Homeಅಂತರಾಷ್ಟ್ರೀಯಒಮೈಕ್ರಾನ್ ವಿರುದ್ಧದ ಹೋರಾಟದಲ್ಲಿ ‘ಲಾಕ್‌ಡೌನ್’ ಕೊನೆಯ ಅಸ್ತ್ರವಾಗಿಬೇಕು: WHO

ಒಮೈಕ್ರಾನ್ ವಿರುದ್ಧದ ಹೋರಾಟದಲ್ಲಿ ‘ಲಾಕ್‌ಡೌನ್’ ಕೊನೆಯ ಅಸ್ತ್ರವಾಗಿಬೇಕು: WHO

- Advertisement -

ಒಮೈಕ್ರಾನ್ ಪ್ರಸರಣವನ್ನು ತಡೆಯಲು ಲಾಕ್‌ಡೌನ್ ಹೇರುವುದನ್ನು ಕೊನೆಯ ಅಸ್ತ್ರವಾಗಿ ಮಾತ್ರ ಬಳಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ. ಲಾಕ್‌ಡೌನ್‌ ತುಂಬಾ ದುಬಾರಿಯಾಗಿದೆ ಎಂದು ಆರೋಗ್ಯ ಸಂಸ್ಥೆಯು ಅಭಿಪ್ರಾಯಪಟ್ಟಿದೆ. ಹೊಸ ಕೊರೊನಾ ರೂಪಾಂತರವಾದ ಒಮೈಕ್ರಾನ್ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿ ನಂತರ ಭಾರತ, ಶ್ರೀಲಂಕಾ, ಯುಎಸ್, ಆಸ್ಟ್ರೇಲಿಯಾ, ಬೆಲ್ಜಿಯಂ, ನೆದರ್ಲ್ಯಾಂಡ್ಸ್ ಮತ್ತು ಯುಕೆ ಸೇರಿದಂತೆ 24 ದೇಶಗಳಲ್ಲಿ ಹರಡಿದೆ.

ಸಧ್ಯಕ್ಕೆ ದೊರಕಿದ ಪುರಾವೆಗಳ ಪ್ರಕಾರ ಒಮೈಕ್ರಾನ್‌‌ ರೂಪಾಂತರವು ವೇಗವಾಗಿ ಪ್ರಸರಣವಾಗುತ್ತದೆ ಮತ್ತು ಲಸಿಕೆ ಪಡೆದುಕೊಂಡವರ ಮೇಲೆಯು ಹರಡುವ ಸಂಭವವಿರುತ್ತದೆ ಎಂದು ಕಂಡುಬಂದಿದೆ.

ಇದನ್ನೂ ಓದಿ:ಒಮೈಕ್ರಾನ್ ಆತಂಕ; ಲಭ್ಯವಿರುವ ಸಾಕ್ಷ್ಯಗಳಿಂದ ಸಾರ್ವಜನಿಕ ಆರೋಗ್ಯದ ಕಣ್ಣೋಟ

ಒಮೈಕ್ರಾನ್‌ನ ಪ್ರಸರಣ, ತೀವ್ರತೆ, ಮರುಸೋಂಕಿನ ಅಪಾಯ ಮತ್ತು ಪ್ರತಿರಕ್ಷಣೆ ಪಡೆದವರ ಮೇಲೆ ಕೂಡಾ ಹಿಡಿತ ಸಾಧಿಸುವ ವೈರಸ್‌ನ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ. ಆದಾಗ್ಯೂ, “ಪ್ರಸ್ತುತ ಲಭ್ಯವಿರುವ ಲಸಿಕೆಗಳು ತೀವ್ರ ರೋಗ ಮತ್ತು ಸಾವಿನ ವಿರುದ್ಧ ರಕ್ಷಣೆ ನೀಡುತ್ತವೆ ಎಂದು ಊಹಿಸುವುದು ಸಮಂಜಸವಾಗಿದೆ” ಎಂದು WHO ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

“ಯಾವುದೇ ಹೊಸ ರೂಪಾಂತರದ ಆಗಮನ ಮತ್ತು ಅಸ್ತಿತ್ವದಲ್ಲಿರುವ ವೈರಸ್ ಮತ್ತು ಅದರ ರೂಪಾಂತರಗಳ ಪ್ರಸರಣವನ್ನು ತ್ವರಿತವಾಗಿ ಪತ್ತೆಹಚ್ಚಲು ಕಣ್ಗಾವಲು ಹೆಚ್ಚು ಮಾಡಬೇಕು. ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಜಾರಿಗೊಳಿಸುವುದು ಮತ್ತು ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸುವುದರ ಕಡೆಗೆ ನಮ್ಮ ಗಮನವನ್ನು ಮುಂದುವರಿಸಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪಂಜಾಬ್: ಖಾಸಗಿ ಮಂಡಿಗಳಲ್ಲಿ ಕಡಿಮೆ ದರಕ್ಕೆ ಹತ್ತಿ ಮಾರಲು ಒತ್ತಾಯ – ರೈತರ ಪ್ರತಿಭಟನೆ

ಅಮೆರಿಕಾ ಮತ್ತು ಯುಕೆ ಸೇರಿದಂತೆ ಹಲವು ದೇಶಗಳು ಹೊಸ ರೂಪಾಂತರದ ಸುದ್ದಿಯ ನಂತರ ಹಲವಾರು ಆಫ್ರಿಕನ್ ದೇಶಗಳ ಪ್ರಯಾಣಿಕರಿಗೆ ಪ್ರಯಾಣ ನಿಷೇಧ ಅಥವಾ ಕ್ವಾರಂಟೈನ್‌ಗಳನ್ನು ವಿಧಿಸಿವೆ. ಆದರೆ ಈ ಪ್ರಯಾಣ ನಿಷೇಧಗಳು ಅಂತರಾಷ್ಟ್ರೀಯ ಹರಡುವಿಕೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಡಾ. ಪೂನಮ್‌ ಸಿಂಗ್ ಹೇಳಿದ್ದಾರೆ. ಈ ರೀತಿಯ ನಿಷೇಧಗಳು ಜೀವನ ಮತ್ತು ಜೀವನೋಪಾಯದ ಮೇಲೆ ಹೆಚ್ಚಿನ ಹೊರೆ ಆಗುತ್ತದೆ. ಇಂತಹ ನಿಷೇಧಗಳು ಸಾಂಕ್ರಾಮಿಕ ಸಮಯದಲ್ಲಿ ಜಾಗತಿಕ ಆರೋಗ್ಯ ಪ್ರಯತ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

“ವೈರಸ್ ಪ್ರಸರಣವನ್ನು ತಡೆಗಟ್ಟಲು ಲಾಕ್‌ಡೌನ್ ಹೇರುವ ಆಯ್ಕೆಯು ಪರಿಣಾಮಕಾರಿಯಾಗಿದ್ದರೂ, ಇದು ಅತ್ಯಂತ ದುಬಾರಿ ಅಸ್ತ್ರವಾಗಿ. ಇದನ್ನು ಕೊನೆಯ ಅಸ್ತ್ರವಾಗಿ ಬಳಸಬೇಕು. ನಾವು ವೈರಸ್ ಮತ್ತು ಅದರ ರೂಪಾಂತರಗಳನ್ನು ಹರಡಲು ಹಾಗೂ ಅದು ಮತ್ತಷ್ಟು ರೂಪಾಂತರಗೊಂಡು ನಮಗೆ ಸವಾಲು ಹಾಕಲು ಬಿಡಬಾರದು. ವೈರಸ್ ಹರಡುವಿಕೆಯನ್ನು ಮೊಟಕುಗೊಳಿಸಲು ನಾವು ಎಲ್ಲವನ್ನೂ ಮಾಡಬೇಕಾಗಿದೆ. ಈ ಸಾಂಕ್ರಾಮಿಕ ರೋಗವು ತುಂಬಾ ದೀರ್ಘವಾಗಿದೆ. ಇದು ಅಮೂಲ್ಯವಾದ ಮಾನವ ಮತ್ತು ಇತರ ಸಂಪನ್ಮೂಲಗಳನ್ನು ಬರಿದುಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ.

ಹೊಸ ರೂಪಾಂತರವನ್ನು ಎದುರಿಸಲು ಮಾಸ್ಕ್‌ಗಳ ಬಳಕೆ, ದೈಹಿಕ ಅಂತರ ಕಾಪಾಡುವುದು, ಸಭೆಗಳನ್ನು ತಪ್ಪಿಸುವುದು ಮತ್ತು ಕೈಗಳ ನೈರ್ಮಲ್ಯ ಕಾಪಾಡುವುದು ಮಾಡಬೇಕು ಎಂದು ಅವರು ಹೇಳಿದ್ದಾರೆ. ಆರೋಗ್ಯ ಸೇವೆಗಳ ಹೊರೆಯನ್ನು ತಪ್ಪಿಸಲು ದೇಶಗಳು ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಸಮಯೋಚಿತವಾಗಿ ಹೆಚ್ಚಿಸಲು ಸಿದ್ಧರಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಒಮೈಕ್ರಾನ್‌ಗೆ ಬೂಸ್ಟರ್ ಡೋಸ್ ಶಿಫಾರಸು; ಕರ್ನಾಟಕದಲ್ಲಿ ದ.ಆಫ್ರಿಕಾದ 10 ಜನರು ನಾಪತ್ತೆ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial