Homeಕರ್ನಾಟಕ‘ಬಡವರ ಕಷ್ಟಗಳನ್ನು ಲೆಕ್ಕಿಸದೆ ಲಾಕ್‌‌ಡೌನ್‌’: ಬೀದಿ ವ್ಯಾಪಾರಿಗಳ ಸಂಘದಿಂದ ಸರ್ಕಾರಕ್ಕೆ ಪತ್ರ

‘ಬಡವರ ಕಷ್ಟಗಳನ್ನು ಲೆಕ್ಕಿಸದೆ ಲಾಕ್‌‌ಡೌನ್‌’: ಬೀದಿ ವ್ಯಾಪಾರಿಗಳ ಸಂಘದಿಂದ ಸರ್ಕಾರಕ್ಕೆ ಪತ್ರ

- Advertisement -
- Advertisement -

ಕೊರೊನಾ ಎರಡನೇ ಅಲೆ ಹಾಗೂ ಸರ್ಕಾರ ಮತ್ತೆ ಹೇರಿರುವ ಲಾಕ್‌ಡೌನ್‌ನಿಂದಾಗಿ ಬೀದಿ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿರುವ ಹಿನ್ನಲೆಯಲ್ಲಿ, ಈ ಸಮಸ್ಯೆಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು AICCTU ಅಂಗ ಸಂಸ್ಥೆಯಾದ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘವು ಸರ್ಕಾರಕ್ಕೆ ಶುಕ್ರವಾರ ಮನವಿ ಪತ್ರ ಬರೆದಿದೆ.

ಪತ್ರದಲ್ಲಿ ಸಂಘವು, “ಕರ್ನಾಟಕದಾದ್ಯಂತ ಲಕ್ಷಾಂತರ ಜನ ಬೀದಿ ವ್ಯಾಪಾರಿಗಳಿದ್ದು ಬೆಂಗಳೂರು ನಗರದಲ್ಲೇ 2 ಲಕ್ಷದಷ್ಟು ಜನ ಬೀದಿ ವ್ಯಾಪಾರವನ್ನು ಜೀವನೋಪಾಯವನ್ನಾಗಿ ಆಧರಿಸಿದ್ದಾರೆ. ಬೀದಿ ವ್ಯಾಪಾರವು ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ನೀಡುವುದಲ್ಲದೆ, ಲಕ್ಷಾಂತರ ಕಲಿಕೆ ಇಲ್ಲದೆ, ಶಕ್ತಿ ಇಲ್ಲದೆ, ಅಂಗಡಿ ಸ್ಥಾಪಿಸಲು ಬಂಡವಾಳ ಇಲ್ಲದ ಮತ್ತು ನಿರಾಶ್ರಿತ ಜನರಿಗೆ ಉದ್ಯೋಗವನ್ನು ದೊರಕಿಸಿದೆ. ಬೀದಿ ವ್ಯಾಪಾರಿಗಳಿಂದ ನಗರದ ಬಡಜನರಿಗೆ, ದುಡಿಯುವ ವರ್ಗಕ್ಕೆ ಮತ್ತು ಮಧ್ಯಮ ವರ್ಗಕ್ಕೆ ಕಡಿಮೆ ಬೆಲೆಯಲ್ಲಿ ಉತ್ತಮ ವಸ್ತುಗಳು ಮತ್ತು ಸೇವೆಗಳು ದೊರಕುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: ‘ಕೊಲೆ ಪ್ರಕರಣ’- ವರದಿ ನಿಲ್ಲಿಸುವಂತೆ ಕೋರ್ಟ್ ಮೆಟ್ಟಿಲೇರಿದ ಚುನಾವಣಾ ಆಯೋಗ!

ಬೀದಿ ವ್ಯಾಪಾರಿಗಳಿಗೆ ಕಳೆದ ಲಾಕ್‌ ಡೌನ್‌ ಸಮಯದಿಂದಲೇ ಹಲವು ಸಮಸ್ಯೆಗಳು ಉದ್ಭವವಾಗಿವೆ. ಬೀದಿ ವ್ಯಾಪಾರಿಗಳಿಗೆ ಮಾರ್ಚ್‌ 2020 ರಿಂದ ಜೂನ್‌ 2020 ರ ವರೆಗೂ ಘೋಷಿದ್ದ ಲಾಕ್‌ ಡೌನ್‌ ಸಮಯದಲ್ಲಿ ಬೀದಿ ವ್ಯಾಪಾರವನ್ನು ಅಗತ್ಯ ಸೇವೆ ಎಂದು ಘೋಷಿಸಿದ್ದರೂ, ಪೋಲೀಸರ ಕಿರುಕುಳದಿಂದ ಒಂದು ಪೈಸಾದಷ್ಟು ವ್ಯಾಪಾರವನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಕಳೆದ ವರ್ಷದ ಕಷ್ಟ-ನಷ್ಟಗಳ ಕುರಿತು ಮನವಿ ಪತ್ರವನ್ನು ಸಲ್ಲಿಸಿ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಿ ಎಂದು ಕೋರಿತ್ತಾದರೂ, ರಾಜ್ಯ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ಅದರ ಬದಲಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಅಡಿಯಲ್ಲಿ ಬೀದಿ ವ್ಯಾಪಾರಿಗಳಿಗೆ ಸಾಲ ನೀಡಲು ಮುಂದಾದರು. ಬೀದಿ ವ್ಯಾಪಾರಿಗಳು ದಿನನಿತ್ಯದ ಜೀವನ ನಡೆಸಲು ಮಾಡಿದ ಸಾಲಕ್ಕೆ ಕೇಂದ್ರ ಸರ್ಕಾರದ ಸಾಲವನ್ನು ತೀರಿಸುವ ಪರಿಸ್ಥಿತಿಗೆ ಬೀದಿ ವ್ಯಾಪಾರಿಗಳನ್ನು ನೂಕಲಾಗಿದೆ ಎಂದು ಸಂಘವು ಹೇಳಿದೆ.

ಸರ್ಕಾರ ಎರಡನೇ ಅಲೆಯನ್ನು ತಡೆಗಟ್ಟಲು ಹೇರಿರುವ ಅಘೋಷಿತ ಲಾಕ್‌ಡೌನ್‌ ಬೀದಿ ವ್ಯಾಪಾರಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಸಂಘವು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ: ‘ಅದು ಹೃದಯವಲ್ಲ, ಕಲ್ಲು’- ಮೋದಿಗೆ ಪರೋಕ್ಷವಾಗಿ ಕುಟುಕಿದ ರಾಹುಲ್‌ ಗಾಂಧಿ

ಹಣ್ಣು-ಹೂವು-ತರಕಾರಿ ವ್ಯಾಪಾರಿಗಳಿಗೆ ಮುಂಜಾನೆ 6 ರಿಂದ 10 ಗಂಟೆವರೆಗೂ ವ್ಯಾಪಾರ ಮಾಡಲು ಅವಕಾಶವಿದ್ದರೂ, ವ್ಯಾಪಾರಿಗಳು ಸಗಟು ಮಾರುಕಟ್ಟೆಗೆ ತಲುಪುವ ಹೊತ್ತಿಗೆ ಸರಕುಗಳು ಮಾರಾಟವಾಗಿರುತ್ತದೆ. ಜೊತೆಗೆ ಅಲ್ಲಿಂದ ಸರಕುಗಳನ್ನು ತಂದು ಮಾರಾಟ ಮಾಡಲು ಕೂಡಾ ಸಮಯ ಸಕಾಗುವುದಿಲ್ಲ. ಇದರಿಂದಾಗಿ ಸರಕುಗಳು ಹಾಳಾಗಿ ಹೋಗುತ್ತಿದೆ. ಈ ಮಧ್ಯೆ ಪೊಲೀಸರು ಕೂಡಾ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಘವು ಸರ್ಕಾರಕ್ಕೆ ದೂರಿಕೊಂಡಿದೆ.

ಲಾಕ್‌ಡೌನ್‌ ಮೂಲಕ ವ್ಯಾಪಾರಿಗಳಿಗೆ ವ್ಯಾಪಾರದ ಹಕ್ಕು ಕಿತ್ತುಕೊಂಡಿರುವ ಸರ್ಕಾರ ಆರ್ಥಿಕ ನೆರವಾದರು ನೀಡಬೇಕು. ಆದರೆ ಇದುವರೆಗೂ ಸರ್ಕಾರದ ವತಿಯಿಂದ ಯಾವುದೇ ಘೋಷಣೆ ಆಗಿಲ್ಲ. ಜಗತ್ತಿನ ಹಲವು ದೇಶಗಳಲ್ಲಿ ಲಾಕ್‌‌ಡೌನ್‌ ಜೊತೆಗೆ ಬೀದಿ ವ್ಯಾಪಾರಿಗಳಿಗಾಗಿ ಪ್ರತ್ಯೇಕ ಆರ್ಥಿಕ ನೆರವು ಘೋಷಿಸಿದೆ. ಆದರೆ ಭಾರತದಲ್ಲಿ ಇಲ್ಲಿ ಬಡವರ ಕಷ್ಟ-ನಷ್ಟಗಳನ್ನು ಲೆಕ್ಕಿಸದೆ ಲಾಕ್‌ ಡೌನ್‌ ಜಾರಿ ಮಾಡಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಕಷ್ಟಗಳ ಜೊತೆಗೆ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿಯ ಪ್ರಮಾಣವನ್ನು ಕೂಡಾ ಕಡಿಮೆ ಮಾಡಲಾಗಿದೆ. ರಾಜ್ಯದ ಜನರು ಇಷ್ಟು ಕಷ್ಟದಲ್ಲಿ ಬಾಳುತ್ತಾ, ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಾಧ್ಯವೇ? ಎಂದು ಪತ್ರದಲ್ಲಿ ಸಂಘವು ಸರ್ಕಾರವನ್ನು ಪ್ರಶ್ನಿಸಿದೆ.

ಇದನ್ನೂ ಓದಿ: ದೇಶವನ್ನು ನಾಶ ಮಾಡುವ ಹುಸಿ ಪಾಸಿಟಿವಿಟಿಯನ್ನು ಸತ್ಯ ಮತ್ತು ಧೈರ್ಯದಿಂದ ಎದುರಿಸಬೇಕಿದೆ

ಪತ್ರದಲ್ಲಿ ಸಂಘವು ಕೆಲವು ಅಗತ್ಯ ಕ್ರಮಗಳನ್ನು ಜರುಗಿಸುವಂತೆ ಸರ್ಕಾರಕ್ಕೆ ಸಲಹೆಯನ್ನು ಕೂಡಾ ನೀಡಿದೆ.

  • ದಿನನಿತ್ಯದ ವ್ಯಾಪಾರದ ಸಮಯವನ್ನು ಕನಿಷ್ಠ ಮಧ್ಯಾಹ್ನ 2 ಗಂಟೆವರೆಗೂ ವಿಸ್ತರಿಸುತ್ತಾ, ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು.
  • ಪೊಲೀಸರ ದೌರ್ಜನ್ಯ ಮತ್ತು ಒಕ್ಕಲೆಬ್ಬಿಸುವಿಕೆ ಆಗದಂತೆ ಆದೇಶ ನೀಡಬೇಕು.
  • ಮನೆ ಮಾಲೀಕರು ತಿಂಗಳ ಬಾಡಿಗೆಗೆ ಒತ್ತಾಯ ಮಾಡಬಾರದೆಂದು ಆದೇಶವನ್ನು ಹೊರಡಿಸಬೇಕು.
  • ಖಾಸಗಿ ಫೈನ್ಯಾನ್ಸ್‌ ಕಂಪನಿಗಳು ಸಾಲವನ್ನು ಮರುಪಾವತಿಸಲು ತೀವ್ರ ಒತ್ತಡ ಹಾಕುತ್ತಿದ್ದಾರೆ. ಹಾಗೆಯೇ ಹಲವು ಬೀದಿ ವ್ಯಾಪಾರಿಗಳು ಸಹಕಾರಿ ಬ್ಯಾಂಕ್‌ ಗಳಿಂದ ಸಾಲ ಪಡೆದಿದ್ದಾರೆ. ವ್ಯಾಪಾರ ಇಲ್ಲದ ಕಾರಣ ಸಾಲ ತೀರಿಸಲು ಕಷ್ಟವಾದ ಕಾರಣ ಸಾಲದ ಬಡ್ಡಿಯನ್ನು ಮನ್ನಾ ಮಾಡುವಂತೆ ಆದೇಶ ಹೊರಡಿಸಬೇಕು.
  • ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಅಡಿಯಲ್ಲಿ ನೀಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
  • ಪ್ರತಿಯೋರ್ವ ಬೀದಿ ವ್ಯಾಪಾರಿಗೆ ಮೇ ಮತ್ತು ಜೂನ್‌ ತಿಂಗಳಿಗೆ 15,000/- ರೂ. ಗಳಷ್ಟು ಆರ್ಥಿಕ ನೆರವು ನೀಡಬೇಕು.
  • ಕೇರಳ ಮಾದರಿಯಲ್ಲಿ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಅಕ್ಕಿ, ಬೇಳೆ, ಕಾಳುಗಳು, ಅಡುಗೆ ಎಣ್ಣೆ, ಮಸಾಲೆ, ಇತ್ಯಾದಿಗಳನ್ನು ನೀಡಬೇಕು. ಕಡಿತವಾದ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸಬೇಕು.
  • ಬೀದಿ ವ್ಯಾಪಾರಿಗಳಿಗೂ ಸಹ ಇ.ಎಸ್‌.ಐ ಸ್ವರೂಪದಂತಹ ಸರ್ಕಾರಿ ಆರೋಗ್ಯ ವಿಮೆ ನೀಡಬೇಕು.
  • ನಗರ ಪ್ರದೇಶಗಳ ಕೊಳಗೇರಿಗಳಲ್ಲಿ, ವಲಸೆ ಕಾರ್ಮಿಕರ ವಾಸಸ್ಥಳಗಳಲ್ಲಿ ಸರ್ಕಾರವು ‘ಸಾಮೂಹಿಕ ಅಡುಗೆ ಮನೆ’ ರಚಿಸಿ ಅದರ ಮುಖಾಂತರ ನಗರದ ನಿರಾಶ್ರಿತರಿಗೆ ತಾಜಾ ಆಹಾರ ನೀಡಬೇಕು. ಇಂತಹ ಸಾಮೂಹಿಕ ಅಡುಗೆ ಮನೆಗಳನ್ನು ನಡೆಸಲು ಬೀದಿ ವ್ಯಾಪಾರಿಗಳ ಸೇವೆಯನ್ನು ಪಡೆಯಬೇಕು ಹಾಗೂ ಅವರಿಗೆ ವೇತನ ಅಥವಾ ಗುತ್ತಿಗೆ ನೀಡಬೇಕು.

ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪತ್ರ  by naanugauri on Scribd

ಇದನ್ನೂ ಓದಿ: ಅಕ್ಕಿ ಕೊಡಿ ಎಂದ ರೈತನಿಗೆ ‘ಸತ್ತೊಗು’ ಎಂದ ಆಹಾರ ಸಚಿವ ಉಮೇಶ್ ಕತ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಪರಿಶೀಲನೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

0
ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಮತ್ತು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ನಡುವಿನ ಎಲ್ಲಾ ಮತಗಳನ್ನು (ಶೇ.100) ತಾಳೆ ಹಾಕುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ...