಮೇಲೆ ಬಸ್ಸನ್ನು ನೀಡುತ್ತಿದೆ.

ತಮ್ಮದಲ್ಲದ ತಪ್ಪಿಗೆ ಇನ್ನಿಲ್ಲದ ಶಿಕ್ಷೆಯನ್ನು ಅನುಭವಿಸುತ್ತಿರುವ ವಲಸೆ ಕಾರ್ಮಿಕರನ್ನು ಒಂದು ನಾಗರಿಕ ಸರ್ಕಾರ ಪುಕ್ಕಟೆಯಾಗಿ ಅವರವರ ಊರಿಗೆ ತಲುಪಿಸಬೇಕಿತ್ತು. ಆದರೆ ಇದು ಹೃದಯಹೀನ ಸರ್ಕಾರ.

ಮತ್ತೀಗ ಈ ಸಂದರ್ಭದಲ್ಲೂ ಹೇಗೆ ರಣಹದ್ದುಗಳಂತೆ ವಲಸೆ ಕಾರ್ಮಿಕರನ್ನು ಸುಲಿಯುತ್ತಿದೆ ಎಂಬುದು ಈ ಸರಳ ಲೆಕ್ಕಾಚಾರ ನೋಡಿದರೆ ಅರ್ಥವಾಗುತ್ತದೆ:

ಬೆಂಗಳೂರಿನಲ್ಲಿ ಒಂದು ಅಂದಾಜಿನ ಪ್ರಕಾರ 60 ಲಕ್ಷಕ್ಕೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಅವರಲ್ಲಿ 28 ಲಕ್ಷ ಜನ ಕಟ್ಟಡ ಹಾಗು ಇತರ ನಿರ್ಮಾಣ ಕಾಮಗಾರಿಗಳಲ್ಲಿ (Building And Other Construction Workers- BOCW) ಕೆಲಸ ಮಾಡುವ ಕಟ್ಟಡ ಕಾರ್ಮಿಕರು.

ಈ ಕಟ್ಟಡ ವಲಯದ ದಿನಗೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ 1994ರಲ್ಲಿ ಒಂದು ಕಾಯಿದೆಯು ರೂಪಿತವಾಯಿತು. ಅದಕ್ಕೆ ಸಂಬಂಧಪಟ್ಟ ನೀತಿ ನಿಯಮಾವಳಿಗಳನ್ನು ಕರ್ನಾಟಕ ಸರ್ಕಾರವು 2007ರಲ್ಲಿ ರೂಪಿಸಿತು.

ಈ ಕಾಯಿದೆಯಡಿ, ನಿರ್ಮಾಣವಾಗುತ್ತಿರುವ ಎಲ್ಲಾ ಕಟ್ಟಡ ಕಾಮಗಾರಿಗಳ ಮೇಲೆ ಶೇ. 1 ರಷ್ಟು ಸೆಸ್ ಅನ್ನು ವಿಧಿಸಿ ಅದರಿಂದ ಸಂಗ್ರಹವಾಗುವ ಹಣದಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಯನ್ನು ಸ್ಥಾಪಿಸಲಾಯಿತು.

ಈ ಹಣವನ್ನು ಕಟ್ಟಡ ಕಾರ್ಮಿಕರ ಸಂಕ್ಷೇಮ, ವೈದ್ಯಕೀಯ, ಶಿಕ್ಷಣ , ಮರಣ, ವಿವಾಹ, ಕೌಶಲ್ಯ ತರಬೇತಿ ಹಾಗು ಅಪಘಾತ ಪರಿಹಾರಗಳಿಗಾಗಿ ವಿನಿಯೋಗಿಸಬೇಕೆಂದು ಕಾನೂನು ಮಾಡಲಾಯಿತು. ಆದರೆ ಇದರ ಸೌಲಭ್ಯ ಪಡೆಯಬೇಕೆಂದರೆ ಕಟ್ಟಡ ಕಾರ್ಮಿಕರು ಇದರಡಿ ನೋಂದಾಯಿಸಿಕೊಂಡಿರಬೇಕು.

ಆದರೆ ಬಹುಪಾಲು ಕಟ್ಟಡ ಕಾರ್ಮಿಕರು ವಲಸೆ ಕಾರ್ಮಿಕರಾಗಿದ್ದು ಅನ ಕ್ಷರಸ್ಥರು ಆಗಿರುವುದರಿಂದ ಶೇ. 75 ಭಾಗ ಕೂಲಿಗಳು ನೋಂದಾಯಿಸಿಕೊಂಡಿಲ್ಲ. ಈ ಯೋಜನೆಗಳ ಅರಿವು ಅವರಿಗಿಲ್ಲ. ಹೀಗಾಗಿಯೇ ಇದರಲ್ಲಿ ಸಂಗ್ರಹವಾಗಿರುವ ಶೇ. 90 ರಷ್ಟು ಹಣ ವ್ಯಯವಾಗುವುದೇ ಇಲ್ಲ.

ಇವತ್ತಿನ ಕೋವಿಡ್ ಸಂದರ್ಭದಲ್ಲಿ ಹಾಗು ವಲಸೆ ಕಾರ್ಮಿಕರು ಊರಿಗೆ ಹೋಗಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಈ ಅನ್ಯಾಯ ಇನ್ನಷ್ಟು ಅಮಾನುಷವಾಗಿ ನಡೆಯುತ್ತಿದೆ.

ಉದಾಹರಣೆಗೆ: ಕರ್ನಾಟಕದಲ್ಲಿ ಬಹುಪಾಲು ವಲಸೆ ಕಾರ್ಮಿಕರು ಕೆಲಸಮಾಡುವುದು ಕಟ್ಟಡ ಹಾಗು ಇತರ ನಿರ್ಮಾಣ ಕ್ಷೇತ್ರಗಳಲ್ಲಿ. 2019-20ರ ವೇಳೆಗೆ ಕರ್ನಾಟಕದಲ್ಲಿ ಕಟ್ಟಡ ಹಾಗು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ 8000 ಕೋಟಿ ರು. ಹಣ ಕೊಳೆಯುತ್ತಾ ಬಿದ್ದಿತ್ತು

ಕಟ್ಟಡ ಕಾರ್ಮಿಕರ ಸಂಕಷ್ಟಗಳನ್ನೂ ಬಗೆಹರಿಸಲೆಂದೇ ತಾನೇ ಈ ಹಣ ಇರುವುದು? ಹಾಗಿದ್ದಲ್ಲಿ ತಮ್ಮತಮ್ಮ ಊರಿಗೆ ಹೋಗಲು ಉಚಿತವಾಗಿ ಬಸ್ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರವು ಈ ಹಣವನ್ನು ಬಳಸಿಕೊಳ್ಳಬಹುದಲ್ಲಾ? ಅದಕ್ಕೆ ಎಷ್ಟು ಖರ್ಚಾಗಬಹುದು?

ಈಗ ಸರ್ಕಾರದ ಲೆಕ್ಕಾಚಾರದ ಪ್ರಕಾರ ಅಂದಾಜು ಒಂದು. ಲಕ್ಷ ವಲಸೆ ಕಾರ್ಮಿಕರಿಗೆ ವಸತಿ ಮತ್ತು ಆಹಾರ ವನ್ನು ಒದಗಿಸಲಾಗುತ್ತಿದೆ. ಅವರೆಲ್ಲರೂ ಊರಿಗೆ ಹೋಗಿ ಬದುಕು ಕಂಡುಕೊಳ್ಳಲು ಬಯಸುತ್ತಿರುತ್ತಾರೆ. ಇದರ ಜೊತೆಗೆ ಸರ್ಕಾರದ ಪರಿಹಾರ ವ್ಯಾಪ್ತಿಯಲ್ಲಿ ರದ ಇನ್ನು ಲಕ್ಷಾಂತರ ವಲಸೆ ಕಾರ್ಮಿಕರು ಊರಿಗೆ ಹೋಗಲು ತವಕಿಸುತ್ತಿದ್ದಾರೆ. ಹೀಗಾಗಿ ಅವರ ಸಂಖ್ಯೆ ಹೆಚ್ಚೆಂದರೆ 5 ಲಕ್ಷ ಇರುತ್ತದೆ ಎಂದಿಟ್ಟುಕೊಳ್ಳೋಣ.

KSARTC ಯ ಒಂದು ಕರ್ನಾಟಕ ಸಾರಿಗೆ ಬಸ್ಸನ್ನು ಬಾಡಿಗೆಗೆ ತೆಗೆದುಕೊಂಡರೆ ಒಂದು ಕಿಮೀ ಗೆ 37 ರು. ಮತ್ತು ಟೋಲ್ ಶುಲ್ಕ ತಲಾ ರು. 2 ಸೇರಿ ಒಟ್ಟು ಒಂದು ಕಿಮೀಗೆ 39 ರೂಗಳಾಗುತ್ತದೆ.

ಈಗ ಬೆಂಗಳೂರಿನಿಂದ ಬೀದರ್ 700 ಕಿಮಿ ದೂರದಲ್ಲಿದೆ. ಬೆಳಗಾವಿ 600, ರಾಯಚೂರು 450, ಕೋಲಾರ 70 ಕಿಮಿ ದೂರ. ಹೀಗಾಗಿ ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರ ಊರು ಬೆಂಗಳೂರಿನಿಂದ ಸರಾಸರಿ 500 ಕಿಮಿ ದೂರದಲ್ಲಿದೆ ಎಂದಿಟ್ಟುಕೊಳ್ಳೋಣ. ಹೀಗಾಗಿ ವಲಸೆ ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ಬರಲು ಒಟ್ಟು 1000 ಕಿಮಿ ಪ್ರಯಾಣವಾಗುತ್ತದೆ. KSRTC ಯ ಕರ್ನಾಟಕ ಸಾರಿಗೆ ಬಸ್ ಪ್ರಯಾಣ ದರ ಮೇಲೆ ಹೇಳಿದಂತೆ ಕಿಮೀಗೆ 39ರು.ಗಳಂತೆ 1000 ಕಿಮೀಗೆ 39000 ರು.ಗಳಾಗುತ್ತದೆ .

ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದ ದೈಹಿಕ ಅಂತರ ಕಾಪಾಡಿಕೊಳ್ಳಲು ಒಂದು ಬಸ್ಸಿನಲ್ಲಿ 52 ಜನರ ಬದಲು 30 ಜನರೇ ಪ್ರಯಾಣಿಸುತ್ತಾರೆ ಎಂದಿಟ್ಟುಕೊಳ್ಳೋಣ. ಆಗ ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು 3,300 ಬಸ್ಸುಗಳು ಬೇಕಾಗುತ್ತದೆ.

ಆಗ ಒಂದು ಬಸ್ಸಿಗೆ 39,000 ರು.ನಂತೆ ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಬೇಕಾದ 3,300 ಬಸ್ಸುಗಳಿಗೆ ಬೇಕಾಗುವುದು ಕೇವಲ 13 ಕೋಟಿ ರು.ಗಳು ಮಾತ್ರ.

ಈ ಲೆಕ್ಕಾಚಾರದಂತೆ ಎಲ್ಲಾ ಐದು ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಬೇಕಾಗುವುದು 65 ಕೋಟಿ ರು. ಗಳು ಮಾತ್ರ !!

ಇದು ವಲಸೆ ಕಾರ್ಮಿಕರ ಸಂಕ್ಷೇಮ ನಿಧಿಯಲ್ಲಿ ಬಳಸದೆ ಕೊಳೆಯುತ್ತಿರುವ 8000 ಕೋಟಿಯ ಶೇ. 1 ಕ್ಕಿಂತ ಕಡಿಮೆ!!!

ಹೀಗೆ ಸರ್ಕಾರ ಬೇರೆ ಯಾವುದೇ ಹಣವನ್ನು ವೆಚ್ಚ ಮಾಡದೆ ಕಾರ್ಮಿಕರ ಸಂಕ್ಷೇಮಕ್ಕೆಂದೇ ಕೂಡಿಟ್ಟಿರುವ ಹಣದ ಅತ್ಯಲ್ಪ ಪಾಲನ್ನು ಅವರಿಗೆಂದೇ ವೆಚ್ಚ ಮಾಡಿದರು ಎಲ್ಲಾ ಕಾರ್ಮಿಕರನ್ನು ಉಚಿತವಾಗಿ ಊರಿಗೆ ತಲುಪಿಸಬಹುದು.

ಆದರೂ ಸರ್ಕಾರವು ಏಕೆ ಕಾರ್ಮಿಕರ ದುಡ್ಡನು ಕಾರ್ಮಿಕರಿಗೆ ವೆಚ್ಚ ಮಾಡದೆ ಉಲ್ಟಾ ಅವರಿಂದಲೇ ಮೂರುಪಟ್ಟು ದುಡ್ಡನ್ನು ಹೀರುತ್ತಿದೆ??

ಇದಕ್ಕೆ ಎರಡು ಅಮಾನುಷ ಹಾಗು ದುಷ್ಟ ಕಾರಣಗಳಿವೆ..

ಮೊದಲನೆಯದಾಗಿ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ , ಕೇಂದ್ರ ಸರ್ಕಾರದ ಅಸಹಕಾರಿ ಧೋರಣೆಯಿಂದಾಗಿ ಹಾಗು ಇದೀಗ ಕೋವಿಡ್ ಲಾಕ್ದೌನಿನಿಂದಾಗಿ ಮತ್ತು ಕೇಂದ್ರ ವು ರಾಜ್ಯದ ತೆರಿಗೆ ಪಾಲಿನ ಪಾಲಿನ ಹಣವನ್ನು ಬಿಡುಗಡೆ ಮಾಡದಿರುವುದರಿಂದಾಗಿ ಕರ್ನಾಟಕ ಸರ್ಕಾರದ ಬಳಿ ಸರ್ಕಾರ ನಡೆಸುವುದಕ್ಕಿರಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಬೇಕಾದ ಅಗತ್ಯ ವೆಚ್ಚಗಳನ್ನು ಮಾಡುವುದಕ್ಕೂ ಹಣವಿಲ್ಲ.

ಈ ಬಿಕ್ಕಟ್ಟಿನಿಂದ ಪಾರಾಗಲು ದುಷ್ಟ ಕೇಂದ್ರ ಸರ್ಕಾರ ಮೊನ್ನೆ ಒಂದು ಸುತ್ತೋಲೆಯನ್ನು ಹೊರಡಿಸಿದೆ.

ಅದರ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ನಿಧಿಯಲ್ಲಿರುವ ಕಾರ್ಮಿಕರಿಗೆ ಸೇರಬೇಕಿರುವ 8000 ಕೋಟಿ ಹಣವನ್ನು ಕೋವಿಡ್ ಹಾಗು ಇತರ ಬಾಬತ್ತುಗಳಿಗೆ ವೆಚ್ಚ ಮಾಡಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಆದೇಶಿಸಿದೆ. ..!

ಆದ್ದರಿಂದಲೇ ಪ್ರಾರಂಭದಲ್ಲಿ 16,500 ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರವರ ಊರಿಗೆ ತಲುಪಿಸಿದ ಕರ್ನಾಟಕ ಸರ್ಕಾರ ನಿನ್ನೆಯಿಂದ ಅದನ್ನು ಬಂದ್ ಮಾಡಿಡೇ ಮತ್ತು ಉಲ್ಟಾ ವಲಸೆಕಾರ್ಮಿಕರನ್ನೇ ಸುಲಿಯಲು ಹೊರಟಿದೆ.

ಇನ್ನೊಂದು ಅಮಾನುಷ ಕಾರಣವೆಂದರೆ , ಮೇ 4 ರಿಂದ ಬಹುಪಾಲು ಆರ್ಥಿಕ ಚಟುವಟಿಕೆಗಳು ಒಂದೊಂದಾಗಿ ಪ್ರಾರಂಭವಾಗಲಿದ್ದು ಮತ್ತೆ ಅಲ್ಲಿ ಅಗ್ಗದ ದರದಲ್ಲಿ ಕೆಲಸ ಮಾಡಲು ಈ ವಲಸೆ ಕಾರ್ಮಿಕರ ಅಗತ್ಯವಿದೆ. ಆದರೆ ಈ ಕೋವಿಡ್ ಬಿಕ್ಕಟ್ಟಿನ ಈ ನಗರ ಮತ್ತು ಸರ್ಕಾರ ಗಳ ಅಮಾನುಷ ನಡವಳಿಕೆಗಳಿಂದ ಕಂಗೆಟ್ಟು ಊರಿಗೆ ಹೊರಟಿರುವ ಈ ವಲಸೆ ಕಾರ್ಮಿಕರು ಊರಿಗೆ ಹೋಗಿಬಿಟ್ಟರೆ ಸದ್ಯಕ್ಕೆ ವಾಪಸ್ ಬರುವ ಸೂಚನೆಗಳಿಲ್ಲ. ಹಾಗಾದಲ್ಲಿ ನಗರದ ಆರ್ಥಿಕತೆ ಅಗ್ಗದ ಕೂಲಿಯಿಲ್ಲದೆ ತಲೆ ಎತ್ತುವುದಿಲ್ಲ.

ಈ ಬಂಡವಾಳಶಾಹಿ ಪರ ದುಷ್ಟ ಲೆಕ್ಕಾಕಾರಗಳಿನ್ನಿಟ್ಟುಕೊಂದು ವಲಸೆ ಕಾರ್ಮಿಕರು ಊರಿಗೆ ಹೋಗುವುದನ್ನು ತಪ್ಪಿಸಲೆಂದೇ ಮೂರುಪಟ್ಟು ಹೆಚ್ಚಿನ ದರವನ್ನು ವಿಧಿಸಿ ಊರಿಗೆ ಹೋಗುವವರನ್ನು ನಿರುತ್ತೇಜಗೊಳಿಸಲಾಗುತ್ತಿದೆ.

ಇಂದು ಕಾರ್ಮಿಕ ದಿನಕ್ಕೆ ಶುಭಾಶಯಗಳನ್ನು ಹೇಳುವ ನೆಪದಲ್ಲಿ ವಲಸೆ ಕಾರ್ಮಿಕರಿಗೆ ಊರಿಗೆ ಹೋಗಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿರುವ “ಮನವಿ” ಯ ಹಿಂದಿನ ಕ್ರೌರ್ಯವಿದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...